Breaking News

Yearly Archives: 2026

ತಿಂಗಳ ಬಸ್‌ಪಾಸ್‌ ದರ ಬರೋಬ್ಬರಿ 300 ರೂ. ಏರಿಕೆ

ಬೆಂಗಳೂರು: ಹಾಲು-ಮೊಸರಿನ ಬೆಲೆ ಏರಿಕೆ ಆಘಾತ ಬೆನ್ನಲ್ಲೇ ರಾಜ್ಯದ ಜನತೆಗೆ ಸರ್ಕಾರ ಬಸ್ ಟಿಕೆಟ್ ಶಾಕ್ ಕೊಟ್ಟಿದೆ. ಕೆಎಸ್‌ಆರ್‌ಟಿಸಿ, ಬಿಎಂಟಿಸಿ ಬಸ್ ಪ್ರಯಾಣ ದರ ಗಣನೀಯವಾಗಿ ಹೆಚ್ಚಳ ಮಾಡಲಾಗಿದೆ. ಬಸ್‌ ಟಿಕೆಟ್‌ ದರ ಏರಿಕೆ ಬೆನ್ನಲ್ಲೇ ಮಾಸಿಕ ಬಸ್‌ಪಾಸ್‌ ದರಗಳೂ ಏರಿಕೆಯಾಗಿದೆ. ತಿಂಗಳ ಪಾಸ್‌ಗೆ ಬರೋಬ್ಬರಿ 300 ರೂ. ನಷ್ಟು ಏರಿಕೆ ಮಾಡಲಾಗಿದೆ. 1,200 ರೂ. ಇದ್ದ ತಿಂಗಳ ಪಾಸ್‌ ದರ 1,500 ರೂ.ಗೆ ಹೆಚ್ಚಳ ಮಾಡಲಾಗಿದೆ. ತಿಂಗಳ ವೋಲ್ವೋ …

Read More »

ಬೆಳಗ್ಗೆಯೇ ಮದ್ಯದ ಅಮಲಿನಲ್ಲಿರುವ ಮುಖ್ಯಮಂತ್ರಿಯಿಂದ ಪಂಜಾಬ್ ಅನ್ನು ಡ್ರಗ್ಸ್‌ಮುಕ್ತ ಮಾಡಲು ಸಾಧ್ಯವೇ? – ರಾಹುಲ್‌ ವಾಗ್ದಾಳಿ

ಚಂಡೀಗಢ: ಬೆಳಗ್ಗೆಯ ಮದ್ಯದ ಅಮಲಿನಲ್ಲಿರುವ ಪಂಜಾಬ್‌ ಮುಖ್ಯಮಂತ್ರಿಯಿಂದ ಡ್ರಗ್ಸ್‌ಮುಕ್ತ ಮಾಡಲು ಸಾಧ್ಯವೇ ಎಂದು ಪ್ರಶ್ನಿಸುವ ಮೂಲಕ ಲೋಕಸಭೆಯ ವಿಪಕ್ಷ ನಾಯಕ ರಾಹುಲ್‌ ಗಾಂಧಿ ಆಪ್‌ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ರಾಜ್ಯವು ಮಾದಕದ್ರವ್ಯದ ಸಮಸ್ಯೆಯಿಂದ ತತ್ತರಿಸುತ್ತಿರುವಾಗ, ಮುಖ್ಯಮಂತ್ರಿ ಭಗವಂತ್ ಮಾನ್ ಸ್ವತಃ ಮದ್ಯಪಾನ ಮಾಡಿ ಪ್ರತಿ ಸಂಜೆಯೂ ಅದರ ಅಮಲಿನಲ್ಲಿರುತ್ತಾರೆ ಎಂದು ಅವರು ಆರೋಪ ಮಾಡಿದರು. ಪಂಜಾಬ್‌ ವಿಧಾನಸಭೆ ಚುನಾವಣೆಯಲ್ಲಿ  ಸಂಗ್ರೂರ್‌ನಲ್ಲಿ ನಡೆದ ‘ಇನ್ಸಾಫ್ ರ್‍ಯಾಲಿ’ಯಲ್ಲಿ ಪ್ರಚಾರ ಭಾಷಣ ಮಾಡಿದ …

Read More »

