Breaking News

ಕೆ.ಆರ್‌ ಪೇಟೆ ಪುರಸಭೆಯ 18,093 ರೂ. ಗಳ ಚೆಕ್‌ ಬೌನ್ಸ್; ಆರ್ಥಿಕ ಬಿಕ್ಕಟ್ಟಿನ ಬಗ್ಗೆ ಸಾರ್ವಜನಿಕರಲ್ಲಿ ಆತಂಕ!

Spread the love

ಮಂಡ್ಯ: ರಾಜ್ಯದಲ್ಲಿ ಆರ್ಥಿಕ ಇಲಾಖೆಯಿಂದ ಸರ್ಕಾರದ ಆರ್ಥಿಕ ಸ್ಥಿತಿಗತಿಯ ಬಗ್ಗೆ ಎಚ್ಚರಿಕೆ ಗಂಟೆ ಮೊಳಗುತ್ತಿರುವ ಬೆನ್ನಲ್ಲೇ, ಮಂಡ್ಯ ಜಿಲ್ಲೆಯ ಕೆ.ಆರ್ ಪೇಟೆ ಪುರಸಭೆಯಿಂದ  ಗಂಭೀರ ಎಡವಟ್ಟೊಂದು ವರದಿಯಾಗಿದೆ. ಕೇವಲ 18,093 ರೂ. ಹಣವಿಲ್ಲದೇ ಪುರಸಭೆ ನೀಡಿದ್ದ ಚೆಕ್ ಬೌನ್ಸ್ ಆಗಿದ್ದು, ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.

ಏನಿದು ಚೆಕ್ ಬೌನ್ಸ್ ಕೇಸ್‌?
ಜ್ಞಾನಭಾರತಿ ಪ್ರಕಾಶನ ಸಂಸ್ಥೆಗೆ ನೀಡಲಾಗಿದ್ದ ಜಾಹೀರಾತು ಬಿಲ್ಲಿನ 18,093 ರೂ. ಮೌಲ್ಯದ ಚೆಕ್ ಖಾತೆಯಲ್ಲಿ ಹಣವಿಲ್ಲದ ಕಾರಣ ರಿಟರ್ನ್ ಆಗಿದೆ. ಪುರಸಭೆಯ ಖಾತೆಯಲ್ಲಿ ಹಣದ ಕೊರತೆ ಇರುವುದಾಗಿ ಬ್ಯಾಂಕ್ ತಿಳಿಸಿದ್ದು, ಚೆಕ್ ಅನ್ನು ವಾಪಸ್ ಕಳುಹಿಸಿದೆ.

ಜನರ ಆಕ್ರೋಶ
ಸರ್ಕಾರದ ಇಲಾಖೆಗಳು ಹಾಗೂ ಸ್ಥಳೀಯ ಸಂಸ್ಥೆಗಳ ಆರ್ಥಿಕ ನಿರ್ವಹಣೆ ಬಗ್ಗೆ ಸಾರ್ವಜನಿಕರು ತೀವ್ರ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಸರ್ಕಾರದ ಆಡಳಿತ ಯಂತ್ರ ಸರಾಗವಾಗಿ ಸಾಗಬೇಕಿರುವ ಸ್ಥಳೀಯ ಸಂಸ್ಥೆಗಳ ಕಚೇರಿಗಳಲ್ಲಿ ಇಂತಹ ಸಣ್ಣ ಮೊತ್ತದ ಹಣಕ್ಕೂ ಪರದಾಟ ನಡೆಸುವ ಪರಿಸ್ಥಿತಿ ನಿರ್ಮಾಣವಾಗಿರುವುದು ವಿಪರ್ಯಾಸ.

ಸರ್ಕಾರದ ಖಜಾನೆ ಮತ್ತು ಇಲಾಖೆಗಳ ಆರ್ಥಿಕ ಅಸ್ಥಿರತೆಯ ಬಗ್ಗೆ ಈಗಾಗಲೇ ಕೇಳಿಬರುತ್ತಿರುವ ವಿರೋಧ ಪಕ್ಷಗಳ ಆರೋಪಗಳಿಗೆ ಈ ಘಟನೆ ಪುಷ್ಟಿ ನೀಡಿದಂತಿದೆ. ಕೇವಲ 18 ಸಾವಿರ ರೂಪಾಯಿಗಳ ಪಾವತಿಗೂ ಖಾತೆಯಲ್ಲಿ ಹಣವಿಲ್ಲದಿರುವುದು ಸರ್ಕಾರ ಹಾಗೂ ಸರ್ಕಾರಿ ಕಚೇರಿಗಳು ನಿಜಕ್ಕೂ ದಿವಾಳಿಯಾಗಿದೆಯೆ? ಎಂಬ ಗಂಭೀರ ಪ್ರಶ್ನೆಯನ್ನು ಹುಟ್ಟುಹಾಕಿದೆ.


Spread the love

About Laxminews 24x7

Check Also

ಕಾನ್‌ಸ್ಟೆಬಲ್ ಮೇಲೆ ಗುಂಡು ಹಾರಿಸಿ ಪರಾರಿಯಾಗಿದ್ದ ಆರೋಪಿ ಎನ್‌ಕೌಂಟರ್‌ನಲ್ಲಿ ಸಾವು

Spread the loveಕೋಲ್ಕತ್ತಾ: ಪಶ್ಚಿಮ ಬಂಗಾಳದ ಬಿರ್ಭುಮ್ ಜಿಲ್ಲೆಯಲ್ಲಿ ಪೊಲೀಸ್ ಕಾನ್‌ಸ್ಟೆಬಲ್ ಮೇಲೆ ಗುಂಡು ಹಾರಿಸಿ ಪರಾರಿಯಾಗಿದ್ದ ಆರೋಪಿ, ಭಾನುವಾರ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