Breaking News

Monthly Archives: ಆಗಷ್ಟ್ 2026

ಎತ್ತಿನಭುಜ ಟ್ರೆಕ್ಕಿಂಗ್‌ ರೀ ಓಪನ್ – ರಸ್ತೆ ಮೇಲೆ ಬಿದ್ದ ರಾಶಿ ರಾಶಿ ಮರಗಳಿಂದ ಪ್ರವಾಸಿಗರ ಪರದಾಟ

ಚಿಕ್ಕಮಗಳೂರು: ಹಲವು ತಿಂಗಳುಗಳಿಂದ ನಿಲ್ಲಿಸಿದ್ದ ಎತ್ತಿನಭುಜ ಟ್ರೆಕ್ಕಿಂಗ್‌ಗೆ  ರೀ ಓಪನ್ ಆಗಿದೆ. ಹಲವು ತಿಂಗಳಿಂದ ಟ್ರಕ್ಕಿಂಗ್‌ ಬಂದ್‌ ಆಗಿದ್ದರಿಂದ ಗಾಳಿ ಮಳೆಗೆ ಬಿದ್ದ ಮರಗಳು ರಸ್ತೆ ತುಂಬೆಲ್ಲ ಹಾಗೆ ಬಿದ್ದಿವೆ. ಇದರಿಂದ ಚಾರಣಕ್ಕೆ ಬಂದ ಪ್ರವಾಸಿಗರು ಪರದಾಡಿದ್ದಾರೆ. ಆನ್‌ಲೈನ್‌ನಲ್ಲಿ ಟಿಕೆಟ್‌ ಬುಕ್‌ ಮಾಡಿಕೊಂಡು ಬಂದ ಪ್ರವಾಸಿಗರು, ಹೋಗುವ ರಸ್ತೆ ತಿಳಿಯದೆ ದಟ್ಟ ಕಾಡಿನಲ್ಲಿ ಪರದಾಡಿದ್ದಾರೆ. ಗೈಡ್‌ಗಳಿಲ್ಲದೇ ಇರುವುದರಿಂದ ಪ್ರವಾಸಿಗರು ವಾಪಸ್‌ ಆಗುತ್ತಿದ್ದಾರೆ. ಮೂಲಭೂತ ಸೌಕರ್ಯಗಳಿಲ್ಲದೇ ಅರಣ್ಯ ಇಲಾಖೆ ಟ್ರೆಕ್ಕಿಂಗ್‌ ಓಪನ್‌ …

Read More »

ಡಿಕೆಶಿ ನಿವಾಸಕ್ಕೆ ಗೌತಮ್ ಅದಾನಿ ಭೇಟಿ – ಸುರಂಗ ರಸ್ತೆ ಯೋಜನೆ ಕುರಿತು ಮಹತ್ವದ ಚರ್ಚೆ

ಬೆಂಗಳೂರು: ಸದಾಶಿವನಗರದಲ್ಲಿರುವ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್  ಅವರ ನಿವಾಸಕ್ಕೆ ಅದಾನಿ ಸಮೂಹ ಸಂಸ್ಥೆಗಳ ಅಧ್ಯಕ್ಷ ಗೌತಮ್ ಅದಾನಿ ಭೇಟಿ ನೀಡಿ ಮಾತುಕತೆ ನಡೆಸಿರುವುದು ತೀವ್ರ ಕುತೂಹಲಕ್ಕೆ ಕಾರಣವಾಗಿದೆ. ರಾಜ್ಯದಲ್ಲಿ ಉದ್ದಿಮೆ ಅವಕಾಶಗಳ ಜತೆಗೆ, ಬಹುನಿರೀಕ್ಷಿತ ಬೆಂಗಳೂರು ಸುರಂಗ ರಸ್ತೆ ಯೋಜನೆ ಗುತ್ತಿಗೆ ಹಂಚಿಕೆಗೆ ಸಂಬಂಧಿಸಿದಂತೆ ಇಬ್ಬರ ನಡುವೆ ಮಹತ್ವದ ಚರ್ಚೆ ನಡೆದಿದೆ ಎನ್ನಲಾಗಿದೆ. ಬೆಂಗಳೂರಿನ ಸಂಚಾರ ದಟ್ಟಣೆ ನಿಯಂತ್ರಣಕ್ಕಾಗಿ ಹೆಬ್ಬಾಳದಿಂದ ಸಿಲ್ಕ್ ಬೋರ್ಡ್ ನಡುವೆ ಸುಮಾರು 17 ಕಿ.ಮೀ. ಉದ್ದದ …

