ಮಂಗಳೂರು: ಇಲ್ಲಿನ ವಿಮಾನ ನಿಲ್ದಾಣಕ್ಕೆ ಬಂದಿದ್ದ ಎರಡು ವಿಮಾನಗಳು ಹವಾಮಾನ ವೈಪರಿತ್ಯದಿಂದಾಗಿ ಅರ್ಧಗಂಟೆ ಕಾಲ ಆಕಾಶದಲ್ಲೇ ಸುತ್ತಾಡಿ, ತಡವಾಗಿ ಲ್ಯಾಂಡ್ ಆಗಿವೆ. ದಕ್ಷಿಣ ಕನ್ನಡ ಜಿಲ್ಲೆಯ ಹಲವೆಡೆ ಮಳೆಯಾಗುತ್ತಿದೆ. ಏರ್‌ಪೋರ್ಟ್ ಬಳಿಯೂ ಮಳೆಯಾಗುತ್ತಿದ್ದು, ವಿಮಾನಗಳು ಲ್ಯಾಂಡ್ ಆಗಲು ಸಾಧ್ಯವಾಗದೆ ಆಕಾಶದಲ್ಲೇ ಸುತ್ತಾಡಿವೆ. ವಿಟ್ಲದ ಬಳಿ ಭಾರೀ ಕೆಲ ಭಾಗದಲ್ಲೇ ವಿಮಾನಗಳು ಸುತ್ತಾಡಿವೆ. ಅರ್ಧಗಂಟೆ ಬಳಿಕ ಎರಡೂ ವಿಮಾನಗಳು ಲ್ಯಾಂಡ್ ಆಗಿವೆ. ತೀರ ಕೆಳಭಾಗದಲ್ಲೇ ವಿಮಾನಗಳು ಹಾರಾಟ ನಡೆಸಿದ್ದರಿಂದ ವಿಟ್ಲದ ಜನರು …
Read More »Daily Archives: ಮೇ 15, 2026
ಸಾವಿರಾರು ಸರ್ಕಾರಿ ಶಾಲೆಗಳ ವಿಲೀನಕ್ಕೆ ಮುಂದಾದ ರಾಜ್ಯ ಸರ್ಕಾರ – ವಿದ್ಯಾರ್ಥಿಗಳು, ಪೋಷಕರ ವಿರೋಧ
ಚಿಕ್ಕಬಳ್ಳಾಪುರ: ಕೆಪಿಎಸ್ ಮ್ಯಾಗ್ನೇಟ್ ಯೋಜನೆಯಡಿ ರಾಜ್ಯದಲ್ಲಿ ಸಾವಿರಾರು ಸರ್ಕಾರಿ ಶಾಲೆಗಳನ್ನ ವಿಲೀನಗೊಳಿಸುತ್ತಿರುವ ರಾಜ್ಯದ ಸರ್ಕಾರ ಕ್ರಮ ಖಂಡಿಸಿ ಎಐಡಿಎಸ್‌ಓ ಹೋರಾಟಕ್ಕೆ ಮುಂದಾಗಿದೆ. ಇದರ ಜೊತೆಗೆ ಪಿಎಂ ಶ್ರೀ ಶಾಲೆಗಳಿಗೂ ಸಹ ಸುತ್ತ ಮತ್ತಲಿನ ಶಾಲೆಗಳ ವಿಲೀನಗೊಳಿಸಲಾಗುತ್ತಿದೆ. ಕೆಲ ಪಿಯು ಕಾಲೇಜುಗಳ ವಿಲೀನ ಪ್ರಕ್ರಿಯೆಗೆ ಮುಂದಾಗಿದೆಯಂತೆ. ಹೀಗಾಗಿ ಯಾವುದೇ ಕಾರಣಕ್ಕೂ ಸರ್ಕಾರಿ ಶಾಲೆಗಳನ್ನ ಮುಚ್ಚುವ ವಿಲೀನಗೊಳಿಸುವ ಪ್ರಕ್ರಿಯೆ ಮಾಡಬಾರದು ಎಂದು ಎಐಡಿಎಸ್‌ಈ ಆಗ್ರಹಿಸಿದೆ. ಅಂದಹಾಗೆ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲೂ ನೂರಾರು ಶಾಲೆಗಳ ವಿಲೀನ …
