Breaking News

ಬಾರವಾಡ ಗ್ರಾಮದ ವಿಠ್ಠಲ-ಬೀರದೇವರ ಸಮುದಾಯ ಭವನ ಲೋಕಾರ್ಪಣೆ

Spread the love

ಬೋರಗಾಂವ: ಮಠ-ಮಂದಿರಗಳಿಂದ ಮಾನಸ್ಸಿಗೆ ಶಾಂತಿ, ನೆಮ್ಮದಿ ಸಿಗುತ್ತದೆ. ಜತೆಗೆ ನೈತಿಕ ಮೌಲ್ಯಗಳನ್ನು ಬೋಧಿಸುವ ಕೇಂದ್ರಗಳಾಗಿವೆ. ಸಕಾರಾತ್ಮಕ ಚಿಂತನೆ ಬೆಳೆಸುವಲ್ಲಿ ಅವುಗಳ ಪಾತ್ರ ಮಹತ್ತರವಾಗಿದೆ ಎಂದು ಶಾಸಕಿ ಶಶಿಕಲಾ ಜೊಲ್ಲೆ ಹೇಳಿದರು.

ಸಮೀಪದ ಬಾರವಾಡ ಗ್ರಾಮದಲ್ಲಿ 10 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿದ ವಿಠ್ಠಲ, ಬಿರದೇವರ ಸಮುದಾಯ ಭವನ ಉದ್ಘಾಟನೆ ಹಾಗೂ ಪಿಆರ್‌ಇಡಿ ಯೋಜನೆಯಿಂದ ಮಂಜೂರಾದ 60 ಲಕ್ಷ ರೂ. ಅನುದಾನದಲ್ಲಿ ಬಾರವಾಡ-ಕಾರದಗಾ ರಸ್ತೆ ಕಾಮಗಾರಿಗೆ ಬುಧವಾರ ಚಾಲನೆ ನೀಡಿ ಮಾತನಾಡಿದರು.
ಮುಜರಾಯಿ ಇಲಾಖೆ ಸಚಿವೆಯಾಗಿದ್ದಾಗ ತಾಲೂಕಿನ 375 ಮಂದಿರಗಳ ಅಭಿವೃದ್ಧಿ ಮಾಡಿದ್ದೇನೆ. ತಿರುಪತಿ ಬಾಲಾಜಿ, ಗುಡ್ಡಾಪುರ ದಾನಮ್ಮದೇವಿ, ಅಯ್ಯಪ್ಪಸ್ವಾಮಿ ದೇವಾಲಯ ಕೇರಳ ಹಾಗೂ ಶ್ರೀಶೈಲ ಸೇರಿದಂತೆ ಹಲವು ಕಡೆ ಕರ್ನಾಟಕ ಭಕ್ತರಿಗೆ ಯಾತ್ರಿನಿವಾಸ ನಿರ್ಮಿಸಲಾಗಿದೆ. ಅಭಿವೃದ್ಧಿ ಕಾರ್ಯಗಳಿಗೆ ನಾವು ಹೆಚ್ಚು ಒತ್ತು ನೀಡಿದ್ದೇವೆ. ರಸ್ತೆ ಅಭಿವೃದ್ಧಿಯಿಂದ ರೈತರಿಗೆ ಅನುಕೂಲವಾಗಲಿದೆ. ನಿಪ್ಪಾಣಿ ತಾಲೂಕು ಅಭಿವೃದ್ಧಿಯಲ್ಲಿ ಮಾದರಿ ಆಗಿರುವುದು ಹೆಮ್ಮೆಯ ವಿಷಯ ಎಂದರು.
ಡಿಸಿಸಿ ಬ್ಯಾಂಕ್ ಅಧ್ಯಕ್ಷ ಅಣ್ಣಾಸಾಹೇಬ ಜೊಲ್ಲೆ ಮಾತನಾಡಿ, ಹಾಲುಮತ ಸಮುದಾಯದ ಆರಾಧ್ಯ ದೇವ ಬೀರೇಶ್ವರ ಹೆಸರಿನಲ್ಲಿ ಸಂಸ್ಥೆ ಸ್ಥಾಪಿಸಿ ಅದನ್ನು ಕರ್ನಾಟಕ, ಮಹಾರಾಷ್ಟ್ರ  ಹಾಗೂ ಗೋವಾ ರಾಜ್ಯಗಳಲ್ಲಿ ವಿಸ್ತರಿಸಿದ್ದೇವೆ.
ಹುಲಿಜಂತಿಯಲ್ಲಿ ಯಾತ್ರಿನಿವಾಸ ನಿರ್ಮಿಸಲು ಬೀರೇಶ್ವರ ಸಂಸ್ಥೆಯಿಂದ 1 ಕೋಟಿ ರೂ. ಅನುದಾನ ನೀಡಲಾಗುವುದು. ಡಿಸಿಸಿ ಬ್ಯಾಂಕ್ ಹಾಗೂ ಹಾಲಶುಗರ್ ಕಾರ್ಖಾನೆ ವತಿಯಿಂದ ರೈತರಿಗೆ ಹಾಗೂ ಕಬ್ಬು ಕಟಾವು ಕಾರ್ಮಿಕರಿಗೆ ಟ್ರ್ಯಾಕ್ಟರ್ ಖರೀದಿಸಲು ಸಹಾಯಧನ ನೀಡುತ್ತಿದ್ದು, ಅದರ ಲಾಭ ಪಡೆದುಕೊಳ್ಳಬೇಕು ಎಂದು ಕರೆ ನೀಡಿದರು.
ಹಾಲಶುಗರ್ ಅಧ್ಯಕ್ಷ ಎಂ.ಪಿ.ಪಾಟೀಲ, ಉಪಾಧ್ಯಕ್ಷ ಪವನ ಪಾಟೀಲ, ನಿರ್ದೇಶಕ ಸಮಿತ ಸಾಸನೆ, ದೇವಪ್ಪ ದೇವಕಾತೆ, ರಾಮಗೊಂಡ ಚೌಗುಲೆ, ಹಾಲುಮತ ಸಮುದಾಯದ ಸಂಜಯ ಕೋಣೆ, ಯುವರಾಜ ಬತ್ತೆ, ರಂಗರಾವ ಬನ್ನೆ ಇತರರಿದ್ದರು.

Spread the love

About Laxminews 24x7

Check Also

ಬಸವಾದಿ ಶರಣರ ಬೃಹತ್ ಹಿಂದೂ ಸಮಾವೇಶಕ್ಕೆ ವಿಭಾಗೀಯ ಪೀಠ ಷರತ್ತುಬದ್ಧ ಅನುಮತಿ

Spread the loveಕಲಬುರಗಿ/ಬೀದರ್: ಜೂನ್ 28ರಂದು ಬೀದರ್‌ನ ಬಸವಕಲ್ಯಾಣದಲ್ಲಿ ನಡೆಯಲಿರುವ ಬಸವಾದಿ ಶರಣರ ಬೃಹತ್ ಹಿಂದೂ ಸಮಾವೇಶಕ್ಕೆ ಕರ್ನಾಟಕ ಹೈಕೋರ್ಟ್‌ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