Breaking News

Daily Archives: ಸೆಪ್ಟೆಂಬರ್ 13, 2021

ರಸ್ತೆ ವಿಸ್ತರಣೆಯ ಸಂದರ್ಭದಲ್ಲಿ ಮಧ್ಯಭಾಗಕ್ಕೆ ಬಂದ ವಿದ್ಯುತ್ ಕಂಬವನ್ನು ತೆರವುಗೊಳಿಸದೇ ಕಾಂಕ್ರಿಟ್‌

ಚಿತ್ರದುರ್ಗ: ರಸ್ತೆ ವಿಸ್ತರಣೆಯ ಸಂದರ್ಭದಲ್ಲಿ ಮಧ್ಯಭಾಗಕ್ಕೆ ಬಂದ ವಿದ್ಯುತ್ ಕಂಬವನ್ನು ತೆರವುಗೊಳಿಸದೇ ಕಾಂಕ್ರಿಟ್‌ ಕಾಮಗಾರಿಯನ್ನು ಗುತ್ತಿಗೆದಾರ ಪೂರ್ಣಗೊಳಿಸಿದ್ದಾರೆ. ಇದರ ಫೋಟೊ ಹಾಗೂ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಸಾರ್ವಜನಿಕರಿಂದ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ. ಚಿತ್ರದುರ್ಗ ನಗರದ ತುರುವನೂರು ರಸ್ತೆಯಲ್ಲಿ ಇಂತಹದೊಂದು ಲೋಪ ಕಂಡುಬಂದಿದೆ. ರಸ್ತೆಯ ಮಧ್ಯಭಾಗದ ವಿದ್ಯುತ್ ಕಂಬಗಳು ಅಪಘಾತಕ್ಕೆ ಆಹ್ವಾನ ನೀಡುವಂತಿವೆ. ತುರುವನೂರು ರಸ್ತೆಯ ವಿಸ್ತರಣೆ ಕಾಮಗಾರಿಯನ್ನು ₹ 7 ಕೋಟಿ ವೆಚ್ಚದಲ್ಲಿ ಕೈಗೆತ್ತಿಕೊಳ್ಳಲಾಗಿದೆ. ಒಂದೂವರೆ ವರ್ಷದಿಂದ ಕಾಮಗಾರಿ …

Read More »

ಒಂದೂವರೆ ವರ್ಷದ ಮಗುವಿನೊಂದಿಗೆ ಬಾವಿಗೆ ಹಾರಿದ ತಾಯಿ!

ಬಾಗಲಕೋಟೆ: ಒಂದು ವರ್ಷದ ಮಗುವಿನೊಂದಿಗೆ ತಾಯಿಯೊಬ್ಬರು ಬಾವಿಗೆ ಹಾರಿರುವ ಘಟನೆ ಜಿಲ್ಲೆಯ ಗುಳೇದಗುಡ್ಡ ತಾಲ್ಲೂಕಿನ ರಾಘಾಪುರದಲ್ಲಿ ನಡೆದಿದೆ. ಹಂಸನೂರ ಗ್ರಾಮದ ಫಕೀರವ್ವ (26) ಎಂಬಾಕೆ ತನ್ನ ಒಂದು ವರ್ಷದ ಮಗುವಿನೊಂದಿಗೆ ಬಾವಿಗೆ ಜಿಗಿದಿದ್ದಾರೆ. ಮಗು ಶಿವಾನಿ ಸಾವಿಗೀಡಾಗಿದ್ದು, ಮೃತದೇಹವನ್ನು ಅಗ್ನಿಶಾಮಕ ದಳದ ಸಿಬ್ಬಂದಿ ಹೊರತೆಗೆದಿದ್ದಾರೆ. ಫಕೀರವ್ವಳಿಗಾಗಿ ಬಾವಿಯಲ್ಲಿ ಹುಡುಕಾಟ ಮುಂದುವರಿಸಿದ್ದಾರೆ. ಫಕೀರವ್ವ ಹೆರಿಗೆಗಾಗಿ ತನ್ನ ಅಜ್ಜಿಯ ಊರು ರಾಘಾಪುರಕ್ಕೆ ಬಂದಿದ್ದಳು. ಹೆರಿಗೆ ಬಳಿಕ ಗಂಡನ ಮನೆಯವರು ಆಕೆಯನ್ನು ಕರೆದುಕೊಂಡು ಹೋಗಲು …

