Breaking News

ಸಿದ್ದಗಂಗಾ ಮಠದಲ್ಲಿ 119 ಮಕ್ಕಳಿಗೆ ಶಿವಕುಮಾರ ಶ್ರೀಗಳ ಹೆಸರು ನಾಮಕರಣ

Spread the love

ತುಮಕೂರು: ಸಿದ್ದಗಂಗಾ ಮಠದಲ್ಲಿ ಇಂದು (ಏ.5) ನಾಮಕರಣ ಮಹೋತ್ಸವ ನಡೆಯಿತು. 119 ಮಕ್ಕಳಿಗೆ ಶಿವಕುಮಾರ ಶ್ರೀಗಳ ಹೆಸರನ್ನು ನಾಮಕರಣ ಮಾಡಲಾಯಿತು.

ಶಿವಕುಮಾರ ಶ್ರೀಗಳ ದಾಸೋಹ ಟ್ರಸ್ಟ್ ವತಿಯಿಂದ ಈ ಕಾರ್ಯಕ್ರಮ ಆಯೋಜಿಸಲಾಗಿತ್ತು. ಗಂಡು ಮಕ್ಕಳಿಗೆ ಶಿವಕುಮಾರ ಅಂತಲೂ, ಹೆಣ್ಣು ಮಕ್ಕಳಿಗೆ ಶಿವಾನಿ ಅಂತಲೂ ನಾಮಕರಣ ಮಾಡಲಾಯಿತು. ಪ್ರತಿ ಮಕ್ಕಳಿಗೆ ಒಂದು ತೊಟ್ಟಿಲು, ಬಟ್ಟೆ, ಮಾಸ್ಕಿಟೋ ಕಾಯಿಲ್, ಹಾಸಿಗೆ ದಿಂಬು ಉಚಿತವಾಗಿ ವಿತರಣೆ ಮಾಡಲಾಯಿತು.

ಮಕ್ಕಳೊಂದಿಗೆ ಬಂದ ದಂಪತಿ ಶಿವಕುಮಾರ ಶ್ರೀಗಳ ನಾಮಸ್ಮರಣೆ ಮಾಡಿ ಪಾವನರಾದರು. ಶಿವಕುಮಾರ ಶ್ರೀಗಳ ಜಯಂತಿಯಂದು ನಾಮಕರಣ ಕಾರ್ಯಕ್ರಮ ನಡೆಯಬೇಕಿತ್ತು. ಆದರೆ ರಾಷ್ಟ್ರಪತಿಗಳ ಕಾರ್ಯಕ್ರಮದ ಭದ್ರತೆ ದೃಷ್ಟಿಯಿಂದ ಅನುಮತಿ ನೀಡಿರಲಿಲ್ಲ.


Spread the love

About Laxminews 24x7

Check Also

ಅತ್ತಿಗೆ ಮೇಲೆ ಕಣ್ಣಿಟ್ಟಿದ್ದ ಸಿಟ್ಟು..! ತಮ್ಮನ ಕೊಲೆಗೆ ಅಪ್ಪ ಸಾಥ್!

Spread the loveತುಮಕೂರು ನಗರದ ಬನಶಂಕರಿ ಬಡಾವಣೆಯಲ್ಲಿ ರಕ್ತಸಂಬಂಧಗಳ ನಡುವಿನ ಕಲಹವೊಂದು ಭೀಕರ ಕೊ*ಲೆಯಲ್ಲಿ ಅಂತ್ಯಗೊಂಡಿದೆ. ತನ್ನ ಒಡಹುಟ್ಟಿದ ತಮ್ಮನನ್ನೇ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