Breaking News

Monthly Archives: ಸೆಪ್ಟೆಂಬರ್ 2026

ಮತ್ತೊಂದು ಶುಲ್ಕ ಏರಿಕೆ ಶಾಕ್ – ಪಿಯುಸಿ ಪರೀಕ್ಷಾ ಶುಲ್ಕ ಶೇ.50ರಷ್ಟು ಹೆಚ್ಚಳ | ಯಾವುದು ಎಷ್ಟು ಏರಿಕೆ?

ಬೆಂಗಳೂರು: ಎಸ್‌ಎಸ್‌ಎಲ್‌ಸಿ ಶುಲ್ಕ ( ಪರಿಷ್ಕರಣೆಯ ಬೆನ್ನಲ್ಲೇ, ರಾಜ್ಯ ಸರ್ಕಾರವು ಪದವಿ ಪೂರ್ವ ವಿದ್ಯಾರ್ಥಿಗಳಿಗೂ ಶುಲ್ಕ ಹೆಚ್ಚಳದ ಶಾಕ್ ನೀಡಿದೆ. ಪರೀಕ್ಷಾ ಶುಲ್ಕಸೇರಿದಂತೆ ಒಟ್ಟು 26 ಬಗೆಯ ವಿವಿಧ ಸೇವೆಗಳ ದರವನ್ನು ಶೇ. 50ರಷ್ಟು ಹೆಚ್ಚಿಸಿ ಅಧಿಕೃತ ಆದೇಶ ಹೊರಡಿಸಲಾಗಿದೆ. ಈ ಪರಿಷ್ಕೃತ ದರಗಳು 2026-27ನೇ ಶೈಕ್ಷಣಿಕ ಸಾಲಿನಿಂದಲೇ ಅನ್ವಯವಾಗಲಿವೆ. ಕಳೆದ 8 ವರ್ಷಗಳಿಂದ ಯಾವುದೇ ಶುಲ್ಕ ಏರಿಕೆ ಮಾಡಿರದ ಕಾರಣ ಪ್ರಸ್ತುತ ದರ ಪರಿಷ್ಕರಣೆ ಅನಿವಾರ್ಯ ಎಂದು ಸರ್ಕಾರ …

Read More »

30 ಸಾವಿರ ಲಂಚ ಸ್ವೀಕರಿಸುವಾಗ ಲೋಕಾಯುಕ್ತ ಬಲೆಗೆ ಬಿದ್ದ ಕಂದಾಯ ನಿರೀಕ್ಷಕ

ತುಮಕೂರು: 30 ಸಾವಿರ ಲಂಚ ಸ್ವೀಕರಿಸುವಾಗ ಕಂದಾಯ ನಿರೀಕ್ಷಕ ಲೋಕಾಯುಕ್ತ  ಬಲೆಗೆ ಬಿದ್ದ ಘಟನೆ ತುಮಕೂರು ಜಿಲ್ಲೆ ಮಧುಗಿರಿ ತಾಲೂಕಿನಲ್ಲಿ ನಡೆದಿದೆ. ಮುದ್ದೇನಹಳ್ಳಿ ಗ್ರಾಮದ ರೇಣುಕೇಶ್ ಪೌತಿ ಖಾತೆ ಮಾಡಿಸಲು ಅರ್ಜಿ ಸಲ್ಲಿಸಿದ್ದರು. ಈ ವೇಳೆ ಮಧುಗಿರಿ ಕಸಬಾ ಕಂದಾಯ ನಿರೀಕ್ಷಕ ನಾಗೇಶ್ 1 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದರು. ಮೊದಲ ಕಂತಾಗಿ 35 ಸಾವಿರ ರೂ. ನೀಡಲಾಗಿತ್ತು. ಎರಡನೇ ಕಂತಿನ 30 ಸಾವಿರ ರೂ. ಸ್ವೀಕರಿಸುವ ವೇಳೆ ಲೋಕಾಯುಕ್ತ ಅಧಿಕಾರಿಗಳು …