ವಿಶ್ವಾದ್ಯಂತ 50 ಸಾವಿರ ಥಿಯೇಟರ್‌ಗಳಲ್ಲಿ ರಾಮಾಯಣ ರಿಲೀಸ್‌ – ರಾವಣನಾಗಿ ಅಬ್ಬರಿಸಿದ ಯಶ್‌

ಜಗತ್ತಿನಾದ್ಯಂತ ಬಹುನಿರೀಕ್ಷೆ ಹುಟ್ಟುಹಾಕಿದ್ದ ಭಾರತೀಯ ಚಿತ್ರರಂಗದ ಮಹೋನ್ನತ ಸಿನಿಮಾ ರಾಮಾಯಣ ಇಂದು ಅದ್ಧೂರಿಯಾಗಿ ತೆರೆಕಂಡಿದೆ. ರಾಕಿಂಗ್ ಸ್ಟಾರ್ ಯಶ್ ಹಾಗೂ ಬಾಲಿವುಡ್ ನಟ ರಣಬೀರ್ ಕಪೂರ್ ಕಾಂಬಿನೇಷನ್‌ನ ಈ ಪೌರಾಣಿಕ ಮಹಾಕಾವ್ಯವು ಮೊದಲ ದಿನವೇ ಗಲ್ಲಾಪೆಟ್ಟಿಗೆಯಲ್ಲಿ ಹೊಸ ಇತಿಹಾಸ ಸೃಷ್ಟಿಸುವ ಸೂಚನೆ ನೀಡಿದೆ. ಚಿತ್ರದಲ್ಲಿ ರಣಬೀರ್ ಕಪೂರ್ ಪ್ರಭು ಶ್ರೀರಾಮನ ಪಾತ್ರದಲ್ಲಿ ಕಂಗೊಳಿಸಿದ್ದರೆ, ಸೀತೆಯಾಗಿ ಸಾಯಿಪಲ್ಲವಿ(Sai Pallavi) ಮನಮುಟ್ಟುವಂತೆ ಅಭಿನಯಿಸಿದ್ದಾರೆ. ಇನ್ನು ಲಂಕೇಶ್ವರ ರಾವಣನ ಖಡಕ್ ಅವತಾರದಲ್ಲಿ ಕಾಣಿಸಿಕೊಂಡಿರುವ ನಟ …

Read More »

ಪ್ರತಿ ಟನ್ ಕಬ್ಬಿಗೆ 3,600 ರೂ. ದರ ಘೋಷಣೆ

ಬೆಳಗಾವಿ: ಕಳೆದ ಹಲವು ದಿನಗಳಿಂದ ಕಬ್ಬಿನ ದರನಿಗದಿಗಾಗಿ ರೈತರು ನಡೆಸುತ್ತಿದ್ದ ಹೋರಾಟಕ್ಕೆ ಕೊನೆಗೂ ಮಹತ್ವದ ತಿರುವು ಸಿಕ್ಕಿದೆ. ಪ್ರತಿ ಟನ್ ಕಬ್ಬಿಗೆ 3,600 ರೂಪಾಯಿ ದರ ನೀಡಲು ಸಕ್ಕರೆ ಕಾರ್ಖಾನೆ ಮಾಲೀಕರು ಒಪ್ಪಿಗೆ ಸೂಚಿಸಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ  ಘೋಷಿಸಿದ್ದಾರೆ. ಬೆಳಗಾವಿಯಲ್ಲಿ (Belagavi) ರೈತ ಮುಖಂಡರು ಹಾಗೂ ಸಕ್ಕರೆ ಕಾರ್ಖಾನೆ ಮಾಲೀಕರೊಂದಿಗೆ ನಡೆಸಿದ ಮಹತ್ವದ ಸಭೆಯ ಬಳಿಕ ಸಚಿವರು ಈ ಘೋಷಣೆ ಮಾಡಿದ್ದಾರೆ. ಹಲವು ಸುತ್ತಿನ …

Read More »