Read More »

ಗಂಡನ ಮೇಲೆ ಪೆಟ್ರೋಲ್​ ಸುರಿದು ಬೆಂಕಿ ಹಚ್ಚಿ ಸಾಯಿಸಿ, ಶವವನ್ನ ಕಸದಂತೆ ಚರಂಡಿಗೆ ಹಾಕಿದ ತುಮಕೂರು ಮಹಿಳೆ

ಕಳೆದ 8 ವರ್ಷಗಳಿಂದ ಪ್ರತಿನಿತ್ಯ ಜಗಳವಾಗುತ್ತಿತ್ತು. ಅಲ್ಲದೆ ಅನ್ನಪೂರ್ಣಗೆ ಅಕ್ರಮ ಸಂಬಂಧ ಇತ್ತು, ಇದೇ ಕಾರಣಕ್ಕೆ ಕೊಲೆ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ. ತುಮಕೂರು: ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ, ಪತ್ನಿಯೇ ಪತಿಯನ್ನು ಹತ್ಯೆ ಮಾಡಿದ ಘಟನೆ ತುಮಕೂರಿನ ಬಡ್ಡಿಹಳ್ಳಿಯಲ್ಲಿ ನಡೆದಿದೆ. ಪತಿ ನಾರಾಯಣ(52) ಹತ್ಯೆಗೈದ ಪತ್ನಿ ಅನ್ನಪೂರ್ಣ, ಶವವನ್ನು ಚರಂಡಿಗೆ ಎಸೆದಿದ್ದಾಳೆ. ಸದ್ಯ ಈ ಸಂಬಂಧ ಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನೆಲಮಂಗಲ ಬಳಿಯ ಟೋಲ್​ನಲ್ಲಿ ಪತಿ …

Read More »

ಜೋಕುಮಾರ ತರ್ತಾನಾ ಮಳೆ..! ಮಳೆ-ಬೆಳೆಯ ಪ್ರತೀಕ ಜೋಕುಮಾರನ ಹಬ್ಬ

ಬನಹಟ್ಟಿ : ನಮ್ಮದು ಸಂಪ್ರದಾಯ ಸಂಸ್ಕೃತಿಯ ನೆಲೆಬೀಡು, ಗ್ರಾಮೀಣ ಪ್ರದೇಶದಲ್ಲಿ ಹಿಂದಿನಿಂದ ಆಚರಿಸುತ್ತಾ ಬಂದ ಕೆಲ ಧಾರ್ಮಿಕ ಆಚರಣೆಗಳು ಇಂದಿಗೂ ನಮ್ಮಲ್ಲಿ ಪ್ರಸ್ತುತ ಎನ್ನುವುದಕ್ಕೆ ಉತ್ತರ ಕರ್ನಾಟಕದ ಜೋಕುಮಾರನ ಹಬ್ಬ ಕೂಡಾ ಒಂದು. ಹಿಂದಿನಿಂದ ತಮ್ಮ ಹಿರಿಯರು ಆಚರಿಸುತ್ತಾ ಬಂದ ಈ ಜೋಕುಮಾರನ ಹಬ್ಬ ಉತ್ತರ ಕರ್ನಾಟಕದಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ಇಂದಿಗೂ ಚಾಲ್ತಿಯಲ್ಲಿದೆ. ಭಾದ್ರಪದ ಮಾಸದ ಅಷ್ಟಮಿಯಂದು ಹುಟ್ಟುವ ಜೋಕುಮಾರ ಜೋ ಎಂಬ ಮುನಿಯ ಮಗನು, ಜೇಷ್ಠಾ ದೇವಿಯ ಮಗನೆಂದು …

Read More »

