Breaking News

Daily Archives: ಮೇ 10, 2026

ಕೆರೆಯಲ್ಲಿ ಈಜಲು ಹೋದ ಅಣ್ಣ-ತಮ್ಮ ನೀರುಪಾಲು

ಕೋಲಾರ: ಕೆರೆಯಲ್ಲಿಈಜಲು ಹೋದ ಅಣ್ಣ-ತಮ್ಮ ಇಬ್ಬರೂ ನೀರುಪಾಲಾಗಿರುವ ಘಟನೆ ಕೋಲಾರದಲ್ಲಿ  ನಡೆದಿದೆ. ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಲಕ್ಷ್ಮಿಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪಚ್ಚರಮಾಕಲಹಳ್ಳಿ ಬಳಿ ಈ ದುರ್ಘಟನೆ ಸಂಭವಿಸಿದೆ. ಮಾಹಿತಿಯ ಪ್ರಕಾರ, ಗಾರೆ ಕೆಲಸಕ್ಕೆಂದು ಪಚ್ಚರಮಾಕಲಹಳ್ಳಿಗೆ ತೆರಳಿದ್ದ ಯುವಕರು ಮಧ್ಯಾಹ್ನದ ತೀವ್ರ ಬಿಸಿಲಿನ ತಾಪಮಾನದಿಂದಾಗಿ ಸಮೀಪದ ಕೆರೆಯಲ್ಲಿ ಈಜಲು ಇಳಿದಿದ್ದಾರೆ. ಈ ವೇಳೆ ನೀರಿನ ಆಳ ಅಂದಾಜಿಸಲು ಸಾಧ್ಯವಾಗದೆ ಇಬ್ಬರೂ ಮುಳುಗಿ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ಇನ್ನೂ ಮೃತಪಟ್ಟ ಯುವಕರನ್ನು …

Read More »

ಆಟವಾಡ್ತಿದ್ದ ಪುಟಾಣಿಗಳ ಮೇಲೆ ಬಿದ್ದ ಕಾಂಪೌಂಡ್‌ ಗೇಟ್ – ಸ್ಥಳದಲ್ಲೇ ಮಗು ಸಾವು

ಬೆಂಗಳೂರು: ಮಕ್ಕಳ ಗುಂಪೊಂದು ಆಟವಾಡುತ್ತಿರುವಾಗ ಕಾಂಪೌಂಡ್ ಗೇಟ್ ಬಿದ್ದು ಮಗು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಬೆಂಗಳೂರು ಉತ್ತರ ತಾಲ್ಲೂಕಿನ ಚಿಕ್ಕಬಾಣಾವರ ದ್ವಾರಕಾನಗರದಲ್ಲಿ ನಡೆದಿದೆ. ಅವಘಡದಲ್ಲಿ ಗೌಸಿಯಾ ಎಂಬ 5 ವರ್ಷದ ಮಗು ಸಾವನ್ನಪ್ಪಿದೆ. ಅಣ್ಣ ಇಮಾಮ್, ತಂಗಿ ಶಕಿಲಾ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನೆಯಲ್ಲಿ 3 ವರ್ಷದ ಮಗು ಸುಮಯ್ ಸ್ಥಿತಿ ಗಂಭೀರವಾಗಿದೆ. ಇಮಾಮ್ ರಮೀಜಾ ದಂಪತಿ ಮಗು ಗೌಸಿಯಾ. ಇವರು ಕಳೆದ 5 ತಿಂಗಳ ಹಿಂದೆಯಷ್ಟೇ ಬಾಡಿಗೆ ಮನೆಗೆ …

Read More »

ಪರಪ್ಪನ ಅಗ್ರಹಾರ ಜೈಲಿನ ಕೈದಿಗಳಿಗೂ ಬಂತು ಬಯೋಮೆಟ್ರಿಕ್

ಆನೇಕಲ್: ಪರಪ್ಪನ ಅಗ್ರಹಾರ  ಜೈಲಿನಲ್ಲಿ ಕೈದಿಗಳ ಮೇಲೆ ನಿಗಾವಹಿಸಲು ಕಾರಾಗೃಹ ಇಲಾಖೆ 2.25 ಕೋಟಿ ರೂ. ಖರ್ಚು ಮಾಡಿ, ಬಯೋಮೆಟ್ರಿಕ್  ವ್ಯವಸ್ಥೆಯನ್ನು ಅಳವಡಿಸಿದೆ. ಈ ಹಿಂದೆ ಎಐ ಕ್ಯಾಮರಾ  ಬಳಕೆ ಮಾಡಿ ಕೈದಿಗಳ ಮೇಲೆ ನಿಗಾವಹಿಸಿತ್ತು. ಈ ಮೂಲಕ ಸಂದರ್ಶಕರನ್ನು ಭೇಟಿಯಾಗಲು ಡಿಜಿಟಲ್ ಟೋಕನ್ ವ್ಯವಸ್ಥೆ ಹಾಗೂ ಡಿಜಿಟಲ್ ಟ್ರ‍್ಯಾಕಿಂಗ್‌ನ್ನು ಜಾರಿಗೊಳಿಸಿತ್ತು. ಇದೀಗ ಒಂದು ಹೆಜ್ಜೆ ಮುಂದೆ ಇಟ್ಟು ಜೈಲಿನಲ್ಲಿ ನಡೆಯುವ ಅಕ್ರಮ ತಡೆಯಲು ಬಯೋಮೆಟ್ರಿಕ್ ಅಳವಡಿಕೆ ಮಾಡಿದೆ. ಇತ್ತೀಚಿಗೆ …

