Breaking News

Monthly Archives: ಸೆಪ್ಟೆಂಬರ್ 2026

ಬಾಲ್ಕನಿಯಲ್ಲಿ ಒಣಗಲು ಹಾಕಿದ್ದ ಬಟ್ಟೆ ತೆಗೆಯಲು ಹೋಗಿ 12ನೇ ಮಹಡಿಯಿಂದ ಬಿದ್ದು ವಿದ್ಯಾರ್ಥಿನಿ ಸಾವು

ಲಕ್ನೋ: ಒಣಗಲು ಹಾಕಿದ್ದ ಬಟ್ಟೆಗಳನ್ನು ತರಲು ಬಾಲ್ಕನಿಗೆ ತೆರಳಿದ್ದ ವಿದ್ಯಾರ್ಥಿನಿ 12ನೇ ಮಹಡಿಯಿಂದ ಬಿದ್ದು ಮೃತಪಟ್ಟಿರುವ ದಾರುಣ ಘಟನೆ ಉತ್ತರ ಪ್ರದೇಶದ  ಘಾಜಿಯಾಬಾದ್‌ನಲ್ಲಿ ನಡೆದಿದೆ. ಮೃತ ವಿದ್ಯಾರ್ಥಿನಿಯನ್ನು ಪ್ರಾಚಿ ಎಂದು ಗುರುತಿಸಲಾಗಿದೆ. ಪ್ರಾಚಿ ಸಂಜಯ್ ನಗರದಲ್ಲಿರುವ ಡೆಹ್ರಾಡೂನ್ ಪಬ್ಲಿಕ್ ಸ್ಕೂಲ್‌ನಲ್ಲಿ 9ನೇ ತರಗತಿ ವ್ಯಾಸಂಗ ಮಾಡುತ್ತಿದ್ದಳು. ರಾಜ್‌ನಗರ ಎಕ್ಸ್ಟೆನ್ಶನ್‌ನ ನಿವಾಸಿಯಾಗಿದ್ದ ಪ್ರಾಚಿ ಸಾಯುವ ಎರಡು ದಿನಗಳ ಹಿಂದಷ್ಟೇ ಮಹಾರಾಷ್ಟ್ರದ ಶಿರಡಿಯಲ್ಲಿ ನಡೆದ ಸಿಬಿಎಸ್‌ಸಿ ರೋಪ್ ಸ್ಕಿಪ್ಪಿಂಗ್ ರಾಷ್ಟ್ರೀಯ ಚಾಂಪಿಯನ್‌ಶಿಪ್‌ನಲ್ಲಿ ಎರಡು …

Read More »

AI ಕ್ಯಾಮೆರಾ ಯಡವಟ್ಟು – ಗಿಟಾರ್‌ಗೆ ಹೆಲ್ಮೆಟ್ ಹಾಕಿಲ್ಲ ಅಂತ ದಂಡ

ಬೆಂಗಳೂರು: ಟ್ರಾಫಿಕ್ ರೂಲ್ಸ್  ಉಲ್ಲಂಘನೆ ತಡೆಗೆ ಅಳವಡಿಸಲಾಗಿರುವ ಎಐ ಕ್ಯಾಮೆರಾ  ಯಡವಟ್ಟೊಂದನ್ನು ಮಾಡಿದೆ. ಸ್ಕೂಟಿಯಲ್ಲಿ ಕೊಂಡೊಯ್ಯಲಾಗುತ್ತಿದ್ದ ಗಿಟಾರ್ ಹೆಲ್ಮೆಟ್ ಧರಿಸಿಲ್ಲ ಎಂದು ದಂಡ ಹಾಕಿದೆ. ಸೌವಿಕ್ ದತ್ತ ಎಂಬುವವರು ಸ್ಕೂಟರ್‌ನಲ್ಲಿ ಹೆಬ್ಬಾಳದಿಂದ  ಟಿನ್ ಫ್ಯಾಕ್ಟರಿಗೆ ಕಡೆಗೆ ಹೊರಟಿದ್ದರು. ಈ ವೇಳೆ ಗಿಟಾರ್ ಅನ್ನು ಬೆನ್ನಿಗೆ ಹಾಕಿಕೊಂಡಿದ್ದರು. ಇದನ್ನು ಗಮನಿಸಿದ ಎಐ ಕ್ಯಾಮೆರಾ, ಹಿಂಬದಿಯಲ್ಲಿದ್ದ ಗಿಟಾರ್ ಅನ್ನು ಮನುಷ್ಯ ಎಂದುಕೊಂಡು ಹೆಲ್ಮೆಟ್ ಹಾಕಿಲ್ಲ ಎಂದು ದಂಡ ವಿಧಿಸಿದೆ. ಆನ್‌ಲೈನ್‌ನಲ್ಲಿ ಬೈಕ್ ಸವಾರನಿಗೆ …

