Breaking News

Daily Archives: ಸೆಪ್ಟೆಂಬರ್ 14, 2021

ಸೀಮೆಎಣ್ಣೆ ಸುರಿದು ಆತ್ಮಹತ್ಯೆಗೆ ಮುಂದಾದ ಆರ್‌ಸಿಯು ವಿಧ್ಯಾರ್ಥಿಗಳು.

ಬೆಳಗಾವಿ: ಪರೀಕ್ಷೆಗಳನ್ನು ಮುಂದೂಡುವಂತೆ ಆರ್‌ಸಿಯು ಕ್ಯಾಂಪಸ್ ನಲ್ಲಿ ನಡೆಯುತ್ತಿರುವ ಪ್ರತಿಭಟನೆಯಲ್ಲಿ ವಿದ್ಯಾರ್ಥಿಗಳು ಸೀಮೆಎಣ್ಣೆ ಸುರಿದು ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ ಘಟನೆ ನಡೆದಿದೆ. ವಿಧ್ಯಾರ್ಥಿಗಳು ಆತ್ಮಹತ್ಯೆ ಮಾಡಕೊಳ್ಳಲು ಯತ್ನಿಸಿದರು ಆರ್‌ಸಿಯು ಕುಲಪತಿಗಳು ಮಾತ್ರ ನೋಡಿದರು ನೋಡದ ಹಾಗರ ತಮ್ಮ ಕ್ಯಾಬಿನ್ ಒಳಗಡೆ ಹೊಗಿ ಕುಳಿತುಕೊಂಡಿದ್ದಾರೆ.   https://www.facebook.com/107371068287820/posts/130964925928434/?sfnsn=mo ವಿದ್ಯಾರ್ಥಿಗಳ ಸಮಸ್ಯೆ ನೋಡಬೇಕಾಗಿದ್ದ ಕುಲಪತಿಗಳು ಮಾತ್ರ ಬೆಜವಾಬ್ದಾರಿ ರೀತಿಯಲ್ಲಿ ನಡೆದುಕೊಂಡಿದ್ದು, ವಿದ್ಯಾರ್ಥಿಗಳನ್ನು ಮತ್ತಷ್ಟು ಕೆಣಕಿದೆ.‌

Read More »

ತುಂಗಭದ್ರಾ ಜಲಾಶಯ ಭರ್ತಿ : ನದಿಪಾತ್ರದ ಜನರು ಸುರಕ್ಷಿತ ಸ್ಥಳಕ್ಕೆ ತೆರಳುವಂತೆ ಸೂಚನೆ

ಹೊಸಪೇಟೆ : ಕರ್ನಾಟಕ, ಆಂಧ್ರಪ್ರದೇಶ ಹಾಗೂ ತೆಲಂಗಾಣ ರಾಜ್ಯಗಳ ಲಕ್ಷಾಂತರ ರೈತರ ಜೀವನಾಡಿ ತುಂಗಭದ್ರಾ ಜಲಾಶಯ ಮತ್ತೊಮ್ಮೆ ಸಂಪೂರ್ಣ ಭರ್ತಿಯಾಗಿದ್ದು, ನದಿಪಾತ್ರದ ಜನ, ಜಾನುವಾರುಗಳು ಸುರಕ್ಷಿತ ಸ್ಥಳಗಳಿಗೆ ತೆರಳಲು ತುಂಗಭದ್ರಾ ಮಂಡಳಿ ಸೂಚಿಸಿದೆ. ಈ ಮಧ್ಯೆ 10 ಗೇಟ್‌ಗಳನ್ನು ತೆರೆದು ನದಿಗೆ 19 ಸಾವಿರ ಕ್ಯುಸೆಕ್ ನೀರು ಹರಿಸಲಾಗಿದೆ. ತುಂಗಭದ್ರಾ ಜಲಾನಯನ ಪ್ರದೇಶದಲ್ಲಿ ಬೀಳುತ್ತಿರುವ ಮಳೆಯಿಂದಾಗಿ ಜಲಾಶಯದ ಒಳ ಹರಿವಿನಲ್ಲಿ ಏರಿಕೆಯಾಗಿದೆ. ಜಲಾಶಯದ ಒಳ ಹರಿವು ಸದ್ಯ 30,861 ಕ್ಯುಸೆಕ್‌ನಷ್ಟಿದ್ದು, ಇನ್ನೂ ಏರಿಕೆಯಾಗುವ …

Read More »