Read More »

ಚಾಮರಾಜನಗರ ಎನ್‌ಕೌಂಟರ್ ಕೇಸ್ – ಸೋಮವಾರ ಸರ್ಕಾರಕ್ಕೆ ವರದಿ ಸಲ್ಲಿಕೆ ಸಾಧ್ಯತೆ

ಚಾಮರಾಜನಗರ: ಹನೂರಿನಲ್ಲಿ ಮೂವರು ಬೇಟೆಗಾರರ ಎನ್‌ಕೌಂಟರ್ ಸಂಬಂಧ ನಾಳೆ (ಸೋಮವಾರ) ತನಿಖಾ ತಂಡ ಸರ್ಕಾರಕ್ಕೆ ವರದಿ ಸಲ್ಲಿಸುವ ಸಾಧ್ಯತೆಯಿದೆ. ತನಿಖಾಧಿಕಾರಿ ದಿನೇಶ್ ಕುಮಾರ್ ಮೀನಾ ಸರ್ಕಾರಕ್ಕೆ ವಿಸ್ತೃತ ವರದಿ ಸಲ್ಲಿಸಲಿದ್ದಾರೆ. ತನಿಖೆಯಲ್ಲಿ ಅರಣ್ಯ ಸಿಬ್ಬಂದಿ, ಅರಣ್ಯ ಇಲಾಖೆಯ ಅಧಿಕಾರಿಗಳು ಹಾಗೂ ಪ್ರಕಣರದ ಪ್ರಮುಖ ಸಾಕ್ಷಿ ಮಹಿಮಾ ದಾಸ್ ಹೇಳಿಕೆ ದಾಖಲಿಸಿಕೊಳ್ಳಲಾಗಿದೆ. ಅಂದು ಘಟನೆ ಹೇಗಾಯ್ತು? ಏನಾಯ್ತು? ಅನ್ನೋ ಕಂಪ್ಲೀಟ್ ವರದಿ ತಯಾರಿಸಲಾಗಿದ್ದು ಬಹುತೇಕ ನಾಳೆ ಸರ್ಕಾರಕ್ಕೆ ವರದಿ ಸಲ್ಲಿಕೆಯಾಗಲಿದೆ. ಇತ್ತ …

Read More »

ರಕ್ಷಣಾ ಸಚಿವಾಲಯದ ಮೂರು ತಿಂಗಳ ಗರ್ಭಿಣಿ ಅಧಿಕಾರಿ ನಿಗೂಢ ಸಾವು

ನವದೆಹಲಿ: ರಕ್ಷಣಾ ಸಚಿವಾಲಯದಲ್ಲಿ ಸಹಾಯಕ ವಿಭಾಗಾಧಿಕಾರಿಯಾಗಿದ್ದ ಮೂರು ತಿಂಗಳ ಗರ್ಭಿಣಿಯೊಬ್ಬರು ದೆಹಲಿಯದ್ವಾರಕಾದಲ್ಲಿರುವ ತಮ್ಮ ನಿವಾಸದಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ನಾಜಿಯಾ ಖಾನಂ (30) ಮೃತಪಟ್ಟಿದ್ದು, ಈ ಸಾವಿಗೆ ಪತಿ ಹಾಗೂ ಅತ್ತೆ-ಮಾವನ ನಿರಂತರ ದೈಹಿಕ ಮತ್ತು ಮಾನಸಿಕ ಕಿರುಕುಳವೇ ಕಾರಣ ಎಂದು ಮೃತಳ ಕುಟುಂಬಸ್ಥರು ಗಂಭೀರ ಆರೋಪ ಮಾಡಿದ್ದಾರೆ. ನಾಜಿಯಾ ಖಾನಂಅವರಿಗೆ ಕಳೆದ ಏಪ್ರಿಲ್ 11 ರಂದು ಅಜ್ಮ್ ಅಲಿ ಖಾನ್ ಎಂಬಾತನೊಂದಿಗೆ ವಿವಾಹವಾಗಿತ್ತು. ಮದುವೆಯಾದ ಕೆಲವೇ ದಿನಗಳಲ್ಲಿ ಪತಿ ಅಜ್ಮ್ …