Read More »

ಝೆನ್-ಜಿಗಳ ಹಕ್ಕು ಕಸಿಯೋ ಕೆಲಸ ಬಿಜೆಪಿ ಮಾಡ್ತಿದೆ, ರಾಜ್ಯದ 1.50 ಕೋಟಿ ಮತದಾರರ ಕೈಬಿಟ್ಟಿದ್ದಾರೆ: ಬಿ.ಕೆ ಹರಿಪ್ರಸಾದ್‌

ಬೆಂಗಳೂರು: ಝೆನ್‌-ಜಿ ಮತದಾರರ ಹಕ್ಕು ಕಸಿಯುವ ಕೆಲಸವನ್ನ ಬಿಜೆಪಿ ಮಾಡುತ್ತಿದೆ ಎಂದು ಕೆಪಿಸಿಸಿ ಅಧ್ಯಕ್ಷ ಬಿ.ಕೆ ಹರಿಪ್ರಸಾದ್  ಆರೋಪಿಸಿದರು. ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಚುನಾವಣಾ ಆಯುಕ್ತರ ವಿರುದ್ಧ ಕಾಂಗ್ರೆಸ್‌ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ  ಮಾತನಾಡಿದ ಅವರು, ಮತದಾರರ ಪಟ್ಟಿಯಿಂದ ಅರ್ಹ ಮತದಾರರನ್ನ ಕೈಬಿಡಲಾಗುತ್ತಿದೆ ಎಂದು ಆರೋಪಿಸಿದರು. 2015 ರಿಂದ ಬಿಜೆಪಿ ಅಧಿಕಾರಕ್ಕೆ ಬಂದಮೇಲೆ ಚುನಾವಣಾ ಆಯೋಗ ಅಕ್ರಮ ಮಾಡುತ್ತಿದೆ. ಕರ್ನಾಟಕದಲ್ಲಿ ಸುಮಾರು 1.50 ಕೋಟಿ ಮತದಾರರನ್ನ ಮತದಾರರ ಪಟ್ಟಿಯಿಂದ ಕೈಬಿಡಲಾಗಿದೆ. ಅಲ್ಲದೆ, …

Read More »

ಕಚೇರಿಗೆ ಸರಿಯಾದ ಸಮಯಕ್ಕೆ ಬಾರದ ಅಧಿಕಾರಿಗಳಿಗೆ ಗೇಟ್ ಬಂದ್ – ಜಿ.ಪಂ ಸಿಇಒ‌ ಕ್ಲಾಸ್

ಬೀದರ್: ಕಚೇರಿಗೆ ಸರಿಯಾದ ಸಮಯಕ್ಕೆ ಬಾರದ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಗೇಟ್ ಬಂದ್ ಮಾಡಿ ಜಿಲ್ಲಾ ಪಂಚಾಯತ್‌  ಸಿಇಒ  ಕ್ಲಾಸ್ ತೆಗೆದುಕೊಂಡ ಘಟನೆ ಬೀದರ್‌ನಲ್ಲಿ ನಡೆದಿದೆ. ಜಿಪಂ ಸಿಇಒ ಗಿತ್ತೆ ಮಾದವ್ ವಿಠಲರಾವ್ ಅವರು ಕಚೇರಿಗೆ ದಿಢೀರ್ ಭೇಟಿ ನೀಡಿ, ರಿಯಾಲಿಟಿ ಚೆಕ್ ನಡೆಸಿದ್ದಾರೆ. ಈ ವೇಳೆ ಕಚೇರಿಗೆ ತಡವಾಗಿ ಬಂದ ಅಧಿಕಾರಿಗಳಿಗೆ ಗೇಟ್‌ ಬಂದ್‌ ಮಾಡಿ, ಬಿಸಿ ಮುಟ್ಟಿಸಿದ್ದಾರೆ. ಕಚೇರಿ ಒಳಗಡೆ ಹೋಗಿ ರಿಯಾಲಿಟಿ ಚೆಕ್ ಮಾಡಿದಾಗ ಖಾಲಿ ಖಾಲಿ …

