ಬೆಂಗಳೂರು: ಕರ್ನಾಟಕದಲ್ಲಿ ಎಸ್‌ಐಆರ್ ಮೊದಲ ಹಂತ ಮುಕ್ತಾಯ ಆಗಿದ್ದು ಈಗ ಮತ್ತೊಂದು ಹಂತದ ಪ್ರಕ್ರಿಯೆಗೆ ಮುಂದಾಗಿದೆ. ಮ್ಯಾಪಿಂಗ್ ಆಗದೆ ಗೊಂದಲಮಯವಾಗಿರುವ ಮತದಾರರಿಗೆ ನೋಟಿಸ್ ನೀಡಲಿದ್ದಾರೆ. 43.84 ಲಕ್ಷ ಮತದಾರರಿಗೆ ನೋಟಿಸ್ ಬರಲಿದೆ. ಬೆಂಗಳೂರಿನಲ್ಲಿ ಅತಿಹೆಚ್ಚು ಅಂದರೆ 23 ಲಕ್ಷ ಮತದಾರರಿಗೆ ನೋಟಿಸ್ ಬರಲಿದೆ. ನೋಟಿಸ್ ಪಡೆದ ಮತದಾರರು ನೋಟಿಸ್‌ಗೆ ಪ್ರತಿಕ್ರಿಯೆ ನೀಡಿ ಸೂಕ್ತ ದಾಖಲೆಗಳನ್ನು ಸಲ್ಲಿಕೆ ಮಾಡಬೇಕಾಗಿದೆ. ನೋಟಿಸ್ ಪಡೆದು ಪ್ರತಿಕ್ರಿಯೆ ನೀಡುವಾಗ ನಾವು ಮತದಾರರು ಅಂತಾ ಪ್ರೂವ್ ಮಾಡಬೇಕಿದೆ. …
Read More »Monthly Archives: ಆಗಷ್ಟ್ 2026
ಹಳೆಯಂಗಡಿಯಲ್ಲಿ ಪಾಳುಬಿದ್ದ ಬಸ್ ತಂಗುದಾಣಕ್ಕೆ ‘ಮೀಡಿಯಾ ಮನಸುಗಳು’ ತಂಡದಿಂದ ಕಾಯಕಲ್ಪ
ಮಂಗಳೂರು: ಸ್ಥಳೀಯ ಆಡಳಿತ ಹಾಗೂ ಅಧಿಕಾರಿಗಳ ನಿರ್ಲಕ್ಷ್ಯದಿಂದ ಪಾಳುಬಿದ್ದಿದ್ದ ಪ್ರಮುಖ ಬಸ್ ತಂಗುದಾಣಕ್ಕೆ ‘ಮೀಡಿಯಾ ಮನಸುಗಳು’ ಸಂಘಟನೆಯ ಸದಸ್ಯರು ಸ್ವಚ್ಛತಾ ಕಾರ್ಯ ನಡೆಸಿ ಹೊಸ ಕಳೆ ತಂದಿದ್ದಾರೆ. ಶ್ರಮದಾನದ ಮೂಲಕ ಬಸ್ ತಂಗುದಾಣವನ್ನು ಸ್ವಚ್ಛಗೊಳಿಸಿ, ಪ್ರಯಾಣಿಕರ ಬಳಕೆಗೆ ಮತ್ತೆ ಯೋಗ್ಯವಾಗಿಸಿದ್ದಾರೆ. ಹಳೆಯಂಗಡಿಯ ಹೆದ್ದಾರಿ ಸರ್ವಿಸ್ ರಸ್ತೆಯಲ್ಲಿರುವ ಈ ಬಸ್ ತಂಗುದಾಣ ಕಳೆದ ಒಂದು ವರ್ಷದಿಂದ ಅವ್ಯವಸ್ಥೆಯಿಂದ ಕೂಡಿತ್ತು. ಕಟೀಲು ದೇಗುಲ ಹಾಗೂ ಕಿನ್ನಿಗೋಳಿ ಕಡೆಗೆ ನಿತ್ಯ ಸಂಚರಿಸುವ ವಿದ್ಯಾರ್ಥಿಗಳು, ಮಹಿಳೆಯರು ಸೇರಿದಂತೆ …
Read More »ಕಾಲು ಜಾರಿ ಹಳಿ ಮೇಲೆ ಬಿದ್ದ ವ್ಯಕ್ತಿ; ರೈಲು ಹರಿದು ಸ್ಥಳದಲ್ಲೇ ಸಾವು