Read More »ದರ್ಶನ್‌ಗೆ ಶುಕ್ರವಾರ ಬಿಗ್ ಡೇ – ಜಾಮೀನು ರದ್ದುಗೊಳಿಸಿದ್ದ ನ್ಯಾ. ಪರ್ದಿವಾಲಾ ಪೀಠದಲ್ಲೇ ಮತ್ತೆ ಅರ್ಜಿ ವಿಚಾರಣೆ
ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಕೇಸಲ್ಲಿ ನಟ ದರ್ಶನ್ ಜೈಲು ಸೇರಿ 8 ತಿಂಗಳಾಗುತ್ತಾ ಬಂದಿದೆ. ಬೆಂಗಳೂರಿನ (Bengaluru) ಪರಪ್ಪನ ಅಗ್ರಹಾರದ ಸೆಂಟ್ರಲ್ ಜೈಲಿನ ಅವ್ಯವಸ್ಥೆ, ಚಿತ್ರಹಿಂಸೆ ಹಾಗೂ ಪ್ರಕರಣದ ತನಿಖೆ ವಿಳಂಬ ಪ್ರಶ್ನಿಸಿ, ದರ್ಶನ್ (Darshan) ಸಲ್ಲಿಸಿರುವ ಜಾಮೀನು ಅರ್ಜಿಯ ವಿಚಾರಣೆ ಶುಕ್ರವಾರ (ಮೇ 15) ಸುಪ್ರೀಂ ಕೋರ್ಟ್‌ನಲ್ಲಿ ನಡೆಯಲಿದೆ. ಈ ಹಿಂದೆ, ಜಾಮೀನು ರದ್ದುಗೊಳಿಸಿ ಮರುಬಂಧನಕ್ಕೆ ಸೂಚಿಸಿದ್ದ ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿ ಪರ್ದಿವಾಲಾ ಪೀಠದಲ್ಲೇ ಶುಕ್ರವಾರ ಜಾಮೀನು …
Read More »ಕೇಜ್ರಿವಾಲ್, ಸಿಸೋಡಿಯಾ ಸೇರಿ AAP ನಾಯಕರ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕ್ರಿಯೆ ಆರಂಭ
ನವದೆಹಲಿ: ಅಬಕಾರಿ ನೀತಿ ಪ್ರಕರಣದಲ್ಲಿ ಎಎಪಿ ನಾಯಕರಾದ ಅರವಿಂದ್ ಕೇಜ್ರಿವಾಲ್ , ಮನೀಶ್ ಸಿಸೋಡಿಯಾ, ಸಂಜಯ್ ಸಿಂಗ್, ವಿನಯ್ ಮಿಶ್ರಾ, ದುರ್ಗೇಶ್ ಪಾಠಕ್ ಮತ್ತು ಸೌರಭ್ ಭಾರದ್ವಾಜ್ ಅವರ ವಿರುದ್ಧ ದೆಹಲಿ ಹೈಕೋರ್ಟ್‌ನ ನ್ಯಾಯಮೂರ್ತಿ ಸ್ವರ್ಣ ಕಾಂತ ಶರ್ಮಾ ಅವರು ಗುರುವಾರ ಕ್ರಿಮಿನಲ್ ನ್ಯಾಯಾಂಗ ನಿಂದನೆ ಪ್ರಕರಣವನ್ನು ಆರಂಭಿಸಿದ್ದಾರೆ. ಪ್ರತಿವಾದಿಗಳು ವಜಾ ಪ್ರಕ್ರಿಯೆಗಳಿಗೆ ಸಂಬಂಧಿಸಿದಂತೆ ಹಂಚಿಕೊಂಡ ವಿವಿಧ ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳು ಮತ್ತು ವೀಡಿಯೊಗಳನ್ನು ಗಮನಿಸಿದ ನಂತರ ನ್ಯಾಯಮೂರ್ತಿ ಶರ್ಮಾ …
