ಚಿಕ್ಕಮಗಳೂರು: ಹಲವು ತಿಂಗಳುಗಳಿಂದ ನಿಲ್ಲಿಸಿದ್ದ ಎತ್ತಿನಭುಜ ಟ್ರೆಕ್ಕಿಂಗ್‌ಗೆ ರೀ ಓಪನ್ ಆಗಿದೆ. ಹಲವು ತಿಂಗಳಿಂದ ಟ್ರಕ್ಕಿಂಗ್ ಬಂದ್ ಆಗಿದ್ದರಿಂದ ಗಾಳಿ ಮಳೆಗೆ ಬಿದ್ದ ಮರಗಳು ರಸ್ತೆ ತುಂಬೆಲ್ಲ ಹಾಗೆ ಬಿದ್ದಿವೆ. ಇದರಿಂದ ಚಾರಣಕ್ಕೆ ಬಂದ ಪ್ರವಾಸಿಗರು ಪರದಾಡಿದ್ದಾರೆ.
ಆನ್‌ಲೈನ್‌ನಲ್ಲಿ ಟಿಕೆಟ್ ಬುಕ್ ಮಾಡಿಕೊಂಡು ಬಂದ ಪ್ರವಾಸಿಗರು, ಹೋಗುವ ರಸ್ತೆ ತಿಳಿಯದೆ ದಟ್ಟ ಕಾಡಿನಲ್ಲಿ ಪರದಾಡಿದ್ದಾರೆ. ಗೈಡ್‌ಗಳಿಲ್ಲದೇ ಇರುವುದರಿಂದ ಪ್ರವಾಸಿಗರು ವಾಪಸ್ ಆಗುತ್ತಿದ್ದಾರೆ. ಮೂಲಭೂತ ಸೌಕರ್ಯಗಳಿಲ್ಲದೇ ಅರಣ್ಯ ಇಲಾಖೆ ಟ್ರೆಕ್ಕಿಂಗ್ ಓಪನ್ ಮಾಡಿದ್ದಕ್ಕೆ ಪ್ರವಾಸಿಗರು ಆಕ್ರೋಶ ಹೊರಹಾಕಿದ್ದಾರೆ.
5 ಕಿ.ಮೀ.ಚಾರಣಕ್ಕೆ ಅರಣ್ಯ ಇಲಾಖೆ 300 ರೂ. ನಿಗದಿ ಮಾಡಿದೆ. ಗೈಡ್‌ಗೆ ಒಬ್ಬರಿಗೆ 75 ರೂ. ಪ್ರತ್ಯೇಕ ದರ ನಿಗದಿ ಮಾಡಲಾಗಿದೆ. ಇನ್ನೂ ಎಸ್‌ಒಪಿ ಪಾಲನೆ ಮಾಡದೆ ಗೈಡ್ ಸೇರಿದಂತೆ ಯಾವುದೇ ಸೌಕರ್ಯಗಳಿಲ್ಲದೆ ಚಾರಣ ಓಪನ್ ಮಾಡಲಾಗಿದೆ ಎಂದು ಅರಣ್ಯ ಇಲಾಖೆ ವಿರುದ್ಧ ಪ್ರವಾಸಿಗರು ಅಸಮಾಧಾನ ಹೊರಹಾಕಿದ್ದಾರೆ.
Laxmi News 24×7