ಚಿಕ್ಕಮಗಳೂರು: ಶೃಂಗೇರಿ ವಿಧಾನಸಭಾ ಕ್ಷೇತ್ರದ ಅಂಚೆ ಮತಗಳ ಮರು ಎಣಿಕೆ ಆಣೆ ಪ್ರಮಾಣ ಧರ್ಮಸ್ಥಳದ ಮಂಜುನಾಥ ಸ್ವಾಮಿ ದೇಗುಲಕ್ಕೂ ಕಾಲಿಟ್ಟಿದೆ. ಅಂಚೆ ಮತದಾನ ಮರು ಎಣಿಕೆ ಫಲಿತಾಂಶ ಹೊರಬಂದ ಬಳಿಕ ಬಹಳ ಬಿಜೆಪಿ ಕಾರ್ಯಕರ್ತರು, ನಮ್ಮ ಅಂದೇ ಗೆಲುವು ಸಾಧಿಸಿತ್ತು. ಆದರೆ, ಬಿಜೆಪಿ ಏಜೆಂಟ್‌ಗಳಾಗಿದ್ದ ರಾಮಸ್ವಾಮಿ ಶೆಟ್ಟಿಗದ್ದೆ ಹಾಗೂ ಸತೀಶ್ ಅದ್ದಡ ಕಾಂಗ್ರೆಸ್ ಗೆಲುವಿಗೆ ಶ್ರಮಿಸಿ ಬಿಜೆಪಿಗೆ ಮೋಸ ಮಾಡಿದ್ದರು ಎಂದು ಆರೋಪಿಸಿದ್ದಾರೆ. ಅಲ್ಲದೇ ಶೃಂಗೇರಿ ವಿಧಾನಸಭಾ ಕ್ಷೇತ್ರದಾದ್ಯಂತ ಅಪಪ್ರಚಾರ …
Read More »Daily Archives: ಮೇ 10, 2026
ನಾದಿನಿಯರ ಫೋಟೋ ತೆಗೆದಿದ್ದಕ್ಕೆ ಕಿರಿಕ್ – ಪತ್ನಿ, ಮಗು ಸೇರಿ ಐವರ ಮೇಲೆ ಪತಿಯಿಂದ ಆ್ಯಸಿಡ್ ದಾಳಿ
ಹುಬ್ಬಳ್ಳಿ: ಕ್ಷುಲ್ಲಕ ಕಾರಣಕ್ಕೆ ನಡೆದ ಕೌಟುಂಬಿಕ ಜಗಳದಲ್ಲಿ ಪತಿಯೇ ತನ್ನ ಪತ್ನಿ ಹಾಗೂ ಆರು ತಿಂಗಳ ಕಂದಮ್ಮ ಸೇರಿದಂತೆ ಐವರ ಮೇಲೆ ಆ್ಯಸಿಡ್ ದಾಳಿ ಮಾಡಿರುವ ಭೀಕರ ಘಟನೆ ನಗರದ ತಾರಿಹಾಳದ ವಾಜಪೇಯಿ ನಗರದಲ್ಲಿ ನಡೆದಿದೆ. ತಾಮ್ರ ಮತ್ತು ಹಿತ್ತಾಳೆ ಕೆಲಸ ಮಾಡುತ್ತಿದ್ದ ಸುರೇಶ್ ಬೈಲ್ ಪತ್ತಾರ ಈ ಕೃತ್ಯವೆಸಗಿದ ಆರೋಪಿ. ಘಟನೆಯಲ್ಲಿ ಒಂದೇ ಕುಟುಂಬದ ಐವರು ಗಾಯಗೊಂಡಿದ್ದಾರೆ. ಆರು ತಿಂಗಳ ಕಂದಮ್ಮನ ಮುಖ ಹಾಗೂ ಬಾಯಿಗೆ ಆ್ಯಸಿಡ್ ಬಿದ್ದಿದೆ. …
Read More »ಬಿರುಗಾಳಿ ಸಹಿತ ಭಾರೀ ಮಳೆಗೆ ಧರೆಗುರುಳಿದ ಬೃಹತ್ ಮರ – 2 ಗಂಟೆ ವಾಹನ ಸಂಚಾರ ಸ್ಥಗಿತ
ಚಿಕ್ಕೋಡಿ: ತಾಲೂಕಿನ ವಿವಿಧೆಡೆ ಬಿರುಗಾಳಿ ಸಹಿತ ಭಾರೀ ಮಳೆಯಾಗಿದೆ. ಬಿರುಗಾಳಿಯ ಅಬ್ಬರಕ್ಕೆ ಚಿಕ್ಕೋಡಿ – ಹುಕ್ಕೇರಿ ರಸ್ತೆಯ ಸಂಕೇಶ್ವರ ಕ್ರಾಸ್ ಬಳಿ ರಸ್ತೆ ಮೇಲೆ ಬೃಹದಾಕಾರದ ಮರ ನೆಲಕ್ಕರುಳಿದೆ. ಸ್ಥಳಕ್ಕೆ ಚಿಕ್ಕೋಡಿ ಅಗ್ನಿಶಾಮಕ ಸಿಬ್ಬಂದಿ ಭೇಟಿ ನೀಡಿ, ಮರವನ್ನು ತೆಗೆಯುವ ಕಾರ್ಯ ಮಾಡಿದ್ದಾರೆ. ಸುಮಾರು 2 ಗಂಟೆಗಳ ಬಳಿಕ ರಸ್ತೆ ಸಂಚಾರಕ್ಕೆ ಮುಕ್ತವಾಗಿದೆ. ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಎರಡು ದಿನ ಸಾಧಾರಣ …