Read More »

ಜಗಳ ಬಿಡಿಸಲು ಬಂದಿದ್ದವನಿಗೆ ಚಾಕು ಇರಿತ – ಚಿಕಿತ್ಸೆ ಫಲಕಾರಿಯಾಗದೇ ವ್ಯಕ್ತಿ ಸಾವು

ನೆಲಮಂಗಲ: ಕ್ಷುಲ್ಲಕ ಕಾರಣಕ್ಕಾಗಿ ಜಗಳ ಬಿಡಿಸಲು ಬಂದಿದ್ದವನ ಮೇಲೆಯೇ ಚಾಕು ಇರಿದ ಪರಿಣಾಮ ಚಿಕಿತ್ಸೆ ಫಲಕಾರಿಯಾಗದೇ ವ್ಯಕ್ತಿ ಸಾವನ್ನಪ್ಪಿರುವ ಘಟನೆ ಪೈಪ್ ಲೈನ್ ರೋಡ್  ಟಿ.ದಾಸರಹಳ್ಳಿಯಲ್ಲಿ  ನಡೆದಿದೆ. ಜೀವನ್ (29) ಮೃತ ವ್ಯಕ್ತಿ. ಮಹಮದ್ ಗೌಸ್ ಹಾಗೂ ವಸೀಂ ಆರೋಪಿಗಳು ಎಂದು ಗುರುತಿಸಲಾಗಿದೆ. ನಾಲ್ಕು ದಿನದ ಹಿಂದೆ ಬಾರ್‌ನಲ್ಲಿ ಗಲಾಟೆ ನಡೆದಿತ್ತು. ಈ ವೇಳೆ ಜೀವನ್ ಗಲಾಟೆ ಬಿಡಿಸಿ ಕಳುಹಿಸಿದ್ದ. ಅದಾದ 10 ನಿಮಿಷದ ಬಳಿಕ ಅದೇ ಬಾರ್ ಮುಂದೆ …

Read More »

ಅ.29ರಿಂದ ನ.11ರವರೆಗೆ ಹಾಸನಾಂಬಾ ಜಾತ್ರಾ ಮಹೋತ್ಸವ

ಹಾಸನ: ಈ ಬಾರಿಯ ಹಾಸನಾಂಬಾ ಜಾತ್ರಾ ಮಹೋತ್ಸವ  ಅ.29ರಿಂದ ನವೆಂಬರ್ 11ರವರೆಗೆ ನಡೆಯಲಿದ್ದು, ಶ್ರದ್ಧಾ, ಭಕ್ತಿ, ಸಡಗರ, ಸಂಭ್ರಮದಿಂದ ಆಚರಿಸಲು ಜಿಲ್ಲಾಡಳಿತ ಸಜ್ಜಾಗಿದೆ. ಹಾಸನ ಜಿಲ್ಲಾಧಿಕಾರಿ ಕೆ.ಎಸ್.ಲತಾಕುಮಾರಿ  ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಈ ಬಾರಿ ಅ.29ರಿಂದ ನ.11ರವರೆಗೆ ಹಾಸನಾಂಬಾ ಜಾತ್ರಾ ಮಹೋತ್ಸವ ನಡೆಯಲಿದೆ. ಅ.29ರಂದು ಗುರುವಾರ ಮ.12 ಗಂಟೆಗೆ ಹಾಸನಾಂಬ ದೇವಾಲಯದ ಗರ್ಭಗುಡಿ ಬಾಗಿಲು ತೆರೆಯಲಿದೆ. ಅದು ಸಾರ್ವಜನಿಕರಿಗೆ ದರ್ಶನಕ್ಕೆ ಅವಕಾಶ ಇರುವುದಿಲ್ಲ. ಮಾರನೇ ದಿನ ಅ.3ರಿಂದ ನ.10ರವರೆಗೆ …

Read More »