Read More »ಹಾರ್ಟ್ ಅಟ್ಯಾಕ್ ಅಲ್ಲ, ಪತ್ನಿಯಿಂದ ಕೊಲೆ ಎಂದ ಸಹೋದರ- ಹೂತಿಟ್ಟ ಶವ ಹೊರತೆಗೆದು ಮರು ತನಿಖೆ
ಬೆಂಗಳೂರು: ನನ್ನ ಸಹೋದರನ ಸಾವಿಗೆ ಆತನ ಪತ್ನಿಯೇ ಕಾರಣವಾಗಿದ್ದು, ಇದು ಹಾರ್ಡ್ ಅಟ್ಯಾಕ್ ಅಲ್ಲ ಕೊಲೆ ಅಂತಾ ಬಂದ ದೂರು ಆಧರಿಸಿ, ಮರು ತನಿಖೆಗೆ ಇಳಿದ ಪೊಲೀಸರು ಬರೋಬ್ಬರಿ 6 ತಿಂಗಳ ಬಳಿಕ ತಹಶೀಲ್ದಾರ್ ಸಮ್ಮುಖದಲ್ಲಿ ಹೂತಿಟ್ಟ ಶವ ಹೊರತೆಗೆದಿದ್ದಾರೆ. ಬೆಂಗಳೂರು ನಗರದ HAL ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಆರು ತಿಂಗಳ ಹಿಂದೆ ಹೃದಯಾಘಾತದಿಂದ ಮೃತಪಟ್ಟಿದ್ದ ಇಂತಿಯಾಜ್ ಪಾಷಾ ಶವವನ್ನು ಇಂದು ಹೊರತೆಗೆದು ಮರಣೋತ್ತರ ಪರೀಕ್ಷೆಗೆ ಒಳಪಡಿಸಲಾಗಿದೆ. ಸಾವಿನ ಕುರಿತು ಅನುಮಾನ …
Read More »ಸಿಡಿಲು ಬಡಿದು ಕಾರ್ಮಿಕ ಸಾವು
ಉಡುಪಿ: ರಾಷ್ಟ್ರೀಯ ಹೆದ್ದಾರಿ-66ರ ಅರಾಟೆ ಸೇತುವೆ ಸಮೀಪ ಗುರುವಾರ ಸಂಜೆ ಸಿಡಿಲು ಬಡಿದು ಕಾರ್ಮಿಕನೊಬ್ಬ ಮೃತಪಟ್ಟ ದಾರುಣ ಘಟನೆ ನಡೆದಿದೆ. ಪಂಜಾಬ್ ಮೂಲದ ಕಾರ್ಮಿಕ ಅಶುತೋಷ್ (35) ಮೃತ ವ್ಯಕ್ತಿ. ಮತ್ತೋರ್ವ ಕಾರ್ಮಿಕ ಲವಜೋತ್ ಸಿಂಗ್ (28) ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಅರಾಟೆ ಹಳೆ ಸೇತುವೆಯ ದುರಸ್ತಿ ಕಾಮಗಾರಿ ಕಳೆದ ಕೆಲವು ದಿನಗಳಿಂದ ನಡೆಯುತ್ತಿದ್ದು, ಗುರುವಾರ ಸಂಜೆ ಪಂಜಾಬ್ ಮೂಲದ ಕಾರ್ಮಿಕರು ಕಾಮಗಾರಿಯಲ್ಲಿ ತೊಡಗಿದ್ದ ವೇಳೆ ಈ ದುರ್ಘಟನೆ ನಡೆದಿದೆ. …
Read More »50 ವರ್ಷದೊಳಗೆ ಹೃದಯಾಘಾತದಿಂದ ಕೊನೆಯುಸಿರೆಳೆದ ಕನ್ನಡದ ಈ ಸ್ಟಾರ್‌ಗಳು.!!
