Breaking News

Daily Archives: ಸೆಪ್ಟೆಂಬರ್ 12, 2021

ಅಡುಗೆ ಎಣ್ಣೆ ಸುಂಕ ಇಳಿಕೆ:4ರೂಪಾಯಿ ಇಳಿಸಿದ್ದೇ ಕೇಂದ್ರದ ಮಹಾನ್ ಸಾಧನೆ: ಗುಂಡೂರಾವ್ ವ್ಯಂಗ್ಯ

ಬೆಂಗಳೂರು : ಹಬ್ಬಗಳ ಋತುವಿನಲ್ಲಿ ಅಡುಗೆ ಎಣ್ಣೆಗಳ ಬೆಲೆಯನ್ನು ನಿಯಂತ್ರಣದಲ್ಲಿ ಇರಿಸುವುದಕ್ಕಾಗಿ ಕೇಂದ್ರ ಸರಕಾರವು ತಾಳೆ, ಸೋಯಾ ಮತ್ತು ಸೂರ್ಯಕಾಂತಿ ಎಣ್ಣೆಗಳ ಆಮದು ಸುಂಕವನ್ನು ಶೇ. 2.11ರಷ್ಟು ಕಡಿಮೆ ಮಾಡಿದ ಬೆನ್ನಿಗೆ ಕಾಂಗ್ರೆಸ್ ನಾಯಕ ದಿನೇಶ್ ಗುಂಡೂರಾವ್, ಮೋದಿ ಸರ್ಕಾರ ಹಬ್ಬಕ್ಕೆ ಜನಸಾಮಾನ್ಯರಿಗೆ ಕೊಟ್ಟ ಬಹುದೊಡ್ಡ ಕೊಡುಗೆಯಿದು ಎಂದು ಹೇಳಿದ್ದಾರೆ. ತಮ್ಮ ಅಧಿಕೃತ ಟ್ವೀಟರ್ ಖಾತೆಯ ಮೂಲಕ ಕೇಂದ್ರ ಸರ್ಕಾರವನ್ನು ವ್ಯಂಗ್ಯ ಧ್ವನಿಯಲ್ಲಿ ಟೀಕೆ ಮಾಡಿದ ಗುಂಡೂರಾವ್, ಕೇಂದ್ರ ಸರ್ಕಾರ ಅಡುಗೆ …

Read More »

ಕುಟುಂಬ ರಾಜಕಾರಣಕ್ಕೆ ಅಡಿಪಾಯ ಹಾಕಿದ್ದೇ ಇಂದಿರಾ ಗಾಂಧಿ : ನಟ ಚೇತನ್

ಬೆಂಗಳೂರು: ಮೊದಲು ಕಾಂಗ್ರೆಸ್‍ನ್ನು ಸೋಲಿಸಬೇಕೆಂದು ಹೇಳಿದ್ದ ನಟ ಹಾಗೂ ಹೋರಾಟಗಾರ ಚೇತನ್ ಕುಮಾರ್, ಕಾಂಗ್ರೆಸ್ ನ ಕುಟುಂಬ ರಾಜಕಾರಣಕ್ಕೆ ಅಡಿಪಾಯ ಹಾಕಿದ್ದೇ ಇಂದಿರಾ ಗಾಂಧಿ ಎಂದು ಟೀಕಿಸಿದ್ದಾರೆ. ಕುಟುಂಬ ರಾಜಕಾರಣದ ವಿಚಾರವನ್ನಿಟ್ಟುಕೊಂಡು, ದಿವಂಗತ ಇಂದಿರಾಗಾಂಧಿ ಅವರ ಬಗ್ಗೆ ಟ್ವೀಟ್ ಮಾಡಿರುವ ಚೇತನ್, ಕಾಂಗ್ರೆಸ್ ನ ಕುಟುಂಬ ರಾಜಕಾರಣಕ್ಕೆ ಮತ್ತು ಸ್ವಜನ ಪಕ್ಷಪಾತಕ್ಕೆ ಅಡಿಪಾಯ ಹಾಕಿದ್ದೇ ಇಂದಿರಾ ಗಾಂಧಿ ಎಂದು ಆರೋಪಿಸಿದ್ದಾರೆ. 1959 ರಲ್ಲಿ ಜವಾಹರಲಾಲ್ ನೆಹರೂ ಅವರು ಪ್ರಧಾನ ಮಂತ್ರಿಯಾಗಿದ್ದಾಗ ಅವರ …