ಲೈಂಗಿಕ ಸಂಭೋಗ ಅಥವಾ ಆಹಾರ! ಎರಡರಲ್ಲಿ ನಿಮ್ಮ ಆಯ್ಕೆ ಯಾವುದೆಂಬ ಪ್ರಶ್ನೆಗೆ ಶ್ರುತಿ ಕೊಟ್ಟ ಉತ್ತರ ವೈರಲ್​

ಚೆನ್ನೈ: ಸಾಮಾಜಿಕ ಜಾಲತಾಣದಲ್ಲಿ ಸದಾ ಸಕ್ರೀಯರಾಗಿರುವ ಸೆಲೆಬ್ರಿಟಿಗಳಲ್ಲಿ ನಟಿ ಶ್ರುತಿ ಹಾಸನ್​ ಕೂಡ ಒಬ್ಬರು. ಶ್ರುತಿ ಆಗಾಗ ತಮ್ಮ ಅಭಿಮಾನಿಗಳ ಜೊತೆ ತಮ್ಮ ಹಲವು ಸಂಗತಿಗಳನ್ನು ಶೇರ್​ ಮಾಡಿಕೊಳ್ಳುತ್ತಿರುತ್ತಾರೆ. ದಕ್ಷಿಣ ಭಾರತದ ಚಿತ್ರಗಳಲ್ಲದೇ, ಹಿಂದಿಯಲ್ಲೂ ಶ್ರುತಿ ಮಿಂಚು ಹರಿಸಿದ್ದಾರೆ. ತಮ್ಮ ಸೌಂದರ್ಯ, ಮಾದಕತೆ ಹಾಗೂ ಡ್ಯಾನ್ಸಿಂಗ್​ ಸ್ಕಿಲ್​ನಿಂದ ಸಾಕಷ್ಟು ಅಭಿಮಾನಿಗಳನ್ನು ಶ್ರುತಿ ಹೊಂದಿದ್ದಾರೆ. ಶ್ರುತಿ ತಮ್ಮ ಬೋಲ್ಡ್​ ಹೇಳಿಕೆಗಳಿಂದಲೇ ಮನೆ ಮಾತಾಗಿದ್ದಾರೆ. ಇತ್ತೀಚೆಗೆ ಮಾಧ್ಯಮ ಸಂದರ್ಶನವೊಂದರಲ್ಲಿ ಶ್ರುತಿಗೆ ಬೋಲ್ಡ್​ ಪ್ರಶ್ನೆಯೊಂದನ್ನು ಕೇಳಲಾಗಿತ್ತು. ಅದೇನೆಂದರೆ, …

Read More »

ಚರ್ಚ್,‌ಮಸೀದಿ ಬಿಟ್ಟು ದೇವಸ್ಥಾನಗಳ ಮೇಲೆ ಯಾಕೆ ಅಧಿಕಾರಿಗಳ ಕಣ್ಣು : ರೇಣುಕಾಚಾರ್ಯ ಕಿಡಿ

ಬೆಂಗಳೂರು: ಮೈಸೂರಿನಲ್ಲಿ ದೇಗುಲಗಳ ತೆರವು ಕಾರ್ಯದಿಂದ ಸಾಕಷ್ಟು ಮಂದಿ ಬೇಸರ ವ್ಯಕ್ತಪಡಿಸಿದ್ದಾರೆ. ಸ್ವಪಕ್ಷದವರೇ ಈ ಕಾರ್ಯಕ್ಕೆ ವಿರೋಧಿಸಿದ್ದಾರೆ. ಇದೀಗ ಈ ಸಂಬಂಧ ಪ್ರತಿಕ್ರಿಯೆ ನೀಡಿರುವ ಶಾಸಕ ಎಂಪಿ ರೇಣುಕಾಚಾರ್ಯ, ಗುಡುಗಿದ್ದಾರೆ. ಚರ್ಚ್, ಮಸೀದಿ ಬಿಟ್ಟು ಯಾಕೆ ಅಧಿಕಾರಿಗಳು ಕೇವಲ ದೇವಾಲಯಗಳನ್ನೇ ಟಾರ್ಗೆಟ್ ಮಾಡಿದ್ದಾರೆ ಎಂದು ಗುಡುಗಿದ್ದಾರೆ. ದೇವಸ್ಥಾನದ ಮೇಲೆ ಅಧಿಕಾರಿಗಳು ಏಕಾಏಕಿ ದಾಳಿ ಮಾಡೋದು ಸರಿಯಲ್ಲ. ಈಗಾಗಲೇ 1700 ದೇಗುಲ‌ನೆಲಸಮ ಮಾಡೋದಕ್ಕೆ ನೋಟಿಫಿಕೇಷನ್ ಬಂದಿದೆ. ನಮಗೆ ಚರ್ಚ್, ಮಸೀದಿ ಒಂದೇ. ಆದ್ರೆ …

