Breaking News

Yearly Archives: 2026

ಈ ಸರ್ಕಾರ ಎಲ್ಲೋ ಜೋಗಪ್ಪ ನಿನ್ನ ಅರಮನೆ ಹಾಡಿನ ಹಾಗೆ ಆಗಿದೆ: ಹೆಚ್‌ಡಿಕೆ

ಬೆಂಗಳೂರು: ಈ ಸರ್ಕಾರ ಎಲ್ಲೋ ಜೋಗಪ್ಪ ನಿನ್ನ ಅರಮನೆ ಹಾಡಿನ ಹಾಗೆ ಆಗಿದೆ ಎಂದು ರಾಜ್ಯ ಸರ್ಕಾರದ ವಿರುದ್ದ ಕೇಂದ್ರ ಸಚಿವ ಹೆಚ್‌.ಡಿ ಕುಮಾರಸ್ವಾಮಿಯವರು  ಮಾಡಿದ್ದಾರೆ. ಬೆಂಗಳೂರಿನಲ್ಲಿ  ಅವರು ಮಾಧ್ಯಮಗಳ ಜೊತೆ ಮಾತನಾಡಿದರು. ಈ ವೇಳೆ, ತಮ್ಮ ಮಾತು ಈ ಸರ್ಕಾರದಲ್ಲಿ ನಡೆಯುತ್ತಿಲ್ಲ ಎಂಬ ಸಿದ್ದರಾಮಯ್ಯ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿದರು. ಸರ್ಕಾರದಲ್ಲಿ ಅವರ ಮಾತು ನಡೆಯುತ್ತಿದೆಯೋ ಇಲ್ಲವೋ ನನಗೇನು ಗೊತ್ತು. ಸಿದ್ದರಾಮಯ್ಯ ಅವರ ಭಾವನೆ ಅವರು ಹೇಳಿಕೊಂಡಿದ್ದಾರೆ. ಈ …

Read More »

ರಾಜ್ಯ ಸರ್ಕಾರ ಮೊದಲು ಬರ ಪರಿಹಾರ ಘೋಷಿಸಿ, ಕೇಂದ್ರಕ್ಕೆ ನಿಯೋಗ ಕೊಂಡೊಯ್ಯಲಿ: ಪಿ.ಸಿ ಮೋಹನ್

ಬೆಂಗಳೂರು: ಸಿಎಂ ಡಿ.ಕೆ.ಶಿವಕುಮಾರ್ ನೇತೃತ್ವದ ರಾಜ್ಯ ಸರ್ಕಾರ ಜನಹಿತದ ಕಾರ್ಯಕ್ರಮಗಳನ್ನು ಮಾಡುತ್ತಿಲ್ಲ ಎಂದು ಸಂಸದ ಪಿ.ಸಿ ಮೋಹನ್  ಅವರು ಟೀಕಿಸಿದರು. ಬೆಂಗಳೂರು  ಕೇಂದ್ರ ಜಿಲ್ಲೆಯ ಗಾಂಧಿನಗರ ಮಂಡಲದ ಬಿನ್ನಿಪೇಟೆ ವಾರ್ಡ್‌ನ ವಿಶ್ವಕರ್ಮ ಸಮುದಾಯ ಭವನದಲ್ಲಿ ‘ಸೇವಾ ಸಂಕಲ್ಪ ಅಭಿಯಾನ’ದಡಿ ರಕ್ತದಾನ ಶಿಬಿರ ಮತ್ತು ಆರೋಗ್ಯ ಶಿಬಿರದಲ್ಲಿ ಅವರು ಮಾಧ್ಯಮಗಳ ಜೊತೆ ಮಾತನಾಡಿದರು. ಈ ವೇಳೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರ 76ನೇ ಜನ್ಮದಿನ ಹಾಗೂ ಆಡಳಿತದ ವಿವಿಧ ಹುದ್ದೆಗಳಲ್ಲಿ 25 ವರ್ಷಗಳ …

Read More »