ಅರಮನೆ ಖಾಸಗಿ ಸ್ವತ್ತು, ಸರ್ಕಾರದ ಔದಾರ್ಯದಿಂದ ವಾಸವಿಲ್ಲ: ಪ್ರಮೋದಾ ದೇವಿ ಒಡೆಯರ್ ಸ್ಪಷ್ಟನೆ

ಮೈಸೂರು ಅರಮನೆಯ ಮಾಲೀಕತ್ವ, ಅಂಬಾರಿಯ ಬಳಕೆ ಮತ್ತು ದಸರಾ ಸಂದರ್ಭದಲ್ಲಿ ಉಂಟಾದ ಗೊಂದಲಗಳ ಬಗ್ಗೆ ಪ್ರಮೋದಾ ದೇವಿ ಒಡೆಯರ್ ತಮ್ಮ ನಿಲುವನ್ನು ಸ್ಪಷ್ಟಪಡಿಸಿದ್ದಾರೆ. ಅರಮನೆ ವಿಚಾರದಲ್ಲಿ ತಮ್ಮ ಕುಟುಂಬದ ಹಕ್ಕುಗಳನ್ನು ಪ್ರತಿಪಾದಿಸಿರುವ ಅವರು, ಅಂಬಾರಿ ಬಳಕೆಗೆ ಸಂಬಂಧಿಸಿದಂತೆ ಸರ್ಕಾರದೊಂದಿಗೆ ಇರುವ ಭಿನ್ನಾಭಿಪ್ರಾಯಗಳ ಬಗ್ಗೆಯೂ ಮಾತನಾಡಿದ್ದಾರೆ. ಮೈಸೂರಿನಲ್ಲಿ ಸುದ್ದಿಗೋಷ್ಠಿ ನಡೆಸಿದ ಪ್ರಮೋದಾ ದೇವಿ ಒಡೆಯರ್, ಮೈಸೂರು ಅರಮನೆ ಖಾಸಗಿ ಸ್ವತ್ತು. ಅರಮನೆ ಕಟ್ಟಿಸಿದ್ದು ಸರ್ಕಾರವಲ್ಲ. ಸರ್ಕಾರದ ಔದಾರ್ಯದಿಂದ ನಾವು ಅರಮನೆಯಲ್ಲಿ ವಾಸಿಸುತ್ತಿಲ್ಲ. …

Read More »

ಹಾಸನಾಂಬೆ ದರ್ಶನಕ್ಕೆ ತಾತ್ಕಾಲಿಕ ಬ್ರೇಕ್

ಹಾಸನ ಅಧಿದೇವತೆ ಹಾಸನಾಂಬೆ ದರ್ಶನೋತ್ಸವ ನಡೆಯುತ್ತಿದ್ದು, ರಾಜ್ಯ, ಹೊರ ರಾಜ್ಯಗಳಿಂದಲೂ ಭಕ್ತರು ಆಗಮಿಸುತ್ತಿದ್ದಾರೆ. ಪ್ರತಿ ದಿನ ಲಕ್ಷಾಂತರ ಭಕ್ತರು ದೇವಾಲಯಕ್ಕೆ ಆಗಮಿಸಿ ಹಾಸನಾಂಬೆ ತಾಯಿ ದರ್ಶನ ಪಡೆಯುತ್ತಿದ್ದಾರೆ. ಈ ನಡುವೆ ಹಾಸನಾಂಬೆ ದರ್ಶನಕ್ಕೆ ತಾತ್ಕಾಲಿಕ ಬ್ರೇಕ್ ನೀಡಲಾಗಿದೆ. ವರ್ಷಕ್ಕೆ ಒಮ್ಮೆ ಮಾತ್ರ ದರ್ಶನ ನೀಡುವ ಹಾಸನಾಂಬಾ ತಾಯಿ ದರ್ಶನೋತ್ಸವ ನಡೆಯುತ್ತಿದ್ದು, ಅಕ್ಟೋಬರ್ 30 ರಿಂದ ಆರಂಭವಾಗಿದ್ದು, ನವೆಂಬರ್ 10ರವರೆಗೆ ನಡೆಯಲಿದೆ. ಈ ನಡುವೆ ಇಂದು ರಾತ್ರಿಯಿಂದ ನಾಳೆ ಬೆಳಿಗ್ಗೆವರೆಗೆ ದರ್ಶನವನ್ನು …

Read More »

