Breaking News

ಬೆಳಗಾವಿ-ಖಾನಾಪುರದಲ್ಲಿ ಅಕ್ರಮ ಗಣಿಗಾರಿಕೆ ದಂಧೆ: ಜಿಲ್ಲಾಧಿಕಾರಿಗೆ ರಾಜಕುಮಾರ ಟೋಪಣ್ಣವರ, ಸುಜೀತ್ ಮುಳಗುಂದ ದೂರು

Spread the love

ಖಾನಾಪುರ, ಬೆಳಗಾವಿ ಭಾಗದಲ್ಲಿ ಅಕ್ರಮ ಗಣಿಗಾರಿಕೆ ತಡೆಯುವಂತೆ ಆಗ್ರಹಿಸಿ ಮಂಗಳವಾರ ರಾಜಕುಮಾರ ಟೋಪಣ್ಣವರ ಹಾಗೂ ಸುಜೀತ್ ಮುಳಗುಂದ್ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.

ಬಾಕ್ಸೈಟ್, ಲೇಟರೈಟ್ ಮತ್ತು ಸಿಲಿಕಾ ಖನಿಜಗಳನ್ನು ವ್ಯಾಪಕವಾಗಿ ಅಕ್ರಮವಾಗಿ ತೆಗೆಯಲಾಗುತ್ತಿದೆ. ಬೆಳಗುಂಡಿ, ಬಕನೂರು, ಬೀಜಗರ್ಣಿ, ಗೋಳ್ಯಾಳಿ, ಅಮಟೆ, ಬೆಟಗೇರಿ, ಕಿಣಯೆ, ಇನಾಮ ಬಡಸ್ ಹಾಗೂ ಖಾನಾಪುರ ತಾಲ್ಲೂಕಿನ ತೋರಳಿ ಗ್ರಾಮಗಳಲ್ಲಿ ಈ ಅಕ್ರಮ ಚಟುವಟಿಕೆಗಳು ನಡೆಯುತ್ತಿವೆ ಎನ್ನಲಾಗಿದೆ. ರೈತರ ಅನುಮತಿ ಇಲ್ಲದೆ ಅವರ ಕೃಷಿಭೂಮಿಗಳಲ್ಲೇ ಗಣಿಗಾರಿಕೆ ನಡೆಸಲಾಗುತ್ತಿದ್ದು, ಇದರಿಂದ ಭೂಮಿ ಹಾನಿಗೊಳಗಾಗುತ್ತಿದೆ.ಮಹಾರಾಷ್ಟ್ರದ ಸಮೀಪದ ಪ್ರದೇಶಗಳಿಗೆ ನೀಡಲಾದ ಗಣಿಗಾರಿಕೆ ಪಾಸ್‌ಗಳನ್ನು ದುರುಪಯೋಗಪಡಿಸಿಕೊಂಡು ಕರ್ನಾಟಕದ ಈ ಭಾಗಗಳಲ್ಲಿ ಖನಿಜಗಳನ್ನು ತೆಗೆಯಲಾಗುತ್ತಿದೆ. ಖನಿಜಗಳನ್ನು ಡಾಲ್ಮಿಯಾ ಸಿಮೆಂಟ್ ಹಾಗೂ ಚೆಟ್ಟಿನಾಡ್ ಸಿಮೆಂಟ್ ಕಂಪನಿಗಳಿಗೆ ಸಾಗಿಸಲಾಗುತ್ತಿದೆ ಎಂಬ ಶಂಕೆ ಇದೆ ಎಂದು ಸಾಮಾಜೀಕ ಕಾರ್ಯಕರ್ತ ರಾಜಕುಮಾರ್ ಟೋಪಣ್ಣವರ ಹೇಳಿದರು.

ಅಕ್ರಮ ಗಣಿಗಾರಿಕೆ ಹೆಚ್ಚಾಗಿ ರಾತ್ರಿ 2 ಗಂಟೆಯಿಂದ ಬೆಳಿಗ್ಗೆ 6 ಗಂಟೆಯವರೆಗೆ ನಡೆಯುತ್ತಿದ್ದು, ಅಧಿಕಾರಿಗಳ ಗಮನ ತಪ್ಪಿಸಲು ಈ ರೀತಿಯ ಕಾರ್ಯಾಚರಣೆ ನಡೆಯುತ್ತಿದೆ. ಭಾರೀ ಲಾರಿಗಳ ಸಂಚಾರ ಬೆಳಗಾವಿ ಹಾಗೂ ಖಾನಾಪುರ ಭಾಗದ ಪಶ್ಚಿಮ ರಸ್ತೆಗಳ ಮೇಲೆ ಹೆಚ್ಚಿರುವುದು ಸ್ಥಳೀಯರ ಆತಂಕಕ್ಕೆ ಕಾರಣವಾಗಿದೆ ಎಂದು ತಿಳಿಸಿದ್ದಾರೆ.ಈ ಭಾಗಗಳು ಪರಿಸರದ ದೃಷ್ಟಿಯಿಂದ ಸೂಕ್ಷ್ಮ ಪ್ರದೇಶಗಳಾಗಿದ್ದು, ಅಕ್ರಮ ಗಣಿಗಾರಿಕೆಯಿಂದ ಅರಣ್ಯ ನಾಶ, ಭೂಗರ್ಭ ಜಲಮಟ್ಟ ಕುಸಿತ, ಮಣ್ಣು ಕೊಚ್ಚಿಹೋಗುವಿಕೆ ಸೇರಿದಂತೆ ಗಂಭೀರ ಪರಿಸರ ಹಾನಿ ಉಂಟಾಗುತ್ತಿದೆ. ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿದ ದೂರಿನಲ್ಲಿ ತಕ್ಷಣ ತನಿಖೆ ನಡೆಸಿ ಅಕ್ರಮ ಗಣಿಗಾರಿಕೆಯನ್ನು ನಿಲ್ಲಿಸುವಂತೆ ಹಾಗೂ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಸಾಮಾಜೀಕ ಕಾರ್ಯಕರ್ತ ಸುಜೀತ್ ಮುಳಗುಂದ ಒತ್ತಾಯಿಸಿದ್ದಾರೆ.


Spread the love

About Laxminews 24x7

Check Also

ಮನೆಗಳ ಕರ ಸುಲಾತಿಯಲ್ಲಿ ಬೆಳಗಾವಿ ಜಿಲ್ಲೆಯಲ್ಲಿ ಕಾಗವಾಡ ತಾಲೂಕ ಪ್ರಥಮ ಸ್ಥಾನ.

Spread the loveಬೆಳಗಾವಿ ಜಿಲ್ಲೆಯ ವ್ಯಾಪ್ತಿಯಲ್ಲಿ ಬರುವ 15 ತಾಲೂಕಿನ ತಾಲೂಕಾ ಪಂಚಾಯಿತಿಗಳ ಪೈಕಿ ಕಾಗವಾಡ ತಾಲೂಕ ಪಂಚಾಯಿತಿ ವತಿಯಿಂದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