Breaking News

Daily Archives: ಸೆಪ್ಟೆಂಬರ್ 1, 2021

ಗೋಕಾಕ ನಗರದಲ್ಲಿ ನಡೆಯುತ್ತಿರುವ ಕಳ್ಳತನ ಪ್ರಕರಣಗಳ ಕುರಿತು ಲಕ್ಷ್ಮೀ ನ್ಯೂಸ್ ಗೆ ಗೋಕಾಕ ಸಿಪಿಐ ಗೋಪಾಲ್ ರಾಥೋಡ್ ಪ್ರತಿಕ್ರಿಯೆ.

ಗೋಕಾಕನಗರದಲ್ಲಿ ನಡೆಯುತ್ತಿರುವುಕಳ್ಳತನ ಪ್ರಕರಣಗಳ   ಕುರಿತು ಲಕ್ಷ್ಮೀ ನ್ಯೂಸ್ ಗೆ ಗೋಕಾಕ ಸಿಪಿಐ ಗೋಪಾಲ್ ರಾಥೋಡ ಪ್ರತಿಕ್ರಿಯಿಸಿದ್ದು ಈಗಾಗಲೇ ಕಳ್ಳತನ ಪ್ರಕರಣದಲ್ಲಿ ಭಾಗಿಯಾದವರನ್ನು ಬಂಧಿಸಲು ತಂಡಗಳನ್ನರಚನೆ ಮಾಡಲಾಗಿದೆ.   ಇಂತಹಪ್ರಕರಣಗಳಲ್ಲಿ ಭಾಗಿಯಾಗುತ್ತಿದ್ದ ಗುಂಪೊಂದನ್ನು ಇತ್ತಿಚಿಗಷ್ಟೆರಾಮದುರ್ಗದಲ್ಲಿ ಬಂಧಿಸಲಾಗಿದೆ. ಗೋಕಾಕ ನಗರದ ಜನ ಹೆದರುವ ಅವಶ್ಯಕತೆ ಇಲ್ಲ. ಅನಾಮಿಕರು ರಾತ್ರಿ ವೇಳೆಯಲ್ಲಿ ಓಡಾಡುವುದು ಗೊತ್ತಾದರೆ ಸ್ಥಳೀಯರು 112ಗೆ ಕರೆಮಾಡಲು ಸೂಚಿಸಿದ್ದಾರೆ.

Read More »

ಬೆಂಗಳೂರು: ಮ್ಯಾಟ್ರಿಮೋನಿಯಲ್ಲಿ ಮದುವೆಯಾಗುವುದಾಗಿ ವಂಚನೆ ;30ರ ಮೇಲ್ಪಟ್ಟ ಯುವತಿಯರೇ ಟಾರ್ಗೆಟ್

ಬೆಂಗಳೂರು(ಸೆ. 01) ಮ್ಯಾಟ್ರಿಮೋನಿ ಸೈಟ್ ಮೂಲಕ ಮದುವೆಯಾಗುವುದಾಗಿ ನಂಬಿಸಿ ವಂಚಿಸುತ್ತಿದ್ದ ಆರೋಪಿಯನ್ನು ಹೆಣ್ಣೂರು ಪೊಲೀಸರು ಬಂಧಿಸಿದ್ದಾರೆ. ಹೆಣ್ಣು ಮಕ್ಕಳಿಂದ ಹಣ ಒಡವೆ ಪಡೆದು ಮದುವೆಯಾಗದೇ ನಂಬರ್ ಬ್ಲಾಕ್ ಮಾಡ್ತಿದ್ದ. ರಮೇಶ್, ವಿಜಯ್ ಹೀಗೆ ಬೇರೆ ಬೇರೆ ಹೆಸರಲ್ಲಿ ನಕಲಿ ಖಾತೆ ಕ್ರಿಯೆಟ್ ಮಾಡಿಕೊಂಡು ವಂಚನೆ ಮಾಡುತ್ತಿದ್ದ ಜಗನ್ನಾಥ್ (34) ಬಂಧನವಾಗಿದೆ. 30 ವರ್ಷ ಮೇಲ್ಪಟ್ಟ ವಿಚ್ಛೇದನ ಆಗಿರುವ ಯುವತಿಯರನ್ನ ಟಾರ್ಗೆಟ್ ಮಾಡಿ ಸಂಪರ್ಕ ಬೆಳೆಸಿಕೊಳ್ಳುತ್ತಿದ್ದ. ಆಕ್ಸಿಡೆಂಟ್ ಆಗಿದೆ, ಕ್ರೆಡಿಟ್ ಕಾರ್ಡ್ ಬ್ಲಾಕ್ …

