ರಾಯಚೂರು: ಜಿಲ್ಲೆಯ ಲಿಂಗಸುಗೂರಿನ ಆರ್‌ಡಿಪಿಆರ್ ಕಚೇರಿಯಲ್ಲಿ ಗುಂಡು ತುಂಡು ಪಾರ್ಟಿ ಮಾಡಿದ್ದ ಅಧಿಕಾರಿಗಳು ಹಾಗೂ ಸಿಬ್ಬಂದಿ ವಿರುದ್ಧ ಕ್ರಮ ಕೈಗೊಂಡು, ಎಇಇ ಸೇರಿ ಮೂವರನ್ನ ಅಮಾನತು ಮಾಡಲಾಗಿದೆ. ಪಂಚಾಯತ್ ರಾಜ್ ಇಂಜಿನಿಯರಿಂಗ್ ಉಪವಿಭಾಗದ ಎಇಇ ಕಚೇರಿಯಲ್ಲಿ ಆರ್‌ಡಿಪಿಆರ್ ಎಇಇ ಹನುಮಪ್ಪ ಆದವಾನಿ, ಎಫ್‌ಡಿಎ ರಾಮಣ್ಣ ಪೂಜಾರಿ ಹಾಗೂ ಕಾವಲುಗಾರ ಹನುಮಂತ ಮೂವರು ಗುಂಡು, ತುಂಡು ಪಾರ್ಟಿ ನಡೆಸಿದ್ದರು. ಇದೀಗ ಮೂವರು ಸರ್ಕಾರಿ ಕಚೇರಿಯನ್ನು ವೈಯಕ್ತಿಕ ಉದ್ದೇಶಕ್ಕೆ ಬಳಕೆ ಮಾಡಿಕೊಂಡು ಕರ್ತವ್ಯಲೋಪ …
Read More »Monthly Archives: ಮೇ 2026
ಯಾವ ಪುರುಷಾರ್ಥಕ್ಕೆ ಮತ್ತೊಂದು ಸ್ಟೇಡಿಯಂ? ಯಾವ ಆಟಗಾರ ಕೇಳಿದ್ರು? – ಆರ್.ಅಶೋಕ್ ಕಿಡಿ
ಬೆಂಗಳೂರು: ಯಾವ ಆಟಗಾರ ಸ್ಟೇಡಿಯಂ ಕೇಳಿದ್ದರು ಅಂತ ಬೆಂಗಳೂರಲ್ಲಿ ಸ್ಟೇಡಿಯಂ ಮಾಡುತ್ತಿದ್ದೀರಿ? ಯಾವ ಪುರುಷಾರ್ಥಕ್ಕೆ ಆನೇಕಲ್‌ನಲ್ಲಿ ಮತ್ತೊಂದು ಸ್ಟೇಡಿಯಂ ಮಾಡುತ್ತಿದ್ದೀರಿ? ಕಮಿಷನ್‌ಗಾಗಿ ದುಡ್ಡು ಹೊಡೆಯಲು ಮಾಡುತ್ತಿರುವ ಸ್ಟೇಡಿಯಂ ಇದು ಎಂದು ವಿಪಕ್ಷ ನಾಯಕ ಆರ್.ಅಶೋಕ್ ವಾಗ್ದಾಳಿ ನಡೆಸಿದ್ದಾರೆ. ರಾಜ್ಯ ಸರ್ಕಾರ ಆನೇಕಲ್ ಬಳಿ ಸ್ಟೇಡಿಯಂ ನಿರ್ಮಾಣಕ್ಕೆ ಶಂಕು ಸ್ಥಾಪನೆ ಮಾಡಿರುವ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿ ಸರ್ಕಾರವನ್ನು ತೀವ್ರವಾಗಿ ಟೀಕಿಸಿದ್ದಾರೆ. ಸರ್ಕಾರ ಕೋಟಿ-ಕೋಟಿ ಹಣ ಬರುವ ಯೋಜನೆಗಳನ್ನು ಮಾಡಲು ಮುಂದಾಗುತ್ತಿದೆ. ನಾನು …
Read More »ಹಗಲು ರಾತ್ರಿ ಎನ್ನದೇ ಅಕ್ರಮವಾಗಿ ಮಣ್ಣು ಸಾಗಾಟ – ಇಡೀ ಗ್ರಾಮವೇ ಧೂಳುಮಯ!
