Breaking News

ಹುಕ್ಕೇರಿ ತಾಲೂಕಿನ ಸಹಕಾರಿ ಸಂಘಗಳನ್ನು 30 ವರ್ಷಗಳ ಬಂಧನದಿಂದ ಮುಕ್ತಿ ಮಾಡಲಾಗುವದು – ಅಣ್ಣಾಸಾಹೇಬ ಜೋಲ್ಲೆ

Spread the love

ಹುಕ್ಕೇರಿ : ಹುಕ್ಕೇರಿ ತಾಲೂಕಿನ ಸಹಕಾರಿ ಸಂಘಗಳನ್ನು 30 ವರ್ಷಗಳ ಬಂಧನದಿಂದ ಮುಕ್ತಿ ಮಾಡಲಾಗುವದು – ಅಣ್ಣಾಸಾಹೇಬ ಜೋಲ್ಲೆ
ಹುಕ್ಕೇರಿ ತಾಲೂಕಿನ ವಿವಿಧ ಸಹಕಾರಿ ಸಂಘಗಳು ಮತ್ತು ಆಡಳಿತ ಮಂಡಳಿಯವರು ಕಳೆದ 30 ವರ್ಷಗಳಿಂದ ಅನುಭವಿಸುತ್ತಿರುವ ತೊಂದರೆಗಳಿಗೆ ಮುಕ್ತಿ ನೀಡಲಾಗುವ ಎಂದು ಮಾಜಿ ಸಂಸದ ಅಣ್ಣಾಸಾಹೇಬ ಜೋಲ್ಲೆ ಹೇಳಿದರು.
ಸಂಕೇಶ್ವರ ನಗರದಲ್ಲಿ ಮಾಜಿ ಸಂಸದ ಅಣ್ಣಾಸಾಹೇಬ ಜೋಲ್ಲೆ ಮತ್ತು ಅರಭಾಂವಿ ಶಾಸಕ ಬಾಲಚಂದ್ರ ಜಾರಕಿಹೋಳಿ ನೇತೃತ್ವದಲ್ಲಿ ಜರುಗಿದ ಭಾರತೀಯ ಜನತಾ ಪಕ್ಷದ ಮುಖಂಡರ ಸಭೆ ಜರಗಿಸುವ ಮೂಲಕ ಇತ್ತಿಚಿಗೆ ಹಿರಣ್ಯಕೇಶಿ ಸಕ್ಕರೆ ಕಾರ್ಖಾನೆ ಆಡಳಿತದ ಚುಕ್ಕಾಣಿ ಮತ್ತೆ ತಮ್ಮ ವಶ ಮಾಡಿಕೊಂಡ ರಮೇಶ ಕತ್ತಿ ಮತ್ತು ಎ ಬಿ ಪಾಟೀಲ ಬಣಕ್ಕೆ ತೀರಗೆಟು ನೀಡಲು ಮತ್ತು ಮುಂಬರುವ ವಿದ್ಯುತ್ ಸಹಕಾರಿ ಸಂಘ ಹಾಗೂ ಬೆಳಗಾವಿ ಡಿ ಸಿ ಸಿ ಬ್ಯಾಂಕ ಚುನಾವಣೆ ಅಂಗವಾಗಿ ಹಮ್ಮಿಕೊಂಡ ಸಭೆಯಲ್ಲಿ ಹುಕ್ಕೇರಿ ಮತ್ತು ಸಂಕೇಶ್ವರ ಭಾಗದ ಸಾವಿರಾರು ಬಿ ಜೆ ಪಿ ಕಾರ್ಯಕರ್ತರು ಭಾಗವಹಿಸಿದ್ದರಿಂದ ಮುಖಂಡರಲ್ಲಿ ಹೊಂದಲ ಉಂಟಾಗಿದೆ.
ಮಾಜಿ ಸಂಸದ ಅಣ್ಣಾಸಾಹೇಬ ಜೋಲ್ಲೆ ಮಾತನಾಡಿ ಬೆಳಗಾವಿ ಜಿಲ್ಲೆಯಲ್ಲಿ ಕಳೆದ ನಾಲ್ಕು ಐದು ತಿಂಗಳಲ್ಲಿ ಸಹಕಾರಿ ಸಂಘಗಳಲ್ಲಿ ಆದ ಬದಲಾವಣೆ ಗಳಿಗೆ ಕಾರಣ ಇಲ್ಲಿಯ ಜನ ಅನುಭವಿಸುತ್ತಿರುವ ತೊಂದರೆಗಳನ್ನು ನಮ್ಮ ಜೊತೆ ಹಂಚಿಕೊಂಡ ಹಿನ್ನಲೆಯಲ್ಲಿ ನಾನು ಮತ್ತು ಬಾಲಚಂದ್ರ ಜಾರಕಿಹೋಳಿಯವರು ಮಧ್ಯಸ್ಥಿಕೆ ವಹಿಸಿ ಅಳವಿನ ಅಂಚಿನಲ್ಲಿರುವ ಸಂಘ ಸಂಸ್ಥೆಗಳ ಉಳುವಿಗಾಗಿ ,ಅಪ್ಪಣಗೌಡರು ಹುಟ್ಟು ಹಾಕಿದ ಸಂಸ್ಥೆಗಳು ಜನರಿಗೆ ಪಾರದರ್ಶಕವಾದ ಆಡಳಿತ ನೀಡುವ ಉದ್ದೇಶದಿಂದ ನಾವು ಬಂದಿದ್ದೆವೆ, ನಾವೇನು ವಿದೇಶದಿಂದ ಬಂದಿಲ್ಲಾ