Read More »

ಐದಳ್ಳ, ರಾಮದೇವರಹಳ್ಳಕ್ಕೆ ಈಶ್ವರ ಖಂಡ್ರೆ ಭೇಟಿ – ಒತ್ತುವರಿ ತೆರವು, ಅಕ್ರಮ ಮಂಜೂರಾತಿ ರದ್ದಿಗೆ ಸೂಚನೆ

ಬೆಂಗಳೂರು: ಎತ್ತಿನಹೊಳೆ ಯೋಜನೆ ಕಾಮಗಾರಿ ನಡೆಯುತ್ತಿರುವ ಅರಣ್ಯ ಪ್ರದೇಶ ಐದಳ್ಳ ಕಾವಲು  ರಾಮದೇವರಹಳ್ಳ ಕಾವಲು ಪ್ರದೇಶಕ್ಕೆ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬೇಲೂರು ಪ್ರವಾಸದಿಂದ ಬೆಂಗಳೂರಿಗೆ ಮರಳುವ ಮಾರ್ಗದಲ್ಲಿ ಈ ಪ್ರದೇಶಕ್ಕೆ ಅನಿರೀಕ್ಷಿತ ಭೇಟಿ ನೀಡಿ ಪರಿಶೀಲಿಸಿದ ಸಚಿವರು, ಈ ಪ್ರದೇಶದಲ್ಲಿರುವ ಶ್ರೀಗಂಧ, ತೇಗ, ಬೀಟೆ ಸೇರಿದಂತೆ ಬೆಲೆಬಾಳುವ ಮರಗಳಿಗೆ ಜಿಯೋ ಟ್ಯಾಗ್ ಮಾಡಿ ಸಂರಕ್ಷಿಸುವಂತೆ ಮತ್ತು ಗಸ್ತು …

Read More »

ಬೈಕ್ ಅಪಘಾತ ತಪ್ಪಿಸಲು ಹೋಗಿ ದೇವಸ್ಥಾನಕ್ಕೆ ಗುದ್ದಿದ ಬಿಎಂಟಿಸಿ ಬಸ್

ಬೆಂಗಳೂರು: ಬೈಕ್‌ಗೆ  ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋಗಿ ದೇವಸ್ಥಾನಕ್ಕೆ ಬಿಎಂಟಿಸಿ ಬಸ್  ಗುದ್ದಿದ ಘಟನೆ ಬೆಂಗಳೂರಿನ  ಬೃಂದಾವನ ಬಸ್ ನಿಲ್ದಾಣದ ಬಳಿ ನಡೆದಿದೆ. ಇಂದು ಮಧ್ಯಾಹ್ನ 1 ಗಂಟೆಯ ಸುಮಾರಿಗೆ ಘಟನೆ ಸಂಭವಿಸಿದೆ. ಘಟಕ 9ಕ್ಕೆ ಸೇರಿದ ಬಿಎಂಟಿಸಿ ಬಸ್ 8ನೇ ಮೈಲಿಯಿಂದ ಹೇರೋಹಳ್ಳಿ ಕ್ರಾಸ್‌ಗೆ ತೆರಳುತ್ತಿದ್ದಾಗ ಏಕಾಏಕಿ ಎದುರಿನಿಂದ ಬೈಕ್ ಬಂದಿದೆ. ಬೈಕ್‌ಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋಗಿ ಬಸ್ ಶಿವ ದೇಗುಲಕ್ಕೆ ಡಿಕ್ಕಿ ಹೊಡೆದಿದೆ. ಬಸ್ ಗುದ್ದಿದ …

Read More »

