Breaking News

ದೇವೇಗೌಡರಿಗೆ ರಾಜ್ಯಸಭೆ ಟಿಕೆಟ್ ಮಿಸ್; ಮೈತ್ರಿಗೆ ಯಾವುದೇ ಸಮಸ್ಯೆ ಇಲ್ಲ: ಸುರೇಶ್ ಬಾಬು ‎

Spread the love

ಬೆಂಗಳೂರು: ದೇವೇಗೌಡರಿಗೆ ಬಿಜೆಪಿ  ಅವರು ರಾಜ್ಯಸಭೆ  ಟಿಕೆಟ್ ಕೊಡಲಿಲ್ಲ ಅಂತ ಮೈತ್ರಿಯಲ್ಲಿ ಯಾವುದೇ ಭಿನ್ನಾಭಿಪ್ರಾಯ ಇಲ್ಲ ಎಂದು ಜೆಡಿಎಸ್ ಶಾಸಕಾಂಗ ನಾಯಕ ಸುರೇಶ್ ಬಾಬು  ತಿಳಿಸಿದ್ದಾರೆ.

‎ವಿಧಾನಸೌಧದಲ್ಲಿ ಪ್ರತಿಕ್ರಿಯೆ ನೀಡಿದ ಅವರು, ದೇವೇಗೌಡರಿಗೆ ರಾಜ್ಯಸಭೆ ಟಿಕೆಟ್ ಕೊಡಿ ಅಂತ ಬಿಜೆಪಿ ಅವರಿಗೆ ನಾವು ಕೇಳಿರಲಿಲ್ಲ. ಜನರ ಆಶಯ ಮತ್ತೆ ದೇವೇಗೌಡರು ಹೋಗುತ್ತಾರೆ ಅಂತ ಇತ್ತು. ಜನರ ಪರ ಅವರು ಮಾತನಾಡುತ್ತಾರೆ ಅಂತ ಇತ್ತು. ನಾವು ಟಿಕೆಟ್ ಕೇಳಿಲ್ಲ. ಇದರಿಂದ ಮೈತ್ರಿಗೆ ಯಾವುದೇ ಸಮಸ್ಯೆ ಇಲ್ಲ ಎಂದರು.

‎2028ಕ್ಕೆ ಬಿಜೆಪಿ-ಜೆಡಿಎಸ್ ಒಟ್ಟಾಗಿ ಹೋಗುತ್ತೇವೆ. ನಾವು ಕೇಳಿ ಅವರು ಕೊಟ್ಟಿರಲಿಲ್ಲ ಅಂದಿದ್ದರೆ ಅಸಮಾಧಾನ ಇರುತ್ತಿತ್ತು. ನಾವು ಕೇಳೇ ಇಲ್ಲ. ಯಾವುದೇ ಅಸಮಾಧಾನ ಇಲ್ಲ. ಮೈತ್ರಿಗೆ ಏನು ಸಮಸ್ಯೆ ಇಲ್ಲ ಎಂದು ಸ್ಪಷ್ಟಪಡಿಸಿದರು.


Spread the love

About Laxminews 24x7

Check Also

ಕುಡಿಯುವ ನೀರಿಗಾಗಿ 224 ಕೋಟಿ ಅನುದಾನ ಬಿಡುಗಡೆ – ಈಶ್ವರ್ ಖಂಡ್ರೆ

Spread the loveಬೆಂಗಳೂರು: ಕುಡಿಯುವ ನೀರಿಗಾಗಿ 224 ಕೋಟಿ ರೂ. ಅನುದಾನ ಬಿಡುಗಡೆ ಮಾಡಿದ್ದೇವೆ ಎಂದು ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