Breaking News

ಸಚಿವ ಡಿ.ಸುಧಾಕರ್ ನಿಧನ

Spread the love

ಚಿತ್ರದುರ್ಗ: ಅನಾರೋಗ್ಯ ಹಿನ್ನೆಲೆ ಕಳೆದ ಒಂದು ತಿಂಗಳಿನಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಚಿತ್ರದುರ್ಗ  ಉಸ್ತುವಾರಿ ಸಚಿವ ಡಿ.ಸುಧಾಕರ್  ನಿಧನರಾಗಿದ್ದಾರೆ.

ಬೆಂಗಳೂರಿನ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸುಧಾಕರ್ ಇಂದು ಬೆಳಗ್ಗೆ 3:15ಕ್ಕೆ ಕೊನೆಯುಸಿರೆಳೆದಿದ್ದಾರೆ. ಸುಧಾಕರ್ ನಿಧನದ ಕುರಿತು ಕಿಮ್ಸ್ ಆಸ್ಪತ್ರೆ ಅಧಿಕೃತ ಘೋಷಣೆ ಮಾಡಿದೆ.

ಇಂದು ಮಧ್ಯಾಹ್ನ 12 ಗಂಟೆಗೆ ಬೆಂಗಳೂರಿನ ಕೆಪಿಸಿಸಿ ಕಚೇರಿ ಬಳಿ ಸುಧಾಕರ್ ಅಂತಿಮ ದರ್ಶನಕ್ಕೆ ಸಿದ್ಧತೆ ನಡೆಸಲಾಗುತ್ತಿದೆ. ಬಳಿಕ ಬಳಿಕ ಸ್ವಕ್ಷೇತ್ರ ಹಿರಿಯೂರು ನೆಹರು ಮೈದಾನದಲ್ಲಿ ಅಂತಿಮ ದರ್ಶನ ನಡೆಯಲಿದ್ದು, ನಂತರ ಅಲ್ಲಿಂದ ಚಳ್ಳಕೆರೆ ಡಿ.ಸುಧಾಕರ್ ಕ್ರೀಡಾಂಗಣದಲ್ಲಿ ಅಂತಿಮ ದರ್ಶನಕ್ಕೆ ಪ್ಲಾನ್ ಮಾಡಲಾಗಿದೆ. ಸದ್ಯ ಚಳ್ಳಕೆರೆ ಪಟ್ಟಣದ ಸಚಿವ ಡಿ. ಸುಧಾಕರ್ ಮನೆ ಬಳಿ ನೀರವ ಮೌನ ಆವರಿಸಿದೆ.


Spread the love

About Laxminews 24x7

Check Also

ಬರಪೀಡಿತ ಎಂದು ಘೋಷಿಸದ್ದಕ್ಕೆ ರಾಜೀನಾಮೆ ಸಲ್ಲಿಸಿದೆ – ಕ್ಷೇತ್ರದ ಜನರಿಗಾಗಿ ರಾಜಕೀಯ ನಿವೃತ್ತಿಗೂ ಸಿದ್ಧ: ಯಶವಂತರಾಯಗೌಡ

Spread the loveವಿಜಂಯಪುರ: 188 ತಾಲೂಕುಗಳು ಘೋಷಣೆ ಆದಾಗಲೂ, ವಿಜಯಪುರ ಜಿಲ್ಲೆಯ 13 ತಾಲೂಕುಗಳ ಪೈಕಿ 11 ಘೋಷಣೆ ಆದರೂ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