Breaking News

ದಸರಾ, ದೀಪಾವಳಿಗೆ ಸಕ್ಕರೆ ಬೆಲೆ ಕೈಗೆಟುಕುವ ದರದಲ್ಲಿಡಲು ಸರ್ಕಾರ ಬದ್ಧ: ಭಾರತದ ಸಕ್ಕರೆ ಉತ್ಪಾದಕರ ಅಸೋಸಿಯೇಷನ್

Spread the love

ನವದೆಹಲಿ: ದಸರಾ, ದೀಪಾವಳಿ ವೇಳೆ ಸಕ್ಕರೆ  ಬೆಲೆ ಕೈಗೆಟಕುವ ದರದಲ್ಲಿಡಲು ಸರ್ಕಾರ ಬದ್ಧವಾಗಿದೆ ಎಂದು ಭಾರತದ ಸಕ್ಕರೆ ಉತ್ಪಾದಕರ ಅಸೋಸಿಯೇಷನ್ ತಿಳಿಸಿದೆ.

ಹಬ್ಬದ ಅವಧಿಯಲ್ಲಿ ಗ್ರಾಹಕರಿಗೆ ಸಕ್ಕರೆಯು ಸಮಂಜಸವಾದ ದರದಲ್ಲಿ ಲಭ್ಯವಿರುವುದನ್ನು ಖಚಿತಪಡಿಸಿಕೊಳ್ಳಲು ಸರ್ಕಾರ ಮತ್ತು ಸಕ್ಕರೆ ಉದ್ಯಮವು ಒಟ್ಟಾಗಿ ಕಾರ್ಯನಿರ್ವಹಿಸುತ್ತಿವೆ ಎಂದು ಅಸೋಸಿಯೇಷನ್ ಮಹಾನಿರ್ದೇಶಕ ದೀಪಕ್ ಬಲ್ಲಾನಿ ತಿಳಿಸಿದ್ದಾರೆ.

ಶೀಘ್ರದಲ್ಲೇ ದಸರಾ, ದೀಪಾವಳಿ ಸೇರಿದಂತೆ ಹಲವು ಹಬ್ಬಗಳು ಬರಲಿವೆ. ಹೀಗಾಗಿ, ಸಕ್ಕರೆಯು ಕೈಗೆಟುಕುವ ದರದಲ್ಲಿ ಲಭ್ಯವಿರುವುದನ್ನು ನಾವು ಖಚಿತಪಡಿಸಿಕೊಳ್ಳಬೇಕು. ನಾನು ಹೇಳಿದಂತೆ, ಚಿಲ್ಲರೆ ಮಾರಾಟದ ದರಗಳು ಈಗಾಗಲೇ ಇಳಿಕೆಯಾಗಿವೆ. ದೇಶೀಯ ಮಾರುಕಟ್ಟೆಯಲ್ಲಿ ಸಕ್ಕರೆಯ ಪೂರೈಕೆಯು ಸಮರ್ಪಕವಾಗಿದೆ. ಬೆಲೆಗಳನ್ನು ನಿಯಂತ್ರಣದಲ್ಲಿಡುವ ಪ್ರಯತ್ನ ನಡೆಯುತ್ತಿದೆ ಎಂದು ಹೇಳಿದ್ದಾರೆ.

ಚಿಲ್ಲರೆ ಮಾರುಕಟ್ಟೆಯಲ್ಲಿ ಸಕ್ಕರೆ ದರಗಳು ಈಗಾಗಲೇ ಇಳಿಕೆಯಾಗಲು ಪ್ರಾರಂಭಿಸಿವೆ. ಮುಂದಿನ ವಾರಗಳಲ್ಲಿ ಅವು ಮತ್ತಷ್ಟು ಕಡಿಮೆಯಾಗುವ ಸಾಧ್ಯತೆಯಿದೆ. ಸಗಟು ದರಗಳ ಇಳಿಕೆಯ ಲಾಭವು ಪೂರೈಕೆ ಸರಪಳಿಯ ಮೂಲಕ ಗ್ರಾಹಕರನ್ನು ತಲುಪಲು ಸಮಯ ಹಿಡಿಯುವುದರಿಂದ, ಕಾರ್ಖಾನೆ ದರಗಳು  ಮತ್ತು ಚಿಲ್ಲರೆ ದರಗಳ ಬದಲಾವಣೆಯ ನಡುವೆ ಸಾಮಾನ್ಯವಾಗಿ ಕಾಲಾವಕಾಶದ ಅಂತರವಿರುತ್ತದೆ ಎಂದು ವಿವರಿಸಿದ್ದಾರೆ.

ಸಕ್ಕರೆ ಕಾರ್ಖಾನೆಗಳ ಮಾರಾಟ ದರಗಳು (ಎಕ್ಸ್-ಮಿಲ್ ದರಗಳು) ಈಗಾಗಲೇ ಸುಮಾರು ಶೇ.25-30 ರಷ್ಟು ಹೊಂದಾಣಿಕೆಯಾಗಿವೆ. ಪ್ರಸ್ತುತ ದೇಶಾದ್ಯಂತ ಸರಾಸರಿ ದರವು ಪ್ರತಿ ಕ್ವಿಂಟಾಲ್‌ಗೆ ಸುಮಾರು 4,450 ರೂ.ಗಳಷ್ಟಿದೆ. ಇದರ ಪರಿಣಾಮವಾಗಿ, ಮಾರುಕಟ್ಟೆಯ ಪಾಲುದಾರರು ಕಡಿಮೆ ವೆಚ್ಚದ ಮಟ್ಟಗಳಿಗೆ ಹೊಂದಿಕೊಳ್ಳುತ್ತಿದ್ದಂತೆ ಚಿಲ್ಲರೆ ಮಾರಾಟ ದರಗಳಲ್ಲೂ ಕ್ರಮೇಣ ಹೊಂದಾಣಿಕೆಯಾಗಲಿದೆ ಎಂದು ನಿರೀಕ್ಷೆ ವ್ಯಕ್ತಪಡಿಸಿದ್ದಾರೆ.


Spread the love

About Laxminews 24x7

Check Also

ರಾಜ್ಯದ 50 ಲಕ್ಷ ರೈತರಿಗೆ 2,500 ಇನ್‌ಪುಟ್ ಸಬ್ಸಿಡಿ: ಪರಮೇಶ್ವರ್ ಘೋಷಣೆ

Spread the loveಬೆಂಗಳೂರು: ತೀವ್ರ ಬರಗಾಲದಿಂದ ಕಂಗಾಲಾಗಿರುವ ರಾಜ್ಯದ ಅನ್ನದಾತರಿಗೆ ರಾಜ್ಯ ಸರ್ಕಾರ ಸಿಹಿ ಸುದ್ದಿ ನೀಡಿದೆ. ರಾಜ್ಯದ ಸುಮಾರು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