Breaking News
Home / ರಾಜ್ಯ / ಒಂದು ವರ್ಷದ ಮಗಳನ್ನು ಕೊಂದು ತಾಯಿ ನೇಣಿಗೆ ಶರಣು

ಒಂದು ವರ್ಷದ ಮಗಳನ್ನು ಕೊಂದು ತಾಯಿ ನೇಣಿಗೆ ಶರಣು

Spread the love

ಚೆನ್ನೈ: ತಾಯಿಯೊಬ್ಬಳು ಒಂದು ವರ್ಷದ ಮಗಳನ್ನು ಕೊಂದು ತಾನೂ ಆತ್ಮಹತ್ಯೆ ಮಾಡಿಕೊಂಡು ಮೃತಪಟ್ಟಿರುವ ಘಟನೆ ತಮಿಳುನಾಡಿನ ಕಡಲೂರು ಜಿಲ್ಲೆಯಲ್ಲಿ ನಡೆದಿದೆ.

ಪ್ರಿಯಾಂಕಾ (22) ಒಂದು ವರ್ಷದ ಮಗಳನ್ನು ಕೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಮೃತ ಪ್ರಿಯಾಂಕಾ ಮೂರು ವರ್ಷದ ಹಿಂದೆ ಬಾಲಮುರುಗನ್ ಜೊತೆ ವಿವಾಹವಾಗಿದ್ದಳು. ಈ ದಂಪತಿಗೆ ಒಂದು ವರ್ಷದ ಮಗಳಿದ್ದಳು. ಇತ್ತೀಚೆಗೆ ದಂಪತಿಯ ನಡುವೆ ಚಿಕ್ಕ-ಪುಟ್ಟ ವಿಚಾರಗಳಿಗೂ ಪದೇ ಪದೇ ಜಗಳ ನಡೆಯುತ್ತಿತ್ತು.

ದಂಪತಿಯ ವಿವಾಹ ವಾರ್ಷಿಕೋತ್ಸವದೊಂದಿಗೆ ಶುಕ್ರವಾರ ಮಗಳ ಒಂದು ವರ್ಷದ ಹುಟ್ಟುಹಬ್ಬವಿತ್ತು. ಹೀಗಾಗಿ ಪತಿ ಅದ್ಧೂರಿಯಾಗಿ ಆಚರಣೆ ಮಾಡುತ್ತಾರೆ ಎಂಬ ಪ್ರಿಯಾಂಕಾ ಖುಷಿಯಾಗಿದ್ದಳು. ಆದರೆ ಪತಿ ಹುಟ್ಟುಹಬ್ಬ ಮತ್ತು ವಿವಾಹ ವಾರ್ಷಿಕೋತ್ಸವ ಎರಡನ್ನು ಆಚರಣೆ ಮಾಡಿಲ್ಲ.

ಇದೇ ವಿಚಾರದ ಬಗ್ಗೆ ಬಾಲಮುರುಗನ್ ಮತ್ತು ಪ್ರಿಯಾಂಕಾ ನಡುವೆ ಜಗಳ ನಡೆದಿದೆ. ಇದರಿಂದ ಮನನೊಂದ ಪ್ರಿಯಾಂಕಾ ಮಗಳ ಜೊತೆ ರೂಮಿಗೆ ಹೋಗಿ ಬಾಗಿಲು ಹಾಕಿಕೊಂಡಿದ್ದಾಳೆ. ಸ್ವಲ್ಪ ಸಮಯದ ನಂತರ ಪತಿ ಬಾಲಮುರುಗನ್ ರೂಮಿಗೆ ಹೋಗಿ ನೋಡಿದ್ದಾನೆ. ಅಷ್ಟರಲ್ಲಿಯೇ ಪ್ರಿಯಾಂಕಾ ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಳು.

ಇನ್ನೂ ಮಗು ಹಾಸಿಗೆ ಮೇಲಿತ್ತು. ಆದರೆ ಪ್ರಿಯಾಂಕಾ ತಾನು ಆತ್ಮಹತ್ಯೆ ಮಾಡಿಕೊಳ್ಳುವ ಮೊದಲು ಮಗುವಿನ ಕತ್ತು ಹಿಸುಕಿ ಕೊಲೆ ಮಾಡಿದ್ದಳು. ತಕ್ಷಣ ಪತಿ ಬಾಲಮುರುಗನ್ ಪೊಲೀಸರಿಗೆ ಫೋನ್ ಮಾಡಿ ಮಾಹಿತಿ ತಿಳಿಸಿದ್ದಾನೆ. ಮಾಹಿತಿ ತಿಳಿದು ಸ್ಥಳಕ್ಕೆ ಬಂದ ಪೊಲೀಸರು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.


Spread the love

About Laxminews 24x7

Check Also

ಬುಧವಾರ ಮತ್ತೆ ಎರಡು ಅನಧಿಕೃತ ಆಸ್ಪತ್ರೆ ಸೀಜ್

Spread the loveಚನ್ನಮ್ಮನ ಕಿತ್ತೂರು : ಮಕ್ಕಳ ಮಾರಾಟ ಹಾಗೂ ಭ್ರೂಣ ಹತ್ಯೆ ಪ್ರಕರಣದ ಬೆನ್ನಲೇ ಕಿತ್ತೂರಿನಲ್ಲಿ ಬುಧವಾರ ಮತ್ತೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