ಹಾಸನ: ರೈಲು ಹತ್ತುವಾಗ ಕಾಲು ಜಾರಿ ವ್ಯಕ್ತಿಯೊಬ್ಬರು ಹಳಿ ಮೇಲೆ ಬಿದ್ದಿದ್ದು, ಆತನ ಮೇಲೆಯೇ ರೈಲು ಹರಿದು ಸ್ಥಳದಲ್ಲೇ ಮೃತಪಟ್ಟಿರುವ ದಾರುಣ ಘಟನೆ ಹಾಸನ ಜಿಲ್ಲೆಯ ಹೊಳೆನರಸೀಪುರ ರೈಲ್ವೆ ನಿಲ್ದಾಣದಲ್ಲಿ ನಡೆದಿದೆ. ಹೊಳೆನರಸೀಪುರ ತಾಲೂಕಿನ ಕೆ.ಮುದ್ದನಹಳ್ಳಿ ಗ್ರಾಮದ ನಾಗರಾಜು (48) ಮೃತ ವ್ಯಕ್ತಿ. ಬೆಂಗಳೂರಿಗೆ ತೆರಳಲು ನಾಗರಾಜು ಹೊಳೆನರಸೀಪುರ ರೈಲ್ವೆ ನಿಲ್ದಾಣಕ್ಕೆ ಬಂದಿದ್ದ. ಈ ವೇಳೆ ರೈಲು ಹೊರಡಲು ಆರಂಭಿಸಿದ್ದು, ನಿಧಾನವಾಗಿ ಚಲಿಸುತ್ತಿದ್ದ ರೈಲನ್ನು ಹತ್ತಲು ನಾಗರಾಜು ಪ್ರಯತ್ನಿಸಿದ್ದಾನೆ. ಆದರೆ, …
Read More »ಪಾಗಲ್ ಪ್ರೇಮಿಯಿಂದ ಟಾರ್ಚರ್ – ಕೆರೆಗೆ ಹಾರಿ ಸಾಗರದ ಯುವತಿ ಆತ್ಮಹತ್ಯೆ
ಶಿವಮೊಗ್ಗ: ಪಾಗಲ್ ಪ್ರೇಮಿಯ ಕಿರುಕುಳಕ್ಕೆ ಬೇಸತ್ತು ಸಾಗರ ತಾಲೂಕಿನ ಬೆಳಮಕ್ಕಿ ಗ್ರಾಮದ ಯುವತಿಯೊಬ್ಬಳು ಬೆಂಗಳೂರಲ್ಲಿ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ವಾಣಿ (22 )ಆತ್ಮಹತ್ಯೆಗೆ ಶರಣಾದ ಯುವತಿ. ಹೆಚ್‌ಎಸ್‌ಆರ್ ಲೇಔಟ್‌ನಲ್ಲಿರುವ ಅಗರ ಕೆರೆಗೆ ಹಾರಿ ಯುವತಿ ಆತ್ಮಹತ್ಯೆಗೆ ಶರಣಾಗಿದ್ದಾಳೆ. ಆತ್ಮಹತ್ಯೆಗೂ ಮುನ್ನ ಡೆತ್‌ನೋಟ್ ಬರೆದಿಟ್ಟಿದ್ದಾಳೆ. ಅದರಲ್ಲಿ ಕ್ಲಾಸ್‌ಮೇಟ್ ಅಭಿಷೇಕ್ ಎಂಬಾತನ ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆಗೆ ಶರಣಾಗುತ್ತಿರುವುದಾಗಿ ತಿಳಿಸಿದ್ದಾಳೆ. ಅಭಿಷೇಕ್, ಯುವತಿಗೆ ವಾಟ್ಸಪ್‌ನಲ್ಲಿ ವಿಡಿಯೋ, ಫೋಟೋಸ್ ಕಳುಹಿಸಿ ಬ್ಲಾಕ್‌ಮೇಲ್ ಮಾಡುತಿದ್ದ. ಕರೆದಾಗಲೆಲ್ಲ …