Read More »

ಸೂತ್ರಧಾರಿ ಪಟ್ಟ ಅಳಿಯುತ್ತದೆ, ಸೂತ್ರಧಾರಿ ಸರಕಾರವನ್ನು ನಡೆಸುತ್ತಾನೆ: ಕೋಡಿಶ್ರೀಗಳ ಭವಿಷ್ಯ

ಕಳೆದ ಒಂದೂವರೆ ತಿಂಗಳಲ್ಲಿ ಕೋಡಿಮಠದ ಶ್ರೀಗಳು ಮತ್ತೊಮ್ಮೆ ಭವಿಷ್ಯವನ್ನು ನುಡಿದಿದ್ದಾರೆ. ಸಾಮಾನ್ಯವಾಗಿ, ಹಿಂದೂಗಳ ಹಬ್ಬದ ಸಂದರ್ಭಗಳಲ್ಲಿ ಭವಿಷ್ಯ ನುಡಿಯುವ ಶ್ರೀಗಳು, ಈಗ ತಾವು ಭಾಗವಹಿಸುವ ಧಾರ್ಮಿಕ ಕಾರ್ಯಕ್ರಮದ ನಂತರ ಕೂಡಾ ಭವಿಷ್ಯವನ್ನು ನುಡಿಯಲಾರಂಭಿಸಿದ್ದಾರೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸರಕಾರದ ಬಗ್ಗೆ ಭವಿಷ್ಯ ನುಡಿದಿರುವ ಕೋಡಿಶ್ರೀಗಳು, ‘ಸೂತ್ರಧಾರಿ ಪಟ್ಟ ಅಳಿಯುತ್ತದೆ’ ಎಂದು ಹೇಳಿದ್ದು, ಒಂದು ತಿಂಗಳ ಹಿಂದೆ ಅವರು ಹೇಳಿದ ಭವಿಷ್ಯಕ್ಕೂ ಈಗ ಹೇಳುತ್ತಿರುವ ಭವಿಷ್ಯಕ್ಕೂ ತಾಳೆಯಾಗುತ್ತಿಲ್ಲ ಎನ್ನುವುದು ಗಮನಿಸಬೇಕಾದ ವಿಚಾರ. …

Read More »

ಸಚಿವರಾದ ಪ್ರಹ್ಲಾದ್ ಜೋಶಿ, ತೋಮರ್ ಗೆ ಗುಜರಾತ್ ನೂತನ ಮುಖ್ಯಮಂತ್ರಿ ಆಯ್ಕೆ ಹೊಣೆ?

ಅಹ್ಮದಾಬಾದ್: ದಿಢೀರ್ ಬೆಳವಣಿಗೆಯಲ್ಲಿ ವಿಜಯ್ ರೂಪಾಣಿ ಗುಜರಾತ್ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಈ ನಿಟ್ಟಿನಲ್ಲಿ ಗುಜರಾತ್ ನ ನೂತನ ಮುಖ್ಯಮಂತ್ರಿಯನ್ನು ಆಯ್ಕೆ ಮಾಡಲು ಭಾರತೀಯ ಜನತಾ ಪಕ್ಷ ಇಬ್ಬರು ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಶಿ ಮತ್ತು ನರೇಂದ್ರ ಸಿಂಗ್ ತೋಮರ್ ಅವರನ್ನು ಭಾನುವಾರ (ಸೆ.12) ಕಳುಹಿಸುವ ಸಾಧ್ಯತೆ ಇದೆ ಎಂದು ವರದಿ ತಿಳಿಸಿದೆ. ಗುಜರಾತ್ ಮುಖ್ಯಮಂತ್ರಿ ವಿಜಯ್ ರೂಪಾಣಿ ದಿಢೀರ್ ರಾಜೀನಾಮೆ ನೀಡಿರುವುದು ಎಲ್ಲರಿಗೂ ಅಚ್ಚರಿ ಮೂಡಿಸಿತ್ತು. ರಾಜ್ಯಪಾಲರಿಗೆ ರಾಜೀನಾಮೆ …