Read More »

‘ನಿನಗೆ ಕನ್ನಡ ಪದಗಳು ಗೊತ್ತಾಗಲ್ಲ’: ದೇಶಪಾಂಡೆ ಕಿಚಾಯಿಸಿದ ಸಿದ್ದು

ಬೆಂಗಳೂರು: ವಿಧಾನಸಭೆ ಕಲಾಪದಲ್ಲಿ ಆಸ್ಕರ್‌ ಪರ್ನಾಂಡಿಸ್‌ ಅವರ ನಿಧನದ ಸಂತಾಪ ಸೂಚಕದ ಮೇಲಿನ ಚರ್ಚೆ ವೇಳೆ ಆರ್.ವ್ಹಿ.ದೇಶಪಾಂಡೆ ಅವರಿಗೆ ವಿಪಕ್ಷ ನಾಯಕ ಸಿದ್ದರಾಮಯ್ಯ ಕಿಚಾಯಿಸಿದ್ದರೆ. ‘ನಿನ್ಗೆ ಅನೇಕ ಕನ್ನಡದ ಪದಗಳು ಗೊತ್ತಾಗಲ್ಲ ದೇಶಪಾಂಡೆ’ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ. ನಾನು ಮುಖ್ಯಮಂತ್ರಿಯಾಗಿದ್ದಾಗ ಫರ್ನಾಂಡಿಸ್‌ ಅವರು ಕೇಂದ್ರದಲ್ಲಿ ಸರ್ಫೇಸ್‌ ಟ್ರಾನ್ಸ್‌ ಪೋರ್ಟ್‌ ಮಿನಿಸ್ಟರ್ ಇದ್ದರು ಎಂದು ಹೇಳಿದ್ದರು ಅದನ್ನ ನೆನಪಿಸಿಕೊಂಡ ಸಿದ್ದರಾಮಯ್ಯ, ಅದು ಕನ್ನಡದಲ್ಲಿ ಅದನ್ನು ‘ಭೂ ಸಾರಿಗೆ’ ಎಂದು ಹೇಳುತ್ತಾರೆ ಎಂದರು. …

Read More »

ಬೆಳಗ್ಗೆ ಎದ್ದು ಹಿಂದೂ ಹಿಂದೂ ಎನ್ನುವ ಬಿಜೆಪಿಯವರು ದೇವಸ್ಥಾನ ಒಡೆಯುತ್ತಿದ್ದಾರೆ: ರೇವಣ್ಣ

ಬೆಂಗಳೂರು: ಬೆಳಗ್ಗೆ ಎದ್ದರೆ ನಾವು ಹಿಂದೂ ಹಿಂದೂ ಎನ್ನುವ ಬಿಜೆಪಿಯವರು ಇದೀಗ ಹಿಂದೂ ದೇವಸ್ಥಾನ ಒಡೆಯುತ್ತಿದ್ದಾರೆ ಎಂದು ಜೆಡಿಎಸ್ ನಾಯಕ ಮಾಜಿ ಸಚಿವ ಹೆಚ್.ಡಿ.ರೇವಣ್ಣ ಹೇಳಿದರು. ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಂಜನಗೂಡಿನ ದೇವಸ್ಥಾನಕ್ಕೆ‌ ತನ್ನದೇ ‌ಇತಿಹಾಸ‌ವಿದೆ. ಪುರಾತನ ಕಾಲದಲ್ಲಿ‌ ದೇವಸ್ಥಾನ ನಿರ್ಮಿಸಲಾಗಿದೆ. ಸುಪ್ರೀಂ ಕೋರ್ಟ್ ಆದೇಶ ಪಾಲನೆ ಬೇಡವೆಂದು ಹೇಳುತ್ತಿಲ್ಲ. ಆದರೆ ದೇವಸ್ಥಾನ ಸಮಿತಿ ಜೊತೆ ಚರ್ಚಿಸಬೇಕು. ಪರ್ಯಾಯ ದೇವಸ್ಥಾನ ನಿರ್ಮಿಸಿ ನಂತರ ತೆರವು ಮಾಡಲಿ ಎಂದರು. ಜೆಡಿಎಸ್ ಇಲ್ಲದೆ …

