ಹಾವೇರಿ: ಜನವರಿಯಲ್ಲಿ ದರ್ಶನ್ಗೆ ಬೇಲ್ ಸಿಗುವ ನಿರೀಕ್ಷೆ ಇದೆ. ಒಂದು ವೇಳೆ ಅವರು ಜೈಲಿನಿಂದ ಬಿಡುಗಡೆಯಾಗದಿದ್ದರೇ ನಾನೇ ವೈಯಕ್ತಿಕವಾಗಿ ಜೈಲ್ಗೆ ಹೋಗಿ ದರ್ಶನ್ ಅವರನ್ನು ಭೇಟಿ ಮಾಡಿ ಆಶೀರ್ವಾದ ಪಡೆಯುತ್ತೇನೆ ಎಂದು ನಟ ಹಾಗೂ ಸಚಿವ ಜಮೀರ್ ಪುತ್ರ ಝೈದ್ ಖಾನ್ ತಿಳಿಸಿದರು.![]()
ಹಾವೇರಿಯಲ್ಲಿ ಕಲ್ಟ್ ಸಿನಿಮಾ ಪ್ರಮೋಷನ್ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪ್ರಸ್ತುತ ಚಿತ್ರಮಂದಿರಗಳಲ್ಲಿ ದರ್ಶನ್ ಅಭಿನಯದ ಡೆವಿಲ್ ಚಿತ್ರ ಪ್ರದರ್ಶನ ಕಾಣುತ್ತಿದೆ. ನಮ್ಮ ಕಲ್ಟ್ ಚಿತ್ರ ಜನವರಿ 23 ರಂದು ತೆರೆಕಾಣಲಿದೆ. ಅದರ ಪರಿಣಾಮ ನಮ್ಮ ಚಿತ್ರದ ಮೇಲೆ ಬೀರುವುದಿಲ್ಲ. ಡೆವಿಲ್ ಸಿನಿಮಾ ಚೆನ್ನಾಗಿ ಪ್ರದರ್ಶನಗೊಳ್ಳುತ್ತಿದೆ. ದರ್ಶನ್ ಅವರ ಚಿತ್ರ ಚೆನ್ನಾಗಿ ಓಡುತ್ತಿರುವುದು ನನಗೆ ಖುಷಿ ತಂದಿದೆ ಎಂದರು.ನಾನು ಮೊದಲು ದರ್ಶನ್ ಅಭಿಮಾನಿ, ನಂತರ ಅವರ ತಮ್ಮ. ನಾನು ಶುಕ್ರವಾರ ಧಾರವಾಡದಲ್ಲಿ ನಡೆದ ಕಾರ್ಯಕ್ರಮದಲ್ಲಿ ದರ್ಶನ್ ಅವರನ್ನು ಬಹಳ ಮಿಸ್ ಮಾಡಿಕೊಂಡೆ. ಧಾರವಾಡದಲ್ಲಿ 30 ಸಾವಿರಕ್ಕೂ ಅಧಿಕ ಪ್ರೇಕ್ಷಕರು ಸೇರಿದ್ದು ನನಗೆ ಆಶ್ಚರ್ಯವಾಯಿತು. ಈ ರೀತಿ ಜನ ಸೇರಿದ್ದು ಯಾವ ಜನ್ಮದ ಋಣ ಗೊತ್ತಿಲ್ಲ. ಬನಾರಸ್ ಚಿತ್ರದ ಪ್ರೀ ರಿಲೀಸ್ ಇವೆಂಟ್ಗೂ ದರ್ಶನ್ ಬಂದಿದ್ದರು ಎಂದು ಹೇಳಿದರು.
Laxmi News 24×7