ಮೈಸೂರಿಗೆ ಗಜ ಪಯಣ ಆರಂಭ

ಮೈಸೂರು, ಸೆ.13- ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವವನ್ನ ಸರಳ ಮತ್ತು ಸಾಂಪ್ರದಾಯಿಕವಾಗಿ ಆಚರಿಸಲು ನಿರ್ಧರಿಸಲಾಗಿದ್ದು ಈ ನಡುವೆ ಇಂದು ಗಜ ಪಯಣಕ್ಕೆ ಚಾಲನೆ ದೊರೆತಿದೆ. ಹುಣಸೂರಿನ ವೀರನಹೊಸಹಳ್ಳಿಯಲ್ಲಿ ಸರಳ ಗಜಪಯಣಕ್ಕೆ ಚಾಲನೆ ದೊರೆತಿದ್ದು ಕ್ಯಾಪ್ಟನ್ ಅಭಿಮನ್ಯು ನೇತೃತ್ವದ 8 ಆನೆಗಳು ಕಾಡಿನಿಂದ ನಾಡಿನತ್ತ ಹೆಜ್ಜೆ ಹಾಕಿವೆ. ದಸರಾ ಗಜಪಡೆಯಲ್ಲಿ 5 ಗಂಡಾನೆ, 3 ಹೆಣ್ಣಾನೆ ಭಾಗಿಯಾಗಲಿವೆ. ಕೊರೊನಾ ನಡುವೆ ಸಾಂಪ್ರದಾಯಿಕ ದಸರಾ ಆಚರಣೆಗೆ ಇಂದು ಚಾಲನೆ ದೊರೆತಿದ್ದು, ಜಂಬೂಸವಾರಿ …

Read More »

ಸದನದಲ್ಲಿ ಮಾಜಿ ಸಿಎಂ ಯಡಿಯೂರಪ್ಪಗೆ ಮುಖ್ಯ ಸಚೇತಕರ ಪಕ್ಕದ ಆಸನ: ಸಿಎಂ ಬೊಮ್ಮಾಯಿ ಆಡಳಿತಕ್ಕೆ ಬಹುಪರಾಕ್!

ಬೆಂಗಳೂರು: ಕರ್ನಾಟಕದ 15ನೇ ವಿಧಾನಸಭೆಯ 10ನೇ ಅಧಿವೇಶನವು ಸೋಮವಾರದಿಂದ ಸೆಪ್ಟೆಂಬರ್ 24 ರವರೆಗೆ ನಡೆಯಲಿದ್ದು, ಈ ಸಂದರ್ಭದಲ್ಲಿ ಹಿಂದಿನ ನಿಕಟಪೂರ್ವ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಸದನದಲ್ಲಿ ಎಲ್ಲಿ ಕುಳಿತುಕೊಳ್ಳುತ್ತಾರೆ, ಅವರಿಗೆ ಯಾವ ಸ್ಥಾನ ನೀಡಲಾಗುತ್ತದೆ, ಶಾಸಕ ಸೀಟಿನಲ್ಲಿ ಅವರು ಕೂರಬೇಕಾಗುತ್ತದೆ ಎಂಬಿತ್ಯಾದಿ ಹಲವು ಚರ್ಚೆಗಳು ಕೇಳಿಬಂದಿದ್ದವು. ಈ ಬಗ್ಗೆ ಇಂದು ವಿಧಾನಸೌಧಕ್ಕೆ ಕಲಾಪಕ್ಕೆ ಆಗಮಿಸಿದ ಯಡಿಯೂರಪ್ಪನವರು ಸುದ್ದಿಗಾರರೊಂದಿಗೆ ಮಾತನಾಡಿ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಉತ್ತಮ ಆಡಳಿತ ನಡೆಸುತ್ತಿದ್ದಾರೆ, ಅವರಿಗೆ …

Read More »