ದಾವಣಗೆರೆ: ಹೊನ್ನಾಳಿ ತಾಲೂಕಿನ ಕುಂಬಳೂರು ಗ್ರಾಮದಲ್ಲಿ ಜನರು ಮನೆಲೀ ನೆಮ್ಮದಿಯಿಂದ ಊಟ ಮಾಡೋದಿರಲಿ, ನೆಮ್ಮದಿಯಿಂದ ಮಲಗೋಕೂ ಆಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಮನೆಯಲ್ಲಿ ಎಲ್ಲೆ ಮುಟ್ಟಿದರೂ ಧೂಳು ಅಂಟಿಕೊಳ್ಳುತ್ತಿದ್ದು, ಈ ಧೂಳು ಗ್ರಾಮಸ್ಥರ ನೆಮ್ಮದಿ ಹಾಳು ಮಾಡಿದೆ. ಹಗಲು ರಾತ್ರಿ ಎನ್ನದೇ ಗ್ರಾಮದಲ್ಲಿ ಅಕ್ರಮವಾಗಿ ಮಣ್ಣು ಸಾಗಾಟ ಮಾಡಲಾಗುತ್ತಿದೆ. ಇದಕ್ಕಾಗಿ ನಿರಂತರವಾಗಿ ಟ್ರ್ಯಾಕ್ಟರ್‌ಗಳು ಓಡಾಡುತ್ತಿದ್ದು, ಶಬ್ದದ ಜೊತೆಗೆ ಧೂಳಿನಿಂದಾಗಿ ಗ್ರಾಮಸ್ಥರು ಬೇಸತ್ತು ಹೋಗಿದ್ದಾರೆ. ಇದರಿಂದ ಗ್ರಾಮಸ್ಥರು ಅಧಿಕಾರಿಗಳಿಗೆ ಹಿಡಿಶಾಪ ಹಾಕುತ್ತಿದ್ದಾರೆ. ವಿಶಾಲವಾಗಿ …
Read More »ವಾಹನ ಸವಾರರಿಗೆ ಮತ್ತೆ ಶಾಕ್; ಪೆಟ್ರೋಲ್ 87, ಡೀಸೆಲ್ 91 ಪೈಸೆ ಏರಿಕೆ
ನವದೆಹಲಿ: ವಾಹನ ಸವಾರರಿಗೆ ಮತ್ತೆ ಶಾಕ್ ಎದುರಾಗಿದೆ. 10 ದಿನಗಳಲ್ಲಿ ಮೂರನೇ ಬಾರಿಗೆ ಪೆಟ್ರೋಲ್, ಡೀಸೆಲ್ ದರ (Petrol-Diesel Price Hike) ಏರಿಕೆ ಮಾಡಲಾಗಿದೆ. ಶನಿವಾರ ಪೆಟ್ರೋಲ್ 87 ಪೈಸೆ ಮತ್ತು ಡೀಸೆಲ್ 91 ಪೈಸೆ ಏರಿಕೆಯಾಗಿದೆ. ಬೆಂಗಳೂರಿನಲ್ಲಿ ಪೆಟ್ರೋಲ್ ಬೆಲೆ 107.14 ರೂ. ಹಾಗೂ ಡೀಸೆಲ್ ಬೆಲೆ 95.04 ರೂ. ಆಗಿದೆ. ಪೆಟ್ರೋಲ್ ಬೆಲೆ ಈಗ ಲೀಟರ್‌ಗೆ 99.51 ರೂ., ಡೀಸೆಲ್ ಬೆಲೆ ಲೀಟರ್‌ಗೆ 92.49 ರೂ. ಆಗಿದೆ. …
Read More »ಮಳೆಗಾಲ ಎದುರಿಸಲು ಸರ್ವ ಸನ್ನದ್ಧರಾಗಿ, ಅಧಿಕಾರಿಗಳಿಗೆ ಡಿಸಿ ಡಾ.ಆನಂದ ಕೆ ಖಡಕ್ ಸೂಚನೆ
