Breaking News

ಸವದತ್ತಿಯಲ್ಲಿ ಭಕ್ತಿ, ಭಂಡಾರ ಮಧ್ಯೆ ಗ್ರಾಮದೇವಿಯರ ಪಲ್ಲಕ್ಕಿ ಉತ್ಸವ

Spread the love

ಸವದತ್ತಿ: ಐತಿಹಾಸಿಕ ಗ್ರಾಮದೇವಿ ಜಾತ್ರಾ ಮಹೋತ್ಸವದ ಮೂರನೇ ದಿನವಾದ ಬುಧವಾರ ನಗರ ಭಕ್ತಿ, ಭಂಡಾರ ಮಧ್ಯೆ ಗ್ರಾಮದೇವಿಯರ ಪಲ್ಲಕ್ಕಿ ಉತ್ಸವ ವಿಜೃಂಭಣೆಯಿಂದ ನೆರವೇರಿತು.
ಜಾನಪದ ಕಲಾತಂಡ ಸೇರಿದಂತೆ ವಿವಿಧ ವಾದ್ಯಗಳೊಂದಿಗೆ ನಗರದ ದೇವಿಕಟ್ಟೆಯಿಂದ ಸವಳಬಾವಿ ಓಣಿ, ಹನುಮಗೇರಿ, ಜನತಾ ಪ್ಲಾಟ್, ಭಗೀರಥ ವೃತ್ತ, ಮೈಲಾರ ಕಟ್ಟಿ, ಪಟ್ಟದಕಲ್ಲು ಓಣಿ, ಬೀರದೇವರ ಕಟ್ಟೆ, ಪ್ರಭುನವರ ಓಣಿ, ದಿವಟಗಿ ಓಣಿ, ಕುಂಬಾರ ಓಣಿ, ಕಟಕೋಳ ಬ್ಯಾಂಕ್ ವೃತ್ತ ಹಾಗೂ ಸಬನೀಸ್ ಓಣಿ ಮಾರ್ಗವಾಗಿ ಗ್ರಾಮದೇವಿಯರ ಪಲ್ಲಕ್ಕಿ ಉತ್ಸವ ಆನಿ ಅಗಸಿ ದೇವಿ ಪಾದಗಟ್ಟೆ ಮೂಲಕ ಮರಳಿ ದೇವಿಕಟ್ಟೆಗೆ ಆಗಮಿಸಿತು.
ಗ್ರಾಮದೇವಿಯರ ಪಲ್ಲಕ್ಕಿಗೆ ಭಕ್ತರು ಪೂಜೆ ಸಲ್ಲಿಸಿ ಒಳತಿಗಾಗಿ ಪ್ರಾರ್ಥಿಸಿದರು. ದೇವಿಯರಿಗೆ ಭಂಡಾರ ಅರ್ಪಿಸಿ ಸಂಭ್ರಮಿಸಿದರು.
ಗಮನಸೆಳೆದ ಟ್ರ್ಯಾಕ್ಟರ್ ರಿವರ್ಸ್ ಸ್ಪರ್ಧೆ: ಜಾತ್ರೆ ಅಂಗವಾಗಿ ಮೊದಲ ಬಾರಿಗೆ ಹಮ್ಮಿಕೊಂಡಿದ್ದ ಟ್ರ್ಯಾಕ್ಟರ್ ರಿವರ್ಸ್ ಚಾಲನೆ ಸ್ಪರ್ಧೆ ಗಮನಸೆಳೆಯಿತು. ಶಾಸಕ ವಿಶ್ವಾಸ ವೈದ್ಯ, ಜಾತ್ರಾ ಸಮಿತಿ ಅಧ್ಯಕ್ಷ ವಿರೂಪಾಕ್ಷ ಮಾಮನಿ ಸ್ಪರ್ಧೆಗೆ ಚಾಲನೆ ನೀಡಿದರು. ಯುವಕರು ಉತ್ಸಾಹದಿಂದ ಸ್ಪರ್ಧಿಸಿ ತಮ್ಮ ಚಾಲನಾ ಕೌಶಲ ಪ್ರದರ್ಶಿಸಿದರು.
ಮೈನವಿರೇಳಿಸಿದ ಜಂಗೀ ಕುಸ್ತಿ: ನಗರದ ಎಸ್.ಕೆ.ಹೈಸ್ಕೂಲ್ ಮೈದಾನದಲ್ಲಿ ಹಮ್ಮಿಕೊಂಡಿದ್ದ ರಾಷ್ಟ್ರಮಟ್ಟದ ಜಂಗೀ ನಿಕಾಲಿ ಕುಸ್ತಿ ಪಂದ್ಯಾವಳಿಯಲ್ಲಿ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ೈಲ್ವಾನರು ಎದುರಾಳಿ ವಿರುದ್ಧ ರೋಚಕ ಸೆಣಸಾಟ ನಡೆಸಿ, ಪ್ರೇಕ್ಷಕರನ್ನು ರೋಮಾಂಚನಗೊಳಿಸಿದರು. ಮೂಲಿಮಠದ ಮಲ್ಲಿಕಾರ್ಜುನ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.

Spread the love

About Laxminews 24x7

Check Also

ತಿರಂಗ ಯಾತ್ರೆಯಲ್ಲಿ ಗಮನ ಸೆಳೆದ ಈಸೂರು ದಂಗೆಯ ಸ್ತಬ್ಧಚಿತ್ರ

Spread the loveಶಿವಮೊಗ್ಗ: ನಗರದ  ಶೀನಪ್ಪಶೆಟ್ಟಿ ವೃತ್ತದಲ್ಲಿ ಸ್ವಾತಂತ್ರ್ಯೋತ್ಸವ  ಅಂಗವಾಗಿ ಬಿಜೆಪಿ ವತಿಯಿಂದ ರಾಮಣ್ಣಶ್ರೇಷ್ಟಿ ಪಾರ್ಕ್‌ನಿಂದ ಗೋಪಿ ವೃತ್ತದವರೆಗೆ ತಿರಂಗ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