ವಿಧಾನಸಭೆ ಅಧಿವೇಶನ : ಹಲವು ವಿಶೇಷತೆಗಳಿಗೆ ಕಾರಣವಾದ ಸದನ

ಬೆಂಗಳೂರು, ಸೆ.13- ವಿಧಾನಸಭೆ ಅಧಿವೇಶನದ ಮೊದಲ ದಿನವಾದ ಇಂದು ಹೊಸ ಸಚಿವರ ಸಂಭ್ರಮ ಸೇರಿದಂತೆ ಹಲವು ವಿಶೇಷತೆಗಳಿಗೆ ಸದನ ಸಾಕ್ಷಿಯಾಯಿತು.ಕಳೆದ ಅಧಿವೇಶನದಲ್ಲಿ ಮುಖ್ಯಮಂತ್ರಿಯಾಗಿ ಪಾಲ್ಗೊಂಡಿದ್ದ ಬಿ.ಎಸ್.ಯಡಿಯೂರಪ್ಪ ಅವರು ಇಂದು ಮಾಜಿ ಮುಖ್ಯಮಂತ್ರಿಯಾಗಿ ಮುಖ್ಯ ಸಚೇತಕರ ಪಕ್ಕದ ಆಸನದಲ್ಲಿ ಕುಳಿತಿದ್ದರು. ಕಳೆದ ಅಧಿವೇಶನದಲ್ಲಿ ಸಚಿವರಾಗಿದ್ದ ಜಗದೀಶ್ ಶೆಟ್ಟರ್, ಸುರೇಶ್‍ಕುಮಾರ್ ಅವರು ಈ ಅಧಿವೇಶನದಲ್ಲಿ ಹಿಂದಿನ ಸಾಲಿಗೆ ಸ್ಥಳಾಂತರಗೊಂಡಿದ್ದದ್ದು ಕಂಡು ಬಂದಿತು.ನೂತನ ಸಚಿವರಾದ ಮುನಿರತ್ನ ಹಾಗೂ ಶಂಕರಪಾಟೀಲ್ ಮುನೇನ ಕೊಪ್ಪ ಸದನದಲ್ಲಿ ಪರಸ್ಪರ …

Read More »

ಗುಡಿಸಲು ಕಟ್ಟಲು ವೇಸ್ಟ್ ಬ್ಯಾನರ್ ಕೊಡಿ ಎಂದ ಅಜ್ಜ-ಅಜ್ಜಿಗೆ 2 ಲಕ್ಷದ ಮನೆಯನ್ನೇ ನಿರ್ಮಿಸಿಕೊಟ್ಟ ಕಾರ್ಪೊರೇಟರ್

ದಾವಣಗೆರೆ: ನಗರದ ಶೇಖರಪ್ಪ ಬಡಾವಣೆ ವಾರ್ಡ್ ನಂ 19 ರಲ್ಲಿ ಪಾಲಿಕೆ ಸದಸ್ಯರೋರ್ವರು ವಯಸ್ಸಾದ ಅಜ್ಜ ಅಜ್ಜಿಗೆ ಮನೆಯನ್ನ ಗಿಫ್ಟ್ ನೀಡಿದ ಮಾನವೀಯ ಘಟನೆ ನಡೆದಿದೆ. ಕಳೆದ 15 ವರ್ಷಗಳಿಂದ ಅಜ್ಜ ಅಜ್ಜಿ ಮನೆಯಿಲ್ಲದೇ ಪರದಾಡುತ್ತಿದ್ದರು. ಇದ್ದ ಮಕ್ಕಳು ತೀರಿಹೋದ ನಂತರ ಸೊಸೆಯಂದಿರು ಅಜ್ಜ ಅಜ್ಜಿಯನ್ನ ಮನೆಯಿಂದ ಹೊರಹಾಕಿದ್ದರು ಎನ್ನಲಾಗಿದೆ. ಹೀಗಾಗಿ ಕಾರ್ಪೊರೇಟರ್ ಬಳಿ ಗುಡಿಸಲು ನಿರ್ಮಿಸಲು ವೇಸ್ಟ್ ಬ್ಯಾನರ್ ಕೊಡಿ ಎಂದು ಅಜ್ಜಿ ಕೇಳಿದ್ದರಂತೆ. ಈ ವೇಳೆ ಅಜ್ಜಿ …