Read More »ರಾಜ್ಯದಲ್ಲಿ ಹಂದಿ ಜ್ವರ ಪ್ರಕರಣಗಳ ಸಂಖ್ಯೆ ಹೆಚ್ಚಳ – 4,125 ಕೇಸ್ ದಾಖಲು; ಆರೋಗ್ಯ ಇಲಾಖೆ ಅಲರ್ಟ್
ಬೆಂಗಳೂರು: ಡೇಂಜರ್ ಡೇಂಜರ್ H1N1 ಡೇಂಜರ್. ರಾಜ್ಯದಲ್ಲಿ H1N1 ಕೇಸ್ ಏರಿಕೆ ಆಗ್ತಿದೆ. ಈ ವರ್ಷದಲ್ಲೇ ಬರೋಬ್ಬರಿ 4,125 ಕೇಸ್ ದಾಖಲಾಗಿದೆ. ಹೆಚ್1ಎನ್1 ನಿಯಂತ್ರಣಕ್ಕೆ ಮಾರ್ಗಸೂಚಿಯನ್ನ ಆರೋಗ್ಯ ಇಲಾಖೆ ಬಿಡುಗಡೆ ಮಾಡಿದೆ. ದಿನೇ ದಿನೇ ಪ್ರಕರಣಗಳ ಸಂಖ್ಯೆ ಏರಿಕೆ ಆಗ್ತಿದ್ದು, ಜನವರಿಯಿಂದ ಆಗಸ್ಟ್ ವರೆಗೆ ಅಂದ್ರೆ 8 ತಿಂಗಳಿಗೆ 4,125 ಕೇಸ್ ದಾಖಲಾಗಿದೆ. ಇನ್ನೂ ವರ್ಷಾಂತ್ಯದ ವೇಳೆಗೆ ಎಷ್ಟು ಕೇಸ್ ದಾಖಲಾಗಬಹುದು ಅನ್ನೋದು ಆತಂಕಕ್ಕೆ ಕಾರಣವಾಗಿದೆ. ರಾಜ್ಯದ ಒಟ್ಟು ಕೇಸ್‌ಗಳಲ್ಲಿ …
Read More »ಪುತ್ತೂರಿನಲ್ಲಿ ಕಳೆದ ಕೆಲವು ತಿಂಗಳಿಂದ ತಾಲಿಬಾನ್ ಸಂಸ್ಕೃತಿ ಇದೆ: ನಳಿನ್ ಕುಮಾರ್ ಕಟೀಲ್
ಮಂಗಳೂರು: ಪುತ್ತೂರಿನಲ್ಲಿ ಕಳೆದ ಕೆಲವು ತಿಂಗಳಿಂದ ತಾಲಿಬಾನ್ ಸಂಸ್ಕೃತಿ ಇದೆ ಎಂದು ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ. ಪುತ್ತೂರಿನಲ್ಲಿ ಮಾಧ್ಯಮಗಳ ಜೊತೆ ಅವರು ಮಾತನಾಡಿದರು. ಈ ವೇಳೆ ದರ್ಬೆಯಲ್ಲಿ ನಡೆದ ಗಲಾಟೆ ವಿಚಾರವಾಗಿ, ಸಣ್ಣ ವಿಚಾರ ಮುಂದಿಟ್ಟುಕೊಂಡು ಅಂಗಡಿ ಮೇಲೆ ದಾಳಿ ಮಾಡಿದ್ದಾರೆ. ಮಹಿಳೆ ಮೇಲೆ ಹಲ್ಲೆ ಮಾಡಿರುವುದು ಖಂಡನೀಯ. ಇದು ತಾಲಿಬಾನ್ ಸಂಸ್ಕೃ=ತಿ, ತಾಲಿಬಾನ್ ಸಂಸ್ಕ್ರತಿಯ ಹೋರಾಟಗಳು ಜಾಸ್ತಿಯಾಗುತ್ತಿವೆ. ರಾಜ್ಯದಲ್ಲಿ ಕಾಂಗ್ರೆಸ್ ಆಡಳಿತ ಬಂದ ಮೇಲೆ …
Read More »ಹನುಮಾನ್ ದೇವಸ್ಥಾನದ ಪಾವಿತ್ರ್ಯತೆಗೆ ಧಕ್ಕೆ ತಂದವನ ವಿರುದ್ಧ ಪ್ರಕರಣ ದಾಖಲಿಸಿ, ಗಡಿಪಾರು ಮಾಡಬೇಕು: ಬೊಮ್ಮಾಯಿ