ರಾಜ್ಯದಲ್ಲಿ ಹಾಲಿನ ದರ 4-5 ರೂ. ಹೆಚ್ಚಳ ಫಿಕ್ಸ್‌

ಬೆಂಗಳೂರು: ದರ ಏರಿಕೆಯಿಂದ ಕಂಗಾಲಾಗಿದ್ದ ಜನರಿಗೆ ಇದೀಗ ಸರ್ಕಾರ ಮತ್ತೆ ಶಾಕ್ ನೀಡಿದೆ. ಹಾಲಿನ ದರ ಏರಿಕೆ  ಮಾಡುವಂತೆ ಒಕ್ಕೂಟಗಳ ಪ್ರಸ್ತಾಪಕ್ಕೆ ಸರ್ಕಾರ ಒಪ್ಪಿಗೆ ಸೂಚಿಸಿದೆ. ಇತ್ತೀಚಿಗಷ್ಟೇ ಹಾಲು ಒಕ್ಕೂಟಗಳ ನಿಯೋಗವು ಸಿಎಂ ಡಿಕೆ ಶಿವಕುಮಾರ್  ಅವರನ್ನು ಭೇಟಿಯಾಗಿ ನಂದಿನಿ ಹಾಲಿನ ಖರೀದಿ ಮತ್ತು ಮಾರಾಟ ದರವನ್ನು ಪ್ರತಿ ಲೀಟರ್ ಗೆ 8 ರೂ.ಯಿಂದ 10 ರೂ.ನಷ್ಟು ಏರಿಕೆ ಮಾಡುವಂತೆ ಮನವಿ ಸಲ್ಲಿಸಿತ್ತು. ಇದರ ಬೆನ್ನಲ್ಲೇ ಸಿಎಂ 16 ಜಿಲ್ಲೆಗಳ …

Read More »

ಜೆಡಿಎಸ್ ಮುಖಂಡ ಅಂದಾನಪ್ಪ ಮನೆಯಲ್ಲಿ ವಾಚ್‌ಮ್ಯಾನ್ ಆತ್ಮಹತ್ಯೆ

ಬೆಂಗಳೂರು: ಜೆಡಿಎಸ್ ಮುಖಂಡ ಅಂದಾನಪ್ಪ  ಮನೆಯಲ್ಲಿ ವಾಚ್‌ಮ್ಯಾನ್  ಕೆಲಸ ಮಾಡುತ್ತಿದ್ದ ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಲಗ್ಗೆರೆಯಲ್ಲಿ ನಡೆದಿದೆ. ನಾಗರಾಜ್ (65) ಮೃತ ವಾಚ್‌ಮ್ಯಾನ್. ಹಾಸನ ಜಿಲ್ಲೆಯ ಅರಸೀಕೆರೆಯ ನಾಗರಾಜ್ ಲಗ್ಗೆರೆ ಬಳಿಯಿರುವ ಅಂದಾನಪ್ಪ ಮನೆಯಲ್ಲಿ ಕಳೆದ ನಾಲ್ಕೈದು ವರ್ಷಗಳಿಂದ ಕೆಲಸ ಮಾಡುತ್ತಿದ್ದರು. ಇಂದು ಬೆಳಗ್ಗೆ ಇದ್ದಕ್ಕಿದ್ದಂತೆ ಅಂದಾನಪ್ಪ ಬಿಲ್ಡಿಂಗ್‌ನ ಸ್ಟಾರ್ ಫ್ರೂಟ್ ಮರಕ್ಕೆ ಶಾಲಿನಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಘಟನಾ ಸ್ಥಳಕ್ಕೆ ರಾಜಗೋಪಾಲನಗರ ಪೊಲೀಸರು ಭೇಟಿ ನೀಡಿ …

Read More »

ಆನೇಕಲ್ ರಸ್ತೆ ಬದಿಯ ಪೊದೆಯಲ್ಲಿ ಶವ ಪತ್ತೆ – ಕ್ಷುಲ್ಲಕ ಕಾರಣಕ್ಕೆ ಮಾರಕಾಸ್ತ್ರಗಳಿಂದ ಹೊಡೆದು ಕೊಲೆ

