Breaking News

ಸೋಂಕಿತ ಗರ್ಭಿಣಿ ಪತ್ನಿಯನ್ನು ಆಸ್ಪತ್ರೆಗೆ ಕಳಿಸಲು ಪತಿರಾಯನ ರಂಪಾಟ!

Spread the love

ಹಾವೇರಿ:ಕೋವಿಡ್-19 ಪಾಸಿಟಿವ್‌ ಇರುವ ಗರ್ಭಿಣಿ ಪತ್ನಿಯನ್ನು ಆಸ್ಪತ್ರೆಗೆ ಕಳುಹಿಸಲು ಒಪ್ಪದ ಪತಿ ಆರೋಗ್ಯ ಸಿಬ್ಬಂದಿಯೊಂದಿಗೆ ರಂಪಾಟ ಮಾಡಿದ ಘಟನೆ ಗುರುವಾರ ತಾಲೂಕಿನ ಕನವಳ್ಳಿಯಲ್ಲಿ ನಡೆದಿದೆ.

ಕೋವಿಡ್  19 ಪಾಸಿಟಿವ್‌ ವರದಿ ಬಂದಾಗ ಗರ್ಭಿಣಿಯನ್ನು ಕೋವಿಡ್ ಆಸ್ಪತ್ರೆಗೆ ದಾಖಲಿಸಲು ಆಂಬ್ಯುಲೆನ್ಸ್‌ ಸಿಬ್ಬಂದಿ ಕನವಳ್ಳಿಯ ಮನೆಗೆ ಹೋದಾಗ ಪತ್ನಿಯೊಂದಿಗೆ ಪತಿಯೂ ಆಂಬ್ಯುಲೆನ್ಸ್‌ ಏರಲು ಯತ್ನಿಸಿದ್ದಾನೆ. ಪ್ರೀತಿಯ ಪತ್ನಿಯನ್ನು ಒಬ್ಬಳೇ ಇರಲು ಬಿಡುವುದಿಲ್ಲ ಎಂದು ಪಟ್ಟು ಹಿಡಿದಿದ್ದಾನೆ.

ಸ್ಥಳೀಯರು, ಸಿಬ್ಬಂದಿ ಮನವೊಲಿಸಿ ಆಂಬ್ಯುಲೆನ್ಸ್‌ ಹತ್ತುವುದನ್ನು ತಡೆದಿದ್ದಾರೆ. ಆಗ ಪತಿ ಬೈಕ್‌ನೊಂದಿಗೆ ಆಂಬ್ಯುಲೆನ್ಸ್‌ ಹಿಂಬಾಲಿಸಿ ಆಸ್ಪತ್ರೆಯವರೆಗೂ ಬಂದಿದ್ದಾನೆ.

ಸೋಂಕಿತೆಯನ್ನು ಆಸ್ಪತ್ರೆಗೆ ದಾಖಲಿಸುವಾಗ ಅಲ್ಲಿಯೂ ಪತಿ ಆಸ್ಪತ್ರೆ ಒಳಗೆ ಹೋಗಲು ಯತ್ನಿಸಿದ್ದಾನೆ.
ಆಗ ಪೊಲೀಸರು ಅವನನ್ನು ಬೆದರಿಸಿ, ನಗರದ ಹೊರವಲಯದಲ್ಲಿರುವ ವಸತಿ ನಿಲಯದ ಕ್ವಾರಂಟೈನ್‌ ಕೇಂದ್ರಕ್ಕೆ ಕರೆದೊಯ್ದಿದ್ದಾರೆ.⊄


Spread the love

About Laxminews 24x7

Check Also

ಸರ್ಕಾರ ಸಲ್ಲಿಸಿರುವ ಅರ್ಜಿ ವಿಲೇವಾರಿವರೆಗೂ ಸಿಎಟಿ ಆದೇಶ ಜಾರಿಗೆ ಒತ್ತಾಯಿಸದಂತೆ ವಿಕಾಸ್ ಕುಮಾರ್​ಗೆ ಸೂಚನೆ

Spread the loveಬೆಂಗಳೂರು: ಆರ್​​ಸಿಬಿ ವಿಜಯೋತ್ಸವದ ಸಂದರ್ಭದಲ್ಲಿ ನಡೆದ ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ತವ್ಯಲೋಪ ಎಸಗಿದ್ದ ಆರೋಪದಡಿ ಕೆಲವು ಅಧಿಕಾರಿಗಳನ್ನು ಅಮಾನತು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