ಹಾವೇರಿ: ಶಿಗ್ಗಾವಿಯ ಹನುಮಾನ್ ದೇವಸ್ಥಾನದಲ್ಲಿ ಅನ್ಯಕೋಮಿನ ವ್ಯಕ್ತಿ ಪ್ರಜ್ಞಾಪೂರ್ವಕವಾಗಿ ಮೂತ್ರ ವಿಸರ್ಜನೆ ಮಾಡಿದ್ದು, ಅವನು ಕೋಮು ಗಲಭೆ ಸೃಷ್ಟಿಸುವ ಕೆಲಸ ಮಾಡಿದ್ದಾನೆ. ಪೊಲೀಸರು ಅವನ ವಿರುದ್ಧ ಗೂಂಡಾ ಕಾಯ್ದೆಯಡಿ ಪ್ರಕರಣ ದಾಖಲಿಸಿ ಜಿಲ್ಲೆಯಿಂದ ಗಡಿಪಾರು ಮಾಡಬೇಕು. ಈ ಹಿನ್ನೆಲೆಯಲ್ಲಿ ಶಿಗ್ಗಾವಿ ಬಂದ್‌ಗೆ ಎಲ್ಲ ಕೋಮಿನವರೂ ಬೆಂಬಲ ನೀಡಬೇಕೆಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಮನವಿ ಮಾಡಿದರು. ಆಗಸ್ಟ್ 21ರಂದು ಹಾವೇರಿ ಜಿಲ್ಲೆಯ ಶಿಗ್ಗಾವಿ ಪಟ್ಟಣದ ಟ್ಯಾಕ್ಸಿ ಸ್ಟ್ಯಾಂಡ್‌ನಲ್ಲಿರುವ …
Read More »ಕಾಂಗ್ರೆಸ್‌ನದ್ದು ಸೂಟ್‌ಕೇಸ್ ಬೃಂದಾವನ, ರಾಜ್ಯದ ಇತಿಹಾಸದಲ್ಲೇ ನೈಸ್ ಹಗರಣ ಬಹುದೊಡ್ಡ ಅಕ್ರಮ: ಹೆಚ್‌ಡಿಕೆ
ರಾಮನಗರ: ಮಾಡೋದೆಲ್ಲ ಅನಾಚಾರ, ಮನೆ ಮುಂದೆ ಬೃಂದಾವನ ಎಂದು ಟೀಕಿಸಿದ್ದ ಡಿ.ಕೆ. ಸುರೇಶ್ ಹಾಗೂ ಸಚಿವ ಹೆಚ್.ಸಿ. ಬಾಲಕೃಷ್ಣ ಅವರಿಗೆ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ. ‘ನಮ್ಮದು ಸಂಸ್ಕೃತಿಯ ಬೃಂದಾವನ, ಕಾಂಗ್ರೆಸ್‌ನದ್ದು ಸೂಟ್‌ಕೇಸ್ ಬೃಂದಾವನ’ ಎಂದು ವ್ಯಂಗ್ಯವಾಡಿದ್ದಾರೆ. ನೈಸ್ ರಸ್ತೆ ಟೋಲ್ ವಿಚಾರವಾಗಿ ಕಾಂಗ್ರೆಸ್ ಹಾಗೂ ಜೆಡಿಎಸ್ ನಾಯಕರ ನಡುವೆ ಮತ್ತೆ ವಾಕ್ಸಮರ ಶುರುವಾಗಿದೆ. ನೈಸ್ ರಸ್ತೆಯಲ್ಲಿ ಟೋಲ್ ಕಟ್ಟಬೇಡಿ ಎಂದು ಹೆಚ್‌ಡಿಕೆ ಹೇಳಿದ್ದ ಬೆನ್ನಲ್ಲೇ ಕಾಂಗ್ರೆಸ್ ನಾಯಕರು …
Read More »ಮಂಗಳೂರಲ್ಲಿ ಮೀನುಗಾರಿಕಾ ಬೋಟ್ ಮುಳುಗಡೆ – 6 ಮೀನುಗಾರರ ರಕ್ಷಣೆ
