Breaking News

ದರ್ಶನ್‌ಗೆ ಶುಕ್ರವಾರ ಬಿಗ್‌ ಡೇ – ಜಾಮೀನು ರದ್ದುಗೊಳಿಸಿದ್ದ ನ್ಯಾ. ಪರ್ದಿವಾಲಾ ಪೀಠದಲ್ಲೇ ಮತ್ತೆ ಅರ್ಜಿ ವಿಚಾರಣೆ

Spread the love

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಕೇಸಲ್ಲಿ ನಟ ದರ್ಶನ್ ಜೈಲು ಸೇರಿ 8 ತಿಂಗಳಾಗುತ್ತಾ ಬಂದಿದೆ. ಬೆಂಗಳೂರಿನ (Bengaluru) ಪರಪ್ಪನ ಅಗ್ರಹಾರದ ಸೆಂಟ್ರಲ್ ಜೈಲಿನ ಅವ್ಯವಸ್ಥೆ, ಚಿತ್ರಹಿಂಸೆ ಹಾಗೂ ಪ್ರಕರಣದ ತನಿಖೆ ವಿಳಂಬ ಪ್ರಶ್ನಿಸಿ, ದರ್ಶನ್ (Darshan) ಸಲ್ಲಿಸಿರುವ ಜಾಮೀನು ಅರ್ಜಿಯ ವಿಚಾರಣೆ ಶುಕ್ರವಾರ (ಮೇ 15) ಸುಪ್ರೀಂ ಕೋರ್ಟ್‌ನಲ್ಲಿ ನಡೆಯಲಿದೆ. ಈ ಹಿಂದೆ, ಜಾಮೀನು ರದ್ದುಗೊಳಿಸಿ ಮರುಬಂಧನಕ್ಕೆ ಸೂಚಿಸಿದ್ದ ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿ ಪರ್ದಿವಾಲಾ ಪೀಠದಲ್ಲೇ ಶುಕ್ರವಾರ ಜಾಮೀನು ಅರ್ಜಿಯ ವಿಚಾರಣೆ ನಡೆಯಲಿದೆ.

ಈಗಾಗಲೇ ದರ್ಶನ್ ಮಾಡಿರೋ ಆರೋಪ ಬಗ್ಗೆ ಕಾರಾಗೃಹ ಇಲಾಖೆ ಸವಿವರವಾದ ವರದಿ ನೀಡಿದೆ. ಸಹ ಕೈದಿಗಳಿಗೆ ನೀಡುತ್ತಿರೋ ಸವಲತ್ತೇ ದರ್ಶನ್‌ಗೆ ನೀಡಲಾಗುತ್ತಿದೆ. ದರ್ಶನ್‌ರನ್ನ ನಾವು ನಿರ್ಲಕ್ಷ್ಯ ಮಾಡಿಲ್ಲ. ಜೈಲಿನ ನಿಯಮಾವಳಿಗಳನ್ನ ಪಾಲನೆ ಮಾಡಲಾಗುತ್ತಿದೆ. ಭದ್ರತೆ ದೃಷ್ಟಿಯಿಂದ ಪ್ರತ್ಯೇಕ ಬ್ಯಾರಕ್‌ನಲ್ಲಿ ಇಡಲಾಗಿದೆ. ವಾರಕ್ಕೆ 2 ಬಾರಿ ಪ್ರಕರಣದ ವಿಚಾರಣೆ ಆಗುತ್ತಿದೆ. ಪ್ರಕರಣದ ವಿಳಂಬ ಆಗುತ್ತಿದೆ ಅನ್ನಲು ಬೇರೆ ಕಾರಣಗಳಿಲ್ಲ ಅಂತ ಕಾರಾಗೃಹ ಇಲಾಖೆ ಹಾಗೂ ಎಸ್‌ಪಿಪಿ ನೀಡಿರೋ ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಶುಕ್ರವಾರ ಬೆಳಗ್ಗೆ ಅರ್ಜಿಯ ವಿಚಾರಣೆ ನಡೆಯುತ್ತಿದ್ದು, ದರ್ಶನ್ ಪರ ಮುಕುಲ್ ರೋಹಟಗಿ ವಾದ ಮಂಡಿಸಲಿದ್ದಾರೆ. ಒಂದು ವೇಳೆ ನಾಳೆ ಜಾಮೀನು ಸಿಕ್ಕರೆ ದರ್ಶನ್‌ಗೆ ಬಿಡುಗಡೆ ಭಾಗ್ಯ ಸಿಗಲಿದೆ. ಜಾಮೀನು ಸಿಗದಿದ್ದರೆ ಇನ್ನಷ್ಟು ದಿನ ಜೈಲಿನಲ್ಲೇ ಇರಬೇಕಾಗುತ್ತದೆ.


Spread the love

About Laxminews 24x7

Check Also

ಬೀಡಾಡಿ ದನವನ್ನು ಕಾರಿಗೆ ತುಂಬಿಕೊಂಡು ಪರಾರಿ: ಪ್ರಮುಖ ಆರೋಪಿ ಬಂಧನ

Spread the loveಉಡುಪಿ: ರಸ್ತೆ ಬದಿಯಲ್ಲಿದ್ದ ಬೀಡಾಡಿ ದನವನ್ನು  ಹಿಂಸಾತ್ಮಕವಾಗಿ ಎಳೆದುಕೊಂಡು ಹೋಗಿ ಕಾರಿನಲ್ಲಿ ತುಂಬಿಕೊಂಡು ಪರಾರಿಯಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