Breaking News

ನಾಳೆ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ – ಮಧ್ಯಾಹ್ನ 3ಕ್ಕೆ ವೆಬ್‌ಸೈಟ್‌ನಲ್ಲಿ ರಿಸಲ್ಟ್ ಲಭ್ಯ

Spread the love

ಬೆಂಗಳೂರು: ನಾಳೆ (ಏ.9) ದ್ವಿತೀಯ ಪಿಯುಸಿ ಪರೀಕ್ಷೆ 1ರ ಫಲಿತಾಂಶ ಪ್ರಕಟವಾಗಲಿದ್ದು, ಮಧ್ಯಾಹ್ನ 3ಕ್ಕೆ ವೆಬ್‌ಸೈಟ್‌ನಲ್ಲಿ ರಿಸಲ್ಟ್ ಲಭ್ಯವಾಗಲಿದೆ.

ಈ ಮೊದಲು ಸುದ್ದಿಗೋಷ್ಠಿ ನಡೆಸಿ ಬಳಿಕ ಫಲಿತಾಂಶ ಪ್ರಕಟವಾಗುತ್ತಿತ್ತು. ಆದರೆ ಈ ಬಾರಿ ಮೊದಲು ವೈಬ್‌ಸೈಟ್‌ನಲ್ಲಿ ಫಲಿತಾಂಶ ಪ್ರಕಟವಾಗಲಿದೆ. ಬಳಿಕ ಸುದ್ದಿಗೋಷ್ಠಿ ನಡೆಯಲಿದೆ. ಚುನಾವಣೆ ನೀತಿ ಸಂಹಿತೆ ಹಿನ್ನೆಲೆ ಸಚಿವ ಮಧು ಬಂಗಾರಪ್ಪ ಅವರು ಸಂಜೆ 6:15ಕ್ಕೆ ಫಲಿತಾಂಶದ ಬಗ್ಗೆ ಸುದ್ದಿಗೋಷ್ಠಿ ನಡೆಸಲಿದ್ದಾರೆ.

ಇಲಾಖೆ ವೆಬ್‌ಸೈಟ್ https://karresults.nic.in ಫಲಿತಾಂಶ ಲಭ್ಯವಾಗಲಿದೆ ಜೊತೆಗೆ Karnatakaone ಮೊಬೈಲ್ ಆಪ್ ಮೂಲಕ ಫಲಿತಾಂಶ ಪಡೆಯಬಹುದು ಹಾಗೂ ವಿದ್ಯಾರ್ಥಿಗಳ ನೋಂದಾಯಿತ ಮೊಬೈಲ್ ಸಂಖ್ಯೆಗೆ, ವಾಟ್ಸಪ್‌ , SMSಮೂಲಕವೂ ಫಲಿತಾಂಶ ರವಾನೆ ಆಗಲಿದೆ.

ಇನ್ನೂ ಈ ವರ್ಷ ಮೊದಲ ಬಾರಿಗೆ ಡಿಜಿ ಲಾಕರ್‌ನಲ್ಲಿ ವಿದ್ಯಾರ್ಥಿಗಳ ಅಂಕಪಟ್ಟಿ ಲಭ್ಯವಾಗಲಿದೆ. ನಾಳೆ ಮಧ್ಯಾಹ್ನ 3 ಗಂಟೆಗೆ ಅಂಕಪಟ್ಟಿ ಡಿಜಿ ಲಾಕರ್‌ನಲ್ಲಿ ಲಭ್ಯವಿರಲಿದೆ. https://www.digilocker.gov.in/ ಬಳಸಿ ಅಂಕಪಟ್ಟಿ ಡೌನ್‌ಲೋಡ್ ಮಾಡಿಕೊಳ್ಳಬಹುದು. ನಾಳೆ 3 ಗಂಟೆ ನಂತರ ಕಾಲೇಜುಗಳಿಗೆ ಫಲಿತಾಂಶ ಪಟ್ಟಿ ರವಾನೆ ಆಗಲಿದೆ. ಫೆಬ್ರವರಿ 28ರಿಂದ ಮಾರ್ಚ್ 17ವರೆಗೆ ಪರೀಕ್ಷೆ ನಡೆದಿತ್ತು. ಸುಮಾರು 7.10 ಲಕ್ಷ ವಿದ್ಯಾರ್ಥಿಗಳು 1217 ಕೇಂದ್ರಗಳಲ್ಲಿ ಪರೀಕ್ಷೆ ಬರೆದಿದ್ದರು.


Spread the love

About Laxminews 24x7

Check Also

ಅಪ್ರಾಪ್ತ ಬಾಲಕನ ಮೇಲೆ ಅತ್ಯಾಚಾರ ; ಪೋಕ್ಸೋ ಕಾಯ್ದೆಯಡಿ ವಿವಾಹಿತ ಮಹಿಳೆಯ ಬಂಧನ!

Spread the love ಛತ್ತೀಸ್‌ಗಢ,ಏ.08 :- ಸಾಮಾಜಿಕ ಜಾಲತಾಣದಲ್ಲಿ ಅಪ್ರಾಪ್ತ ಬಾಲಕನೊಂದಿಗೆ ಸ್ನೇಹ ಬೆಳೆಸಿ, ಆತನನ್ನು ಹೋಟೆಲ್ ಗೆ ಕರೆಸಿಕೊಂಡು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