ಕಾಲೇಜು ವಿದ್ಯಾರ್ಥಿಗಳಿಂದ ಪೊಲೀಸರ ಮೇಲೆ ಹಲ್ಲೆ – ವಿಡಿಯೋ ವೈರಲ್‌

ಚಿಕ್ಕಬಳ್ಳಾಪುರ: ಕರ್ತವ್ಯದಲ್ಲಿದ್ದ ಎಎಸ್‌ಐ ಹಾಗೂ ಪೊಲೀಸ್‌  ಕಾನ್ಸ್‌ಟೇಬಲ್‌ ಮೇಲೆ ಕಾಲೇಜು ವಿದ್ಯಾರ್ಥಿಗಳು ಹಲ್ಲೆ ನಡೆಸಿರುವ ಘಟನೆ ಚಿಕ್ಕಬಳ್ಳಾಪುರದ  ಖಾಸಗಿ ಕಾಲೇಜಿನ ಬಳಿ ನಡೆದಿದೆ. ನಂದಿಗಿರಿಧಾಮ  ಪೊಲೀಸ್‌ ಠಾಣೆಯ ಎಎಸ್‌ಐ ಗಂಗರಾಜು ಹಾಗೂ ಪೊಲೀಸ್‌ ಕಾನ್ಸ್‌ಟೇಬಲ್ ಮೇಲೆ ಪುಂಡ ವಿದ್ಯಾರ್ಥಿಗಳು ಗುಂಪು ಕಟ್ಟಿಕೊಂಡು ಹಲ್ಲೆ ನಡೆಸಿದ್ದಾರೆ. ಕಾಲೇಜಿನಲ್ಲಿ ಕಾರ್ಯಕ್ರಮವಿದ್ದ ಕಾರಣ ಸಿನಿಮಾ ನಟ ನಟಿಯರು ಆಗಮಿಸಿದ್ದರು. ಭದ್ರತೆಗೆ ಪೊಲೀಸರು ಕಾಲೇಜಿನ ಗೇಟ್‌ ಬಳಿ ತೆರಳಿದ್ದರು. ಈ ವೇಳೆ ಹತ್ತಾರು ಮಂದಿ ವಿದ್ಯಾರ್ಥಿಗಳು …

Read More »

ಅಂಚೆ ಮತ ಮರು ಎಣಿಕೆಯಲ್ಲಿ ಸೋಲು – ದೇವಾಲಯ, ಚರ್ಚ್, ಮಸೀದಿ ಮೊರೆಹೋದ ರಾಜೇಗೌಡ

ಚಿಕ್ಕಮಗಳೂರು: ಶೃಂಗೇರಿ ವಿಧಾನಸಭಾ ಕ್ಷೇತ್ರದ ಅಂಚೆ ಮತಗಳ ಮರು ಎಣಿಕೆ ಬಳಿಕ ಬಿಜೆಪಿ ಗೆಲುವು ಸಾಧಿಸಿದ್ದು ಕಾಂಗ್ರೆಸ್  ವಲಯದಲ್ಲಿ ತೀವ್ರ ಸಂಚಲನ ಸೃಷ್ಟಿಸಿದೆ. 2023ರ ಸಾರ್ವತ್ರಿಕ ವಿಧಾನಸಭೆ ಚುನಾವಣೆಯ ಮತ ಎಣಿಕೆ ವೇಳೆ 201 ಮತಗಳ ಅಂತರದಿಂದ ಕೈ ಅಭ್ಯರ್ಥಿ ಟಿ.ಡಿ.ರಾಜೇಗೌಡ  ಗೆಲುವು ಸಾಧಿಸಿದ್ದು, 2026ರ ಮರು ಎಣಿಕೆಯಲ್ಲಿ 52 ಮತಗಳ ಅಂತರದಿಂದ ಅದೇ ರಾಜೇಗೌಡ ಸೋಲುಂಡಿದ್ದರು. ಇದೀಗ, ಮತಚೋರಿ ಆರೋಪ ಮಾಡಿದ್ದ ಮಾಜಿ ಶಾಸಕ ರಾಜೇಗೌಡ ಹಾಗೂ ಕೈ …

Read More »

ಯಡಿಯೂರಪ್ಪರಂತಹ ನಾಯಕ ದಕ್ಷಿಣ ಭಾರತದಲ್ಲಿ ಯಾರೂ ಇಲ್ಲ: ಅಮಿತ್‌ ಶಾ ಬಣ್ಣನೆ

ಚಿತ್ರದುರ್ಗ: ಬಿ.ಎಸ್‌ ಯಡಿಯೂರಪ್ಪ ಅವರಂತಹ ನಾಯಕ ದಕ್ಷಿಣ ಭಾರತದಲ್ಲಿ ಯಾರೂ ಇಲ್ಲ ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ  ಹಾಡಿ ಹೊಗಳಿದ್ದಾರೆ. ಯಡಿಯೂರಪ್ಪ ಅಭಿಮಾನೋತ್ಸವಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ದೇಶದ ರೈತರ ನಾಯಕ ಯಡಿಯೂರಪ್ಪ ಅವರು 50 ವರ್ಷ ರಾಜಕೀಯ ಸೇವೆ ಮಾಡಿದ್ದಾರೆ. ಯಡಿಯೂರಪ್ಪ ವ್ಯಕ್ತಿತ್ವದ ಕಾರಣ ಎಲ್ಲಾ ಧರ್ಮದ ಸ್ವಾಮೀಜಿಗಳು ವೇದಿಕೆ ಮೇಲೆ ಇದ್ದಾರೆ. ವೇದಿಕೆಯಲ್ಲಿ ಎಲ್ಲಾ ವರ್ಗದ ಸ್ವಾಮೀಜಿಗಳನ್ನು ಆಶ್ಚರ್ಯ ಮತ್ತು ಸಂತೋಷವಾಗಿದೆ. ಇದರಿಂದ ರಾಜ್ಯ …

