Breaking News

ವಾಟರ್ ಹೀಟರ್ ಹಾಕಿದ್ದ ಬಕೆಟ್ ಮುಟ್ಟಿ ಬಾಲಕ ದುರ್ಮರಣ

Spread the love

ಚಿಕ್ಕಮಗಳೂರು: ವಾಟರ್ ಹೀಟರ್  ಹಾಕಿದ್ದ ಬಕೆಟ್ ಮುಟ್ಟಿ ಬಾಲಕ ಸಾವನ್ನಪ್ಪಿದ ಘಟನೆ ಕಡೂರು ತಾಲೂಕಿನ ಸಖರಾಯಪಟ್ಟಣದಲ್ಲಿ  ನಡೆದಿದೆ.

ಈತ 2ನೇ ತರಗತಿ ಬಾಲಕ ನೀಲಾಂಶ್ (8) ಮೃತ ದುರ್ದೈವಿ. ಭಾನುವಾರ (ನ.1) ಶಾಲೆಗೆ ರಜೆ ಇದ್ದಿದ್ದರಿಂದ ಮನೆಯಲ್ಲಿ ಒಬ್ಬನೇ ಇದ್ದ. ಸ್ನಾನಕ್ಕೆ ನೀರು ಕಾಯಿಸಲು ಕರೆಂಟ್ ವಾಟರ್ ಹೀಟರ್ ಹಾಕಿ, ಬಕೆಟ್‌ನಲ್ಲಿದ್ದ ನೀರಿಗೆ ಕೈ ಹಾಕಿದಾಗ ಬಾಲಕ ವಿದ್ಯುತ್ ಶಾಕ್‌ನಿಂದ  ಸಾವನ್ನಪ್ಪಿದ್ದಾನೆ.

ಮನೆಗೆ ಪೋಷಕರು ಬಂದು ನೋಡಿದಾಗ ಈ ಘಟನೆ ಬೆಳಕಿಗೆ ಬಂದಿದೆ. ಮಗನನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. ಸಖರಾಯಪಟ್ಟಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.


Spread the love

About Laxminews 24x7

Check Also

ನ.13 ರಂದೇ ಪಿಂಕ್ ಲೈನ್ ಮೆಟ್ರೋ ಉದ್ಘಾಟನೆ – ತೇಜಸ್ವಿ ಸೂರ್ಯ

Spread the loveಬೆಂಗಳೂರು: ಬಹುನಿರೀಕ್ಷಿತ ನಮ್ಮ ಮೆಟ್ರೋ ಗುಲಾಬಿ ಮಾರ್ಗ ಉದ್ಘಾಟನೆ ಕುರಿತು ಹೊಸ ಅಪ್ಡೇಟ್‌ ಬಂದಿದೆ. ಬೆಂಗಳೂರು ದಕ್ಷಿಣ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