Read More »

ಅನ್ನಭಾಗ್ಯ ಪಡಿತರ ಅಕ್ಕಿ ವಿತರಣೆಯಲ್ಲಿ ವ್ಯತ್ಯಾಸ : ಅಧಿಕಾರಿಗಳಿಂದ ಲೆಕ್ಕ ಪರಿಶೀಲನೆ

ಗಂಗಾವತಿ : ಗಂಗಾವತಿ, ಕನಕಗಿರಿ, ಕಾರಟಗಿ ತಾಲೂಕಿನ ನಗರ ಮತ್ತು ಗ್ರಾಮೀಣ ಭಾಗದ ನ್ಯಾಯಬೆಲೆ ಅಂಗಡಿಗಳಲ್ಲಿ ಅನ್ನಭಾಗ್ಯ ಯೋಜನೆ ಅಡಿಯಲ್ಲಿ ಅಕ್ಕಿ ವಿತರಣೆ ಲೆಕ್ಕದಲ್ಲಿ ವ್ಯತ್ಯಾಸ ಕಂಡುಬಂದಿದ್ದರಿಂದ ಸಹಾಯಕ ಆಯುಕ್ತ ನಾರಾಯಣರೆಡ್ಡಿ ಕನಕರೆಡ್ಡಿ ನೇತೃತ್ವದಲ್ಲಿ ತಾಲೂಕು ಮಟ್ಟದ ಅಧಿಕಾರಿಗಳು ಪಂಜಾಬ್ ಎಫ್ಸಿಐ ಗೋಡೌನ್ ಸೇರಿದಂತೆ ಅಕ್ಕಿ ವಿತರಣೆ ಮಾಡುವ ಸ್ಥಳಗಳ ಮೇಲೆ ದಾಳಿ ಮಾಡಿ ಲೆಕ್ಕ ಪರಿಶೋಧನೆ ನಡೆಸಿದ ಪ್ರಕರಣ ಗಂಗಾವತಿ ನಗರದಲ್ಲಿ ಮಂಗಳವಾರ ಜರುಗಿದೆ. ತಾಲೂಕಿನ ವಿವಿಧ ನ್ಯಾಯಬೆಲೆ ಅಂಗಡಿಗಳಿಗೆ …

Read More »

ಸ್ಯಾಂಡಲ್‌ವುಡ್‌ನ ಬೇಡಿಕೆಯ ಡೈಲಾಗ್ ರೈಟರ್ ಗುರು ಕಶ್ಯಪ್ ನಿಧನ

ಸ್ಯಾಂಡಲ್‌ವುಡ್‌ನ ಬಹುಬೇಡಿಕೆಯ ಡೈಲಾಗ್ ರೈಟರ್ ಗುರು ಕಶ್ಯಪ್ ಹೃದಯಾಘಾತದಿಂದ ನಿಧನ ಹೊಂದಿದರು. ಹಲವು ಸಿನಿಮಾಗಳಿಗೆ ಸಂಭಾಷಣೆ ಬರೆದಿದ್ದ ಗುರು ಕಶ್ಯಪ್​ ಸೋಮವಾರ (ಸೆಪ್ಟಂಬರ್ 13) ರಾತ್ರಿ ನಿಧನರಾದರು. ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ಮಾರ್ಗಮಧ್ಯದಲ್ಲೇ ಗುರು ಕಶ್ಯಪ್ ಕೊನೆಯುಸಿರು ಎಳೆದರು ಎನ್ನುವ ಮಾಹಿತಿ ತಿಳಿದುಬಂದಿದೆ. ಅವರಿಗೆ 45 ವರ್ಷ ವಯಸ್ಸಾಗಿತ್ತು. ಗುರು ಕಶ್ಯಪ್ ನಿಧನಕ್ಕೆ ಕನ್ನಡ ಚಿತ್ರರಂಗದ ಹಲವರು ಕಂಬನಿ ಮಿಡಿಯುತ್ತಿದ್ದಾರೆ. ಗಣೇಶ್​ ಅಭಿನಯದ ‘ಸುಂದರಾಂಗ ಜಾಣ’, ರಮೇಶ್​ ಅರವಿಂದ್​ ನಟನೆಯ …

Read More »

ಕರುನಾಡಿನ ಲಾಂಛನದಲ್ಲಿ ಕನ್ನಡವೇಕಿಲ್ಲ? ಸತ್ಯಮೇವ ಜಯತೆ ಹಿಂದಿಯಲ್ಲೇ ಇದೆ ಯಾಕೆ?