ರಾಜ್ಯದ ಹಿತವೇ ಸರ್ಕಾರದ ಮೊದಲ ಆದ್ಯತೆ: ಪರಮೇಶ್ವರ್‌

ಬೆಂಗಳೂರು: ರಾಜ್ಯದ ಅಭಿವೃದ್ಧಿ, ಜನರ ಸಮಸ್ಯೆಗಳಿಗೆ ಪರಿಹಾರ ಹಾಗೂ ಬರದಿಂದ ಸಂಕಷ್ಟಕ್ಕೊಳಗಾಗಿರುವ ರೈತರ  ಹಿತವೇ ಸರ್ಕಾರದ ಮೊದಲ ಆದ್ಯತೆಯಾಗಿದೆ. ವಿಪಕ್ಷದವರು ಪ್ರತಿಯೊಂದು ವಿಷಯವನ್ನೂ ರಾಜಕೀಯ ದೃಷ್ಟಿಯಿಂದ ನೋಡುವುದು ಸರಿಯಲ್ಲ ಎಂದು ಉಪಮುಖ್ಯಮಂತ್ರಿ ಹಾಗೂ ಕಂದಾಯ ಸಚಿವ ಡಾ. ಜಿ. ಪರಮೇಶ್ವರ್  ಹೇಳಿದರು. ಸದಾಶಿವನಗರದ ತಮ್ಮ ನಿವಾಸದ ಬಳಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ರಾಜ್ಯದಲ್ಲಿ ಎದುರಾಗಿರುವ ಬರ ಪರಿಸ್ಥಿತಿಯ ಕುರಿತು ಸಮಗ್ರವಾಗಿ ಚರ್ಚಿಸಿ, ವಿರೋಧ ಪಕ್ಷಗಳನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ರೈತರನ್ನು …

Read More »

ಕುಡಿದ ಮತ್ತಲ್ಲಿ ಸೀರೆಯಲ್ಲಿ ಕತ್ತು ಬಿಗಿದು ಪ್ರಿಯಕರನ ಹತ್ಯೆ – ಮಹಿಳೆ ಅರೆಸ್ಟ್‌

ದಾವಣಗೆರೆ: ಮಹಿಳೆಯೊಬ್ಬಳು  ಕುಡಿದ ಮತ್ತಲ್ಲಿ ಸೀರೆಯಲ್ಲಿ ಕತ್ತು ಬಿಗಿದು ಪ್ರಿಯಕರನನ್ನು  ಹತ್ಯೆಗೈದ ಘಟನೆ ದಾವಣಗೆರೆ  ನಗರದ ನಾಗಮ್ಮ ಕೇಶವಮೂರ್ತಿ ಬಡಾವಣೆಯಲ್ಲಿ ನಡೆದಿದೆ. ಮಂಜಪ್ಪ (40) ಕೊಲೆಯಾದ  ದುರ್ದೈವಿ. ಶಬೀನಾ (38) ಕೊಲೆಗೈದ ಆರೋಪಿ. ಮದ್ಯ ಸೇವಿಸಿದ ಅಮಲಿನಲ್ಲಿ ಮಹಿಳೆ ಈ ಕೃತ್ಯ ಎಸಗಿದ್ದಾಳೆ ಎಂದು ತಿಳಿದು ಬಂದಿದೆ. ಮಂಜಪ್ಪ ಪತ್ನಿ ಹಾಗೂ ಮಕ್ಕಳಿಂದ ದೂರವಿದ್ದ. ಕಳೆದ 6 ವರ್ಷಗಳಿಂದ ವಿಚ್ಛೇದಿತ ಮಹಿಳೆ ಶಬೀನಾ ಜೊತೆಗೆ ವಾಸವಾಗಿದ್ದ. ಹದಡಿ ಠಾಣೆ ಪೊಲೀಸರು …

Read More »