ಈ ಭಾಗದ ಸಂಸದನಾಗಿ ಕೆಲಸ ಮಾಡಿದ್ದೆನೆ ಅದರಂತೆ ಬಾಲಚಂದ್ರ ಜಾರಕಿಹೋಳಿ ಜಿಲ್ಲೆಯ ಸಚಿವರಾಗಿ ಸಾಕಷ್ಟು ಅಭಿವೃದ್ಧಿ ಕೇಲಸ ಕೈಗೊಂಡಿದ್ದಾರೆ ಅಲ್ಲದೆ ಸಹಕಾರಿ ಸಂಘಗಳ ಆಡಳಿತ ಮಂಡಳಿಯವರ ಮತ್ತು ಈ ಭಾಗದ ಜನರ ಅಪೇಕ್ಷೆಯ ಮೇರೆಗೆ ಜಂಟಿಯಾಗಿ ಬಂದು ಈ ಭಾಗದ ಸಂಸ್ಥೆಗಳ ರಕ್ಷಣೆಗಾಗಿ ಹೋರಾಟ ಮತ್ತು ಚುನಾವಣೆ ಮಾಡುತ್ತೆವೆ ಎಂದರು
ವೇದಿಕೆ ಮೇಲೆ ವಿದ್ಯುತ್ ಸಹಕಾರಿ ಸಂಘದ ಅದ್ಯಕ್ಷ ಜಯಗೌಡಾ ಪಾಟೀಲ, ಸಂಗಮ ಸಕ್ಕರೆ ಕಾರ್ಖಾನೆ ಅದ್ಯಕ್ಷ ರಾಜೇಂದ್ರ ಪಾಟೀಲ, ಶಶಿರಾಜ ಪಾಟೀಲ, ಅಮರ ನಲವಡೆ, ಬಂಡು ಹತನೂರೆ, ಸಂಜಯ ಶಿರಕೋಳಿ, ಶಂಕರರಾವ ಹೆಗಡೆ, ಅಜೀತ ಕರಜಗಿ, ಕುಣಾಲ ಪಾಟೀಲ, ಪವನ ಪಾಟೀಲ, ರವಿ ಹಿಡಕಲ್ , ಮಹಾವೀರ ಬಾಗಿ ಮೊದಲಾದವರು ಉಪಸ್ಥಿತರಿದ್ದರು.
ನಂತರ ಅಭಿಮಾನಿಗಳು ಮುಖಂಡರಿಗೆ ಬೃಹತ್ತಾಕಾರದ ಹೂವಿನ‌ಮಾಲೆ ಹಾಕಿ ಅಭಿನಂದಿಸಿದರು. ಸಭೆಯನ್ನು ಉದ್ದೇಶಿಸಿ ಮಾತನಾಡಿದ ಬಾಲಚಂದ್ರ ಜಾರಕಿಹೋಳಿ ಮುಂಬರುವ ಹುಕ್ಕೇರಿ ವಿದ್ಯುತ್ ಸಹಕಾರಿ ಸಂಘದ ಚುನಾವಣೆಯಲ್ಲಿ ದಿವಂಗತ ಅಪ್ಪಣಗೌಡಾ ಪಾಟೀಲ ಸಹಕಾರಿ ಪೆನೆಲ್ ಮೂಲಕ ಇಂದಿನಿಂದ ಚುನಾವಣೆ ಪ್ರಚಾರಕ್ಕೆ ಚಾಲನೆ ನೀಡಲಾಗಿದೆ ಸತೀಶ ಜಾರಕಿಹೋಳಿ ಮತ್ತು ಅಣ್ಣಾಸಾಹೇಬ ಜೋಲ್ಲೆ ನೇತೃತ್ವದಲ್ಲಿ ಚುನಾವಣೆ ಜರುಗಿಸಲಾಗುವದು ಅದರಂತೆ ಬೆಳಗಾವಿ ಬಿ ಡಿ ಸಿ ಸಿ ಬ್ಯಾಂಕ ಚುನಾವಣೆಗೆ ಹುಕ್ಕೇರಿ ಭಾಗದಿಂದ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಲಾಗುವದು ಎಂದರು
ಈ ಸಂದರ್ಭದಲ್ಲಿ ಹುಕ್ಕೇರಿ ಮತ್ತು ಸಂಕೇಶ್ವರ ಭಾಗದಿಂದ ಭಾರತೀಯ ಜನತಾ ಪಕ್ಷದ ಕಾರ್ಯಕರ್ತರು ಹಾಜರಿದ್ದರು.

Spread the love

About Laxminews 24x7

Check Also

ಶ್ರೇಷ್ಠ ಫೌಂಡೇಶನ್ ಅನ್ನ ಸಂತರ್ಪಣೆ ಕಾರ್ಯಕ್ರಮಕ್ಕೆ ಶಾಸಕ ರಮೇಶ್ ಜಾರಕಿಹೊಳಿ ಅವರು ಚಾಲನೆ

Spread the loveರಾಮದುರ್ಗ: ಪ್ರತಿ ವಾರ ನಡೆಯುವ ಶ್ರೇಷ್ಠ ಫೌಂಡೇಶನ್ ಅನ್ನ ಸಂತರ್ಪಣೆ ಕಾರ್ಯಕ್ರಮಕ್ಕೆ ಇಂದು ಶಾಸಕ ರಮೇಶ್ ಜಾರಕಿಹೊಳಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