Read More »

ಬೆದರಿದ ಎತ್ತುಗಳು..ಕೆಳಗೆ ಬಿದ್ದ ಕಾಂಗ್ರೆಸ್ ನಾಯಕರು

ಬೆಂಗಳೂರು, ಸೆ.13- ಇಂಧನ, ಅಡುಗೆ ಅನಿಲ ದರ ಏರಿಕೆ ಖಂಡಿಸಿ ಇಂದು ಕಾಂಗ್ರೆಸ್ ಪಕ್ಷದ ವತಿಯಿಂದ ವಿಧಾನಸೌಧಕ್ಕೆ ಎತ್ತಿನ ಗಾಡಿಗಳಲ್ಲಿ ಮುತ್ತಿಗೆ ಹಾಕಿ ಪ್ರತಿಭಟಿಸಿದ ವೇಳೆ ಎತ್ತುಗಳು ಬೆದರಿಕೊಂಡು ಓಡಾಡಿದ್ದರಿಂದ ಗಾಡಿಯಲ್ಲಿದ್ದ ಶಾಸಕರು ಕೆಳಗೆ ಬಿದ್ಧ ಘಟನೆ ನಡೆದಿದೆ. ಶಾಸಕ ವೆಂಕಟರಮಣಯ್ಯ ಮತ್ತು ಸಂಗಮೇಶ್ ಇದ್ದ ಎತ್ತಿನ ಗಾಡಿಯ ಎತ್ತುಗಳು ಹೆದರಿಕೊಂಡು ಅಡ್ಡಾದಿಡ್ಡಿ ಒಡಾಡಿದ್ದರಿಂದ ಆಯಾತಪ್ಪಿ ಅವರು ಕೆಳಗೆ ಬಿದ್ದಿದ್ದಾರೆ. ಇಂದು ಬೆಳಗ್ಗೆ ಬೆಲೆ ಏರಿಕೆ ವಿರೋಧಿಸಿ ಎತ್ತಿನ ಗಾಡಿಗಳಲ್ಲಿ …

Read More »

ಹುಬ್ಬಳ್ಳಿ: ಪಬ್ ನಲ್ಲಿ ರೇಡಿಯೋ ಜಾಕಿಯ ಸ್ನೇಹಿತರಿಂದ ಗಲಾಟೆ

ಹುಬ್ಬಳ್ಳಿ: ಕುಡಿದ ಅಮಲಿನಲ್ಲಿ ರೇಡಿಯೋ ಜಾಕಿಯ ಸ್ನೇಹಿತರು ಗಲಾಟೆ ಮಾಡಿಕೊಂಡಿರುವ ಘಟನೆ ನಗರದ ಗೋಕುಲ ರಸ್ತೆಯಲ್ಲಿರುವ ಐಸ್ ಕ್ಯೂಬ್ ಪಬ್ ನಲ್ಲಿ ನಡೆದಿದೆ. ಆರ್​ಜೆ ಮೇಘಾ ಮತ್ತು ಆಕೆಯ ಸ್ನೇಹಿತರಾದ ಪ್ರವೀಣ, ಕೃತಿಕಾ, ಹರ್ಷ, ಶ್ರೀನಿವಾಸ, ಶರಣ್ಯ, ಶೈಲೇಶ್ ಎಂಬುವವರು ಭಾನುವಾರ ರಾತ್ರಿ ಐಸ್ ಕ್ಯೂ ಪಬ್​ಗೆ ತೆರಳಿದ್ದರು. ಈ ವೇಳೆ ಪ್ಲೇಟ್​ನಲ್ಲಿ ಸಾಸ್​ ಹಾಕಿದ ವಿಚಾರಕ್ಕೆ ಸ್ನೇಹಿತರ ನಡುವೆ ಜಗಳ ಶುರುವಾಗಿದೆ. ಜಗಳ ತಾರಕ್ಕೇರಿದ್ದು ಕುಡಿದ ನಶೆಯಲ್ಲಿ ಬಾಟಲಿ …

Read More »