Breaking News

ಸಾವಿರಾರು ಸರ್ಕಾರಿ ಶಾಲೆಗಳ ವಿಲೀನಕ್ಕೆ ಮುಂದಾದ ರಾಜ್ಯ ಸರ್ಕಾರ – ವಿದ್ಯಾರ್ಥಿಗಳು, ಪೋಷಕರ ವಿರೋಧ

Spread the love

ಚಿಕ್ಕಬಳ್ಳಾಪುರ: ಕೆಪಿಎಸ್‌ ಮ್ಯಾಗ್ನೇಟ್‌ ಯೋಜನೆಯಡಿ ರಾಜ್ಯದಲ್ಲಿ ಸಾವಿರಾರು ಸರ್ಕಾರಿ ಶಾಲೆಗಳನ್ನ ವಿಲೀನಗೊಳಿಸುತ್ತಿರುವ ರಾಜ್ಯದ ಸರ್ಕಾರ ಕ್ರಮ ಖಂಡಿಸಿ ಎಐಡಿಎಸ್‌ಓ ಹೋರಾಟಕ್ಕೆ ಮುಂದಾಗಿದೆ.

ಇದರ ಜೊತೆಗೆ ಪಿಎಂ ಶ್ರೀ ಶಾಲೆಗಳಿಗೂ ಸಹ ಸುತ್ತ ಮತ್ತಲಿನ ಶಾಲೆಗಳ ವಿಲೀನಗೊಳಿಸಲಾಗುತ್ತಿದೆ. ಕೆಲ ಪಿಯು ಕಾಲೇಜುಗಳ ವಿಲೀನ ಪ್ರಕ್ರಿಯೆಗೆ ಮುಂದಾಗಿದೆಯಂತೆ. ಹೀಗಾಗಿ ಯಾವುದೇ ಕಾರಣಕ್ಕೂ ಸರ್ಕಾರಿ ಶಾಲೆಗಳನ್ನ ಮುಚ್ಚುವ ವಿಲೀನಗೊಳಿಸುವ ಪ್ರಕ್ರಿಯೆ ಮಾಡಬಾರದು ಎಂದು ಎಐಡಿಎಸ್‌ಈ ಆಗ್ರಹಿಸಿದೆ.

ಅಂದಹಾಗೆ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲೂ ನೂರಾರು ಶಾಲೆಗಳ ವಿಲೀನ ಮಾಡಲಾಗುತ್ತಿದೆ. ಚಿಕ್ಕಬಳ್ಳಾಪುರ ತಾಲೂಕಿನ ದಿಬ್ಬೂರು ಕೆಪಿಎಸ್‌ ಮ್ಯಾಗ್ನೇಟ್‌ ಗೆ ದಿಬ್ಬೂರು, ಕತ್ತರಿಗುಪ್ಪೆ, ಮರಳಕುಂಟೆ, ನೆಲ್ಲಿಮರದಹಳ್ಳಿ ಶಾಲೆಗಳನ್ನ ವಿಲೀನ ಮಾಡಲಾಗುತ್ತಿದೆ.

ಇದೇ ರೀತಿ ಉತ್ತಮ ಮೂಲ ಸೌಕರ್ಯ ಇರುವ ಆಯ್ದ ಶಾಲೆಗಳಿಗೆ ಸುತ್ತ ಮುತ್ತಲಿನ 5-6 ಮೀ ವ್ಯಾಪ್ತಿಯಲ್ಲಿನ ಸರ್ಕಾರಿ ಶಾಲೆಗಳನ್ನ ವಿಲೀನಗೊಳಿಸುವ ಮೂಲಕ ಗ್ರಾಮೀಣ ಭಾಗದ ಶಿಕ್ಷಣದ ಗುಣಮಟ್ಟ ಹೆಚ್ಚಿಸುವ ಉದ್ದೇಶ ಸರ್ಕಾರದ್ದಾಗಿದೆ. ಆದ್ರೆ ಇದು ಸರ್ಕಾರಿ ಶಾಲೆಗಳನ್ನ ಮುಚ್ಚುವ ಹುನ್ನಾರವೂ ಆಗಿದೆ ಎಂದು ಆರೋಪಿಸಿ ಹೋರಾಟಗಾರರು ಆಕ್ರೋಶ ಹೊರಹಾಕಿದ್ದಾರೆ.


Spread the love

About Laxminews 24x7

Check Also

ಬೆಳಗಾವಿ ಮಹಾನಗರ ಪಾಲಿಕೆ ವಿರುದ್ದ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ದೂರು

Spread the loveಬೆಳಗಾವಿ: ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ ಎಂಬ ನಿರ್ಣಯ ಕೈಗೊಳ್ಳಲು ಹಿಂದೇಟು ಹಾಕಿರುವ ಬೆಳಗಾವಿ ಮಹಾನಗರ ಪಾಲಿಕೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