Breaking News

Daily Archives: ಮೇ 8, 2026

ಗೋಕಾಕನಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ 112ನೇ ಸಂಸ್ಥಾಪನಾ ದಿನಾಚರಣೆ

ಗೋಕಾಕ: ನಾವೆಲ್ಲರೂ ಕನ್ನಡ ನಾಡು, ನುಡಿ, ಸಂಸ್ಕೃತಿ ಗೌರವಿಸಬೇಕು ಎಂದು ಗೋಸಬಾಳಿನ ಸರ್ಕಾರಿ ಶಾಲೆಯ ಶಿಕ್ಷಕ ಬಾಳೇಶ ಕೀರಪ್ಪನವರ ಹೇಳಿದರು. ನಗರದ ಬಸವ ಮಂದಿರದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಗೋಕಾಕ ತಾಲೂಕು ಘಟಕ ವತಿಯಿಂದ ಬುಧವಾರ ಹಮ್ಮಿಕೊಂಡಿದ್ದ ಕನ್ನಡ ಸಾಹಿತ್ಯ ಪರಿಷತ್ತಿನ 112ನೇ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ಇಂದಿನ ಯುವ ಪೀಳಿಗೆಯಲ್ಲಿ ಕನ್ನಡಾಭಿಮಾನ ಬೆಳೆಸಬೇಕಿದೆ. ನಾವೆಲ್ಲರೂ ಒಗ್ಗಟ್ಟಾಗಿ ಕನ್ನಡ ನಾಡಿನ ಸಂಸ್ಕೃತಿ ಹಾಗೂ ಭಾಷೆ ಶ್ರೀಮಂತಗೊಳಿಸೋಣ ಎಂದರು. ವೇದಿಕೆಯಲ್ಲಿ …

Read More »

ಬಾರವಾಡ ಗ್ರಾಮದ ವಿಠ್ಠಲ-ಬೀರದೇವರ ಸಮುದಾಯ ಭವನ ಲೋಕಾರ್ಪಣೆ

ಬೋರಗಾಂವ: ಮಠ-ಮಂದಿರಗಳಿಂದ ಮಾನಸ್ಸಿಗೆ ಶಾಂತಿ, ನೆಮ್ಮದಿ ಸಿಗುತ್ತದೆ. ಜತೆಗೆ ನೈತಿಕ ಮೌಲ್ಯಗಳನ್ನು ಬೋಧಿಸುವ ಕೇಂದ್ರಗಳಾಗಿವೆ. ಸಕಾರಾತ್ಮಕ ಚಿಂತನೆ ಬೆಳೆಸುವಲ್ಲಿ ಅವುಗಳ ಪಾತ್ರ ಮಹತ್ತರವಾಗಿದೆ ಎಂದು ಶಾಸಕಿ ಶಶಿಕಲಾ ಜೊಲ್ಲೆ ಹೇಳಿದರು. ಸಮೀಪದ ಬಾರವಾಡ ಗ್ರಾಮದಲ್ಲಿ 10 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿದ ವಿಠ್ಠಲ, ಬಿರದೇವರ ಸಮುದಾಯ ಭವನ ಉದ್ಘಾಟನೆ ಹಾಗೂ ಪಿಆರ್‌ಇಡಿ ಯೋಜನೆಯಿಂದ ಮಂಜೂರಾದ 60 ಲಕ್ಷ ರೂ. ಅನುದಾನದಲ್ಲಿ ಬಾರವಾಡ-ಕಾರದಗಾ ರಸ್ತೆ ಕಾಮಗಾರಿಗೆ ಬುಧವಾರ ಚಾಲನೆ ನೀಡಿ ಮಾತನಾಡಿದರು. ಮುಜರಾಯಿ …

Read More »

