Breaking News

ಸಿಡಿಲು ಬಡಿದು ಮನೆಯಲ್ಲಿ ಕುಳಿತಿದ್ದ ಯುವಕ ಸಾವು……….

Spread the love

ಉಡುಪಿ: ಭಾನುವಾರ ರಾಜ್ಯದ ಹಲವೆಡೆ ಬಿರುಗಾಳಿ ಸಹಿತ ಭಾರೀ ಮಳೆಯಾಗಿದ್ದು, ಜನರ ಜೀವನ ಅಸ್ತವ್ಯಸ್ತವಾಗಿದೆ. ಜಿಲ್ಲೆಯಲ್ಲೂ ಭಾರೀ ಗುಡುಗು ಸಹಿತ ಮಳೆಯಾಗಿದ್ದು, ಪರಿಣಾಮ ಸಿಡಿಲು ಬಡಿದು ಯುವಕ ಮೃತಪಟ್ಟಿರುವ ಘಟನೆ ನಡೆದಿದೆ.

 

ಕಾಪು ತಾಲೂಕಿನ ಕಟಪಾಡಿ ಏಣಗುಡ್ಡೆಯಲ್ಲಿ ಈ ಘಟನೆ ನಡೆದಿದ್ದು, ಕಟಪಾಡಿ ಏಣಗುಡ್ಡೆ ನಿವಾಸಿ ಭರತ್ (22) ಮೃತ ಯುವಕ.

ಮೃತ ಭರತ್ ಸಿಡಿಲು ಸಹಿತ ಮಳೆ ಬರುವಾಗ ಮನೆಯಲ್ಲಿ ಕುಳಿತಿದ್ದನು. ಆದರೂ ಸಿಡಿಲು ಬಡಿದು ಯುವಕ ಕುಸಿದು ಬಿದ್ದಿದ್ದಾನೆ. ತಕ್ಷಣ ಆತನ ಮನೆಯವರು ಉಡುಪಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಮೃತ ಭರತ್ ಕೊನೆಯುಸಿರೆಳೆದಿದ್ದಾರೆ.

ಮಾಹಿತಿ ತಿಳಿದು ಜಿಲ್ಲೆಯ ಕಾಪು ತಾಲೂಕಿನ ಪೊಲೀಸ್ ಠಾಣಾಧಿಕಾರಿ ರಾಜ್‍ಶೇಖರ್ ಸಾಗನೂರ ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿದ್ದಾರೆ.


Spread the love

About Laxminews 24x7

Check Also

ನಗರಸಭೆಯ ಆಸ್ತಿ ತೆರಿಗೆ ಹಣ ದುರ್ಬಳಕೆ: ಇಬ್ಬರ ಬಂಧನ

Spread the loveಉಡುಪಿ: ನಗರಸಭೆಯ ಆಸ್ತಿ ತೆರಿಗೆ ಹಣವನ್ನು ದುರ್ಬಳಕೆ ಮಾಡಿ ಸರಕಾರಕ್ಕೆ ವಂಚನೆ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರನ್ನು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