ಬೆಂಗಳೂರು: ಆನೇಕಲ್ ರಸ್ತೆ ಬದಿಯ ಪೊದೆಯಲ್ಲಿ ಪತ್ತೆಯಾಗಿದ್ದ  ಶವ ಪ್ರಕರಣಕ್ಕೆ ಸಂಬಧಿಸಿದಂತೆ ಪೊಲೀಸರು ಕೊಲೆಯಾದ ಯುವಕನ ಗುರುತು ಪತ್ತೆಹಚ್ಚಿದ್ದಾರೆ. ಆನೇಕಲ್ ತಾಲೂಕಿನ ರಾಮಕೃಷ್ಣಪುರ ರಸ್ತೆ ಬದಿ ಯುವಕನ ಶವ ಪತ್ತೆಯಾಗಿತ್ತು. ಈ ಶವ ಸುಭಾಷ್‌ ಎಂಬ ಯುವಕನದ್ದು ಎನ್ನಲಾಗಿದೆ. ಸುಭಾಷ್‌ ಆನೇಕಲ್ ತಾಲೂಕಿನ ಕರ್ಪೂರು ಗ್ರಾಮದ ನಿವಾಸಿಯಾಗಿದ್ದ. ಡಕಾಯಿತಿ, ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಈತ, ಗ್ಯಾಂಗ್ ಕಟ್ಟಿಕೊಂಡು ಆಟೋದಲ್ಲಿ ಓಡಾಡುತ್ತಿದ್ದ. ಸುಭಾಷ್‌ ಹಾಗೂ ಅವನ ಗ್ಯಾಂಗ್‌ 23ರಂದು ರಾತ್ರಿ ಆಟೋದಲ್ಲಿ …

Read More »

ದರ್ಶನ್‌ಗೆ ಸಂಕಷ್ಟ – ಸೆ.28 ರಂದು ಪ್ರದೋಷ್ ಮಾಫಿ ಸಾಕ್ಷಿ ದಾಖಲಿಸಲು ಕೋರ್ಟ್‌ ಆದೇಶ

ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣಕ್ಕೆ  ಸಂಬಂಧಿಸಿದಂತೆ ಪ್ರದೋಷ್‌ ಮಾಫಿ ಸಾಕ್ಷಿ  ದಾಖಲಿಸಲು ಸೆ.28ಕ್ಕೆ ಕೋರ್ಟ್‌ ದಿನಾಂಕ ನಿಗದಿ ಮಾಡಿದೆ. ಪ್ರದೂಷ್ ಮಾಫಿ ಸಾಕ್ಷಿ ತಡೆಯಲು ದರ್ಶನ್  ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯನ್ನು ಹೈಕೋರ್ಟ್‌ ವಜಾಗೊಳಿಸಿದ ಬೆನ್ನಲ್ಲೇ, ಮಾಫಿ ಸಾಕ್ಷಿ ದಾಖಲಿಸಲು 59ನೇ ಸೆಷನ್ಸ್ ಕೋರ್ಟ್ ಆದೇಶ ನೀಡಿದೆ. ಕೋರ್ಟ್‌ ಆದೇಶದ ಬೆನ್ನಲ್ಲೇ ದರ್ಶನ್‌ಗೆ ಸಂಕಷ್ಟ ಎದುರಾಗಿದೆ. ಮಾಫಿ ಸಾಕ್ಷಿ ಹೇಳಿಕೆ ದಿನಾಂಕ ನಿಗದಿ ಬೆನ್ನಲ್ಲೇ, ಹೈಕೋರ್ಟ್‌ ಆದೇಶದ ವಿರುದ್ಧ …

Read More »

ದಸರಾ, ದೀಪಾವಳಿಗೆ ಸಕ್ಕರೆ ಬೆಲೆ ಕೈಗೆಟುಕುವ ದರದಲ್ಲಿಡಲು ಸರ್ಕಾರ ಬದ್ಧ: ಭಾರತದ ಸಕ್ಕರೆ ಉತ್ಪಾದಕರ ಅಸೋಸಿಯೇಷನ್

