Breaking News

ಹಳ್ಳಿಗರೆಂದರೆ ಗುಗ್ಗುಗಳಲ್ಲ ಪ್ರಿಯಾಂಕ್‌ ಖರ್ಗೆಗೆ ಹೆಚ್‌ಡಿಕೆ ಖಡಕ್‌ ತಿರುಗೇಟು

Spread the love

ಬೆಂಗಳೂರು: ಹಳ್ಳಿಗರೆಂದರೆ ಗುಗ್ಗುಗಳಲ್ಲ ಎಂದು ಹೇಳುವ ಮೂಲಕ ಕೇಂದ್ರ ಸಚಿವ ಹೆಚ್‌ಡಿ ಕುಮಾರಸ್ವಾಮಿ ಅವರು ಗೃಹ ಸಚಿವ ಪ್ರಿಯಾಂಕ್‌ ಖರ್ಗೆ ಅವರಿಗೆ ತಿರುಗೇಟು ನೀಡಿದ್ದಾರೆ.

ಸ್ಟಿಂಗ್ ಆಪರೇಷನ್ ಕುರಿತ ಕುಮಾರಸ್ವಾಮಿ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡುವ ಸಂದರ್ಭದಲ್ಲಿ ಪ್ರಿಯಾಂಕ್ ಖರ್ಗೆ ಅವರು, ಹೆಚ್‌.ಡಿ.ಕುಮಾರಸ್ವಾಮಿ ಹಳ್ಳಿ ಗುಗ್ಗುನಾ? ನಾವೇನು ಬಿಗ್ ಬಾಸ್ ನಡೆಸ್ತಿದ್ದೀವಾ, ತನಿಖೆಯನ್ನು ಲೈವ್ ಸ್ಟ್ರೀಮ್ ಮಾಡಲು ಆಗುತ್ತಾ? ತನಿಖೆ ಮಕ್ಕಳ ಆಟವಲ್ಲ, ಅವರಿಂದ ನನಗೆ ಪ್ರಮಾಣಪತ್ರ ಅಗತ್ಯವಿಲ್ಲ, ಕಲಿಯುವುದು ಏನೂ ಇಲ್ಲ” ಎಂದು ವಾಗ್ದಾಳಿ ನಡೆಸಿದ್ದರು.

ಈ ಟೀಕೆಗೆ ಎಂದು ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿದ ಹೆಚ್‌ಡಿಕೆ, ಭಾರತದ ಆತ್ಮ ಹಳ್ಳಿಗಳಲ್ಲಿದೆ ಎಂದು ರಾಷ್ಟ್ರಪಿತ ಮಹಾತ್ಮ ಗಾಂಧಿ ಅವರು ಹೇಳಿದ್ದಾರೆ. ನಿಜ, ನಾನು ಹಳ್ಳಿಯವನು. ಅಲ್ಲೇ ಹುಟ್ಟಿ ಹಟ್ಟಿಯಲ್ಲಿ ಆಡಿ ಬೆಳೆದವನು. ಹಳ್ಳಿಯವನು ಎಂದು ಹೇಳಿಕೊಳ್ಳಲು ನನಗೆ ಹೆಮ್ಮೆ ಇದೆ ಎಂದು ಬರೆದು ಹಳ್ಳಿಗರೆಂದರೆಗುಗ್ಗುಗಳಲ್ಲ ಎಂದು ಹ್ಯಾಶ್‌ ಟ್ಯಾಗ್‌ ಹಾಕಿ ಗರಂ ಆಗಿಯೇ ಪ್ರತಿಕ್ರಿಯಿಸಿದ್ದಾರೆ.

ಕುಮಾರಸ್ವಾಮಿ ಅವರನ್ನು ಹಳ್ಳಿಗುಗ್ಗು ಎಂದು ಪ್ರಿಯಾಂಕ್‌ ಕರೆದ ಬೆನ್ನಲ್ಲೆ ಜೆಡಿಎಸ್ ಈಗ “ಹೌದು ಗುರು ನಾವು ಹಳ್ಳಿಯವರು ಏನಿವಾಗ” ಅಭಿಯಾನ ಶುರು ಮಾಡಿದೆ. ಹಳ್ಳಿ ಹಳ್ಳಿಗಳಲ್ಲಿ ಕಾರ್ಯಕರ್ತರು, ಮುಖಂಡರ ಮೂಲಕ ಅಭಿಯಾನ ಪ್ರಾರಂಭ ಮಾಡಿದೆ.


Spread the love

About Laxminews 24x7

Check Also

ಯುವತಿಗೆ ಮತ್ತು ಬರಿಸಿ ರೇಪ್‌ ಆರೋಪ – ಯುವಕ ಸಮೀರ್‌ ಬಂಧನ

Spread the loveಬೆಂಗಳೂರು: ರಾಜಸ್ಥಾನದ ಜೈಪುರದಿಂದ  ಬೆಂಗಳೂರಿಗೆ ಬಂದಿದ್ದ ಯುವತಿಯೊಬ್ಬಳು ಅಪರಿಚಿತನೊಬ್ಬನ ಸ್ನೇಹ ಬೆಳೆಸಿ ಅತ್ಯಾಚಾರಕ್ಕೊಳಗಾಗಿರುವ ಘಟನೆ ಬೆಳಕಿಗೆ ಬಂದಿದೆ. …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