Read More »

ಬಿಡದಿ ಟೌನ್‌ಶಿಪ್‌ ಜಟಾಪಟಿ | ಹಳೇ ಹೆದ್ದಾರಿ ತಡೆದು ರೈತರ ಪ್ರತಿಭಟನೆ – ಪೊಲೀಸರೊಂದಿಗೆ ವಾಗ್ವಾದ; ಕಟ್ಟೆಯೊಡೆದ ಆಕ್ರೋಶ

ರಾಮನಗರ: ಬಿಡದಿ ಟೌನ್ ಶಿಪ್  ಜಟಾಪಟಿ ಮುಂದುವರೆದಿದ್ದು, ನಿನ್ನೆ ಸಂಜೆ ರಸ್ತೆ ತಡೆ ಮಾಡಿ ಪ್ರತಿಭಟನೆ ಮಾಡ್ತಿದ್ದ ರೈತರ ಬಂಧನ ಹಿನ್ನಲೆ, ಚನ್ನಪಟ್ಟಣದ ಪೊಲೀಸ್ ಭವನದಲ್ಲಿ ರೈತರನ್ನ ಇರಿಸಲಾಗಿತ್ತು. ಇದೀಗ ಬಂಧನದ ಬಳಿಕವೂ ರೈತರ ಉಪವಾಸ ಸತ್ಯಾಗ್ರಹ ಮುಂದುವರೆದಿದ್ದು, ಸ್ಥಳಕ್ಕೆ ಡಿಸಿ ಬರಬೇಕು ಎಂದು ರೈತರು  ಪಟ್ಟು ಹಿಡಿದಿದ್ದಾರೆ. ಇತ್ತ ಚನ್ನಪಟ್ಟಣದ ಗಾಂಧಿವೃತ್ತದಲ್ಲಿ ರಸ್ತೆ ತಡೆದು ಪ್ರತಿಭಟನೆ ನಡೆಸಲು ರೈತ ಸಂಘಟನೆಗಳ ಸಿದ್ಧತೆ ನಡೆಸಿದ್ದು, ಈ ಮಧ್ಯೆ ಭೈರಮಂಗಲ ಗ್ರಾಮದಲ್ಲೂ …

Read More »

ಹಾಸನದಲ್ಲಿ ಗಣೇಶ ವಿಸರ್ಜನೆ ವೇಳೆ ಅನುಮತಿಯಿಲ್ಲದಿದ್ದರೂ ಡಿಜೆ ಬಳಕೆ ಆರೋಪ – 15 ಮಂದಿ ವಿರುದ್ಧ FIR

ಹಾಸನ: ಹಿಂದೂ ಮಹಾಗಣಪತಿ ವಿಸರ್ಜನಾ ಮಹೋತ್ಸವ ವೇಳೆ ಹಾಸನದಲ್ಲಿ ಅನುಮತಿ ನೀಡದಿದ್ದರು ಡಿಜೆ  ಬಳಸಿದ ಕಾರಣ ಹದಿನೈದು ಜನರ ಮೇಲೆ ಹಾಸನ ನಗರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲು ಮಾಡಿರುವ ಪೊಲೀಸರ ವಿರುದ್ಧ ವಿಹೆಚ್‌ಪಿ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹಾಸನದಲ್ಲಿ ಮಾತನಾಡಿದ ವಿಶ್ವ ಹಿಂದೂ ಪರಿಷತ್ ಪ್ರಾಂತ ಸಹಕಾರ್ಯದರ್ಶಿ ಮಹಿಪಾಲ್, ಸುಪ್ರೀಂ ಕೋರ್ಟ್ ಗೈಡ್‌ಲೈನ್ಸ್ ನಾವು ಕೂಡ ನೋಡಿದ್ದೇವೆ. ಮುಖ್ಯಮಂತ್ರಿ, ಪ್ರಧಾನಮಂತ್ರಿಗಳ ಕಾರ್ಯಕ್ರಮಗಳು ನಡೆದಾಗ ಅಲ್ಲಿಗೆ ಪರಿಸರ ಇಲಾಖೆ ಅಧಿಕಾರಿಗಳನ್ನು …

