ಶಾಲೆಯಿಂದ ಹೊರಬಂದಿದ್ದ ಮಗುವಿನ ಮೇಲೆ ಮಂಗದಾಳಿ

Spread the love

ಶಾಲೆಯಿಂದ ಹೊರಬಂದಿದ್ದ ಮಗುವಿನ ಮೇಲೆ ಮಂಗವೊಂದು ದಾಳಿ ಮಾಡಿ ವಿದ್ಯಾರ್ಥಿನಿಗೆ ಗಂಭೀರವಾಗಿ ಗಾಯಗೊಳಿಸಿರುವ ಘಟನೆ ಧಾರವಾಡದ ಗರಗ ಗ್ರಾಮದಲ್ಲಿ ಇಂದು ನಡೆದಿದ್ದು, ಮಂಗ ದಾಳಿಯ ಭಯಾನಕ ದೃಶ್ಯ ಸ್ಥಳೀಯ ಸಿಸಿಟಿಯಲ್ಲಿ ಸೆರೆಯಾಗಿದೆ. ಧಾರವಾಡ ತಾಲ್ಲೂಕಿನ ಗರಗ ಗ್ರಾಮದ ನಿವಾಸಿ ಇಕರಾ ಗಡಕಾರಿ (8) ಗಂಭೀರವಾಗಿ ಗಾಯಗೊಂಡ ವಿದ್ಯಾರ್ಥಿನಿಯಾಗಿದ್ದಾಳೆ.

ಗ್ರಾಮದ ಸರ್ಕಾರಿ ಹೆಣ್ಣು ಮಕ್ಕಳ ಉರ್ದು ಶಾಲೆಯಲ್ಲಿ 2ನೇ ತರಗತಿ ಒದುತ್ತಿದ್ದು, ಶಾಲೆ ಆಟದ ಸಮಯದಲ್ಲಿ ವಿದ್ಯಾರ್ಥಿನಿ ಶಾಲೆಯಿಂದ ಆಚ್ಚೆ ಬಂದು ಶಾಲೆಯ ಆವರಣಕ್ಕೆ ಮರಳುತ್ತಿರುವ ವೇಳೆ ಒಂಟಿ ಮಂಗ ವಿದ್ಯಾರ್ಥಿನಿಯ ಮೇಲೆ ದಾಳಿ ಕಚ್ಚಿ ಗಂಭೀರ ಗಾಯಗೊಳಿಸಿದೆ. ಮಂಗನ ದಾಳಿಯ ಗಮನಿಸಿದ ಸ್ಥಳೀಯರು ಮಗುವಿನ ರಕ್ಷಣೆಗೆ ಬರುತ್ತಿದಂತೆ ಮಂಗ ಸ್ಥಳದಿಂದ ಪರಾರಿಯಾಗಿದೆ. ಕೂಡಲೇ ಗ್ರಾಮಸ್ಥರು ಮಗುವನ್ನು ಸ್ಥಳೀಯ ಪ್ರಾಥಮಿಕ ಆರೋಗ್ಯ ರವಾನೆ ಮಾಡಿದ್ದಾರೆ. ಇನ್ನೂ ಒಂಟಿ ಮಂಗನ ದಾಳಿಯ ದೃಶ್ಯಗಳು ಸಿಸಿಟಿಯಲ್ಲಿ ಸೆರೆಯಾಗಿದೆ.


Spread the love

About Laxminews 24x7

Check Also

ಬಂಗಾರ ಪ್ರಿಯರಿಗೆ ಗುಡ್‌ ನ್ಯೂಸ್‌ – 10 ಗ್ರಾಂ ಚಿನ್ನದ ಬೆಲೆ 2,900 ರೂ. ಇಳಿಕೆ

Spread the loveಬೆಂಗಳೂರು: ಕೊಲ್ಲಿ ರಾಷ್ಟ್ರಗಳ ಯುದ್ಧದ ಬಿಸಿ ನಡುವೆಯೂ ಬಂಗಾರ ಪ್ರಿಯರಿಗೆ ಗುಡ್‌ನ್ಯೂಸ್‌ ಸಿಕ್ಕಿದೆ. ಸತತ ಏರುಗತಿಯಲ್ಲಿ ಸಾಗುತ್ತಿದ್ದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