Read More »

ಕೇವಲ ಕೇಸ್ ಇರುವುದಕ್ಕೆಲ್ಲ ರಾಜೀನಾಮೆ ಕೇಳಿದರೆ ಯಾರೂ ಮಂತ್ರಿ ಆಗಿರಲ್ಲ: ಸತೀಶ್ ಜಾರಕಿಹೊಳಿ

ಬಾಗಲಕೋಟೆ: ಕೇವಲ ಪ್ರಕರಣಗಳಿವೆ ಎಂಬ ಒಂದೇ ಕಾರಣಕ್ಕೆ ರಾಜೀನಾಮೆ ಕೊಡುವುದಾದರೆ ಕೇಂದ್ರ ಮತ್ತು ವಿವಿಧ ರಾಜ್ಯಗಳ ಅರ್ಧದಷ್ಟು ಮಂತ್ರಿಗಳು ರಾಜೀನಾಮೆ ನೀಡಬೇಕಾಗುತ್ತದೆ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ತಿರುಗೇಟು ನೀಡಿದ್ದಾರೆ. ಸಚಿವ ಬಿ. ನಾಗೇಂದ್ರ ಅವರ ರಾಜೀನಾಮೆಗೆ ಬಿಜೆಪಿ ನಿರಂತರವಾಗಿ ಪಟ್ಟುಹಿಡಿದು ಪ್ರತಿಭಟನೆ ನಡೆಸುತ್ತಿರುವ ವಿಚಾರವಾಗಿ ಜಮಖಂಡಿಯಲ್ಲಿ ಪ್ರತಿಕ್ರಿಯಿಸಿದ ಅವರು ಈ ಪ್ರತಿಭಟನೆ ಕೇವಲ ಗದ್ದಲ ಸೃಷ್ಟಿಸುವುದಕ್ಕಷ್ಟೇ ಸೀಮಿತವಾಗಿದೆ ಎಂದು ಕಿಡಿಕಾರಿದರು. ಬಿಜೆಪಿಯವರು ಕಳೆದ ಐದು ದಿನಗಳಿಂದ ಸದನದ …

Read More »

ಒಂದೇ ದಿನ 444 ಮದುವೆ! – ಗುರುವಾಯೂರು ದೇಗುಲದಲ್ಲಿ ಹೊಸ ದಾಖಲೆ

ತಿರುವನಂತಪುರಂ (ತ್ರಿಶೂರ್): ಕೇರಳದ ಪ್ರಸಿದ್ಧ ಗುರುವಾಯೂರು ದೇವಸ್ಥಾನದಲ್ಲಿ ಭಾನುವಾರ (ಇಂದು) ಒಂದೇ ದಿನ ಬರೋಬ್ಬರಿ 444 ಮದುವೆಗಳು ನಡೆದಿದೆ. ಇದು ದೇವಸ್ಥಾನದ ಇತಿಹಾಸದಲ್ಲೇ ಹೊಸ ದಾಖಲೆಯಾಗಿದೆ. ಇದಕ್ಕೂ ಮುನ್ನ 2024ರ ಸೆಪ್ಟೆಂಬರ್ 8 ರಂದು ಒಂದೇ ದಿನ 344 ಮದುವೆಗಳು ನಡೆದಿದ್ದು, ಇದುವರೆಗಿನ ದಾಖಲೆಯಾಗಿತ್ತು. ಆ ದಾಖಲೆ ಇಂದು ಮುರಿದಿದೆ. ಬೆಳಗ್ಗೆ 4 ಗಂಟೆಯಿಂದಲೇ ಮದುವೆ ಸಂಭ್ರಮ 444 ವಿವಾಹ ಮಹೋತ್ಸವದ ಹಿನ್ನೆಲೆ ದೇವಸ್ಥಾನದಲ್ಲಿ 6 ವಿವಾಹ ಮಂಟಪಗಳನ್ನ ಸಿದ್ಧಪಡಿಸಲಾಗಿತ್ತು. …