Read More »ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದ ಪತಿಯ ಹತ್ಯೆ – ಪತ್ನಿ, ಪ್ರಿಯಕನಿಗೆ ಗಲ್ಲು ಶಿಕ್ಷೆ
ಶಿವಮೊಗ್ಗ: ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದ ಗಂಡನನ್ನು ಕೊಲೆ ಮಾಡಿದ್ದ ಪತ್ನಿ ಮತ್ತು ಆಕೆಯ ಪ್ರಿಯಕರನಿಗೆ ಭದ್ರಾವತಿಯ 4ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಗಲ್ಲು ಶಿಕ್ಷೆ ವಿಧಿಸಿದೆ. ಫ್ಲೋರಾ ನ್ಯಾನ್ಸಿ ಮತ್ತು ರಾಜಶೇಖರಯ್ಯ ಗಲ್ಲು ಶಿಕ್ಷೆಗೆ ಗುರಿಯಾದ ಅಪರಾಧಿಗಳು. ಇಬ್ಬರಿಗೂ 14 ಲಕ್ಷ ರೂ. ದಂಡ ಹಾಗೂ ದೂರುದಾರರಿಗೆ ಪರಿಹಾರವಾಗಿ 5 ಲಕ್ಷ ರೂ. ನೀಡುವಂತೆ ನ್ಯಾಯಾಧೀಶರಾದ ಇಂದಿರಾ ಮೈಲಸ್ವಾಮಿ ಚೆಟ್ಟಿಯಾರ್ ತೀರ್ಪು ನೀಡಿದ್ದಾರೆ. ಭದ್ರಾವತಿಯ ಖಾಸಗಿ ನರ್ಸಿಂಗ್ …
Read More »ವಿಜಯ್ – ತ್ರಿಷಾ ಮದುವೆಯಾಗಬೇಕು: ರಾಖಿ ಸಾವಂತ್
ದಳಪತಿ ವಿಜಯ್ ಮತ್ತು ನಟಿ ತ್ರಿಷಾ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ವದಂತಿಗಳ ನಡುವೆ ನಟಿ ರಾಖಿ ಸಾವಂತ್ , ಅವರಿಬ್ಬರು ಮದುವೆಯಾಗಬೇಕು ಎಂದು ಹೇಳುವ ಮೂಲಕ ಹೊಸ ಸಂಚಲನ ಸೃಷ್ಟಿಸಿದ್ದಾರೆ. ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಜಯ ದಾಖಲಿಸಿ ರಾಜಕೀಯ ಅಖಾಡದಲ್ಲಿ ಮಿಂಚುತ್ತಿರುವ ದಳಪತಿ ವಿಜಯ್, ಇದೀಗ ತಮ್ಮ ವೈಯಕ್ತಿಕ ಜೀವನದ ಕಾರಣಕ್ಕೆ ಸುದ್ದಿಯಲ್ಲಿದ್ದಾರೆ. ಕಳೆದ ಕೆಲವು ಸಮಯದಿಂದ ನಟಿ ತ್ರಿಷಾ ಮತ್ತು ವಿಜಯ್ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ವದಂತಿಗಳು …
Read More »ಪಂಜಾಬ್ ಸಚಿವ ಸಂಜೀವ್ ಅರೋರಾ ಬಂಧಿಸಿದ ಇ.ಡಿ