ಬೆಂಗ್ಳೂರಲ್ಲಿ ಅಂಗಡಿಗೆ ಗುದ್ದಿದ ರಾಯಲ್ ಎನ್‌ಫೀಲ್ಡ್ – ಇಬ್ಬರು ಎಂಜಿನಿಯರಿಂಗ್ ವಿದ್ಯಾರ್ಥಿಗಳು ದುರ್ಮರಣ

ಬೆಂಗಳೂರು: ಯಲಹಂಕದ ರಾಜಾನುಕುಂಟೆ ರಸ್ತೆಯಲ್ಲಿ ಅಂಗಡಿಯ ಗೋಡೆಗೆ ರಾಯಲ್ ಎನ್‌ಫೀಲ್ಡ್ ಬೈಕ್‌ ಗುದ್ದಿದ ಪರಿಣಾಮ ಇಬ್ಬರು ಎಂಜಿನಿಯರ್‌ ವಿದ್ಯಾರ್ಥಿಗಳು ಸಾವನ್ನಪ್ಪಿದ್ದಾರೆ. ವಚನ್ ಮತ್ತು ಪ್ರದೀಪ್ ಮೃತ ವಿದ್ಯಾರ್ಥಿಗಳು. ಬೆಳಗಿನ ಜಾವ 3 ಗಂಟೆ ಸುಮಾರಿಗೆ ಈ ಅಪಘಾತ ನಡೆದಿದೆ. ಬೆಳಗಿನ ಜಾವ ಸುತ್ತಾಡಲು ಇಬ್ಬರು ಬಂದಿದ್ದರು. ಈ ವೇಳೆ ಅಪಘಾತ ಸಂಭವಿಸಿದ್ದು, ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಘಟನಾ ಸ್ಥಳಕ್ಕೆ ಯಲಹಂಕ ಸಂಚಾರಿ ಠಾಣೆ ಪೊಲೀಸರು ಭೇಟಿ ನೀಡಿ, ಪ್ರಕರಣ ದಾಖಲಿಸಿಕೊಂಡು …

Read More »

ಡಿಕೆಶಿ ಮನಸ್ಸು ಮಾಡಿದ್ರೆ ಸ್ವಂತ ಹಣದಲ್ಲೇ ರೈತರ ಸಾಲ ಮನ್ನಾ ಮಾಡಬಹುದು: ಹೆಚ್‌ಡಿಕೆ

ಬೆಂಗಳೂರು: ಡಿಕೆ ಶಿವಕುಮಾರ್‌ ಅವರು ಮನಸ್ಸು ಮಾಡಿದ್ರೆ, ಸ್ವಂತ ಹಣದಲ್ಲೇ ಸಾಲ ಮನ್ನಾ ಮಾಡಬಹುದು ಎಂದು ಕೇಂದ್ರ ಸಚಿವ ಹೆಚ್‌.ಡಿ ಕುಮಾರಸ್ವಾಮಿ ಹೇಳಿದರು. ಬೆಂಗಳೂರಿನಲ್ಲಿಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರೈತರ ಸಾಲ ಮನ್ನಾಗೆ ಆಗ್ರಹಿಸಿದರು. ಡಿಕೆ ಶಿವಕುಮಾರ್ ಅವರು ಮನಸು ಮಾಡಿದ್ರೆ, ತಮ್ಮ ಸ್ವಂತ ಹಣದಲ್ಲೇ ಸಾಲ ಮನ್ನಾ ಮಾಡಬಹುದು. ರೈತರು ಸಾಲಮನ್ನಾ ಆಗಬೇಕು ಅಂತ ಹೇಳ್ತಿದ್ದಾರೆ. ಸಿಎಂ ಕೂಡಾ ʻʻಸಿದ್ದರಾಮಯ್ಯ, ಕುಮಾರಸ್ವಾಮಿ ಕಾಲದಲ್ಲಿ ಸಾಲ ಮನ್ನಾ ಆಗಿದೆ. ನಾನು …

Read More »