Read More »

ಬಿಡದಿ ಟೌನ್‌ಶಿಪ್ ವಿರುದ್ಧ ರೈತರ ಹೋರಾಟ ತೀವ್ರ – ಆ.25ರಂದು ವಿಧಾನಸೌಧ ಚಲೋಗೆ ನಿರ್ಧಾರ

ರಾಮನಗರ: ಬಿಡದಿ ಟೌನ್‌ಶಿಪ್ ಯೋಜನೆಗೆ ಭೂಮಿ ನೀಡಲು ನಿರಾಕರಿಸಿ ಕಳೆದ 530 ದಿನಗಳಿಂದ ನಿರಂತರ ಪ್ರತಿಭಟನೆ ನಡೆಸುತ್ತಿರುವ ರೈತರ ಹೋರಾಟ ಈಗ ಮತ್ತಷ್ಟು ತೀವ್ರಗೊಂಡಿದೆ. ಸರ್ಕಾರದ ಕಡೆಯಿಂದ ಸೂಕ್ತ ಸ್ಪಂದನೆ ಸಿಗದ ಹಿನ್ನೆಲೆ, ರಾಜ್ಯ ರೈತ ಸಂಘದ ನೇತೃತ್ವದಲ್ಲಿ ಬೃಹತ್ ವಿಧಾನಸೌಧ ಚಲೋ  ಹೋರಾಟಕ್ಕೆ ರೈತರು ಸಜ್ಜಾಗಿದ್ದಾರೆ. ಈ ಬಗ್ಗೆ ರೈತ ಮುಖಂಡರು ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ್ದು, ಆಗಸ್ಟ್ 25ರಂದು ಬೆಂಗಳೂರಿನ ಫ್ರೀಡಂ ಪಾರ್ಕ್‌ನಿಂದ ಸಾವಿರಾರು ರೈತರು ವಿಧಾನಸೌಧ …

Read More »

ನಾಗೇಂದ್ರ ರಾಜೀನಾಮೆಗೆ ಆಗ್ರಹಿಸಿ ನಾಳೆ ವಿಧಾನಸೌಧ ಮುತ್ತಿಗೆ: ಆರ್. ಅಶೋಕ್

ಬೆಂಗಳೂರು: ವಾಲ್ಮೀಕಿ ನಿಗಮದ ಹಣ ದುರ್ಬಳಕೆ ಪ್ರಕರಣದಲ್ಲಿ ಆರೋಪ ಎದುರಿಸುತ್ತಿರುವ ಸಚಿವ ನಾಗೇಂದ್ರ ಅವರ ರಾಜೀನಾಮೆಗೆ ಆಗ್ರಹಿಸಿ ನಾಳೆ ಬಿಜೆಪಿ ವತಿಯಿಂದ ವಿಧಾನಸೌಧ ಮುತ್ತಿಗೆ ಹಾಕಲಾಗುವುದು ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್. ಅಶೋಕ್  ತಿಳಿಸಿದ್ದಾರೆ. ಮಲ್ಲೇಶ್ವರದ ರಾಜ್ಯ ಬಿಜೆಪಿ ಕಚೇರಿ ಜಗನ್ನಾಥ ಭವನದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬೆಳಗ್ಗೆ 9:30ಕ್ಕೆ ಸ್ವಾತಂತ್ರ್ಯ ಉದ್ಯಾನದಿಂದ ಪ್ರತಿಭಟನೆ ಆರಂಭವಾಗಲಿದೆ. ಬಳಿಕ ಬಿಜೆಪಿ ಕಾರ್ಯಕರ್ತರು ವಿಧಾನಸೌಧಕ್ಕೆ ಮುತ್ತಿಗೆ ಹಾಕಲಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ …

Read More »