Read More »

ಹಾಸನ ಪೊಲೀಸ್​ ಠಾಣೆ ಕೂಗಳತೆಯಲ್ಲೇ ಪುಡಿರೌಡಿಗಳ ಪುಂಡಾಟ.. ಯುವಕನಿಗೆ ಥಳಿತ

ಹಾಸನ: ಪೊಲೀಸ್ ಠಾಣೆ ಕೂಗಳತೆ ದೂರದಲ್ಲಿ ಪುಡಿರೌಡಿಗಳು ರಸ್ತೆಯಲ್ಲಿ ಮಚ್ಚು ಹಿಡಿದು ಗಲಾಟೆ ಎಬ್ಬಿಸಿದ ಘಟನೆ ನಗರದ ಕುವೆಂಪು ನಗರ ಬಡಾವಣೆಯಲ್ಲಿ ನಡೆದಿದೆ. ಹಾಸನ ನಗರದ ಕುವೆಂಪುನಗರ ಬಡಾವಣೆಯ ಜೆಕೆ ಬಾರ್ ಌಂಡ್ ರೆಸ್ಟೋರೆಂಟ್ ಬಳಿ ನಿಂತಿದ್ದ ಯುವಕರ ಬಳಿ ಆಗಮಿಸಿದ ರೌಡಿಗಳ ಗುಂಪು, ಸುಖಾಸುಮ್ಮನೆ ಯುವಕರೊಂದಿಗೆ ಜಗಳ ತೆಗೆದು ಓರ್ವ ಯುವಕನಿಗೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಈ ಪುಡಿ ರೌಡಿಗಳ ಪುಂಡಾಟ ಸಿಸಿಟಿವಿಯಲ್ಲಿ ಸೆರೆಯಾಗಿದೆ.   …

Read More »

ದೆವ್ವದ ವೇಷ ಧರಿಸಿ ಕೆಲಸ ಮಾಡ್ತಿದ್ದ ಹೋಟೆಲ್​ನಲ್ಲೇ ಕಳ್ಳತನ ಮಾಡಿದ ಸರ್ವರ್

ಬೆಂಗಳೂರು: ವ್ಯಕ್ತಿಯೋರ್ವ ತಾನು ಕೆಲಸ ಮಾಡುತ್ತಿದ್ದ ಹೋಟೆಲ್​ನಲ್ಲೇ ದೆವ್ವದ ವೇಷ ಹಾಕಿಕೊಂಡು ಕಳ್ಳತನ ಮಾಡಿರುವ ಘಟನೆ ಆನೇಕಲ್​ನ ಬೊಮ್ಮಸಂದ್ರ ಕೈಗಾರಿಕಾ ಪ್ರದೇಶದಲ್ಲಿರುವ ಶ್ರೀನಿಧಿ ಉಪಚಾರ ಹೋಟೆಲ್​ನಲ್ಲಿ ನಿನ್ನೆ ನಡೆದಿದೆ. ಹಳೇ ಸಿನಿಮಾದ ಕಳ್ಳರ ರೀತಿ ಸರ್ವರ್ ಅಪ್ಪಣ್ಣ ಶೆಟ್ಟಿ ಮೈತುಂಬಾ ಬಿಳಿ ಬಣ್ಣದ ಬಟ್ಟೆ ಮುಚ್ಚಿಕೊಂಡು ಬಂದು ಕೃತ್ಯ ಎಸಗಿದ್ದಾನೆ. ಸರ್ವರ್ ಅಪ್ಪಣ್ಣ ಕಳ್ಳತನ ಮಾಡಿದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈತ 25 ದಿನಗಳ ಹಿಂದೆ ಹೋಟೆಲ್​ನಲ್ಲಿ ಕೆಲಸಕ್ಕೆ ಸೇರಿದ್ದ ಆಗಿನಿಂದಲೇ …

Read More »

ವಾರ್ಡ ನಂ.4 ರಲ್ಲಿ ಕಾಂಗ್ರೆಸ್ ಗೆಲ್ಲುವ ಸಾಧ್ಯತೆ ಹೆಚ್ಚು…!!

ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆ ದಿನ ದಿನ ರಂಗೆರುತ್ತಿದೆ.ರಾಜಕೀಯ ಪಕ್ಷಗಳು ಸಿಂಬಾಲ್ ಮೇಲೆ ಚುನಾವಣೆ ಎದುರಿಸುತ್ತಿದ್ದರೆ ಎಮ್ ಇ ಎಸ್ ತೀವ್ರ ಪೈಪೋಟಿ ನೀಡಲು ತಯಾರಿ ಮಾಡಿಕೊಳ್ಳುತ್ತಿದೆ. ಕೆಲವು ವಾರ್ಡಗಳಲ್ಲಿ ಬಿಜೆಪಿ ಮುಂದೆ ಇದ್ದರೆ ಕೆಲವು ವಾರ್ಡಗಳಲ್ಲಿ ಕಾಂಗ್ರೆಸ್ ಮುಂದೆ ಇದೆ.ಇನ್ನು ಕೆಲವು ವಾರ್ಡಗಳಲ್ಲಿ ತ್ರಿಕೋನ ಸ್ಪರ್ಧೆ ಇದೆ.ಈ ತರಹ ತ್ರಿಕೋನ ಸ್ಪರ್ಧೆಯು ವಾರ್ಡ್ ನಂ 4 ರಲ್ಲಿ ನಡೆಯುತ್ತಿದೆ ಎಂದು ತಿಳಿದುಬಂದಿದೆ.ಇಲ್ಲಿ ಇವತ್ತಿನ ಮಟ್ಟಿಗೆ ಎಮ್ ಈ ಎಸ್ …

Read More »

ಮೈಸೂರಿನಲ್ಲಿ ಮತ್ತೆ ‘ಅಂಬಾರಿ’ ಸಂಚಾರ ಆರಂಭ

ಮೈಸೂರು, ಸೆ.1- ಪ್ರವಾಸಿಗರಿಗೆ ಸಂತಸದ ಸುದ್ದಿ. ಪ್ರವಾಸೋದ್ಯಮ ಇಲಾಖೆಯ ಡಬಲ್ ಡೆಕ್ಕರ್ `ಅಂಬಾರಿ’ ಬಸ್‍ನಲ್ಲಿ ಕುಳಿತು ಮೈಸೂರು ನಗರದ ಪ್ರವಾಸಿ ತಾಣಗಳಿಗೊಂದು ಸುತ್ತು ಹೊಡೆಯುವ ಕಾಲ ಮತ್ತೆ ಕೂಡಿ ಬಂದಿದೆ. ಸೆ.4ರಂದು ಬಸ್ ಸಂಚಾರ ಆರಂಭಿಸಲಿದ್ದು, ಮತ್ತೆ ಪ್ರವಾಸೋದ್ಯಮ ಚಿಗುರೊಡೆಯುತ್ತಿದೆ. ಕೊರೊನಾ ಹಿನ್ನೆಲೆಯಲ್ಲಿ ಬಸ್ ಧೂಳು ಹಿಡಿದು ನಿಲ್ಲುವಂತಾಗಿತ್ತು. ಇದೀಗ ಧೂಳು ಕೊಡವಿ ಸಂಚಾರಕ್ಕೆ ಎದ್ದು ನಿಂತಿದೆ. ಆಗಸ್ಟ್ ತಿಂಗಳಿನಲ್ಲಿಯೇ ಅಂಬಾರಿ ಬಸ್ ಸಂಚಾರ ಆರಂಭಿಸುವ ಕುರಿತ ಮಾತುಗಳು ಕೇಳಿ ಬಂದಿತ್ತಾದರೂ …