ಬೆಳಗಾವಿ | ಗ್ರಾಮ ಪಂಚಾಯ್ತಿಗೆ ನುಗ್ಗಿ ತಂದೆ, ಮಗಳ ಬರ್ಬರ ಹತ್ಯೆಗೈದಿದ್ದ ಆರೋಪಿಗಳು ಅಂದರ್‌

ಬೆಳಗಾವಿ: ಕಿತ್ತೂರು ತಾಲೂಕಿನ ಅವರಾದಿ ಗ್ರಾಮ ಪಂಚಾಯ್ತಿಗೆ ನುಗ್ಗಿ ತಂದೆ ಮಗಳನ್ನು ಬರ್ಬರವಾಗಿ ಹತ್ಯೆಗೈದಿದ್ದ ಆರೋಪಿಗಳನ್ನು ಪೊಲೀಸರು  ಬಂಧಿಸಿದ್ದಾರೆ. ಕೊಲೆಯಾದ ಮಾಜಿ ಯೋಧ ರುದ್ರಪ್ಪ ಅವರ ಸಹೋದರ ಬಸಪ್ಪ ಕುಂದರಗಿ, ಸಂಗಪ್ಪ‌ ಕುಂದರಗಿ ಮತ್ತು ಪುತ್ರ ಮಡಿವಾಳಪ್ಪ ಕುಂದರಗಿ ಬಂಧಿತ ಆರೋಪಿಗಳು. ಕೊಲೆಗೆ ಬಳಿಸಿದ ಆಯುಧಗಳನ್ನೂ ಸಹ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಆಸ್ತಿ ವಿಚಾರಕ್ಕೆ ಅಣ್ಣ ತಮ್ಮಂದಿರ ನಡುವೆ ಗಲಾಟೆ ನಡೆಯುತ್ತಿತ್ತು. ಅದೇ ಆಸ್ತಿ ಪಾಲುದಾರಿಕೆಗೆ ಅರ್ಜಿ ಸಲ್ಲಿಸಲು ಮತ್ತೊಬ್ಬ …

Read More »

ಖಾಸಗಿ ಅಂಗ ತೋರಿಸಿ ಅಸಭ್ಯ ವರ್ತನೆ; ಕಾಮುಕನನ್ನ ಬಿಟ್ಟು ವಿದ್ಯಾರ್ಥಿನಿ ಸಹಾಯಕ್ಕೆ ಬಂದ ಯುವಕರೇ ಅರೆಸ್ಟ್‌

ಬಾಗಲಕೋಟೆ: ಹಾಸ್ಟೆಲ್ ವಿದ್ಯಾರ್ಥಿನಿಯೊಬ್ಬಳಿಗೆ  ನಡು ರಸ್ತೆಯಲ್ಲೇ ಖಾಸಗಿ ಅಂಗ ತೋರಿಸಿ ಅಸಭ್ಯವಾಗಿ ವರ್ತಿಸಿದ ಆರೋಪ ಕೇಳಿಬಂದಿದ್ದು, ಘಟನೆಗೆ ಸಂಬಂಧಿಸಿದಂತೆ ಬಾಗಲಕೋಟೆಯ ನವನಗರ ಪೊಲೀಸರ ಕ್ರಮದ ವಿರುದ್ಧ ಕುಟುಂಬಸ್ಥರು ಹಾಗೂ ನೊಂದ ವಿದ್ಯಾರ್ಥಿನಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಾಗಲಕೋಟೆಯ ನವನಗರದ  51ನೇ ಸೆಕ್ಟರ್‌ನಲ್ಲಿ ಸೆ.17ರಂದು ಈ ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಸುದೀಪ ನಾಡಗೌಡ ಎಂಬ ಯುವಕ ವಿದ್ಯಾರ್ಥಿನಿಯೊಂದಿಗೆ ಅಸಭ್ಯವಾಗಿ ವರ್ತಿಸಿದ್ದಾನೆ ಎಂಬ ಆರೋಪ ಕೇಳಿಬಂದಿದೆ. ಈ ವೇಳೆ ವಿದ್ಯಾರ್ಥಿನಿ ಸಹಾಯಕ್ಕಾಗಿ …

Read More »