ವಿಜಯಪುರ: ಮುಂಗಾರು ಆರಂಭಗೊಳ್ಳುತ್ತಿದ್ದು ಈಗಿನಿಂದಲೇ ಅಗತ್ಯ ಸಿದ್ಧತೆ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಡಾ.ಆನಂದ ಕೆ ಅಧಿಕಾರಿಗಳಿಗೆ ಸೂಚಿಸಿದರು. ನಗರದ ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ವಿಡಿಯೋ ಸಂವಾದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಸಂಭವನೀಯ ಪ್ರಕೃತಿ ವಿಕೋಪ ಹಾಗೂ ಪ್ರವಾಹ ಪರಿಸ್ಥಿತಿಯನ್ನು ಸಮರ್ಥವಾಗಿ ಎದುರಿಸಲು ಜಿಲ್ಲಾಡಳಿತ ಸರ್ವಸನ್ನದ್ಧವಾಗಿದ್ದು, ಪ್ರವಾಹದಲ್ಲಿ ಜನ-ಜಾನುವಾರು ಹಾನಿಯಾಗದಂತೆ ನೋಡಿಕೊಳ್ಳುವುದು ಪ್ರತಿಯೊಬ್ಬ ಅಧಿಕಾರಿಯ ಪ್ರಥಮ ಆದ್ಯತೆಯಾಗಿದೆ ಎಂದರು. ತಾಲೂಕು ಹಂತದಲ್ಲಿ ಸಂಭವಿಸುವ ಪ್ರಕೃತಿ …
Read More »ಪಾಲಿಕೆ ವಿಚಾರ ಬಳಸಿಕೊಂಡು ಕಾಂಗ್ರೆಸ್ ಸುಳ್ಳು ಆರೋಪ ಮಾಡುತ್ತಿರುವುದು ಖಂಡನೀಯ
ಧಾರವಾಡ: ಪ್ರತ್ಯೇಕ ಪಾಲಿಕೆ ವಿಚಾರವನ್ನು ರಾಜಕೀಯ ಅಸ್ತ್ರವನ್ನಾಗಿ ಬಳಸಿಕೊಂಡು ಬಿಜೆಪಿ ವಿರುದ್ಧ ಕಾಂಗ್ರೆಸ್ ಸುಳ್ಳು ಆರೋಪ ಮಾಡುತ್ತಿರುವುದು ಖಂಡನೀಯ ಎಂದು ವಿಧಾನಸಭೆ ಪ್ರತಿಪಕ್ಷ ಉಪನಾಯಕ ಮತ್ತು ಶಾಸಕ ಅರವಿಂದ ಬೆಲ್ಲದ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಧಾರವಾಡ ಭಾಗದ ಅಭಿವೃದ್ಧಿ ಕುಂಠಿತವಾಗಿರುವುದನ್ನು ಮನಗಂಡು, ಈ ಹಿಂದೆ ಬಿಜೆಪಿಯೇ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹಾಗೂ ಸ್ಥಳಿಯ ಶಾಸಕರ ನೇತೃತ್ವದಲ್ಲಿ ಧಾರವಾಡಕ್ಕೆ ಪ್ರತ್ಯೇಕ ಪಾಲಿಕೆ ರಚಿಸಬೇಕೆಂಬ ನಿರ್ಧಾರ ಕೈಗೊಂಡಿತ್ತು. ಬದಲಾದ …