ಕನ್ನಡ ಚಿತ್ರರಂಗ (ಸ್ಯಾಂಡಲ್‌ವುಡ್) ಇತ್ತೀಚಿನ ವರ್ಷಗಳಲ್ಲಿ ಹಲವು ಯುವ ಸ್ಟಾರ್‌ಗಳನ್ನು ಅಕಾಲಿಕವಾಗಿ ಕಳೆದುಕೊಂಡಿದೆ. 50 ವರ್ಷದೊಳಗಿನ ವಯಸ್ಸಿನಲ್ಲಿ ಹೃದಯಾಘಾತ ಮತ್ತು ಸಂಬಂಧಿತ ಕಾರಣಗಳಿಂದ ನಿಧನರಾದ ಪ್ರಮುಖ ವ್ಯಕ್ತಿಗಳ ಪಟ್ಟಿ ಇಲ್ಲಿದೆ: ಪ್ರಮುಖ ನಟ-ನಟಿಯರು ಪುನೀತ್ ರಾಜ್‌ಕುಮಾರ್ (ಅಪ್ಪು) : ಕನ್ನಡದ ಪವರ್ ಸ್ಟಾರ್. 46ನೇ ವಯಸ್ಸಿನಲ್ಲಿ (29 ಅಕ್ಟೋಬರ್ 2021) ಜಿಮ್‌ನಲ್ಲಿ ವರ್ಕೌಟ್ ಮಾಡುತ್ತಿದ್ದಾಗ ತೀವ್ರ ಹೃದಯಾಘಾತದಿಂದ ನಿಧನರಾದರು. ಅವರ ಅಕಾಲಿಕ ನಿಧನವು ಕರ್ನಾಟಕದಾದ್ಯಂತ ಅಪಾರ ದುಃಖ ತಂದಿತ್ತು. ದಿಲೀಪ್ …
Read More »ಶಾರ್ಟ್ ಬಟ್ಟೆ ಧರಿಸಿ ರೀಲ್ಸ್ ಮಾಡಿದ ಸೊಸೆ: ಬೇಸರಗೊಂಡು ಅತ್ತೆ ಮಾವ ಆತ್ಮಹತ್ಯೆ.!!!
ಸಂಪ್ರದಾಯಸ್ಥ ಕುಟುಂಬದಲ್ಲಿ ಸೊಸೆಯು ಶಾರ್ಟ್ ಬಟ್ಟೆ ಹಾಕಿ ರೀಲ್ಸ್ ಮಾಡುತ್ತಿದ್ದುದಕ್ಕೆ ಅತ್ತೆ-ಮಾವ ಅಕ್ಷೇಪ ವ್ಯಕ್ತಪಡಿಸಿದ್ದರಿಂದ ಆರಂಭವಾದ ಜಗಳವು ದುರಂತಕ್ಕೆ ತಿರುಗಿದೆ. ಸೊಸೆಯ ಕಿರುಕುಳ, ಬೆದರಿಕೆ ಮತ್ತು ಮಾನಸಿಕ ಒತ್ತಡದಿಂದ ಹಿರಿಯ ದಂಪತಿಗಳು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಆರೋಪಿಸಲಾಗಿದೆ. ಘಟನೆಯ ವಿವರ : ರಾಜೇಶ್ ಮತ್ತು ಸುಮನ ದಂಪತಿಗಳ ಮಗನ ಪತ್ನಿ ಸ್ನೇಹಾ ಪ್ರತಿದಿನ ಸಣ್ಣ ಬಟ್ಟೆಗಳನ್ನು ಧರಿಸಿ ಅಂಗಾಂಗ ಪ್ರದರ್ಶಿಸುತ್ತಾ ರೀಲ್ಸ್ ಮಾಡುತ್ತಿದ್ದಳು. ಸಂಪ್ರದಾಯಸ್ಥ ಕುಟುಂಬದ ಅತ್ತೆ-ಮಾವ ಇದಕ್ಕೆ ಆಕ್ಷೇಪಿಸಿ …
Read More »04 ವರ್ಷಗಳ ಹಿಂದೆ ನಿಗೂಢವಾಗಿ ನಾಪತ್ತೆಯಾಗಿದ್ದ ಬಾಲಕ ಪತ್ತೆ.!!
