Breaking News

ವಾಹನ ಸವಾರರಿಗೆ ಮತ್ತೆ ಶಾಕ್; ಪೆಟ್ರೋಲ್ 87, ಡೀಸೆಲ್ 91 ಪೈಸೆ ಏರಿಕೆ

Spread the love

ನವದೆಹಲಿ: ವಾಹನ ಸವಾರರಿಗೆ ಮತ್ತೆ ಶಾಕ್ ಎದುರಾಗಿದೆ. 10 ದಿನಗಳಲ್ಲಿ ಮೂರನೇ ಬಾರಿಗೆ ಪೆಟ್ರೋಲ್, ಡೀಸೆಲ್ ದರ (Petrol-Diesel Price Hike) ಏರಿಕೆ ಮಾಡಲಾಗಿದೆ. ಶನಿವಾರ ಪೆಟ್ರೋಲ್ 87 ಪೈಸೆ ಮತ್ತು ಡೀಸೆಲ್ 91 ಪೈಸೆ ಏರಿಕೆಯಾಗಿದೆ. ಬೆಂಗಳೂರಿನಲ್ಲಿ ಪೆಟ್ರೋಲ್ ಬೆಲೆ 107.14 ರೂ. ಹಾಗೂ ಡೀಸೆಲ್ ಬೆಲೆ 95.04 ರೂ. ಆಗಿದೆ.

ಪೆಟ್ರೋಲ್ ಬೆಲೆ ಈಗ ಲೀಟರ್‌ಗೆ 99.51 ರೂ., ಡೀಸೆಲ್ ಬೆಲೆ ಲೀಟರ್‌ಗೆ 92.49 ರೂ. ಆಗಿದೆ. ಮಧ್ಯಪ್ರಾಚ್ಯ ಸಂಘರ್ಷದಿಂದಾಗಿ ಜಾಗತಿಕ ಮಟ್ಟದಲ್ಲಿ ತೈಲ ಬೆಲೆ ಏರಿಕೆಯಾಗಿದೆ. ಈ ಹಿನ್ನೆಲೆ ಮೇ 15 ರಿಂದ ಈಚೆಗೆ ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು ದರವನ್ನು ಹೆಚ್ಚಿಸಿವೆ.

ಮೇ 15 ರಂದು ಬೆಲೆಗಳನ್ನು ಲೀಟರ್‌ಗೆ 3 ರೂ. ಹೆಚ್ಚಿಸಲಾಯಿತು. ನಂತರ ಮೇ 19 ರಂದು 90 ಪೈಸೆ ಹೆಚ್ಚಳವಾಯಿತು. ಒಟ್ಟಾರೆಯಾಗಿ, ದರಗಳು ಲೀಟರ್‌ಗೆ ಸುಮಾರು 5 ರೂ.ಗಳಷ್ಟು ಹೆಚ್ಚಾಗಿದೆ.

ಎಲ್ಲೆಲ್ಲಿ ದರ ಎಷ್ಟು?
ಪೆಟ್ರೋಲ್‌
ದೆಹಲಿ: 99.51 (+0.87)
ಕೋಲ್ಕತ್ತಾ: 110.64 (+0.94)
ಮುಂಬೈ: 108.49 (+0.90)
ಚೆನ್ನೈ: 105.31 (+0.82)

ಡೀಸೆಲ್

ದೆಹಲಿ: 92.49 (+0.91)
ಕೋಲ್ಕತ್ತಾ: 97.02 (+0.95)
ಮುಂಬೈ: 95.02 (+0.94)
ಚೆನ್ನೈ: 96.98 (+0.87)


Spread the love

About Laxminews 24x7

Check Also

3 ಲಕ್ಷದವರೆಗೆ ಆದಾಯ ಮಿತಿ ಹೆಚ್ಚಳ – ಸಿಎಂ ಜೊತೆ ಚರ್ಚಿಸಿ ತೀರ್ಮಾನ ಎಂದ ಸಚಿವ ಮುನಿಯಪ್ಪ

Spread the loveಬೆಂಗಳೂರು: ಬಿಪಿಎಲ್  ಕಾರ್ಡ್‌ಗೆ ನಿಗದಿಪಡಿಸಿರುವ ವಾರ್ಷಿಕ ಆದಾಯ ಮಿತಿಯನ್ನು 3 ಲಕ್ಷ ರೂ.ವರೆಗೆ ಹೆಚ್ಚಿಸುವ ಬಗ್ಗೆ ಸರ್ಕಾರದಲ್ಲಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