ಬಾಂಗ್ಲಾದೇಶದಲ್ಲಿ ನಿವೃತ್ತ ಹಿಂದೂ ಶಿಕ್ಷಕ, ಪತ್ನಿ, ಇಬ್ಬರು ಮಕ್ಕಳು ಶವವಾಗಿ ಪತ್ತೆ

ಢಾಕಾ: ಬಾಂಗ್ಲಾದೇಶದ ರಂಗ್‌ಪುರ ನಗರದಲ್ಲಿ ನಿವೃತ್ತ ಹಿಂದೂ ಶಿಕ್ಷಕರೊಬ್ಬರು , ಅವರ ಪತ್ನಿ, ಮಗಳು ಹಾಗೂ 12 ವರ್ಷದ ಪುತ್ರ ಸೇರಿದಂತೆ ಒಂದೇ ಕುಟುಂಬದ  ನಾಲ್ವರು ಮನೆಯೊಳಗೆ ಶವವಾಗಿ ಪತ್ತೆಯಾಗಿದ್ದಾರೆ. ಶನಿವಾರ ತಡರಾತ್ರಿ ಈ ಘಟನೆ ಬೆಳಕಿಗೆ ಬಂದಿದ್ದು, ಕುಟುಂಬದ ಸದಸ್ಯರನ್ನು ಕತ್ತು ಹಿಸುಕಿ ಹತ್ಯೆ ಮಾಡಿರುವ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ. ರಾತ್ರಿ ಸುಮಾರು 11:30ಕ್ಕೆ ನಾಲ್ವರ ಮೃತದೇಹಗಳನ್ನು ಪತ್ತೆಹಚ್ಚಲಾಗಿದೆ. ಮೃತರನ್ನು ರಂಗ್‌ಪುರ ಜಿಲ್ಲಾ ಶಾಲೆಯ ನಿವೃತ್ತ ಶಿಕ್ಷಕ 65 …

Read More »

ಬಿರಿಯಾನಿ ಪಾತ್ರೆಯಲ್ಲಿತ್ತು ತುಂಡರಿಸಿದ ಮಹಿಳೆಯ ದೇಹದ ಭಾಗಗಳು – ಬೆನ್ನತ್ತಿದ ಪೊಲೀಸರಿ ಸಿಕ್ಕಿದ್ದು ಚೆನ್ನೈ ‘ಹಾರರ್ ಹೌಸ್’!

ಚೆನ್ನೈ: ಆಗ್ರಾದಲ್ಲಿ ರೈಲಿನ ಕೆಂಪು ಸೂಟ್‌ಕೇಸ್‌ನಲ್ಲಿ ಮಹಿಳೆಯ ದೇಹದ ಭಾಗಗಳು ಪತ್ತೆಯಾದ ಪ್ರಕರಣದಲ್ಲಿ ತನಿಖೆ ತೀವ್ರಗೊಂಡಿದ್ದು, ಸಿಸಿಟಿವಿ ದೃಶ್ಯಗಳ ಆಧಾರದ ಮೇಲೆ ಪೊಲೀಸರು ಚೆನ್ನೈನ ಗುಡುವಂಚೇರಿ ಪ್ರದೇಶದಲ್ಲಿರುವ ಬಾಡಿಗೆ ಮನೆಯೊಂದನ್ನು ಪತ್ತೆಹಚ್ಚಿದ್ದಾರೆ. ಪ್ರಾಥಮಿಕ ತನಿಖೆಯ ಪ್ರಕಾರ, ಇದೇ ಮನೆಯಲ್ಲಿ ಮಹಿಳೆಯನ್ನ ಹತ್ಯೆ ಮಾಡಿ ದೇಹವನ್ನು ತುಂಡುಗಳಾಗಿ ಕತ್ತರಿಸಿರುವ ಸಾಧ್ಯತೆ ಇದೆ ಎಂದು ಪೊಲೀಸರು ತಿಳಿಸಿದ್ದಾರೆ. ತನಿಖೆಯ ವೇಳೆ, ಓರ್ವ ಪುರುಷ ಮತ್ತು ಮಹಿಳೆ ಕೆಂಪು ಸೂಟ್‌ಕೇಸ್‌ನ್ನು ಹೊತ್ತು ಚೆನ್ನೈ ಸೆಂಟ್ರಲ್ ರೈಲು …

Read More »