ಸಿನಿಮಾ ಕಥೆಯನ್ನೂ ಮೀರಿಸುವಂತಹ ಘಟನೆಯೊಂದು ಮಂಡ್ಯದಲ್ಲಿ ನಡೆದಿದೆ. ನಾಲ್ಕು ವರ್ಷಗಳ ಹಿಂದೆ ನಿಗೂಢವಾಗಿ ನಾಪತ್ತೆಯಾಗಿದ್ದ ಬಾಲಕ, ಆತನಿಗಿದ್ದ ಕಬಡ್ಡಿ ಮೇಲಿನ ಅತಿಯಾದ ಪ್ರೀತಿಯಿಂದಲೇ ಇಂದು ಪತ್ತೆಯಾಗಿ ಪೋಷಕರ ಮಡಿಲು ಸೇರಿದ್ದಾನೆ! ಏನಿದು ಘಟನೆ? ಮಂಡ್ಯದ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ 9ನೇ ತರಗತಿ ಓದುತ್ತಿದ್ದ ಕಿಶೋರ್, 2022ರ ಆಗಸ್ಟ್ 10 ರಂದು ನಾಪತ್ತೆಯಾಗಿದ್ದ. ತಂದೆ ಶಾಲೆಗೆ ಬಿಟ್ಟು ಹೋದ ಮೇಲೆ ಮಗ ಸ್ಕೂಲ್ ಕಾಂಪೌಂಡ್ ಹಾರಿ ಬೆಂಗಳೂರಿಗೆ ಓಡಿ ಹೋಗಿದ್ದ. …
Read More »ಮೋದಿ ಕರೆಗೆ ಓಗೊಟ್ಟ ಹೈಕೋರ್ಟ್ ಜಡ್ಜ್: ಸೈಕಲ್ ಏರಿ ಕೋರ್ಟ್‌ಗೆ ಬಂದ ಜಸ್ಟಿಸ್ ದ್ವಾರಕಾಧೀಶ ಬನ್ಸಾಲ್!
ದೇಶದಲ್ಲಿ ಇಂಧನ ಉಳಿತಾಯ ಮತ್ತು ಪರಿಸರ ಸಂರಕ್ಷಣೆಗಾಗಿ ಪ್ರಧಾನಿ ನರೇಂದ್ರ ಮೋದಿ ಅವರು ನೀಡಿದ ಕರೆಗೆ ಮಧ್ಯಪ್ರದೇಶ ಹೈಕೋರ್ಟ್‌ನ ನ್ಯಾಯಾಧೀಶರೊಬ್ಬರು ವಿಶಿಷ್ಟವಾಗಿ ಸ್ಪಂದಿಸಿದ್ದಾರೆ. ಜಸ್ಟಿಸ್ ದ್ವಾರಕಾಧೀಶ ಬನ್ಸಾಲ್ ಅವರು ತಮ್ಮ ಅಧಿಕೃತ ಸರ್ಕಾರಿ ಕಾರನ್ನು ಬಿಟ್ಟು, ಸೈಕಲ್ ತುಳಿಯುವ ಮೂಲಕ ನ್ಯಾಯಾಲಯಕ್ಕೆ ಆಗಮಿಸಿ ಎಲ್ಲರ ಹುಬ್ಬೇರಿಸಿದ್ದಾರೆ. ಇಂಧನ ಉಳಿತಾಯಕ್ಕೆ ನ್ಯಾಯಾಧೀಶರ ಸಾಥ್: ಜಾಗತಿಕವಾಗಿ ಇಂಧನ ಬಿಕ್ಕಟ್ಟು ಎದುರಾಗುತ್ತಿರುವ ಹಿನ್ನೆಲೆಯಲ್ಲಿ ದೇಶವಾಸಿಗಳು ಇಂಧನ ಉಳಿಸುವಂತೆ ಪ್ರಧಾನಿ ಮೋದಿ ಇತ್ತೀಚೆಗೆ ಮನವಿ ಮಾಡಿದ್ದರು. …
Read More »
Laxmi News 24×7