Read More »ಧಾರವಾಡ ಪ್ರತ್ಯೇಕ ಪಾಲಿಕೆಗಾಗಿ ಪ್ರತಿಭಟನಾ ಮೆರವಣಿಗೆ
ಧಾರವಾಡ: ಪ್ರತ್ಯೇಕ ಮಹಾನಗರ ಪಾಲಿಕೆ ಹೋರಾಟ ವೇದಿಕೆ ಹಾಗೂ ದೀಪಕ ಚಿಂಚೋರೆ ಅಭಿಮಾನಿ ಬಳಗದ ವತಿಯಿಂದ ಕಾಂಗ್ರೆಸ್ ಮುಖಂಡ ದೀಪಕ ಚಿಂಚೋರೆ ನೇತೃತ್ವದಲ್ಲಿ ನಗರದಲ್ಲಿ ಶುಕ್ರವಾರ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು. ಒಂದೆಡೆ ಪ್ರತ್ಯೇಕ ಮಹಾನಗರ ಪಾಲಿಕೆಗಾಗಿ 15ರಿಂದ ಸತ್ಯಪ್ರತಿಪಾದನಾ ಸತ್ಯಾಗ್ರಹ ನಡೆಸುತ್ತಿದೆ. ಮತ್ತೊಂದೆಡೆ ಮೇ 22ರಂದು ತಮ್ಮ ಜನ್ಮದಿನ ಆಚರಿಸಿಕೊಳ್ಳದಿರುವ ದೀಪಕ ಚಿಂಚೋರೆ ನಿರ್ಧರಿಸಿದ್ದರು. ಕಾರ್ಯಕರ್ತರು, ಬೆಂಬಲಿಗರು ಪ್ರತ್ಯೇಕ ಪಾಲಿಕೆ ಹೋರಾಟದಲ್ಲಿ ಭಾಗವಹಿಸಲು ಕರೆ ನೀಡಿದ್ದರು. ಅವರ ಕೋರಿಕೆಯಂತೆ ಸಾವಿರಾರು ಜನ …
Read More »ಮೂಡಲಗಿಯಲ್ಲಿ ಕೃಷಿ ಕಚೇರಿ ಸ್ಥಾಪಿಸಿ
ಮೂಡಲಗಿ: ಸ್ಥಳೀಯವಾಗಿ ಭೂಮಾಪನ ಹಾಗೂ ಕೃಷಿ ಇಲಾಖೆ ಕಚೇರಿ ಸ್ಥಾಪಿಸಬೇಕೆಂದು ಆಗ್ರಹಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಪಟ್ಟಣದಲ್ಲಿ ತಹಸೀಲ್ದಾರ್ ಶ್ರೀಶೈಲ ಗುಡಮೆಗೆ ಬುಧವಾರ ಮನವಿ ಸಲ್ಲಿಸಲಾಯಿತು. ಸಂಘಟನೆ ಜಿಲ್ಲಾಧ್ಯಕ್ಷ ಕಲ್ಮೇಶ ಗೋಕಾಕ ಮಾತನಾಡಿ, ಮೂಡಲಗಿ ತಾಲೂಕು ಕೇಂದ್ರವಾಗಿ 9 ವರ್ಷ ಕಳೆದರೂ ಪಟ್ಟಣದಲ್ಲಿ ಈವರೆಗೆ ಭೂಮಾಪನ ಹಾಗೂ ಕೃಷಿ ಇಲಾಖೆ ಕಚೇರಿ ಸ್ಥಾಪಿಸಿಲ್ಲ. ಇದರಿಂದ ಸಾರ್ವಜನಿಕರು ಹಾಗೂ ರೈತರು ಪರದಾಡುತ್ತಿದ್ದು, ಕೂಡಲೇ ಎರಡೂ ಕಚೇರಿ ಸ್ಥಾಪಿಸಬೇಕು …
