Breaking News

RSS ಮನುಸ್ಮೃತಿಯನ್ನು ಬಿಜೆಪಿ ಮುಖಂಡರು ಅವರ ಮನೆಯಲ್ಲಿ ಜಾರಿಗೆ ತರಲಿ: ಸಚಿವ ಪ್ರಿಯಾಂಕ ಖರ್ಗೆ

Spread the love

ಕಲಬುರಗಿ: “ಆರ್​ಎಸ್​ಎಸ್​ನಲ್ಲಿನ ಮನುಸ್ಮೃತಿಯನ್ನು ಬಿಜೆಪಿ ಮುಖಂಡರು ಅವರ ಮನೆಯಲ್ಲಿ ಜಾರಿಗೆ ತರಲಿ. ಕೊಳಕು ಮನಸ್ಸು, ಕೊಳಕು ಬುದ್ದಿ, ಕೊಳಕು ನಾಲಿಗೆ ಇವರದು” ಎಂದು ಸಚಿವ ಪ್ರಿಯಾಂಕ ಖರ್ಗೆ ವಾಗ್ದಾಳಿ ನಡೆಸಿದ್ದಾರೆ.

ಕಲಬುರಗಿಯಲ್ಲಿ ಶುಕ್ರವಾರದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ನಾನು ಆರ್​ಎಸ್​ಎಸ್​ ಬ್ಯಾನ್​ ಮಾಡುತ್ತೇನೆ ಎಂದು ಹೇಳಿಲ್ಲ. ಮೂರು ಸಲ ಆರ್​ಎಸ್​ಎಸ್​ ಬ್ಯಾನ್​ ಆಗಿತ್ತು. ಆ ಬ್ಯಾನ್​ ತೆಗೆದು ತಪ್ಪು ಮಾಡಿದೆವು ಎಂದು ಹೇಳಿದ್ದೇನೆ. ನಾವು ಅಧಿಕಾರಕ್ಕೆ ಬಂದರೆ ಬ್ಯಾನ್‌ ಮಾಡೋಣ ತಗೋಳಿ. ಅವರಿಗೆ ಜೈಲಿಗೆ ಹೋಗಲು ಯಾಕೆ ಅಷ್ಟು ಅವಸರ. RSS ಬ್ಯಾನ್ ಮಾಡಲು 10 ಕಾರಣ ಕೊಡಿ ಎಂದು ಬಿಜೆಪಿ ಅವರು ಕೇಳುತ್ತಾರೆ. ಆರ್​ಎಸ್ಎಸ್​ ಅವರು 100 ವರ್ಷದಲ್ಲಿ ದೇಶದ ಸಬಲೀಕರಣಕ್ಕಾಗಿ ಮಾಡಿದ 10 ಒಳ್ಳೆಯ ಕೆಲಸ ಹೇಳಲಿ” ಎಂದು ಟಕ್ಕರ್​ ನೀಡಿದರು.

“ಆರ್​ಎಸ್​ಎಸ್​ ಅವರಿಗೆ 300 – 400 ಕೋಟಿ ಹಣ ಎಲ್ಲಿಂದ ಬರುತ್ತಿದೆ ಎಂಬುದು ನನಗೆ ಗೊತ್ತು. ನಾವು ಯಾವಾಗ 3 ಫಿಗರ್ ಮಾರ್ಕ್ ಬರುತ್ತದೆ, ಆ ದಿನ ಐಟಿ, ಇಡಿ ಅವರನ್ನು ನಾನು ಅಲ್ಲಿಗೆ(RSS) ಬಳಿ ಕಳುಹಿಸುತ್ತೇನೆ. ಆರ್​ಎಸ್​ಎಸ್​ ಚೈಲಾ ಬಿಜೆಪಿಗಳಿದ್ದಾರೆ. ಇದನ್ನು ಹೇಳುವುದಕ್ಕೆ ನಾನು ಹೆದರುವುದಿಲ್ಲ” ಎಂದರು.


Spread the love

About Laxminews 24x7

Check Also

ಕಟೀಲು ಕ್ಷೇತ್ರದ ಯಕ್ಷಗಾನಕ್ಕೆ ಹೆಚ್ಚಿದ ಬೇಡಿಕೆ: ಏಳನೇ ಮೇಳ ಆರಂಭ

Spread the loveಮಂಗಳೂರು(ದಕ್ಷಿಣ ಕನ್ನಡ): ಕರಾವಳಿಯ ಪ್ರಸಿದ್ಧ ಜನಪದೀಯ ಕಲೆ ಯಕ್ಷಗಾನ ಮನೋರಂಜನೆ ಮಾತ್ರವಲ್ಲದೆ ಧಾರ್ಮಿಕ ನಂಬುಗೆಯ ಆಚರಣೆಯೂ ಹೌದು. ಅದರಲ್ಲೂ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