Read More »

ವಿಜಯಪುರ : ನೀರಾವರಿ ಯೋಜನೆ ಅನುಷ್ಠಾನಕ್ಕೆ ಆಗ್ರಹಿಸಿ ಹೆದ್ದಾರಿ ತಡೆದು ಪ್ರತಿಭಟನೆ

ವಿಜಯಪುರ : ರೇವಣಸಿದ್ಧೇಶರ ಏತ ನೀರಾವರಿ ಸೇರಿದಂತೆ ಇಂಡಿ ಕ್ಷೇತ್ರದ ಸಮಗ್ರ ನೀರಾವರಿ ಯೋಜನೆಗಳ ಅನುಷ್ಟಾನಕ್ಕೆ ಆಗ್ರಹಿಸಿ ಹೆದ್ದಾರಿ ಸಂಚಾರ ತಡೆದು ಪ್ರತಿಭಟನೆ ನಡೆಸಲಾಗುತ್ತಿದೆ. ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಹೊರ್ತಿ ಗ್ರಾಮದ ಬಳಿ ಜೆಡಿಎಸ್ ನೇತೃತ್ವದಲ್ಲಿ ರೈತರು ರಾಷ್ಟ್ರೀಯ ಹೆದ್ದಾರಿ- 50 ಸಂಚಾರ ಬಂದ್ ಮಾಡಿ ಹೋರಾಟ ನಡೆಸಿದ್ದಾರೆ. ಬಿ.ಡಿ.ಪಾಟೀಲ ನೇತೃತ್ವದಲ್ಲಿ ನಡೆಯುತ್ತಿರುವ ಹೋರಾಗಾರರು ರೇವಣಸಿದ್ದೇಶ್ವರ ಏತ ನೀರಾವರಿ ಯೋಜನೆಗೆ ಚಾಲನೆ ನೀಡಬೇಕು, ಇಂಡಿ ತಾಲೂಕಿನ ಕೆರೆಗಳಿಗೆ ನೀರು ತುಂಬಿಸೋ ಕಾಮಗಾರಿಗೆ …

Read More »

ಮೈಸೂರು ಗ್ಯಾಂಗ್ ರೇಪ್ ಪ್ರಕರಣ, ವಿಶೇಷ ಪ್ಯಾಸಿಕ್ಯೂಟರ್ ನೇಮಕ

ಶಿವಮೊಗ್ಗ : ಮೈಸೂರು ಗ್ಯಾಂಗ್ ರೇಪ್ ಪ್ರಕರಣದ ಬಗ್ಗೆ ಶೀಘ್ರ ತನಿಖೆ ನಡೆಸಲು ವಿಶೇಷ ಪ್ಯಾಸಿಕ್ಯೂಟರ್ ನೇಮಕ ಮಾಡಲಾಗುತ್ತದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು. ಇಂದು ಸುದ್ದಿಗಾರರ ಜೊತೆ ಮಾತನಾಡಿದ ಸಂತ್ರಸ್ತೆ ಪೋಷಕರ ಮನವೊಲಿಸುವ ಕೆಲಸ ಮಾಡಲಾಗುತ್ತಿದೆ. ಅಗತ್ಯಬಿದ್ದರೆ ಪ್ಯಾಸಿಕ್ಯೂಟರುಗಳ ನೇಮಕ ಮಾಡಲಾಗುತ್ತದೆ. ಈ ಕುರಿತು ತನಿಖೆ ನಡೆಸಲು ಮುಂದಿನ ದಿನಗಳಲ್ಲಿ ವಿಶೇಷ ಪ್ಯಾಸಿಕ್ಯೂಟರುಗಳ ನೇಮಕ ಮಾಡಲಾಗುತ್ತದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು.

