Breaking News

180ಕ್ಕೂ ಹೆಚ್ಚು ಅಪ್ರಾಪ್ತ ಹೆಣ್ಣು ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ: 350 ಅಶ್ಲೀಲ ವೀಡಿಯೋ ಇಟ್ಕೊಂಡು ಬ್ಲಾಕ್‌ಮೇಲ್ ಮಾಡ್ತಿದ್ದ ಅಯಾಜ್ ಅರೆಸ್ಟ್…!!

Spread the love

ಮಹಾರಾಷ್ಟ್ರದ ಅಮರಾವತಿಯಲ್ಲಿ, 180ಕ್ಕೂ ಹೆಚ್ಚು ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯವೆಸಗಿ 350ಕ್ಕೂ ಹೆಚ್ಚು ಅಶ್ಲೀಲ ವೀಡಿಯೋಗಳನ್ನು ಚಿತ್ರೀಕರಿಸಿ ಮಕ್ಕಳಿಗೆ ಬ್ಲಾಕ್‌ಮೇಲ್ ಮಾಡ್ತಿದ್ದ AIMIM ಸಂಘಟನೆಯ ಪದಾಧಿಕಾರಿಯಾಗಿದ್ದ ವ್ಯಕ್ತಿಯನ್ನು ಮಹಾ ಪೊಲೀಸರು ಬಂಧಿಸಿದ್ದಾರೆ.

ನೂರಾರು ಮಕ್ಕಳ ಬದುಕು ಹಿಂಡಿದ ಅಯಾಜ್‌:

ಮುಂಬೈ: 180ಕ್ಕೂ ಹೆಚ್ಚು ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯವೆಸಗಿ 350ಕ್ಕೂ ಹೆಚ್ಚು ಅಶ್ಲೀಲ ವೀಡಿಯೋಗಳನ್ನು ಚಿತ್ರಿಕರೀಸಿಕೊಂಡಿದ್ದ ವ್ಯಕ್ತಿಯೊಬ್ಬನನ್ನು ಮಹಾರಾಷ್ಟ್ರದಲ್ಲಿ ಬಂಧಿಸಲಾಗಿದೆ. ಬಂಧಿತ ವ್ಯಕ್ತಿಯನ್ನು ಮೊಹಮ್ಮದ್ ಅಯಾಜ್ ಅಲಿಯಾಸ್ ತನ್ವೀರ್ ಎಂದು ಗುರುತಿಸಲಾಗಿದೆ. ಈತನನ್ನು ಮಹಾರಾಷ್ಟ್ರದ ಅಮರಾವತಿಯಲ್ಲಿ ಬಂಧಿಸಲಾಗಿದ್ದು, ಈತ ಪರತ್ವಾಡ ನಗರದ ನಿವಾಸಿಯಾಗಿದ್ದಾನೆ. ಮಾರಾಷ್ಟ್ರದ ರಾಜ್ಯಸಭಾ ಬಿಜೆಪಿ ಸಂಸದ ಅನಿಲ್ ಬೊಂಡೆ ಅವರು ನೀಡಿದ ದೂರಿನ ಮೇರೆಗೆ ಆರೋಪಿಯನ್ನು ಬಂಧಿಸಲಾಗಿದೆ. ಈ ಅಶ್ಲೀಲ ವೀಡಿಯೋಗಳನ್ನು ಮಕ್ಕಳನ್ನು ಬ್ಲಾಕ್‌ಮೇಲ್ ಮಾಡುವುದ್ಕೆ ಹಾಗೂ ಅವರನ್ನು ಬಲವಂತವಾಗಿ ವೇಶ್ಯಾವಾಟಿಕೆಗೆ ಎಳೆಯುವುದಕ್ಕೆ ಆರೋಪಿ ಬಳಸುತ್ತಿದ್ದ ಎಂದು ವರದಿಯಾಗಿದೆ. ಇವುಗಳಲ್ಲಿ ಕೆಲ ವೀಡಿಯೋಗಳನ್ನು ಇಂಟರ್‌ನೆಟ್‌ನಲ್ಲಿ ವ್ಯಾಪಕವಾಗಿ ಹರಿಬಿಡಲಾಗಿತ್ತು.

ವಾಟ್ಸಾಪ್ ಹಾಗೂ ಸ್ನ್ಯಾಪ್‌ಚಾಟ್ ಮೂಲಕ ಅಪ್ರಾಪ್ತರನ್ನು ವ್ಯವಸ್ಥಿತವಾಗಿ ಟಾರ್ಗೆಟ್ ಮಾಡಲಾಗುತ್ತಿತ್ತು. ಈ ಸಂಬಂಧ ರಾಜ್ಯಸಭಾ ಸಂಸದ ಅನಿಲ್ ಬೊಂಡೆ ಅವರು ಅಮರಾವತಿಯ ಗ್ರಾಮೀಣ ಎಸ್‌ಪಿ ವಿಶಾಲ್ ಬೊಂಡೆ ಅವರಿಗೆ ಲಿಖಿತ ದೂರು ದಾಖಲಿಸಿದ್ದರು.