Read More »

ನಾನು ಯಾವತ್ತೂ ಸಿಎಂ ಕನಸು ಕಂಡವನಲ್ಲ, ಜನರ ಪರವಾಗಿ ಕೆಲಸ ಮಾಡಿದ್ದೇನೆ: ಬಿಎಸ್‌ವೈ

ಚಿತ್ರದುರ್ಗ: ನಾನು ಯಾವತ್ತೂ ಸಿಎಂ ಕನಸು ಕಂಡವನಲ್ಲ, ಜನರ ಪರವಾಗಿ ಕೆಲಸ ಮಾಡಿದ್ದೇನೆ ಎಂದು ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ  ಹೇಳಿದ್ದಾರೆ. ಚಿತ್ರದುರ್ಗದಲ್ಲಿ  ನಡೆದ ‘ಬಿಎಸ್‌ವೈ ಅಭಿಮಾನೋತ್ಸವ’  ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನನ್ನ ಜೀವನದ ಪರಮ ದಿನ, ಅಭಿಮಾನದಲ್ಲಿ ತೇಲಿಸಿದ ದಿನ. ನಿಮ್ಮೆಲ್ಲರ ಮುಂದೆ ನೀವು ಎತ್ತಿ ಬೆಳೆಸಿದ ಮಗನಾಗಿ ಇವತ್ತು ನಿಮ್ಮ ಮುಂದೆ ನಿಂತಿದ್ದೇನೆ. ಈ ಜನಸಾಗರ ನೋಡಿ ಮಾತು ಬರುತ್ತಿಲ್ಲ, ಅಭಿಮಾನದ ಹೊಳೆಯಲ್ಲಿ ತೇಲಿಸಿದ್ದೀರಿ. ನಿಮ್ಮ ಅಭಿಮಾನಿಕ್ಕೆ …

Read More »

ಮರು ಮೌಲ್ಯಮಾಪನ ಮಾಡಿದ್ರೆ ಮುಖಕ್ಕೆ ಆ್ಯಸಿಡ್‌ ಹಾಕ್ತೀವಿ – ಗುಲಬರ್ಗಾ ವಿವಿ ಕುಲಪತಿಗೆ ಬೆದರಿಕೆ

ಕಲಬುರಗಿ: ಗುಲಬರ್ಗಾ ವಿವಿ  ಕುಲಪತಿಗೆ ದುಷ್ಕರ್ಮಿಗಳು ಆ್ಯಸಿಡ್‌ ಹಾಕುವ ಬೆದರಿಕೆ ಪತ್ರ ಕಳಿಸಿದ್ದಾರೆ. ಶಶಿಕಾಂತ್‍ ಎಸ್.ಉಡಿಕೇರಿ ಅವರಿಗೆ ಅನಾಮಧೇಯ ವ್ಯಕ್ತಿಗಳು ಬೆದರಿಕೆ ಪತ್ರ ಬರೆದಿದ್ದಾರೆ. ಪತ್ರದಲ್ಲಿ, ಬಿಇಡಿ  ಪರೀಕ್ಷೆಯ ಮರು ಮೌಲ್ಯಮಾಪನದ ನಿರ್ಧಾರ  ನಮಗೆ ಇಷ್ಟವಾಗಿಲ್ಲ. ಎರಡು ಲಕ್ಷ ರೂ. ನೀಡಿ ಬಿಇಡ್ ಪ್ರವೇಶ ಪಡೆದು, ಎರಡು ವರ್ಷದಿಂದ ಫಲಿತಾಂಶಕ್ಕಾಗಿ ಕಾದಿದ್ದೇವೆ. ಮರು ಮೌಲ್ಯಮಾಪನದಿಂದ ಫಲಿತಾಂಶದಲ್ಲಿ ಅಂಕಗಳು ಕಡಿಮೆಯಾದ್ರೆ ಅಥವಾ ಮರು ಮೌಲ್ಯಮಾಪನದಲ್ಲಿ ಅನುತ್ತೀರ್ಣರಾದರೆ ನಿಮ್ಮ ಮುಖಕ್ಕೆ ಆ್ಯಸಿಡ್ ಹಾಕಿ …

Read More »