Read More »

ಶಾಲೆಗಳು ರೀ ಓಪನ್​​..! ಆದ್ರೆ ಬಸ್​ಗಳೇ ಇಲ್ಲ.. ನಿತ್ಯ ನಡೆಯುತ್ತಲೇ ಹೋಗಬೇಕಾಗಿದೆ ವಿದ್ಯಾರ್ಥಿಗಳು

ಗದಗ : ಶಿಕ್ಷಣ ಇಲಾಖೆಯೇನೋ ಹಲವಾರು ಅಡೆತಡೆಗಳ ನಡುವೆಯೂ ಶಾಲೆಗಳನ್ನು ಆರಂಭಿಸಿದೆ. ಆದರೆ ಇಲ್ಲೊಂದು ಶಾಲೆಯ ವಿದ್ಯಾರ್ಥಿಗಳು ಮಾತ್ರ ಶಾಲೆಗೆ ಹೋಗಬೇಕಾದ್ರೆ ನಿತ್ಯವು 4 ಕಿ.ಮೀ ನಷ್ಟು ದೂರ ನಡೆದುಕೊಂಡು ಹೋಗುವ ಸ್ಥಿತಿ ನಿರ್ಮಾಣವಾಗಿದ್ದು, ಶಾಲಾ ಸಮಯಕ್ಕೆ ಸರಿಯಾದ ಬಸ್​ ಇಲ್ಲದೆ ವೇದನೆ ಅನುಭವಿಸುತ್ತಿದ್ದಾರೆ.     ಹೌದು ಕೋವಿಡ್ ಲಾಕ್‌ಡೌನ್ ಸಂದರ್ಭದಲ್ಲಿ ಸ್ಥಗಿತಗೊಂಡ ಬಸ್ ಪುನರಾರಂಭವಾಗದ ಪರಿಣಾಮ, ವಿದ್ಯಾರ್ಥಿಗಳು ದಿನನಿತ್ಯ ಶಾಲೆಗೆ 4 ಕಿ.ಮೀ ನಡೆದುಕೊಂಡು ಹೋಗುವ ಪರಿಸ್ಥಿತಿ …

Read More »

ರಾಜ್ಯದ ಜನತೆಗೆ ನಾನು ಮುಖ್ಯಮಂತ್ರಿ, ಕ್ಷೇತ್ರದ ಒಳಗಡೆ ಬಸವರಾಜ ಬೊಮ್ಮಾಯಿ ಮಾತ್ರ

ಹಾವೇರಿ: ರಾಜ್ಯದ ಜನತೆಗೆ ನಾನು ಮುಖ್ಯಮಂತ್ರಿ, ಕ್ಷೇತ್ರದ ಒಳಗಡೆ ಬಸವರಾಜ ಬೊಮ್ಮಾಯಿ ಮಾತ್ರ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾವೇರಿಯ ಜನತೆಯಲ್ಲಿ ಹೇಳಿದ್ದಾರೆ. ಹಾವೇರಿ ಜಿಲ್ಲೆಯಲ್ಲಿ ವಿವಿಧ ಕಾಮಗಾರಿಗಳ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು ನಮ್ಮ ಸಚಿವ ಸಂಪುಟದಲ್ಲಿರುವ ಸಚಿವರು ಪ್ರತಿಭಾವಂತರಿದ್ದಾರೆ. ಕಾರ್ಯಕ್ಷಮತೆಯಿಂದ ಕೆಲಸ ಮಾಡುವ ಸಾಮರ್ಥ್ಯವನ್ನು ಹೊಂದಿದ್ದಾರೆ. ಹೀಗಾಗಿ ರಾಜ್ಯದ ಜನತೆಗೆ ಉತ್ತಮ ಕಾರ್ಯಕ್ರಮಗಳನ್ನು ಕೊಡಲು ಸಾಧ್ಯವಾಗುತ್ತಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು. ಶಿಗ್ಗಾವಿ ವಿಧಾನಸಭಾ ಕ್ಷೇತ್ರದ ತಡಸ ಗ್ರಾಮದಲ್ಲಿ …

Read More »

ತೂಕದ ಅಡ್ಜೆಸ್ಟ್​​ಮೆಂಟ್ ನಲ್ಲಿ ವಂಚನೆ : 7 ಅಂಗಡಿಗಳಿಗೆ ನೋಟಿಸ್, ಮೂವರು ಅರೆಸ್ಟ್ !