ಜಿಟಿಟಿಸಿ ಸಂಸ್ಥೆ ಲಾಭ ಪಡೆಯಲು ಸಲಹೆ

ಬೆಳಗಾವಿ: ಕೌಶಲಪೂರ್ಣ ಮಾನವ ಸಂಪನ್ಮೂಲಕ್ಕೆ ಜಾಗತಿಕ ಬೇಡಿಕೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರ ಸಂಸ್ಥೆಯಲ್ಲಿ ಕೋರ್ಸ್ ಪೂರೈಸಿದ ವಿದ್ಯಾರ್ಥಿಗಳಿಗೆ ಉದ್ಯೋಗ ಅವಕಾಶ ಸಿಗಲಿವೆ ಎಂದು ಕೇಂದ್ರದ ಪ್ರಾಂಶುಪಾಲ ಯಲ್ಲಪ್ಪ ಸವದತ್ತಿ ತಿಳಿಸಿದರು. ನಗರದ ವಾರ್ತಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಉಪಕರಣ ಮತ್ತು ಅಚ್ಚುಶಾಸ್ತ್ರದಲ್ಲಿ ಉತ್ತಮ ಗುಣಮಟ್ಟದ ತರಬೇತಿ, ಉಪಕರಣ ಅಚ್ಚು ಮತ್ತು ಎರಕಗಳ ತಯಾರಿಕೆ, ಜಿಟಿಟಿಸಿ ಸಂಸ್ಥೆಯಲ್ಲಿ ತರಬೇತಿ ಪಡೆದ ವಿದ್ಯಾರ್ಥಿಗಳನ್ನು ನಾಲ್ಕು ವರ್ಷದ …

Read More »

ಸವದತ್ತಿಯಲ್ಲಿ ಭಕ್ತಿ, ಭಂಡಾರ ಮಧ್ಯೆ ಗ್ರಾಮದೇವಿಯರ ಪಲ್ಲಕ್ಕಿ ಉತ್ಸವ

ಸವದತ್ತಿ: ಐತಿಹಾಸಿಕ ಗ್ರಾಮದೇವಿ ಜಾತ್ರಾ ಮಹೋತ್ಸವದ ಮೂರನೇ ದಿನವಾದ ಬುಧವಾರ ನಗರ ಭಕ್ತಿ, ಭಂಡಾರ ಮಧ್ಯೆ ಗ್ರಾಮದೇವಿಯರ ಪಲ್ಲಕ್ಕಿ ಉತ್ಸವ ವಿಜೃಂಭಣೆಯಿಂದ ನೆರವೇರಿತು. ಜಾನಪದ ಕಲಾತಂಡ ಸೇರಿದಂತೆ ವಿವಿಧ ವಾದ್ಯಗಳೊಂದಿಗೆ ನಗರದ ದೇವಿಕಟ್ಟೆಯಿಂದ ಸವಳಬಾವಿ ಓಣಿ, ಹನುಮಗೇರಿ, ಜನತಾ ಪ್ಲಾಟ್, ಭಗೀರಥ ವೃತ್ತ, ಮೈಲಾರ ಕಟ್ಟಿ, ಪಟ್ಟದಕಲ್ಲು ಓಣಿ, ಬೀರದೇವರ ಕಟ್ಟೆ, ಪ್ರಭುನವರ ಓಣಿ, ದಿವಟಗಿ ಓಣಿ, ಕುಂಬಾರ ಓಣಿ, ಕಟಕೋಳ ಬ್ಯಾಂಕ್ ವೃತ್ತ ಹಾಗೂ ಸಬನೀಸ್ ಓಣಿ ಮಾರ್ಗವಾಗಿ …

Read More »