ಬಿಷ್ಣೋಯ್ ಗ್ಯಾಂಗ್ ಹೆಸರಲ್ಲಿ ಬಾಲಿವುಡ್‌ ಸೆಲೆಬ್ರಿಟಿಗಳಿಗೆ ಬೆದರಿಕೆ – ಬೆಂಗಳೂರಿನ ಟೆಕ್ಕಿ ಬಂಧನ

ಬೆಂಗಳೂರು: ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್  ಹೆಸರಿನಲ್ಲಿ‌ ಹಲವು ಸೆಲೆಬ್ರಿಟಿಗಳಿಗೆ ಬೆದರಿಕೆ ಹಾಕಿದ್ದ ಆರೋಪದ ಮೇಲೆ ಬೆಂಗಳೂರಿನ ಟೆಕ್ಕಿಯೊಬ್ಬನನ್ನ ಮುಂಬೈ ಕ್ರೈಂ ಬ್ರಾಂಚ್ ಪೊಲೀಸರು ಬಂಧಿಸಿದ್ದಾರೆ. ವೈಭವ್ ಮಿಶ್ರಾ ಬಂಧಿತ ಟೆಕ್ಕಿಯಾಗಿದ್ದಾನೆ. ನಟರಾದ ತುಷಾರ್ ಕಪೂರ್ ಮತ್ತು ಆಯುಷ್ಮಾನ್ ಖುರಾನಾ  ಸೇರಿದಂತೆ ಹಲವು ಸೆಲೆಬ್ರಿಟಿಗಳಿಗೆ ವೈಭವ್‌ ಲಾರೆನ್ಸ್ ಬಿಷ್ಣೋಯ್‌ ಗ್ಯಾಂಗ್‌ ಹೆಸರಿನಲ್ಲಿ ಬೆದರಿಕೆ ಹಾಕಿದ್ದ. ಆಡಿಯೋ ಬೆದರಿಕೆ ಸಂದೇಶಗಳನ್ನೂ ಕಳುಹಿಸಿದ್ದ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ. ಸದ್ಯ ವೈಭವ್‌ ಮಿಶ್ರಾನನ್ನ ಬಂಧಿಸಿರುವ …

Read More »

ಅಗ್ನಿವೀರರಿಗೆ ಕೇಂದ್ರದಿಂದ ಬಂಪರ್ – ಸೇವಾ ಅವಧಿ 2 ವರ್ಷ ವಿಸ್ತರಣೆಗೆ ನಿರ್ಧಾರ

ನವದೆಹಲಿ: ಅಗ್ನಿವೀರರಿಗೆ  ಕೇಂದ್ರ ಸರ್ಕಾರ ಗುಡ್‌ ನ್ಯೂಸ್‌ ಕೊಟ್ಟಿದೆ. ‘ಅಗ್ನಿಪಥ್’ ಯೋಜನೆಯಡಿ ಸೇನೆಗೆ ಸೇರ್ಪಡೆಗೊಂಡ ಅಗ್ನಿವೀರರ ಸೇವಾ ಅವಧಿಯನ್ನು ಎರಡು ವರ್ಷಗಳಷ್ಟು ವಿಸ್ತರಿಸುವುದಾಗಿ ಕೇಂದ್ರ ಸಚಿವ ಸಂಪುಟ ಬುಧವಾರ ಘೋಷಿಸಿದೆ. ಪತ್ರಿಕಾಗೋಷ್ಠಿಯೊಂದರಲ್ಲಿ ಮಾತನಾಡಿದ ರಕ್ಷಣಾ ಪಡೆಗಳ ಮುಖ್ಯಸ್ಥ  ಜನರಲ್ ಎನ್.ಎಸ್.ರಾಜಾ ಸುಬ್ರಮಣಿ ಅವರು, ನಾಲ್ಕು ವರ್ಷಗಳ ನಂತರ ಸೇವೆಯಿಂದ ನಿರ್ಗಮಿಸಲು ನಿರ್ಧರಿಸಲಾಗಿದ್ದ ಅಗ್ನಿವೀರರ ಮೊದಲ ತಂಡದ ಪೈಕಿ ಶೇ.75 ರಷ್ಟು ಮಂದಿಗೆ, ಸಶಸ್ತ್ರ ಪಡೆಗಳಲ್ಲಿ ಸೇರ್ಪಡೆಗೊಳ್ಳಲು ಅರ್ಜಿ ಸಲ್ಲಿಸುವ ಅವಕಾಶವನ್ನು …