ನವದೆಹಲಿ: ದಸರಾ, ದೀಪಾವಳಿ ವೇಳೆ ಸಕ್ಕರೆ  ಬೆಲೆ ಕೈಗೆಟಕುವ ದರದಲ್ಲಿಡಲು ಸರ್ಕಾರ ಬದ್ಧವಾಗಿದೆ ಎಂದು ಭಾರತದ ಸಕ್ಕರೆ ಉತ್ಪಾದಕರ ಅಸೋಸಿಯೇಷನ್ ತಿಳಿಸಿದೆ. ಹಬ್ಬದ ಅವಧಿಯಲ್ಲಿ ಗ್ರಾಹಕರಿಗೆ ಸಕ್ಕರೆಯು ಸಮಂಜಸವಾದ ದರದಲ್ಲಿ ಲಭ್ಯವಿರುವುದನ್ನು ಖಚಿತಪಡಿಸಿಕೊಳ್ಳಲು ಸರ್ಕಾರ ಮತ್ತು ಸಕ್ಕರೆ ಉದ್ಯಮವು ಒಟ್ಟಾಗಿ ಕಾರ್ಯನಿರ್ವಹಿಸುತ್ತಿವೆ ಎಂದು ಅಸೋಸಿಯೇಷನ್ ಮಹಾನಿರ್ದೇಶಕ ದೀಪಕ್ ಬಲ್ಲಾನಿ ತಿಳಿಸಿದ್ದಾರೆ. ಶೀಘ್ರದಲ್ಲೇ ದಸರಾ, ದೀಪಾವಳಿ ಸೇರಿದಂತೆ ಹಲವು ಹಬ್ಬಗಳು ಬರಲಿವೆ. ಹೀಗಾಗಿ, ಸಕ್ಕರೆಯು ಕೈಗೆಟುಕುವ ದರದಲ್ಲಿ ಲಭ್ಯವಿರುವುದನ್ನು ನಾವು ಖಚಿತಪಡಿಸಿಕೊಳ್ಳಬೇಕು. …

Read More »

ಕೊಪ್ಪಳದ ಗವಿಸಿದ್ದೇಶ್ವರ ಮಹಾಸ್ವಾಮಿಗಳಿಂದ ದಸರಾ ಉದ್ಘಾಟನೆ

ಬೆಂಗಳೂರು: ನಾಡಿನ ಸಾಂಸ್ಕೃತಿಕ ಹೆಮ್ಮೆಯ ಪ್ರತೀಕವಾದ ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವವನ್ನು ಕೊಪ್ಪಳದ ಶ್ರೀ ಗವಿಸಿದ್ದೇಶ್ವರ ಮಹಾಸಂಸ್ಥಾನ ಮಠದ ಪೀಠಾಧಿಪತಿಗಳಾದ ಶ್ರೀ ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮಿಗಳು ಉದ್ಘಾಟಿಸಲಿದ್ದಾರೆ. ವಿಧಾನಸೌಧದಲ್ಲಿ ಈ ವಿಚಾರವನ್ನು ಅಧಿಕೃತವಾಗಿ ಸಿಎಂ ಡಿಕೆ ಶಿವಕುಮಾರ್‌ ಪ್ರಕಟಿಸಿದರು. ಅಕ್ಟೋಬರ್ 11 ರಿಂದ ಅಕ್ಟೋಬರ್ 21 ರವರೆಗೆ ಒಟ್ಟು 11 ದಿನಗಳ ಕಾಲ ಅತ್ಯಂತ ವೈಭವದಿಂದ ದಸರಾ ನಡೆಯಲಿದೆ. ಅ. 11 ಭಾನುವಾರ ಚಾಮುಂಡಿ ಬೆಟ್ಟದಲ್ಲಿ ಶ್ರೀ ಚಾಮುಂಡೇಶ್ವರಿ ದೇವಿಗೆ …

Read More »