ದಾವಣಗೆರೆ: ಕರುನಾಡಿನಲ್ಲಿ ಕನ್ನಡವೇ ಆಡಳಿತ ಭಾಷೆ, ಎಲ್ಲ ವ್ಯವಹಾರಗಳು ಕನ್ನಡದಲ್ಲೇ ನಡೆಯಬೇಕು ಎಂಬುದು ಸರಕಾರದ ನಿಯಮ. ಆದರೆ ಕರುನಾಡಿನ ಲಾಂಛನದಲ್ಲೇ ಕನ್ನಡ ಮರೆಯಾಗಿರುವುದು ವಿಪರ್ಯಾಸ! ಇದು ವಿಚಿತ್ರವೆನಿಸಿದರೂ ಸತ್ಯ. ಆರು ದಶಕಗಳಿಂದ ನಮ್ಮ ಲಾಂಛನದಲ್ಲಿರುವ “ಸತ್ಯಮೇವ ಜಯತೇ’ ಹಿಂದಿಯಲ್ಲೇ ಇದೆ. ಕನ್ನಡ ಇಗೆ ಬದಲಾಯಿಸಿಲ್ಲ. ಹಿಂದಿ ಲಿಪಿಯಲ್ಲಿ “ಸತ್ಯಮೇವ ಜಯತೇ’ ಎಂದು ಬರೆದಿರುವ ಲಾಂಛನವನ್ನೇ ಇಂದು ಎಲ್ಲೆಡೆ ಬಳಕೆ ಮಾಡಲಾಗುತ್ತಿದೆ. ನೆರೆಯ ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣಗಳ ಲಾಂಛನಗಳಲ್ಲಿ ಆಯಾ ರಾಜ್ಯ …

Read More »

ಬೆಳಗಾವಿಯ ಹೃದಯ ಭಾಗ ಪಾಂಗೂಳ ಗಲ್ಲಿಯಲ್ಲಿರುವ ಸುಮಾರು 150 ವರ್ಷಗಳ ಇತಿಹಾಸ ಹೊಂದಿರುವ ಪ್ರಸಿದ್ಧ ಅಶ್ವತ್ಥಾಮ ದೇವಾಲಯ ತೆರವಿಗೆ ಮುಂದಾಗಿರುವುದಾಗಿ ಜಿಲ್ಲಾಡಳಿತ

ಬೆಳಗಾವಿ: ದೇವಾಲಯಗಳ ತೆರವು ಕಾರ್ಯಾಚರಣೆಗೆ ಈಗಗಲೇ ರಾಜ್ಯಾದ್ಯಂತ ಆಕ್ರೋಶ ವ್ಯಕ್ತವಾಗಿದ್ದು, ಇದೀಗ ಕುಂದಾನಗರಿ ಬೆಳಗಾವಿಯಲ್ಲಿಯೂ ಜಿಲ್ಲಾಡಳಿತ ಹಲವು ದೇವಾಲಯಗಳ ತೆರವಿಗೆ ಸಿದ್ಧತೆ ಮಾಡಿಕೊಂಡಿದೆ. ಸುಪ್ರೀಂ ಕೋರ್ಟ್ ಆದೇಶದ ನೆಪದಲ್ಲಿ ಪುರಾತನ ಹಿಂದೂ ದೇವಾಲಯಗಳನ್ನು ತೆರವುಗೊಳಿಸಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ.  ಬೆಳಗಾವಿಯ ಹೃದಯ ಭಾಗ ಪಾಂಗೂಳ ಗಲ್ಲಿಯಲ್ಲಿರುವ ಸುಮಾರು 150 ವರ್ಷಗಳ ಇತಿಹಾಸ ಹೊಂದಿರುವ ಪ್ರಸಿದ್ಧ ಅಶ್ವತ್ಥಾಮ ದೇವಾಲಯ ತೆರವಿಗೆ ಮುಂದಾಗಿರುವುದಾಗಿ ಜಿಲ್ಲಾಡಳಿತ ನೋಟೀಸ್ ಜಾರಿ ಮಾಡಿದೆ. ಈ ಸಾರ್ವಜನಿಕರು ಆಕ್ರೋಶ …

Read More »