ಜಿಬಿಎ ಚುನಾವಣೆ ಸಿದ್ಧತೆ ಚುರುಕು

 ಬೆಂಗಳೂರು: ಗ್ರೇಟರ್​ ಬೆಂಗಳೂರು ಪ್ರಾಧಿಕಾರ (ಜಿಬಿಎ) ವ್ಯಾಪ್ತಿಯ ನಗರ ಸ್ಥಳಿಯ ಸಂಸ್ಥೆಗಳ ಚುನಾವಣೆಯನ್ನು ಸುಗಮ ಹಾಗೂ ಪಾರದರ್ಶಕವಾಗಿ ನಡೆಸಲು ರಾಜ್ಯ ಚುನಾವಣಾ ಆಯೋಗ ಅಗತ್ಯ ಸಿದ್ಧತೆಗಳನ್ನು ವೇಗಗೊಳಿಸಿದೆ. ಈ ಸಂಬಂಧ ಮಸ್ಟರಿಂಗ್​, ಡಿಮಸ್ಟರಿಂಗ್​ ಹಾಗೂ ಮತ ಎಣಿಕೆ ಕೇಂದ್ರಗಳ ವ್ಯವಸ್ಥೆ ಕುರಿತು ಮಹತ್ವದ ಸೂಚನೆಗಳನ್ನು ಹೊರಡಿಸಲಾಗಿದೆ. ರಾಜ್ಯ ಚುನಾವಣಾ ಆಯೋಗವು ಮೇ 4ರಂದು ಹೊರಡಿಸಿರುವ ಆದೇಶದಲ್ಲಿ, ಚುನಾವಣಾ ಕರ್ತವ್ಯಕ್ಕೆ ನಿಯೋಜನೆಯಾಗಿರುವ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಸಂಬಂಧಿಸಿದ ಮಸ್ಟರಿಂಗ್​ ಹಾಗೂ ಡಿಮಸ್ಟರಿಂಗ್​ …

Read More »

ವ್ಯಕ್ತಿ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ: 24 ಗಂಟೆಯಲ್ಲಿ ಆರೋಪಿ ಅರೆಸ್ಟ್

ಬೆಳಗಾವಿ: ವ್ಯಕ್ತಿಯೊಬ್ಬರ ತಲೆ ಮೇಲೆ  ಕಲ್ಲು ಎತ್ತಿ ಹಾಕಿ ಕೊಲೆ ಮಾಡಿರುವ ಘಟನೆ ಚನ್ನಮ್ಮನ ಕಿತ್ತೂರು ತಾಲ್ಲೂಕಿನ ದೇವಗಾಂವ ಗ್ರಾಮದಲ್ಲಿ ಬುಧವಾರ ನಡೆದಿದೆ. ಮಹಾಂತೇಶ ನಿಂಗಪ್ಪ ಹಚ್ಚಣ್ಣವರ (52) ಕೊಲೆಯಾದ ವ್ಯಕ್ತಿ. ಆರೋಪಿ ಪ್ರಕಾಶ ಕಲ್ಲಪ್ಪ ಕಾಳಾರ (30) ಕೊಲೆಗೈದ ಆರೋಪಿ. ಪ್ರಕಾಶ ಕಾಳಾರ ಒಬ್ಬನೇ ಮನೆಯಲ್ಲಿ ವಾಸವಿದ್ದ.  ಅವನಿಲ್ಲದ ವೇಳೆ ಅವರ ಮನೆಗೆ ಹೋಗಿ ಮಹಾಂತೇಶ ಮಲಗಿದ್ದ. ಮನೆಗೆ ಬಂದ ಪ್ರಕಾಶ ಇಲ್ಲಿ ಯಾಕೆ ಮಲಗಿದ್ದಿಯಾ ಎಂದು ಕೇಳಿದ. …

Read More »

