Breaking News

ನಾದಿನಿಯರ ಫೋಟೋ ತೆಗೆದಿದ್ದಕ್ಕೆ ಕಿರಿಕ್ – ಪತ್ನಿ, ಮಗು ಸೇರಿ ಐವರ ಮೇಲೆ ಪತಿಯಿಂದ ಆ್ಯಸಿಡ್ ದಾಳಿ

Spread the love

ಹುಬ್ಬಳ್ಳಿ: ಕ್ಷುಲ್ಲಕ ಕಾರಣಕ್ಕೆ ನಡೆದ ಕೌಟುಂಬಿಕ ಜಗಳದಲ್ಲಿ ಪತಿಯೇ  ತನ್ನ ಪತ್ನಿ ಹಾಗೂ ಆರು ತಿಂಗಳ ಕಂದಮ್ಮ ಸೇರಿದಂತೆ ಐವರ ಮೇಲೆ ಆ್ಯಸಿಡ್ ದಾಳಿ ಮಾಡಿರುವ ಭೀಕರ ಘಟನೆ ನಗರದ  ತಾರಿಹಾಳದ ವಾಜಪೇಯಿ ನಗರದಲ್ಲಿ ನಡೆದಿದೆ.

ತಾಮ್ರ ಮತ್ತು ಹಿತ್ತಾಳೆ ಕೆಲಸ ಮಾಡುತ್ತಿದ್ದ ಸುರೇಶ್ ಬೈಲ್ ಪತ್ತಾರ ಈ ಕೃತ್ಯವೆಸಗಿದ ಆರೋಪಿ. ಘಟನೆಯಲ್ಲಿ ಒಂದೇ ಕುಟುಂಬದ ಐವರು ಗಾಯಗೊಂಡಿದ್ದಾರೆ. ಆರು ತಿಂಗಳ ಕಂದಮ್ಮನ ಮುಖ ಹಾಗೂ ಬಾಯಿಗೆ ಆ್ಯಸಿಡ್ ಬಿದ್ದಿದೆ. ದಾಳಿಗೊಳಗಾದ 24 ವರ್ಷದ ಪತ್ನಿ ರಾಜೇಶ್ವರಿ ಬೈಲ್ ಪತ್ತಾರ ಸ್ಥಿತಿ ಚಿಂತಾಜನಕವಾಗಿದೆ. ಶೃತಿ ಮತ್ತು ರೇಷ್ಮಾ ಎಂಬುವವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು ದಾಳಿ ಮಾಡಿದ ಸುರೇಶ್ ಮೇಲೆಯೂ ಆ್ಯಸಿಡ್ ಬಿದ್ದಿದೆ.

ಆರೋಪಿ ಸುರೇಶ್ ತನ್ನ ನಾದಿನಿಯರ ಫೋಟೋ ತೆಗೆಯುತ್ತಿದ್ದ ವಿಚಾರವಾಗಿ ಪತ್ನಿ ರಾಜೇಶ್ವರಿ ತಾಕೀತು ಮಾಡಿದ್ದಳು. ಇದರ ಹೊರತಾಗಿಯೂ ನಾದಿನಿಯರ ಫೋಟೋ ತೆಗೆದು ಸುರೇಶ್ ಕಿರಿಕ್ ಮಾಡ್ತಿದ್ದ. ಇದೇ ವಿಷಯವಾಗಿ ಗಂಡ ಹೆಂಡತಿ ನಡುವೆ ಜಗಳ ಶುರುವಾಗಿದೆ. ಮಾತಿಗೆ ಮಾತು ಬೆಳೆದು ಆಕ್ರೋಶಗೊಂಡ ಸುರೇಶ್, ತಾಮ್ರ ಮತ್ತು ಹಿತ್ತಾಳೆ ವಸ್ತುಗಳನ್ನು ತೊಳೆಯಲು ಬಳಸುತ್ತಿದ್ದ ಕೆಮಿಕಲ್ ಅನ್ನು ಪತ್ನಿ ಮೇಲೆ ಎರಚಿದ್ದಾನೆ. ಕುಟುಂಬದವರ ಮೇಲೆಯೂ ಆ್ಯಸಿಡ್ ದಾಳಿ ಮಾಡಿದ್ದಾನೆ. ಗಾಯಾಳುಗಳನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.


Spread the love

About Laxminews 24x7

Check Also

ಪರಿಷತ್ ಚುನಾವಣೆಯಲ್ಲಿ ಅಡ್ಡ ಮತದಾನ – ಸಿ.ಟಿ ರವಿ ನೇತೃತ್ವದ ಸಮಿತಿಯಿಂದ ಬಿವೈವಿಗೆ ವರದಿ ಸಲ್ಲಿಕೆ

Spread the loveಬೆಂಗಳೂರು: ಪರಿಷತ್ ಚುನಾವಣೆಯಲ್ಲಿ  ಅಡ್ಡ ಮತದಾನ ಪ್ರಕರಣದ ತನಿಖೆ ನಡೆಸಿದ ಸಿಟಿ ರವಿ ನೇತೃತ್ವದ ಸತ್ಯಶೋಧನಾ ಸಮಿತಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