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿಗೆ ಹೈಟೆಕ್ ವಂಚನೆ ಎಂಟ್ರಿ ಕೊಟ್ಟಿದ್ದು ಕಣ್ಣಿಗೆ ಕಾಣುವಂತೆ ನಡೆದರೂ ಜನರು ಇದರಿಂದ ಮೋಸ ಹೋಗುತ್ತಿದ್ದಾರೆ. ತೂಕದ ಯಂತ್ರಕ್ಕೆ ಟೆಕ್ನಾಲಜಿ ಬಳಸಿಕೊಂಡು ಸಾರ್ವಜನಿಕರಿಗೆ ಮೋಸ ಮಾಡಲು ಹೊರಟಿದ್ದ ಹಲವು ಅಂಗಡಿಗಳ ಮಾಲೀಕರಿಗೆ ಪೊಲೀಸರು ನೋಟೀಸ್ ನೀಡಿದ್ದಾರೆ. ಹಾಗೂ ಮೂವರನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ರಾಜಗೋಪಾಲನಗರ ಪೊಲೀಸರು ಕಾರ್ಯಾಚರಣೆ ನಡೆಸಿ ಜನರನ್ನು ಮೋಸ ಮಾಡುವ ಅಂಗಡಿಗಳ ಅಸಲಿ ಸತ್ಯ ಬಯಲು ಮಾಡಿದ್ದಾರೆ. ಮಾಂಸ, ತರಾಕಾರಿ ಸೇರಿದಂತೆ ಹಲವು ಅಂಗಡಿಗಳಲ್ಲಿ …

Read More »

ಮೈಸೂರು ಅತ್ಯಾಚಾರ ಪ್ರಕರಣ: ಪೊಲೀಸರನ್ನೇ ಇರಿಯಲು ಮುನ್ನುಗ್ಗಿದ್ದ ಆರೋಪಿ!

ಮೈಸೂರು: ಸಾಮೂಹಿಕ ಅತ್ಯಾಚಾರದ ಆರೋಪಿಯು ಚಾಕುವಿನಿಂದ ಪೊಲೀಸರನ್ನೇ ಇರಿಯಲು ಮುನ್ನುಗ್ಗಿದ್ದ! ತಮಿಳುನಾಡಿನ ತಿರ್‌ಪೂರ್‌ ಜಿಲ್ಲೆಯ ಮನೆಯಲ್ಲಿದ್ದ ಆತನನ್ನು ಬಂಧಿಸಲು ತೆರಳಿದ್ದ ಪೊಲೀಸರು ಸ್ವಲ್ಪ ಯಾಮಾರಿದ್ದರೂ ಮಾರಣಾಂತಿಕ ಹಲ್ಲೆಗೆ ಗುರಿಯಾಗುತ್ತಿದ್ದ ಅಪಾಯಕಾರಿ ಸನ್ನಿವೇಶವೂ ನಿರ್ಮಾಣವಾಗಿತ್ತು.   ‘ಖಚಿತ ಮಾಹಿತಿ ಮೇರೆಗೆ ಆ.28ರಂದು ರಾತ್ರಿ 1 ಗಂಟೆಯಲ್ಲಿ ಕೇವೂರು ಗ್ರಾಮದ ತೋಟವೊಂದರಲ್ಲಿ ‌ಆರೋಪಿಯ ಮನೆ ಸೇರಿದಂತೆ ಅಲ್ಲಿದ್ದ 10ರಿಂದ 12 ಮನೆಗಳ ಶೋಧ ಕಾರ್ಯ ನಡೆದಿತ್ತು. ಆ ವೇಳೆಯಲ್ಲೇ ಆರೋಪಿ ಕುಟುಂಬದವರ ಜತೆ ಇರದೆ …

Read More »