ಮೀನು ವ್ಯಾಪಾರ ಬಂದ್ ಮಾಡಿಸೋಕೆ ಹೇಳಿದ್ಯಾರು? ಅವ್ರನ್ನ ಸಸ್ಪೆಂಡ್ ಮಾಡ್ತೇನೆ: ಸಿಎಂ ಗರಂ

ಮಂಗಳೂರು: ಇಂದು ಬೆಳ್ಳಂಬೆಳಗ್ಗೆ ಮಂಗಳೂರು ಮೀನುಗಾರಿಕಾ ಬಂಧರಿಗೆ ಭೇಟಿ ನೀಡಿದ ಸಿಎಂ ಡಿಕೆ ಶಿವಕುಮಾರ್‌  ಮೀನುಗಾರರ ಸಮಸ್ಯೆಗಳನ್ನ ಆಲಿಸಿದರು. ಇದೇ ವೇಳೆ ಬಂದರಿನಲ್ಲಿನ ಮೀನು ವ್ಯಾಪಾರ ಬಂದ್ ಮಾಡಿಸಿದ್ದಕ್ಕೆ ಪೊಲೀಸ್ ಇಲಾಖೆ ಹಾಗೂ ಅಧಿಕಾರಿಗಳ ವಿರುದ್ಧ ಗರಂ ಆದರು. ಶನಿವಾರ ಬೆಳಗ್ಗೆ ಮಂಗಳೂರು ಮೀನುಗಾರಿಕಾ ಬಂದರಿಗೆ ಭೇಟಿ ನೀಡಿದ ಸಿಎಂ ಡಿಕೆಶಿ, ಬಂದರಿನ ವ್ಯವಸ್ಥೆಗಳನ್ನು ಪರಿಶೀಲಿಸಿದರು. ಇದೇ ವೇಳೆ ಮೀನುಗಾರರೊಂದಿಗೆ ಮಾತುಕತೆ ನಡೆಸಿ, ಅವರ ಸಮಸ್ಯೆಗಳು ಹಾಗೂ ತುರ್ತು ಅಗತ್ಯಗಳ …

Read More »

ಗಣೇಶ ವಿಸರ್ಜನಾ ಮೆರವಣಿಗೆ ವೇಳೆ 2 ಗುಂಪಿನ ಯುವಕರ ನಡುವೆ ಮಾರಾಮಾರಿ

ವಿಜಯನಗರ: ಗಣೇಶ ವಿಸರ್ಜನಾ ಮೆರವಣಿಗೆ  ವೇಳೆ ಎರಡು ಗುಂಪಿನ ಯುವಕರ ನಡುವೆ ಮಾರಾಮಾರಿ ನಡೆದಿರುವ ಘಟನೆ ವಿಜಯನಗರ ಜಿಲ್ಲೆಯ ಹೊಸಪೇಟೆ  ನಗರದ ಕೌಲ್ ಪೇಟೆಯ ದೊಡ್ಡ ಮಸೀದಿ ಬಳಿ ನಡೆದಿದೆ. 5ನೇ ದಿನದ ಗಣೇಶ ವಿಸರ್ಜನಾ ಮೆರವಣಿಗೆ ವೇಳೆ ಘಟನೆ ನಡೆದಿದೆ. ಕಿಕ್ಕಿರಿದು ಸೇರಿದ್ದ ಜನರ ಮಧ್ಯೆ ಯುವಕರು ಹೊಡೆದಾಡಿಕೊಂಡಿದ್ದಾರೆ. ಒಬ್ಬ ಹುಡುಗನನ್ನ ಏಳೆಂಟು ಯುವಕರ ಗುಂಪೊಂದು ಅಟ್ಟಾಡಿಸಿ ಥಳಿಸಿದೆ. ಪೊಲೀಸರು ಬರುತ್ತಿದ್ದಂತೆ ಯುವಕರು ಓಡಿ ಹೋಗಿದ್ದಾರೆ. ಹೊಸಪೇಟೆ ಪಟ್ಟಣ …

Read More »