Breaking News

ನೂತನವಾಗಿ ಸ್ಥಾಪನೆಗೊಂಡ ಭೈರವ್ ಬಟಾಲಿಯನ್‌ ಭಾರತೀಯ ಸೇನೆಗೆ ಸೇರ್ಪಡೆ

Spread the love

ಬೆಳಗಾವಿ: ಇಲ್ಲಿನ ಮರಾಠ ಲಘು ಪದಾತಿದಳ (ಎಂಎಲ್‌ಐಆರ್‌ಸಿ) ಕೇಂದ್ರದಲ್ಲಿ ನೂತನವಾಗಿ ಆರಂಭಿಸಲಾದ 16ನೇ ಭೈರವ್ ಬೆಟಾಲಿಯನ್ ತರಬೇತಿ ಪೂರ್ಣಗೊಂಡಿದ್ದು, ಶನಿವಾರ ನಡೆದ ಸಮಾರಂಭದಲ್ಲಿ ನೂತನ ಪಡೆಯನ್ನು ಸ್ಥಾಪನಾ ಸಮಾರಂಭದ ಮೂಲಕ ಭಾರತೀಯ ಸೇನೆಗೆ ಸೇರಿಸಲಾಯಿತು.
ಅತ್ಯುನ್ನತ ಮಟ್ಟದ ತರಬೇತಿ ಪಡೆದ ಆಯ್ದ ಯೋಧರನ್ನು ಈ ಪಡೆಯಲ್ಲಿ ಸೇರಿಸಲಾಗಿದ್ದು, ಶನಿವಾರ ಎಂಎಲ್‌ಐಆರ್‌ಸಿ ಕಮಾಂಡೆಂಟ್ ಬ್ರಿಗೇಡಿಯರ್ ಜಾಯ್‌ದೀಪ್ ಮುಖರ್ಜಿ, ನೂತನ ಪಡೆಯ ಧ್ವಜವನ್ನು ಆಫೀಸರ್ ಕಮಾಂಡಿಂಗ್‌ಗೆ ಹಸ್ತಾಂತರಿಸಿದರು.
ಇಂದಿನ ಸಂಕೀರ್ಣ ಭದ್ರತಾ ಸನ್ನಿವೇಶಗಳಲ್ಲಿ ಕಾರ್ಯಾಚರಣೆ ಸಾಮರ್ಥ್ಯ ಚುರುಕುಗೊಳಿಸಲು ಭಾರತೀಯ ಸೇನೆಗೆ ಒಂದು ಬಲವಾಗಿ ನಿಲ್ಲುವ ಈ ಬಟಾಲಿಯನ್ ವಿಶೇಷ ಕಾಲಾಳುಪಡೆಯಾಗಿದ್ದು, ಹೆಚ್ಚಿನ ಚಲನಶೀಲತೆಯ ಕಾರ್ಯಾಚರಣೆ, ಹೊಂದಾಣಿಕೆ ಕೌಶಲಗಳು ಮತ್ತು ವಿಶೇಷವಾಗಿ ಕಡಿದಾದ ಪರ್ವತ ಪ್ರದೇಶಗಳು ಹಾಗೂ ಬಂಡಾಯ ವಿರೋಧಿ, ಭಯೋತ್ಪಾದನಾ ವಿರೋಧಿ ಪರಿಸರದಲ್ಲಿ ನಿಖರ ದಾಳಿ ನಡೆಸುವಲ್ಲಿ ಪ್ರಾವೀಣ್ಯ ಹೊಂದಿದೆ.

Spread the love

About Laxminews 24x7

Check Also

ಧುಮ್ಮಿಕ್ಕುತ್ತಿರುವ ʻಜೋಗದ ಸಿರಿʼಯನ್ನು ಕಣ್ತುಂಬಿಕೊಂಡ ಸಾವಿರಾರು ಪ್ರವಾಸಿಗರು

Spread the loveಶಿವಮೊಗ್ಗ: ಶರಾವತಿ ಕಣಿವೆ ಪ್ರದೇಶದಲ್ಲಿ ಉತ್ತಮ ಮಳೆಯಾಗುತ್ತಿದೆ. ಈ ಹಿನ್ನೆಲೆ ಶರಾವತಿ ನದಿಗೆ ಭಾರೀ ಪ್ರಮಾಣದ ನೀರು ಹರಿದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