ಆರೋಪಿಯನ್ನು ಶೀಘ್ರದಲ್ಲೇ ಬಂಧಿಸಬೇಕು ಹಾಗೂ ಈ ಪ್ರಕರಣದ ಬಗ್ಗೆ ವಿಶೇಷ ತನಿಖಾ ತಂಡದಿಂದ ತನಿಖೆ ಮಾಡದೇ ಹೋದರೆ ಎಸ್‌ಪಿ ಕಚೇರಿ ಮುಂದೆ ಪ್ರತಿಭಟನೆ ನಡೆಸುವುದಾಗಿ ವಾರ್ನಿಂಗ್ ನೀಡಿದ್ದರು. ಈ ಘಟನೆ ಬೆಳಕಿಗೆ ಬಂದ ನಂತರ ಕೆಲವು ಮುಸ್ಲಿಂ ಸಮುದಾಯದ ಸದಸ್ಯರು ಕೂಡ ಪೊಲೀಸ್ ಠಾಣೆಗೆ ಭೇಟಿ ನೀಡಿ ಆರೋಪಿ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿದ್ದಾರೆ. ಈತನ ಕೃತ್ಯದಿಂದ ತಮ್ಮ ಸಮುದಾಯದ ಘನತೆಗೆ ಕಳಂಕ ಬರುವಂತಾಗಿದೆ. ಹೀಗಾಗಿ ಆತನ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಅವರು ಆಗ್ರಹಿಸಿದ್ದಾರೆ.

AIMIM ಸಂಘಟನೆಯ ಪದಾಧಿಕಾರಿಯಾಗಿದ್ದ ಅಯಾಜ್

ಆರೋಪಿ ಮೊಹಮ್ಮದ್ ಅಯಾಜ್ ಈ ಹಿಂದೆ AIMIM ಸಂಘಟನೆಯ ಪದಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದ ಎಂಬ ಆರೋಪ ಕೇಳಿ ಬಂದಿದೆ. ಆತ ತನ್ನ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿರುವ ವೀಡಿಯೊಗಳು ಮತ್ತು ಫೋಟೋಗಳಲ್ಲಿ ಕಂಡು ಬರುವಂತೆ ಆತ ಅವರು AIMIMನ ಅಮರಾವತಿ ವಿಭಾಗದ ಅಧ್ಯಕ್ಷ ಹಾಜಿ ಇರ್ಫಾನ್ ಖಾನ್ ಅವರಿಂದ ಪತ್ರವನ್ನು ಸ್ವೀಕರಿಸುತ್ತಿರುವುದು ಹಾಗೂ ಪಕ್ಷದ ಸಮಾವೇಶಗಳಲ್ಲಿ ಭಾಗವಹಿಸುತ್ತಿದ್ದಂತ ಫೋಟೋ ವೀಡಿಯೋಗಳಿವೆ. ಆದರೆ, ಪ್ರಕರಣ ಬೆಳಕಿಗೆ ಬಂದ ನಂತರ ಅಂತಹ ಹಲವಾರು ವೀಡಿಯೊಗಳನ್ನು ಆತನ ಇನ್‌ಸ್ಟಾಗ್ರಾಮ್ ಖಾತೆಯಿಂದ ಅಳಿಸಿ ಹಾಕಲಾಗಿದೆ ಎಂದು ವರದಿಯಾಗಿದೆ.

ಈ ಪ್ರಕರಣದಲ್ಲಿ ಪೊಲೀಸರು ತ್ವರಿತವಾಗಿ ಕಾರ್ಯನಿರ್ವಹಿಸಿದ್ದು, ಆರೋಪಿಯನ್ನು ಬಂಧಿಸಿದ್ದಾರೆ. ಆತನನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದು, ಆತನಿಗೆ 7 ದಿನಗಳ ಕಾಲ ಪೊಲೀಸ್ ಕಸ್ಟಡಿ ನೀಡಲಾಗಿದೆ. ಪೊಲೀಸರು ಆತನ ಮೊಬೈಲ್ ಫೋನ್‌ ಅನ್ನು ಜಪ್ತಿ ಮಾಡಿದ್ದು, ಈ ಮೊಬೈಲ್‌ನಲ್ಲಿ ಹಲವು ಅಶ್ಲೀಲ ವೀಡಿಯೋಗಳು ಇರುವುದು ಕಂಡು ಬಂದಿದೆ. ಸದ್ಯ ಪೊಲೀಸರು ಆರೋಪಿ ಈ ವೀಡಿಯೋಗಳನ್ನು ತನ್ನ ಸ್ನೇಹಿತರ ಜೊತೆಗೂ ಹಂಚಿಕೊಂಡಿದ್ದಾನ ಅಥವಾ ಇದರ ಹಿಂದೆ ಯಾವುದಾದರು ಕ್ರಿಮಿನಲ್ ಜಾಲ ಇದೆಯ ಎಂಬ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ಆನ್‌ಲೈನ್‌ನಲ್ಲಿ ಹಂಚಿಕೊಂಡಿರುವ ವೀಡಿಯೋ ಬಗ್ಗೆಯೂ ಪೊಲೀಸರು ಸೈಬರ್ ಸೆಲ್ ಸಹಾಯದೊಂದಿಗೆ ತನಿಖೆ ಮಾಡುತ್ತಿದ್ದಾರೆ.


Spread the love

About Laxminews 24x7

Check Also

ಕಾರು ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ, ಇನ್ಸ್ಪೆಕ್ಟರ್ ಸ್ಥಳದಲ್ಲೇ ಸಾವು

Spread the loveವಿಜಯನಗರ, ಕೊಪ್ಪಳ ಜಿಲ್ಲೆಯ DCRE ಘಟಕದ CPI ರಘುನಾಥ್ ಸ್ಥಳದಲ್ಲೇ ಸಾವು ವಿಜಯನಗರ ಮತ್ತು ಕೊಪ್ಪಳ ಜಿಲ್ಲೆಗಳ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