ಮಂಡ್ಯ: ವಾರಣಾಸಿಯ ಗಂಗಾರತಿಯ ಮಾದರಿಯಲ್ಲೇ ಕರ್ನಾಟಕದಲ್ಲೂ ಕಾವೇರಿ ನದಿಗೆ ಪೂಜೆ ಸಲ್ಲಿಸುವ ಮಹತ್ವಾಕಾಂಕ್ಷೆಯ ಕಾವೇರಿ ಆರತಿ ಕಾರ್ಯಕ್ರಮದ ಎರಡನೇ ವರ್ಷದ ಸಂಭ್ರಮಕ್ಕೆ ಇಂದು ಅಧಿಕೃತ ಚಾಲನೆ ಸಿಗಲಿದೆ. ಮುಖ್ಯಮಂತ್ರಿ
ಡಿ.ಕೆ ಶಿವಕುಮಾರ್ ಅವರ ಕನಸಿನ ಕೂಸಾಗಿರುವ ಈ ವಿಶಿಷ್ಟ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಇಂದು ಕೆಆರ್ಎಸ್ನ ಬೃಂದಾವನದಲ್ಲಿ ಚಾಲನೆ ದೊರೆಯಲಿದೆ. ಸಂಜೆ 6 ಗಂಟೆಗೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಕಾವೇರಿ ನದಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಗಂಗಾರತಿ ಮಾದರಿಯಲ್ಲೇ, ವಿಶೇಪ ತರಬೇತಿ ಪಡೆದ 12 ರಿಂದ 13 ಜನರ ಅನುಭವಿ ವೈದಿಕರ ತಂಡದಿಂದ ವೈಭವೋಪೇತವಾಗಿ ಕಾವೇರಿ ಆರತಿ ನಡೆಯಲಿದೆ.
ಇಂದಿನಿಂದ ಮುಂದಿನ 6 ದಿನಗಳ ಕಾಲ ನಿರಂತರವಾಗಿ ಈ ವಿಶೇಷ ಆರತಿ ಕಾರ್ಯಕ್ರಮ ಜರುಗಲಿದೆ. ಕಾವೇರಿ ಆರತಿಯ ದಿವ್ಯ ದೃಶ್ಯವನ್ನು ಕಣ್ತುಂಬಿಕೊಳ್ಳಲು ರಾಜ್ಯ ಹಾಗೂ ಹೊರರಾಜ್ಯಗಳಿಂದ ಸಾವಿರಾರು ಪ್ರವಾಸಿಗರು ಆಗಮಿಸುವ ನಿರೀಕ್ಷೆಯಿದ್ದು, ವೀಕ್ಷಣೆಗಾಗಿ ವಿಶೇಷ ಆಸನಗಳ ವ್ಯವಸ್ಥೆಯನ್ನು ಮಾಡಲಾಗಿದೆ.
ಕಾವೇರಿ ಮಾತೆಯ ದಿವ್ಯ ಸ್ವರೂಪವನ್ನು ಕಣ್ತುಂಬಿಕೊಳ್ಳಲು ಬರುವ ಭಕ್ತರು ಮತ್ತು ಪ್ರವಾಸಿಗರಿಗೆ ಈ ಬಾರಿಯ ಕಾವೇರಿ ಆರತಿಯು ಕಣ್ಣಿಗೆ ಹಬ್ಬವನ್ನುಂಟು ಮಾಡಲಿದೆ.
Laxmi News 24×7