Breaking News

ಅಭಿಮಾನಿಗಳ ಬಗ್ಗೆ ಡಿಂಪಲ್ ಕ್ವೀನ್ ತಮ್ಮ ಇನ್ಸ್ಟಾಗ್ರಾಂನಲ್ಲಿ ಬರೆದಿದ್ದಾರೆ…!

Spread the love

 

ಅಭಿಮಾನಿಗಳಂದ್ರೆನೇ ಹಾಗೇ, ನೆಚ್ಚಿನ ನಟನಟಿಯರ ಹುಟ್ಟುಹಬ್ಬ ಬರ್ಲಿ, ಸಿನಿಮಾ ರಿಲೀಸ್​ ಆಗಲಿ, ಹಬ್ಬದಂತೆ ಆಚರಿಸ್ತಾರೆ, ಅವರನ್ನ ನೋಡಿ ಕಣ್ತುಂಬಿಕೊಳ್ಳೋಕ್ಕೆ ಗಂಟೆಗಟ್ಟಲೇ ಮನೆಮುಂದೆ ಕಾದು ಕೂತಿರ್ತಾರೆ, ಒಮ್ಮೆ ನೇರವಾಗಿ ತಮ್ಮ ನೆಚ್ಚಿನ ಸ್ಟಾರ್​ಗಳನ್ನ ಮಾತನಾಡಿಸಿ ಬಿಟ್ರೆ ಅದಕ್ಕಿಂತ ಖುಷಿ ಮತ್ತೊಂದಿಲ್ಲ, ಅದನ್ನ ಹೊರತುಪಡಿಸಿ ಬೇರೇನನ್ನ ಬಯಸೋದು ಇಲ್ಲ ಅಭಿಮಾನಿಗಳು, ಅದಕ್ಕೆ ಅಭಿಮಾನಿಗಳನ್ನ ದೇವರು ಅಂದ್ರು ಡಾ.ರಾಜ್​ ಕುಮಾರ್.

ಇದೀಗ ಅಂತಹ ಒಬ್ಬ ಅಭಿಮಾನಿಯ ಬಗ್ಗೆ ಡಿಂಪಲ್​ ಕ್ವೀನ್​ ರಚಿತಾರಾಮ್​ ತಮ್ಮ ಇನ್ಸ್​ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ. ರಚ್ಚು ಮೂವರು ಅಭಿಮಾನಿಗಳು ಅವರನ್ನ ನೊಡೋಕ್ಕೆ ಮನೆ ಹತ್ತಿರ ಬಂದಿದ್ರಂತೆ, ಮೂರು ಜನ ಆಟೋ ಡ್ರೈವರ್ ಆಟೋ ಮೇಲೆ ರಚಿತಾ ಅವರ ಫೋಟೋ ಅಂಟಿಸಿ, ಡಿಂಪಲ್ ಎಂದು ದೊಡ್ಡದಾಗಿ ಬರೆದುಕೊಂಡು ,ಆಟೋಗ್ರಾಫ್ ಗಾಗಿ ಕಾಯುತ್ತ ನಿಂತಿದ್ರಂತೆ.

ವಿಷಯ ಗೊತ್ತಾಗುತ್ತಿದ್ದಂತೆ ರಚ್ಚು ಮನೆಯಿಂದ ಹೊರಬಂದು ಆಟೋಡ್ರೈವರ್ ಗೆ ಆಟೋಗ್ರಾಫ್ ನೀಡಿ, ಅವರ ಜೊತೆ ಸೆಲ್ಫಿಗೆ ಪೋಸ್ ನೀಡಿ, ಆಟೋ ಜೊತೆ ಫೋಟೋ ಕ್ಲಿಕ್ಕಿಸಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.


Spread the love

About Laxminews 24x7

Check Also

SSLC ಪರೀಕ್ಷೆ| 625 ಅಂಕದ ಬದಲು 525ಕ್ಕೆ ಇಳಿಕೆ

Spread the loveಬೆಂಗಳೂರು: ಇನ್ನು ಮುಂದೆ  ಎಸ್‌ಎಸ್‌ಎಲ್‌ಸಿ ಪರೀಕ್ಷೆ  625ರ ಬದಲಿಗೆ 525 ಅಂಕಗಳಿಗೆ ನಡೆಸಲು ಕರ್ನಾಟಕ ಸರ್ಕಾರ ಮಹತ್ವದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