ರೌಡಿಶೀಟರ್‌ಗಳು ಮಕ್ಕಳನ್ನು ಬಳಸಿಕೊಂಡು ರೀಲ್ಸ್ ಹಾಗೂ ವಿಡಿಯೋ ಮಾಡಿದರೆ ಮುಲ್ಲಾಜಿಲ್ಲದೆ ಕ್ರಮ

ಬೆಳಗಾವಿ: ಬೆಳಗಾವಿ ಜಿಲ್ಲೆಯಲ್ಲಿ ಸಾಮಾಜಿಕ ಜಾಲತಾಣಗಳನ್ನು ದುರುಪಯೋಗಪಡಿಸಿಕೊಂಡು “ಬ್ಯಾಡ್ ಬಾಯ್ಸ್”, “ಟಗರು ಬಾಯ್ಸ್”, “ಕಿಂಗ್ ಮೇಕರ್” ಎಂಬ ಹೆಸರಿನಲ್ಲಿ ರೌಡಿಶೀಟರ್‌ಗಳು ಮಕ್ಕಳನ್ನು ಬಳಸಿಕೊಂಡು ರೀಲ್ಸ್ ಹಾಗೂ ವಿಡಿಯೋಗಳನ್ನು ಹರಿಬಿಡುತ್ತಿರುವ ಪ್ರಕರಣಗಳನ್ನು ಪೊಲೀಸ್ ಇಲಾಖೆ ಗಂಭೀರವಾಗಿ ಪರಿಗಣಿಸಿದ್ದು, ಇಂಥ ಚಟುವಟಿಕೆಗಳ ವಿರುದ್ಧ ಮುಲ್ಲಾಜಿಲ್ಲದೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್ ಎಚ್ಚರಿಕೆ ನೀಡಿದರು. ಸಿನಿಮಾ ನೋಡಿ, ತಲ್ವಾರ್ ಹಿಡಿದು ಕೇಕ್ ಕಟ್ ಮಾಡುವುದು, ಸಾಮಾಜಿಕ ಜಾಲತಾಣದಲ್ಲಿ …

Read More »

ಅನುಮಾನಸ್ಪದ ವಾಹನ ತಪಾಸಣೆ ಆಯುಧ ಹೊಂದಿದ್ದ ಇಬ್ಬರ ಮೇಲೆ ಪ್ರಕರಣ ದಾಖಲು

ಬೆಳಗಾವಿ: ಬೆಳಗಾವಿ ನಗರದಲ್ಲಿ ಮೂವರು ಯುವಕರಿಗೆ ಚಾಕು ಇರತ ಆಗುತ್ತಿದ್ದಂತೆ “ಆ್ಯಂಟಿ ಸ್ಟಾಬಿಂಗ್ ಸ್ಕ್ವಾಡ್” ಮತ್ತೆ ಫುಲ್ ಆಕ್ಟಿವ್ ಆಗಿದೆ.‌ ಅನುಮಾನಸ್ಪದ ವ್ಯಕ್ತಿ ವಾಹನ ತಪಾಸಣೆ ನಡೆಸಿದ ಪೊಲೀಸರಿಗೆ ಇಬ್ಬರು ವ್ಯಕ್ತಿಗಳ ಬಳಿ ಆಯುಧ ಪತ್ತೆಯಾಗಿದೆ. ಇಬ್ಬರ ವಿರುದ್ಧ ಪ್ರಕರಣ ದಾಖಲಿಸಿ ಆಯುಧ ಜಪ್ತಿ ಮಾಡಿದ್ದಾರೆ. ಕಾಕತಿವೇಸ್ ನಲ್ಲಿ ಹಾಫ್ ಪ್ಯಾಂಟ್ ಜೇಬಿನಲ್ಲಿ ಹರಿತವಾದ ಚಾಕು ಇಟ್ಟುಕೊಂಡು ತಿರುಗಾಡುತ್ತಿದ್ದ ವ್ಯಕ್ತಿಯನ್ನು ಬಂಧಿಸಿ ಹರಿತವಾದ ಚಾಕು ವಶಪಡಿಸಿಕೊಳ್ಳಲಾಗಿದೆ. ಶಶಿಕಾಂತ ಅರಕೇರಿ (27) ಬಂಧಿತ …

Read More »

ಬಡವರ ‘ಅನ್ನ’ಕ್ಕೆ ಕನ್ನ – ಗದಗದಲ್ಲಿ ಬೃಹತ್ ಪಡಿತರ ಅಕ್ಕಿ ದಂಧೆ ಪತ್ತೆ, 14 ಲಕ್ಷ ಮೌಲ್ಯದ ಅಕ್ಕಿ ಜಪ್ತಿ!