Read More »ನೂತನವಾಗಿ ಸ್ಥಾಪನೆಗೊಂಡ ಭೈರವ್ ಬಟಾಲಿಯನ್ ಭಾರತೀಯ ಸೇನೆಗೆ ಸೇರ್ಪಡೆ
ಬೆಳಗಾವಿ: ಇಲ್ಲಿನ ಮರಾಠ ಲಘು ಪದಾತಿದಳ (ಎಂಎಲ್‌ಐಆರ್‌ಸಿ) ಕೇಂದ್ರದಲ್ಲಿ ನೂತನವಾಗಿ ಆರಂಭಿಸಲಾದ 16ನೇ ಭೈರವ್ ಬೆಟಾಲಿಯನ್ ತರಬೇತಿ ಪೂರ್ಣಗೊಂಡಿದ್ದು, ಶನಿವಾರ ನಡೆದ ಸಮಾರಂಭದಲ್ಲಿ ನೂತನ ಪಡೆಯನ್ನು ಸ್ಥಾಪನಾ ಸಮಾರಂಭದ ಮೂಲಕ ಭಾರತೀಯ ಸೇನೆಗೆ ಸೇರಿಸಲಾಯಿತು. ಅತ್ಯುನ್ನತ ಮಟ್ಟದ ತರಬೇತಿ ಪಡೆದ ಆಯ್ದ ಯೋಧರನ್ನು ಈ ಪಡೆಯಲ್ಲಿ ಸೇರಿಸಲಾಗಿದ್ದು, ಶನಿವಾರ ಎಂಎಲ್‌ಐಆರ್‌ಸಿ ಕಮಾಂಡೆಂಟ್ ಬ್ರಿಗೇಡಿಯರ್ ಜಾಯ್‌ದೀಪ್ ಮುಖರ್ಜಿ, ನೂತನ ಪಡೆಯ ಧ್ವಜವನ್ನು ಆಫೀಸರ್ ಕಮಾಂಡಿಂಗ್‌ಗೆ ಹಸ್ತಾಂತರಿಸಿದರು. ಇಂದಿನ ಸಂಕೀರ್ಣ ಭದ್ರತಾ ಸನ್ನಿವೇಶಗಳಲ್ಲಿ ಕಾರ್ಯಾಚರಣೆ …
Read More »ಹುಕ್ಕೇರಿ ಸಮಗ್ರ ನೀರಾವರಿ ಹೋರಾಟಕ್ಕೆ ನಾನು ಬೆಂಬಲಿಸುತ್ತೇನೆ
ಹುಕ್ಕೇರಿ: ಐದು ದಶಕಗಳಿಂದ ಕತ್ತಿ ಮನೆತನಕ್ಕೆ ಹುಕ್ಕೇರಿ ತಾಲೂಕಿನ ಜನರು ಆಶೀರ್ವದಿಸಿ ಜನಪ್ರತಿನಿಧಿಗಳಾಗಿ ಆಯ್ಕೆ ಮಾಡಿದ್ದಾರೆ. ಅವರ ಸಮಸ್ಯೆಗೆ ಸ್ಪಂದಿಸುವುದೇ ನಮ್ಮ ಆದ್ಯತೆ. ತಾಲೂಕಿನ ಸಮಗ್ರ ನೀರಾವರಿ ಹೋರಾಟಕ್ಕೆ ನಾನು ಬೆಂಬಲಿಸುತ್ತೇನೆ ಎಂದು ಶಾಸಕ ನಿಖಿಲ ಕತ್ತಿ ಹೇಳಿದರು. ಸ್ಥಳೀಯ ಬಸವೇಶ್ವರ ವೃತ್ತದಲ್ಲಿ ಹುಕ್ಕೇರಿ ತಾಲೂಕು ಸಮಗ್ರ ನೀರಾವರಿಗೆ ಒತ್ತಾಯಿಸಿ ರೈತ ಸಂಘಟನೆಗಳು ನಡೆಸುತ್ತಿರುವ ಬೃಹತ್ ಪ್ರತಿಭಟನೆಯಲ್ಲಿ ಗುರುವಾರ ಪಾಲ್ಗೊಂಡು ಮಾತನಾಡಿದ ಅವರು, ತಾಲೂಕಿನ ಕಣಗಲಾ ಮತ್ತು ಅಮ್ಮಣಗಿ ಭಾಗದಲ್ಲಿ ನೀರಾವರಿ …
Read More »
Laxmi News 24×7