Breaking News

ಬಂಡಾರದ ಜಾತ್ರೆ; ತಂದೆ ಚಿಕ್ಕಪ್ಪ, ಸ್ನೇಹಿತರೊಂದಿಗೆ ಯುವ ನಾಯಕ ಸಂತೋಷ್ ಜಾರಕಿಹೊಳಿ ಅವರು ಜಾತ್ರೆಯಲ್ಲಿ ಭಾಗಿ

Spread the love

ಬಂಡಾರದ ಜಾತ್ರೆ; ತಂದೆ ಚಿಕ್ಕಪ್ಪ, ಸ್ನೇಹಿತರೊಂದಿಗೆ ಯುವ ನಾಯಕ ಸಂತೋಷ್ ಜಾರಕಿಹೊಳಿ ಅವರು ಜಾತ್ರೆಯಲ್ಲಿ ಭಾಗಿ

ಜುಲೈ ಒಂದರಿಂದ ಆರಂಭಗೊಂಡಿರುವ ಗೋಕಾಕ್ ಗ್ರಾಮದೇವಿಯರ ಜಾತ್ರೆ ಗುರುವಾರವೂ ವಿಜ್ರಂಭಣೆಯಿಂದ ಮುಂದುವರೆದಿದ್ದು ಹೊನ್ನಾಟದಲ್ಲಿ ಭಕ್ತರು ಭಕ್ತಿ ಭಾವದಿಂದ ಮೈಮರೆತಿದ್ದರು

ಜುಲೈ 1ರಿಂದ ಆರಂಭಗೊಂಡಿರುವ ಗೋಕಾಕ್ ದೇವಿಯರ ಜಾತ್ರೆಯಲ್ಲಿ ಪೂಜೆ, ಅಭಿಷೇಕ, ನೈವೇದ್ಯ, ಪಾಲಿಕೆ ಉತ್ಸವ ಸೇರಿದಂತೆ ವಿವಿಧ ಧಾರ್ಮಿಕ ವಿಧಿ ವಿಧಾನಗಳು ಮುಂದುವರೆದಿದ್ದು, ಇಂದು ದೇವಿಯರ ಉಭಯ ರಥಗಳು ಹಳೆಯ ಮುನ್ಸಿಪಲ್ ಕಚೇರಿ, ಚಾವಡಿ ರಸ್ತೆ, ಅಜಂತಾ ಕೂಟ ತಲುಪಲಿವೆ.ಮತ್ತೊಂದು ರಥವು ಬಾಫನಾ ಕೂಟ ತಲುಪಲಿದೆ.

 

ವಿವಿಧ ಓಣಿಗಳಲ್ಲಿ ದೇವಿಯ ಹೊ

ನ್ನಾಟ ನಡೆದಿದೆ. ಇಂದು ಪುತ್ರ ರಾಹುಲ್ ಅವರೊಂದಿಗೆ ಸಚಿವ ಸತೀಶ ಜಾರಕಿಹೊಳಿಯವರು ಜಾತ್ರೆ ಹಾಗೂ ಹೊನ್ನಾಟದಲ್ಲಿ ಪಾಲ್ಗೊಂಡು ದೇವಿ ದರ್ಶನ ಪಡೆದು ಪೂಜೆ ಪ್ರಾರ್ಥನೆ ಸಲ್ಲಿಸಿದರು. ಅವರೊಂದಿಗೆ ವಿವಿಧ ಗಣ್ಯರು ಆಗಮಿಸಿದ್ದರು.ಗೋಕಾಕ್ ಸುತ್ತಮುತ್ತಲಿನ ಗ್ರಾಮಗಳು ಸೇರಿದಂತೆ ಬೇರೆಬೇರೆ ಜಿಲ್ಲೆಗಳ ಭಕ್ತರು ಆಗಮಿಸಿ ದೇವಿ ದರ್ಶನ ಪಡೆದು ಹೊನ್ನಾಟದಲ್ಲಿ ಭಾಗಿಯಾಗುತ್ತಿರುವುದು ಸಾಮಾನ್ಯವಾಗಿದೆ.

ಜಾತ್ರೆ ನಿಮಿತ್ಯ ವಿವಿಧ ಕ್ರೀಡಾ ಶರ್ಯತ್ತುಗಳನ್ನು, ಮನರಂಜನಾ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.ಮಕ್ಕಳ ಆಟಿಕೆಗಳು, ಬಳೆ ಅಂಗಡಿಗಳು ಸೇರಿದಂತೆ ವಿವಿಧ ಮಳಿಗೆಗಳು ಬೀಡು ಬಿಟ್ಟಿವೆ. ಗೋಕಾಕ ಪಟ್ಟಣವು ಜನರಿಂದ ಕಿಕ್ಕಿರಿದು ತುಂಬಿತುಳುಕುತ್ತಿದೆ
ಪೊಲೀಸ್ ಸೇರಿದಂತೆ ವಿವಿಧ ಇಲಾಖೆಗಳು ಸಾರ್ವಜನಿಕರಿಗೆ ಯಾವುದೇ ರೀತಿಯ ಅನಾನುಕೂಲಗಳಾಗದಂತೆ ಸುವ್ಯವಸ್ಥೆಯನ್ನು ಮಾಡಿವೆ.


Spread the love

About Laxminews 24x7

Check Also

ಬೆಟಗೇರಿ ಕೃಷ್ಣ್ಣಶರ್ಮರು ಮಾತೃ ಹೃದಯದ ಆಶ್ರಯದಲ್ಲಿ ಬೆಳೆದವರು

Spread the love ಬೆಳಗಾವಿ: ಡಾ.ಬೆಟಗೇರಿ ಕೃಷ್ಣ್ಣಶರ್ಮರು ಮಾತೃ ಹೃದಯದ ಆಶ್ರಯದಲ್ಲಿ ಬೆಳೆದವರು. ಹೀಗಾಗಿ, ಅವರ ಕೃತಿಗಳಲ್ಲಿ ಸ್ತ್ರೀತ್ವದ ಅಂಶಗಳು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