Read More »

ಒಂದೇ ತಿಂಗಳಲ್ಲಿ ಬರಿದಾದ ಹೇಮಾವತಿ ಒಡಲು – ಮುಂಗಾರು ಪೂರ್ವಕ್ಕೂ ಮುನ್ನವೇ ನೀರು ಖಾಲಿ!

ಹಾಸನ: ಒಂದೇ ತಿಂಗಳಲ್ಲಿ ಹಾಸನ ಜಿಲ್ಲೆಯ ಜೀವನದಿ ಹೇಮಾವತಿಯ  ಒಡಲು ಬರಿದಾಗಿದೆ. ಮುಂಗಾರು ಪೂರ್ವದಲ್ಲೇ ಕನಿಷ್ಠ ಮಟ್ಟಕ್ಕೆ ಜಲಾಶಯದ ನೀರು ಕುಸಿದಿದೆ. ಹಾಸನ ತಾಲ್ಲೂಕಿನ, ಗೊರೂರಿನಲ್ಲಿರುವ ಹೇಮಾವತಿ ಜಲಾಶಯದಲ್ಲಿ ಒಂದು ತಿಂಗಳಲ್ಲೇ 18 ಟಿಎಂಸಿ ನೀರು ಖಾಲಿಯಾಗಿದ್ದು, ಹೇಮಾವತಿ ಜಲಾಶಯದ ನೀರು ಬಹುತೇಕ ಕೆಆರ್‌ಎಸ್  ಮೂಲಕ ತಮಿಳುನಾಡಿಗೆ  ಹರಿದಿದೆ. ಇದರ ಜೊತೆಗೆ ಜನ ಜಾನುವಾರುಗಳಿಗೆ ಕುಡಿಯುವ ನೀರಿಗಾಗಿ ಕೆರೆಕಟ್ಟೆ ತುಂಬಿಸಲು ಕಾಲುವೆಗಳಿಗೂ ಸಹ ನೀರು ಹರಿಸಲಾಗಿದೆ. ನದಿಗೂ ಹೆಚ್ಚಿನ ಪ್ರಮಾಣದ …

Read More »

ಬಂಟ್ವಾಳದ ಅಬ್ದುಲ್ ರೆಹಮಾನ್ ಹತ್ಯೆ ಕೇಸ್‌ – ಕಲ್ಲಡ್ಕ ಪ್ರಭಾಕರ್ ಭಟ್​​ಗೆ ನೋಟಿಸ್

ಮಂಗಳೂರು: ಬಂಟ್ವಾಳ ಅಬ್ದುಲ್ ರೆಹಮಾನ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರ್‌ಎಸ್ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್​ ಅವರಿಗೆ ಪೊಲೀಸರು ನೊಟೀಸ್ ಜಾರಿ ಮಾಡಿದ್ದಾರೆ. ಕಳೆದ ವರ್ಷ ಮೇ 25 ರಂದು ಬಂಟ್ವಾಳದಲ್ಲಿ ಅಬ್ದುಲ್ ರಹಿಮಾನ್ ಹತ್ಯೆ ನಡೆದಿತ್ತು. ಈ ಹತ್ಯೆ ವೇಳೆ ಆರೋಪಿಗಳ ಜೊತೆ ಕಲ್ಲಡ್ಕ ಪ್ರಭಾಕರ್ ಭಟ್ ಅವರು ನಿರಂತರ ಫೋನ್ ಸಂಪರ್ಕದಲ್ಲಿದ್ದರು ಎಂಬ ಮಾಹಿತಿ ಹಿನ್ನೆಲೆಯಲ್ಲಿ ಬಂಟ್ವಾಳ ಗ್ರಾಮಾಂತರ ಠಾಣೆ ಪೊಲೀಸರು ಅವರಿಗೆ ನೋಟಿಸ್ ಜಾರಿ ಮಾಡಿದ್ದಾರೆ. …