ಗದಗ: ಬಡವರ ಹೊಟ್ಟೆ ಸೇರಬೇಕಿದ್ದ ಅನ್ನ ಭಾಗ್ಯದ ಅಕ್ಕಿಯನ್ನು ಕಾಳಸಂತೆಯಲ್ಲಿ ಮಾರಾಟ ಮಾಡಿ ಕೋಟಿಗಟ್ಟಲೆ ಲೂಟಿ ಮಾಡುತ್ತಿದ್ದ ಜಾಲವನ್ನು ಗದಗ ಪೊಲೀಸರು ಹಾಗೂ ಆಹಾರ ಇಲಾಖೆ ಅಧಿಕಾರಿಗಳು ಭೇದಿಸಿದ್ದಾರೆ. ಗದಗ ನಗರದ ತೋಂಟದಾರ್ಯ ಇಂಜಿನಿಯರಿಂಗ್ ಕಾಲೇಜ್ ಬಳಿ ಸಂಚರಿಸುತ್ತಿದ್ದ ಮಧ್ಯಪ್ರದೇಶ ನೋಂದಣಿಯ ಲಾರಿಯನ್ನು ತಡೆದ ಪೊಲೀಸರು ಮತ್ತು ಆಹಾರ ಇಲಾಖೆ ಅಧಿಕಾರಿಗಳು ತಪಾಸಣೆ ನಡೆಸಿದಾಗ ಅಕ್ರಮ ಬಯಲಾಗಿದೆ. ವಿಜಯನಗರ ಜಿಲ್ಲೆಯ ಹೂವಿನಹಡಗಲಿಯಿಂದ ಹೊರಟಿದ್ದ ಈ ಲಾರಿ ಗದಗ, ಇಳಕಲ್ ಮಾರ್ಗವಾಗಿ …

Read More »

ರಾಜೀನಾಮೆ ನೀಡದ ಮಮತಾ ಸರ್ಕಾರವೇ ವಜಾ

ಕೋಲ್ಕತ್ತಾ: ರಾಜೀನಾಮೆ ನೀಡದೇ ಭಾರೀ ಹೈಡ್ರಾಮಾ ಮಾಡಿದ್ದ ಮಮತಾ ಬ್ಯಾನರ್ಜಿ ನೇತೃತ್ವದ ಸರ್ಕಾರವನ್ನೇ ಪಶ್ಚಿಮ ಬಂಗಾಳದ ರಾಜ್ಯಪಾಲ ಆರ್‌ಎನ್‌ ರವಿ ವಜಾಗೊಳಿಸಿದ್ದಾರೆ. 2026ರ ವಿಧಾನಸಭಾ ಚುನಾವಣೆಯಲ್ಲಿ ತೃಣಮೂಲ ಕಾಂಗ್ರೆಸ್  ಸೋಲನ್ನನುಭವಿಸಿದರೂ, ಮಮತಾ ಬ್ಯಾನರ್ಜಿ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡದೇ ಮೊಂಡಾಟ ಮುಂದುವರಿಸಿದ್ದರು. ಟಿಎಂಸಿಗೆ ಸೋಲಾಗಿಲ್ಲ, ಚುನಾವಣಾ ಆಯೋಗದಿಂದಾಗಿ ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಜಯಗಳಿಸಿದೆ. ಬೇಕಿದ್ದರೆ ರಾಜ್ಯಪಾಲರೇ ನನ್ನನ್ನು ವಜಾ ಮಾಡಲಿ ಎಂದು ಸವಾಲು ಎಸೆದಿದ್ದರು. ಭಾರತದ ಸಂವಿಧಾನದ 172ನೇ …

Read More »