ಚಂಡೀಗಢ: ಪಂಜಾಬ್ ಇಂಧನ ಸಚಿವ ಸಂಜೀವ್ ಅರೋರಾ ಅವರನ್ನು ಇ.ಡಿ ಬಂಧಿಸಿದೆ. ಅರೋರಾ ಮತ್ತು ಇತರ ಕೆಲವು ಸಚಿವರಿಗೆ ಸಂಬಂಧಿಸಿದ ಸ್ಥಳಗಳ ಮೇಲೆ ಶನಿವಾರ ದಾಳಿ ನಡೆಸಿದ ಕೆಲವೇ ಗಂಟೆಗಳ ನಂತರ ಜಾರಿ ನಿರ್ದೇಶನಾಲಯ ಅವರನ್ನು ಬಂಧಿಸಿದೆ. ಈ ಕ್ರಮವನ್ನು ಎಎಪಿ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ತೀವ್ರವಾಗಿ ಖಂಡಿಸಿದ್ದಾರೆ. 62 ವರ್ಷದ ಅರೋರಾ, ಲುಧಿಯಾನ ಪಶ್ಚಿಮ ವಿಧಾನಸಭಾ ಕ್ಷೇತ್ರದ ಎಎಪಿ ಶಾಸಕ. ಅರೋರಾ ಮತ್ತು ಅವರ ಸಂಸ್ಥೆಗಳಿಗೆ ಸಂಬಂಧಿಸಿದ ನಾಲ್ಕು …
Read More »ಇಂದು ತಮಿಳುನಾಡು ಸಿಎಂ ಆಗಿ ವಿಜಯ್ ಪ್ರಮಾಣವಚನ ಸ್ವೀಕಾರ
ಚೆನ್ನೈ: ಸರ್ಕಾರ ರಚನೆಗೆ 5 ದಿನಗಳ ಬಹುಮತದ ಕಸರತ್ತಿನ ನಂತರ ತಮಿಳುನಾಡು ಸಿಎಂ ಪಟ್ಟಾಭಿಷೇಕಕ್ಕೆ ಕೊನೆಗೂ ಮುಹೂರ್ತ ಫಿಕ್ಸ್ ಆಗಿದೆ. ಭಾನುವಾರ ಬೆಳಗ್ಗೆ 10 ಗಂಟೆಗೆ ತಮಿಳುನಾಡು ಸಿಎಂ ಆಗಿ ಟಿವಿಕೆ ಮುಖ್ಯಸ್ಥ ವಿಜಯ್ ಪ್ರಮಾಣವಚನ ಸ್ವೀಕರಿಸಲಿದ್ದಾರೆ. 234 ಸದಸ್ಯ ಬಲದ ವಿಧಾನಸಭೆಯಲ್ಲಿ ಬಹುಮತದ ಬೆಂಬಲವನ್ನು ಸಾಬೀತುಪಡಿಸುವ ಪತ್ರಗಳನ್ನು ಸಲ್ಲಿಸಿದ ನಂತರ ರಾಜ್ಯಪಾಲ ರಾಜೇಂದ್ರ ವಿಶ್ವನಾಥ್ ಅರ್ಲೇಕರ್, ವಿಜಯ್ ಅವರನ್ನು ಸರ್ಕಾರ ರಚಿಸಲು ಔಪಚಾರಿಕವಾಗಿ ಆಹ್ವಾನಿಸಿದ್ದಾರೆ. ಚೆನ್ನೈನ ಜವಾಹರಲಾಲ್ ನೆಹರು …
Read More »ಸಚಿವ ಡಿ.ಸುಧಾಕರ್ ನಿಧನ
ಚಿತ್ರದುರ್ಗ: ಅನಾರೋಗ್ಯ ಹಿನ್ನೆಲೆ ಕಳೆದ ಒಂದು ತಿಂಗಳಿನಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಚಿತ್ರದುರ್ಗ ಉಸ್ತುವಾರಿ ಸಚಿವ ಡಿ.ಸುಧಾಕರ್ ನಿಧನರಾಗಿದ್ದಾರೆ. ಬೆಂಗಳೂರಿನ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸುಧಾಕರ್ ಇಂದು ಬೆಳಗ್ಗೆ 3:15ಕ್ಕೆ ಕೊನೆಯುಸಿರೆಳೆದಿದ್ದಾರೆ. ಸುಧಾಕರ್ ನಿಧನದ ಕುರಿತು ಕಿಮ್ಸ್ ಆಸ್ಪತ್ರೆ ಅಧಿಕೃತ ಘೋಷಣೆ ಮಾಡಿದೆ. ಇಂದು ಮಧ್ಯಾಹ್ನ 12 ಗಂಟೆಗೆ ಬೆಂಗಳೂರಿನ ಕೆಪಿಸಿಸಿ ಕಚೇರಿ ಬಳಿ ಸುಧಾಕರ್ ಅಂತಿಮ ದರ್ಶನಕ್ಕೆ ಸಿದ್ಧತೆ ನಡೆಸಲಾಗುತ್ತಿದೆ. ಬಳಿಕ ಬಳಿಕ ಸ್ವಕ್ಷೇತ್ರ ಹಿರಿಯೂರು ನೆಹರು …
Read More »
Laxmi News 24×7