Read More »

ಕಂದು ಬಣ್ಣಕ್ಕೆ ತಿರುಗಿದ ಮಳೆ ನೀರು – ಸ್ಥಳೀಯರ ಆತಂಕ

ಮಡಿಕೇರಿ: ಕೊಡಗು  ಜಿಲ್ಲೆಯಲ್ಲಿ ಗುರುವಾರ ಮಧ್ಯಾಹ್ನ ಆರಂಭಗೊಂಡ ಮಳೆ  ಇಂದು (ಸೆ.25) ಸಹ ಮುಂದುವರೆದಿದೆ. ಇದರ ನಡುವೆಯೇ ಜಿಲ್ಲೆಯ ಕೆಲವು ಭಾಗಗಳಲ್ಲಿ ಮಳೆ ನೀರು ಕಂದು ಬಣ್ಣಕ್ಕೆ ತಿರುಗಿರುವುದು ಸ್ಥಳೀಯರ ಆತಂಕಕ್ಕೆ ಕಾರಣವಾಗಿದೆ. ಮಡಿಕೇರಿ  ತಾಲೂಕಿನ ಎಮ್ಮೆಮಾಡು, ಮರುಗೋಡು ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕಂದು ಬಣ್ಣದ ಮಳೆನೀರು ಕಂಡುಬಂದಿದೆ. ಇದಕ್ಕೆ ಕಾರಣವೇನು ಎಂಬ ಬಗ್ಗೆ ಸ್ಥಳೀಯರಲ್ಲಿ ಚರ್ಚೆ ಶುರುವಾಗಿದೆ. ಸಾಮಾನ್ಯವಾಗಿ ಪಾರದರ್ಶಕವಾಗಿ ಕಾಣುವ ಮಳೆನೀರು ಕೆಲವೆಡೆ ಕಂದು ಬಣ್ಣಕ್ಕೆ ತಿರುಗಿರುವುದು …

Read More »

ವಜ್ರಕ್ಕಿಂತ ಕಠಿಣ ವಕ್ತಿತ್ವ ಇದ್ದರೂ, ಡಿಕೆಶಿ ಹೃದಯ ಮೃದು ಸ್ವಭಾವದ್ದು: ನೂಣವಿನಕೆರೆ ಶ್ರೀ

ತುಮಕೂರು: ಸಿಎಂ ಡಿ.ಕೆ ಶಿವಕುಮಾರ್‌  ಅವರ ವಕ್ತಿತ್ವ ವಜ್ರಕ್ಕಿಂತ ಕಠಿಣವಾಗಿದ್ದರೂ, ಹೃದಯದಿಂದ ಮೃದು ಸ್ವಭಾವದವರು ಎಂದು ನೂಣನವಿನಕೆರೆಯ ಶಿವಯೋಗಿಶ್ವರ್ ಶ್ರೀಗಳು ಹೇಳಿದ್ದಾರೆ. ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಡಿ.ಕೆ ಶಿವಕುಮಾರ್ ಅವರು ಮಠದ ಆರ್ಶಿವಾದದಿಂದ ಬೆಳೆದಿದ್ದಾರೆ. ತಮಗೆ ಕಷ್ಟಗಳು ಬಂದ ಸಮಯದಲ್ಲೂ ಮಠದ ಆರ್ಶಿವಾದ ಪಡೆದಿದ್ದಾರೆ. ಅವರು ಮಠದ ಮಗನಾಗಿ ಬಂದಿದ್ದಾರೆ ಎಂದರು. ಪ್ರಜೆಗಳನ್ನು, ಸೈನಿಕರನ್ನು ಒಳ್ಳೆಯ ಉದ್ದೇಶಕ್ಕೆ ಕಂಡ್ಯೂಯುತ್ತಿದ್ದಾರೆ. ತಮ್ಮ ಹಿಂದಿನ ವ್ಯಕ್ತಿತ್ವದ ಬದಲಿಸಿಕೊಂಡು ಸರ್ವ ಜನರ ಆತ್ಮೀಯ …

Read More »