Breaking News

ಹೆತ್ತ ತಾಯಿಯ ಪ್ರೇಮ್​ ಕಹಾನಿಗೆ 5 ವರ್ಷ ಹೆಣ್ಮಗು ಬಲಿ!

Spread the love

ಹೈದರಾಬಾದ್​: ಹೆತ್ತ ತಾಯಿಗೂ ಆಕೆಯ ಲವರ್​ಗೂ ಜಗಳ ಆಯಿತು. ಅದು ಅತಿರೇಕಕ್ಕೆ ಹೋಗಿ ಬಲಿಯಾದುದು 5 ವರ್ಷದ ಹೆಣ್ಣು ಮಗು!

ಹೈದರಾಬಾದ್​ ಸಮೀಪದ ಘಾಟ್​ಕೇಸ್​ ಎಂಬಲ್ಲಿ ಈ ಘಟನೆ ನಡೆದಿದೆ. ಐದು ವರ್ಷದ ಮಗುವಿನ ತಾಯಿಗೆ 25 ವರ್ಷದ ಯುವಕ ಜತೆಗೆ ಸಂಬಂಧವಿತ್ತು. ಆದರೆ ಅದು ಬಹುಕಾಲ ಬಾಳಲಿಲ್ಲ. ಆಕೆ ಆ ಯುವಕನನ್ನು ದೂರ ಇರಿಸತೊಡಗಿದ್ದಳು. ಆತನ ಆಕೆಯ ಮನೆಗೆ ಹೋದಾಗ ಅಲ್ಲಿ ಮತ್ತೊಬ್ಬ ವ್ಯಕ್ತಿ ಇದ್ದುದನ್ನು ಆ ಯುವಕ ನೋಡಿದ. ಆ ಮತ್ತೊಬ್ಬ ವ್ಯಕ್ತಿ ಇಬ್ಬರಿಗೂ ಸ್ನೇಹಿತನಾಗಿದ್ದ!

ಅಲ್ಲಿಗೆ ಆ ತಾಯಿ ಮತ್ತು ಆ ಲವರ್ ನಡುವೆ ವಾಗ್ವಾದ ಶುರುವಾಯಿತು. ಇದು ವಿಪರೀತಕ್ಕೆ ಹೋದಾಗ ಆ ಯುವಕ ಅಲ್ಲೇ ಇದ್ದ ಐದು ವರ್ಷದ ಹೆಣ್ಣು ಮಗುವಿನ ಕತ್ತನ್ನು ಬ್ಲೇಡ್​ನಿಂದ ಸೀಳಿದ. ಅಷ್ಟೇ ಅಲ್ಲ, ಆ ಮತ್ತೊಬ್ಬ ಯುವಕನ ಮೇಲೂ ಎರಗಿ ಹಲ್ಲೆ ನಡೆಸಿದ. ಇಷ್ಟಾದ ಬಳಿಕ ಆತ ಆತ್ಮಹತ್ಯೆಗೆ ಪ್ರಯತ್ನಿಸಿದ ಎಂದು ಪೊಲೀಸರು ತಿಳಿಸಿದ್ದಾರೆ.
ಕೂಡಲೇ ಆ 5 ವರ್ಷದ ಕಂದಮ್ಮನನ್ನು ಸ್ಥಳೀಯ ಆಸ್ಪತ್ರೆಗೆ ಸಾಗಿಸಲಾಗಿತ್ತಾದರೂ, ದಾರಿ ಮಧ್ಯೆಯೇ ಆ ಮಗು ಮೃತಪಟ್ಟಿತು. ಸ್ಥಳೀಯರು ಸಕಾಲಕ್ಕೆ ಪೊಲೀಸರಿಗೆ ಮಾಹಿತಿ ನೀಡಿದ್ದರು. ಕೂಡಲೇ ಸ್ಥಳಕ್ಕೆ ಆಗಮಿಸಿದ ಪೊಲೀಸರು ಮೃತ ಮಗುವಿನ ತಾಯಿಯನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿದ ವೇಳೆ ಆಕೆ ಆ ಯುವಕನೊಂದಿಗೆ ಇದ್ದ ಸಂಬಂಧವನ್ನು ಒಪ್ಪಿಕೊಂಡಿದ್ದಾಳೆ. ಆದಾಗ್ಯೂ, ಆತ ಯಾಕೆ ಮಗುವಿನ ಮೇಲೆ ದಾಳಿ ನಡೆಸಿದ ಎಂಬುದು ಸ್ಪಷ್ಟವಾಗಿಲ್ಲ. ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದು ತನಿಖೆ ಮುಂದುವರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.


Spread the love

About Laxminews 24x7

Check Also

SSLC ಪರೀಕ್ಷೆ| 625 ಅಂಕದ ಬದಲು 525ಕ್ಕೆ ಇಳಿಕೆ

Spread the loveಬೆಂಗಳೂರು: ಇನ್ನು ಮುಂದೆ  ಎಸ್‌ಎಸ್‌ಎಲ್‌ಸಿ ಪರೀಕ್ಷೆ  625ರ ಬದಲಿಗೆ 525 ಅಂಕಗಳಿಗೆ ನಡೆಸಲು ಕರ್ನಾಟಕ ಸರ್ಕಾರ ಮಹತ್ವದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