ಮಂಗಳೂರು: ಮೀನುಗಾರಿಕಾ ಬೋಟ್‌ನ ತಳಭಾಗ ಕಲ್ಲಿಗೆ ಬಡಿದು ಮುಳುಗಡೆಯಾದ ಘಟನೆ ಅಳಿವೆಬಾಗಿನಲ್ಲಿ ನಡೆದಿದೆ. ಆಯಾನ್ ಹೆಸರಿನ ಬೋಟ್ ಕಲ್ಲಿಗೆ ಬಡಿದಿದೆ. ಇದರಿಂದ ನೀರು ಒಳನುಗ್ಗಿ ಬೋಟ್ ಮುಳುಗಡೆಯಾಗಿದೆ. ಬೋಟ್‌ನಲ್ಲಿದ್ದ ಆರು ಮಂದಿ ಮೀನುಗಾರರನ್ನು ಇತರೆ ಬೋಟ್‌ನಲ್ಲಿದ್ದ ಮೀನುಗಾರರು ರಕ್ಷಿಸಿದ್ದಾರೆ. ಆಳ ಸಮುದ್ರ ಮೀನುಗಾರಿಕೆಗೆ ಪರ್ಸಿನ್ ಬೋಟ್ ತೆರಳಿತ್ತು. ಮೀನುಗಾರಿಕೆ ಮುಗಿಸಿ ಮುಳುತ್ತಿದ್ದಾಗ ಅಳಿವೆ ಬಾಗಿಲಿನಲ್ಲಿ ಈ ದುರಂತ ನಡೆದಿದೆ. ಇಬ್ರಾಹಿಂ ಖಲೀಲ್ ಎಂಬವರಿಗೆ ಈ ಬೋಟ್ ಸೇರಿದ್ದು, ಮುಳುಗಡೆಯಿಂದಾಗಿ ಲಕ್ಷಾಂತರ ರೂ. …
Read More »ಕೋರಮಂಗಲದಲ್ಲಿ ನಡುರಸ್ತೆಯಲ್ಲೇ ಹೊತ್ತಿ ಉರಿದ ಕಾರು
ಬೆಂಗಳೂರು: ನಗರದ ಕೋರಮಂಗಲ ವಾಟರ್ ಟ್ಯಾಂಕ್ ಜಂಕ್ಷನ್ ಬಳಿ ಚಲಿಸುತ್ತಿದ್ದ ಕಾರಿನಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡು, ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಅದೃಷ್ಟವಶಾತ್ ಕಾರಿನಲ್ಲಿದ್ದ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ರಾತ್ರಿ ಸುಮಾರು 11:30ರ ವೇಳೆಗೆ ಘಟನೆ ನಡೆದಿದೆ. ಕಾರು ರಸ್ತೆಯಲ್ಲಿ ಚಲಿಸುತ್ತಿದ್ದ ವೇಳೆ ಇಂಜಿನ್ ಭಾಗದಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡಿದೆ. ಕೆಲವೇ ಕ್ಷಣಗಳಲ್ಲಿ ಬೆಂಕಿ ಇಡೀ ಕಾರಿಗೆ ವ್ಯಾಪಿಸಿದ್ದು, ವಾಹನ ಸಂಪೂರ್ಣವಾಗಿ ಸುಟ್ಟು ಕರಕಲಾಗಿದೆ. ಕಾರಿನಲ್ಲಿ ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆ ಒಳಗಿದ್ದವರು …
Read More »
Laxmi News 24×7