Breaking News

ನಾಳೆಯಿಂದಲೇ ಪಿಂಕ್ ಲೈನ್ ಮೆಟ್ರೋ ಸಾರ್ವಜನಿಕರಿಗೆ ಮುಕ್ತ – ಪ್ರತೀ ನಿಲ್ದಾಣಕ್ಕೆ ಟಿಕೆಟ್ ದರ ಎಷ್ಟು?

Spread the love

ಬೆಂಗಳೂರು: ನಮ್ಮ ಮೆಟ್ರೋದ ಬಹುನಿರೀಕ್ಷಿತ ಗುಲಾಬಿ ಮಾರ್ಗ ಇಂದು ಅದ್ಧೂರಿಯಾಗಿ ಉದ್ಘಾಟನೆಯಾಗುತ್ತಿದೆ. ನಾಳೆ ಮುಂಜಾನೆಯಿಂದಲೇ ಈ ಮಾರ್ಗದಲ್ಲಿ ಸಾರ್ವಜನಿಕರ ಓಡಾಟಕ್ಕೆ ಮೆಟ್ರೋ ರೈಲುಗಳು ಮುಕ್ತವಾಗಲಿವೆ.

ಕಾಳೇನ ಅಗ್ರಹಾರದಿಂದ ತಾವರೆಕೆರೆವರೆಗಿನ ಮಾರ್ಗದಲ್ಲಿ ಮೆಟ್ರೋ ಸಂಚಾರ ಶುರುವಾಗುತ್ತಿದೆ. ನಾಳೆ ಬೆಳಗ್ಗೆಯಿಂದಲೇ ಈ ರೂಟ್‌ನಲ್ಲಿ ಒಟ್ಟು ಐದು ಮೆಟ್ರೋ ಟ್ರೈನ್‌ಗಳು ಓಡಾಡಲಿವೆ. ಪ್ರತಿ ಎಂಟು ನಿಮಿಷಕ್ಕೊಮ್ಮೆ ಒಂದು ಮೆಟ್ರೋ ಟ್ರೈನ್ ಸಂಚರಿಸಲಿದೆ.

ಈ ಹೊಸ ಗುಲಾಬಿ ಮಾರ್ಗದಲ್ಲಿ ಪ್ರಯಾಣಿಸಲು ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್ (BMRCL) ಟಿಕೆಟ್ ದರವನ್ನು ಕೂಡ ನಿಗದಿ ಪಡಿಸಿದೆ. ಜನಸಾಮಾನ್ಯರ ಜೇಬಿಗೆ ಹೊರೆಯಾಗದಂತೆ ಕನಿಷ್ಠ 10 ರೂ. ಹಾಗೂ ಗರಿಷ್ಠ 30 ರೂ. ದರವನ್ನು ನಿಗದಿ ಮಾಡಲಾಗಿದೆ.

ತಾವರೆಕೆರೆಯಿಂದ ಯಾವ ಯಾವ ನಿಲ್ದಾಣಕ್ಕೆ ಎಷ್ಟೇಷ್ಟು ದರ?
ತಾವರೆಕೆರೆ ಟು ಜೆಪಿ 4ನೇ ಹಂತ ನಗರ-10 ರೂ
ತಾವರೆಕೆರೆ ಟು ಐಐಎಂಬಿ-20 ರೂ
ತಾವರೆಕೆರೆ ಟು ಹುಳಿಮಾವು-20 ರೂ
ತಾವರೆಕೆರೆ ಟು ಕಾಳೇನ ಅಗ್ರಹಾರ-30 ರೂ

ಕಾಳೇನ ಅಗ್ರಹಾರ ಟು ಹುಲಿಮಾವು-10 ರೂ
ಕಾಳೇನ ಅಗ್ರಹಾರ ಟು ಐಐಎಂಬಿ-10 ರೂ
ಕಾಳೇನ ಅಗ್ರಹಾರ ಟು ಜೆಪಿ ನಗರ 4ನೇ ಹಂತ-20 ರೂ
ಕಾಳೇನ ಅಗ್ರಹಾರ ಟು ತಾವರೆಕೆರೆ-30 ರೂ


Spread the love

About Laxminews 24x7

Check Also

ಪ್ರಧಾನಿ ಆಗಮನದ ಬೆನ್ನಲ್ಲೇ ಘೋಷಣೆ ವಾರ್‌ – ಬಿಜೆಪಿಗರಿಂದ ಮೋದಿ ಮೋದಿ, ಕಾಂಗ್ರೆಸ್ಸಿಗರಿಂದ ಡಿಕೆ ಡಿಕೆ ಘೋಷಣೆ!

Spread the loveಬೆಂಗಳೂರು: ನಗರಕ್ಕೆ ಪ್ರಧಾನಿ ಮೋದಿಯವರು ಆಗಮಿಸಿದ ಬೆನ್ನಲ್ಲೇ ಕಾಂಗ್ರೆಸ್‌  ಹಾಗೂ ಬಿಜೆಪಿ  ಕಾರ್ಯಕರ್ತರ ನಡುವೆ ಘೋಷಣೆಯ ವಾರ್‌ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