Read More »

ಶ್ರೀಮಂತ ಪಾಟೀಲ್ ಗೆ ಆಮಿಷವೊಡ್ಡಿದ್ದು ಯಾರೆಂದು ಪರಿಶೀಲನೆ ಆಗಬೇಕು : ಲಕ್ಷ್ಮಣ ಸವದಿ

ಬೆಳಗಾವಿ : ಮಾಜಿ ಸಚಿವ ಶ್ರೀಮಂತ ಪಾಟೀಲ್ ಅವರಿಗೆ ಹಣದ ಆಮಿಷವೊಡ್ಡಿದ್ದು ಯಾರೆಂದು ಪರಿಶೀಲನೆ ಆಗಬೇಕೆಂದು ಮಾಜಿ ಡಿಸಿಎಂ ಲಕ್ಷ್ಮಣ್ ಸವದಿ ಒತ್ತಾಯಿಸಿದ್ದಾರೆ.   ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶ್ರೀಮಂತ ಪಾಟೀಲ್ ರನ್ನು ಈ ಬಗ್ಗೆ ನಾನು ಭೇಟಿ ಮಾಡಿಲ್ಲ. ಅವರಿಗೆ ಯಾರು ಹಣ ಕೊಡಲು ತೆರಳಿದ್ದರು, ಯಾರು ಆಮಿಷವೊಡ್ಡಿದ್ದರೆಂದು ಪರಿಶೀಲನೆ ಆಗಬೇಕೆಂದು ಆಗ್ರಹಿಸಿದರು. ಇನ್ನು ಅಧಿಕಾರ ಶಾಶ್ವತವಲ್ಲ. ತು ಅವಕಾಶ ಕೊಟ್ಟಾಗ ಸದ್ಬಳಕೆ ಮಾಡಿಕೊಳ್ಳಬೇಕು. ಶ್ರೀಮಂತ ಪಾಟೀಲ್ …

Read More »

ಧಾರವಾಡಿ ಎಮ್ಮೆ ತಳಿಗೆ ಸಿಕ್ಕಿತು ರಾಷ್ಟ್ರೀಯ ಮಾನ್ಯತೆ; ಈ ಎಮ್ಮೆಗೆ ಎಷ್ಟೆಲ್ಲಾ ವೈಶಿಷ್ಟ್ಯಗಳಿವೆ ಗೊತ್ತಾ?

ಧಾರವಾಡ(ಸೆ.12): ಧಾರವಾಡ ಪೇಡಾ ಅಂದ್ರೆ ಸಾಕು ಎಲ್ಲರ ಬಾಯಲ್ಲೂ ನೀರು ಬರುತ್ತೆ. ಇದರಿಂದಲ್ಲದೇ ಇಂದು ಧಾರವಾಡ ಪೇಡಾದ ಖ್ಯಾತಿ ವಿಶ್ವಮಟ್ಟಕ್ಕೇರಿದೆ. ಈ ಪೇಡಾ ಸ್ವಾದಿಷ್ಟಕ್ಕೆ ಕಾರಣವೇ ಧಾರವಾಡದ ಎಮ್ಮೆಯ ಹಾಲು. ಧಾರವಾಡ ಪೇಡಾದಂತೆಯೇ ಧಾರವಾಡದ ಎಮ್ಮೆಗೂ ರಾಷ್ಟ್ರಮಟ್ಟದಲ್ಲಿ ಮಾನ್ಯತೆ ಸಿಕ್ಕಿದೆ. ಹೌದು, ಇಷ್ಟು ದಿನ ಕೇವಲ ಧಾರವಾಡಕ್ಕೆ ಮಾತ್ರವೇ ಸೀಮಿತವಾಗಿದ್ದ ಧಾರವಾಡದ ಸ್ಥಳೀಯ ಎಮ್ಮೆ ತಳಿಗೆ ಈಗ ದೇಸಿ ತಳಿಯ ಸ್ಥಾನಮಾನ ನೀಡಲಾಗಿದೆ. ವಿಶೇಷ ತಳಿಗಳಿಗೆ ರಾಷ್ಟ್ರ ಮಟ್ಟದಲ್ಲಿ ಮಾನ್ಯತೆ ಸಿಕ್ಕಾಗ …