Read More »

ಉದ್ಯಮಿ ಡೇವಿಡ್ ಡಿಸೋಜಾ ಕೊಲೆ ಕೇಸ್‌: 10 ಆರೋಪಿಗಳ ಬಂಧನ

ಉಡುಪಿ: ಕಾಪು ತಾಲೂಕಿನ ಮುದರಂಗಡಿಯ ಸೇಂಟ್ ಕ್ಸೇವಿಯರ್ ಚರ್ಚ್ ಕಾಂಪ್ಲೆಕ್ಸ್‌ನಲ್ಲಿ ಉದ್ಯಮಿ ಡೇವಿಡ್ ಡಿಸೋಜಾ (David D’souza) ಅವರನ್ನು ಗುಂಡಿಕ್ಕಿ ಕೊಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ 10 ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಪ್ರಕರಣದಲ್ಲಿ ಸಂಘಟಿತ ಅಪರಾಧದ ಅಂಶಗಳು ಕಂಡುಬಂದ ಹಿನ್ನೆಲೆಯಲ್ಲಿ ಕರ್ನಾಟಕ ಸಂಘಟಿತ ಅಪರಾಧ ನಿಯಂತ್ರಣ ಕಾಯ್ದೆ (KCOCA) ಅಡಿಯಲ್ಲಿ ತನಿಖೆ ನಡೆಸಲು ಅನುಮತಿ ದೊರೆತಿದೆ. ಆಗಸ್ಟ್ 7ರಂದು ಮಧ್ಯಾಹ್ನ 3:45ರ ಸುಮಾರಿಗೆ ಮುದರಂಗಡಿಯ ಸೇಂಟ್ ಕ್ಸೇವಿಯರ್ ಚರ್ಚ್ …

Read More »

ರಜನಿಕಾಂತ್ – ಕಮಲ್ ಸಿನಿಮಾಗೆ ನಟಿ ಶ್ರೀಲೀಲಾ ಎಂಟ್ರಿ

ಸೂಪರ್‌ಸ್ಟಾರ್‌ ರಜನಿಕಾಂತ್  ನಟನೆಯ ಹಾಗೂ ಕಮಲ್ ಹಾಸನ್  ನಿರ್ಮಿಸುತ್ತಿರುವ ಬಹುನಿರೀಕ್ಷಿತ ʻಧರ್ಮನ್ʼ ಚಿತ್ರದ ತಾರಾಗಣ ದಿನದಿಂದ ದಿನಕ್ಕೆ ಮತ್ತಷ್ಟು ಬಲಿಷ್ಠಗೊಳ್ಳುತ್ತಿದೆ. ಇದೀಗ ಚಿತ್ರತಂಡಕ್ಕೆ ನಟಿ ಶ್ರೀಲೀಲಾ (Sreeleela) ಪ್ರಮುಖ ಪಾತ್ರಕ್ಕಾಗಿ ಅಧಿಕೃತವಾಗಿ ಸೇರ್ಪಡೆಗೊಂಡಿದ್ದಾರೆ. ಈ ವಿಚಾರವನ್ನು ಚಿತ್ರತಂಡ ಪ್ರಕಟಿಸಿದ್ದು, ಅಭಿಮಾನಿಗಳಲ್ಲಿ ಚಿತ್ರದ ಬಗೆಗಿನ ನಿರೀಕ್ಷೆ ದುಪ್ಪಟ್ಟಾಗಿದೆ. ರಾಜ್‌ಕಮಲ್ ಫಿಲ್ಮ್ಸ್ ಇಂಟರ್ನ್ಯಾಷನಲ್ ಹಾಗೂ ಟರ್ಮರಿಕ್ ಮೀಡಿಯಾ ಬ್ಯಾನರ್‌ಗಳ ಅಡಿಯಲ್ಲಿ ಕಮಲ್ ಹಾಸನ್ ಮತ್ತು ಆರ್. ಮಹೇಂದ್ರನ್ ಈ ಬಿಗ್ ಬಜೆಟ್ ಸಿನಿಮಾವನ್ನು …

Read More »