Read More »

ಕಾಂಗ್ರೆಸಿಗರು 2 ದಶಕ ಅಧಿಕಾರಕ್ಕೆ ಬರುವ ಕನಸು ಕಾಣಬೇಡಿ: ನಳಿನ್‌

ಬೆಳ್ತಂಗಡಿ: ಕಾಂಗ್ರೆಸ್ಸಿಗರು ಇನ್ನೆರಡು ದಶಕಗಳ ಕಾಲ ರಾಜ್ಯದಲ್ಲಿ ಅಧಿಕಾರಕ್ಕೆ ಬರುವ ಕನಸನ್ನು ಕಾಣುವುದೇ ಬೇಡ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಸಂಸದ ನಳಿನ್‌ಕುಮಾರ್‌ ಕಟೀಲ್‌ ತಿಳಿಸಿದರು. ಧರ್ಮಸ್ಥಳದಲ್ಲಿ ಶನಿವಾರ 161ನೇ ಬೂತ್‌ ಸಮಿತಿಯ ಅಧ್ಯಕ್ಷರ ಮನೆಗೆ ಬಿಜೆಪಿ ನಾಮಫಲಕ ಅಳವಡಿಸಿದ ಬಳಿಕ ಅವರು ಮಾತನಾಡಿದರು. ರಾಜ್ಯ ಸರಕಾರ ಎಲ್ಲರನ್ನೂ ಒಳಗೊಂಡ ಸಮಗ್ರ ಅಭಿವೃದ್ಧಿಯ ಗುರಿಯೊಂದಿಗೆ ಕಾರ್ಯನಿರ್ವಹಿಸುತ್ತಿದೆ. ಇಂತಹ ಕಾರ್ಯಗಳು ಬಿಜೆಪಿಯಲ್ಲಿ ಮಾತ್ರ ಕಾಣಲು ಸಾಧ್ಯ ಎಂದರು. ಬೆಳ್ತಂಗಡಿಯಲ್ಲಿ ಕಾಂಗ್ರೆಸ್‌ ನಡೆಸಿಕೊಂಡು ಬಂದಿದ್ದ ಕೀಳುಮಟ್ಟದ …

Read More »

ಸ್ಮಾರ್ಟ್‌ ಸಿಟಿ ಕಾಮಗಾರಿ ವರ್ಷದಲ್ಲಿ ಪೂರ್ಣ: ಗೋವಿಂದ ಕಾರಜೋಳ

ಬೆಳಗಾವಿ: ‘ನಗರದಲ್ಲಿ ಸ್ಮಾರ್ಟ್‌ ಸಿಟಿ ಕೆಲಸಗಳನ್ನು ಇನ್ನೊಂದು ವರ್ಷದಲ್ಲಿ ಪೂರ್ಣಗೊಳಿಸಿ ಜನರಿಗೆ ಅನುಕೂಲ ಮಾಡಿಕೊಡಲಾಗುವುದು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ತಿಳಿಸಿದರು. ‘ಕೇಂದ್ರ ಮತ್ತು ರಾಜ್ಯದಲ್ಲಿನ ನಮ್ಮ ಸರ್ಕಾರವು ಅನೇಕ ಜನಪರ ಯೋಜನೆಗಳಿಂದ ಜನರ ವಿಶ್ವಾಸ ಗಳಿಸಿದೆ. ರಾಜ್ಯದಲ್ಲಿ ಹಿಂದಿನ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಾಗೂ ಈಗಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಜಾರಿಗೊಳಿಸಿದ ಅಭಿವೃದ್ಧಿ ಕಾರ್ಯಗಳು, ಇಲ್ಲಿನ ಎಲ್ಲ ನಾಯಕರು ಒಗ್ಗೂಡಿ ಶ್ರಮ ವಹಿಸಿದ ಪ್ರತಿಫಲದಿಂದ ಮಹಾನಗರಪಾಲಿಕೆಯಲ್ಲಿ ಬಿಜೆಪಿ ಸ್ಪಷ್ಟ …

Read More »