ಪರಿಹಾರ ನೀಡಿ ಅಥವಾ ನನ್ನನ್ನು ಸ್ಮಶಾನಕ್ಕೆ ಕಳುಹಿಸಿ…ದಾನಪ್ಪ ಹಡಪದ
ಕಳೆದಕೊಂಡ ಅಂಗಡಿಗೆ ಪರಿಹಾರವೋ ಅಥವಾ ಸ್ಮಶಾನವೋ ಎನ್ನುತ್ತಾ ಕಳೆದ 6-7 ತಿಂಗಳುಗಳಿಂದ ಗಟಾರ ನಿರ್ಮಾಣದ ಹೆಸರಿನಲ್ಲಿ ತೆರವುಗೊಂಡ ಅಂಗಡಿಯ ಮುಂದೆ ಕಣ್ಣೀರುಡುತ್ತಾ ಕಾಯುತ್ತಿರುವ ಕ್ಷೌರಿಕನ ಬಗ್ಗೆ ಒಂದು ವಿಶೇಷ ವರದಿ ಇಲ್ಲಿದೆ ನೋಡಿ.
ಇದು ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲ್ಲೂಕಿನ ಲೋಕಾಪುರ ಪಟ್ಟಣದ ದಾನಪ್ಪಾ ಮಹಾಲಿಂಗಪ್ಪ ಹಡಪದ ಅವರ ಕಥೆಯಾಗಿದೆ.
ದಾನಪ್ಪನ ತಂದೆ ಮಹಾಲಿಂಗಪ್ಪ ಖುಲ್ಲಾ ಜಾಗೆಯನ್ನು 1951 ರಲ್ಲಿ ಖರೀದಿಸಿದ್ದಾರೆ. ದಾನಪ್ಪಾ 1990 ರಲ್ಲಿ ಕೆನರಾ ಬ್ಯಾಂಕ್ನಲ್ಲಿ ಸಾಲ ಮಾಡಿ ಅಂಗಡಿ ನಿರ್ಮಿಸಿ ಕ್ಷೌರಿಕ ಕೆಲಸ ನೀರ್ವಹಿಸುತ್ತ 12 ಜನರ ಬಾಳಿಗೆ ಬೆಳಕಾಗಿದ್ದ. ಆದರೆ ವಿಧಿಯಾಟ ಎನ್ನುವಂತೆ ಕಳೆದ ನವೆಂಬರನಲ್ಲಿ ಗಟಾರ ನಿರ್ಮಾಣದ ಹೆಸರಿನಲ್ಲಿ ಮುಂಜಾನೆ 5ರ ಸುಮಾರಿಗೆ ಅಂಗಡಿ ಕಳೆದುಕೊಂಡು ಎಲ್ಲರ ಮುಖ ಸ್ವಚ್ಛ ಮಾಡುತ್ತಿದ್ದ ದಾನಪ್ಪ ತನ್ನ ಮುಖದಲ್ಲಿ ನೀರು ತುಂಬಿಕೊಂಡು ಬೀದಿಗೆ ಬಿದ್ದಿದ್ದಾನೆ.
ಕಳೆದುಕೊಂಡ ಅಂಗಡಿಗೆಗೆ ಪರಿಹಾರಕ್ಕಾಗಿ ದಾನಪ್ಪ ಅಧಿಕಾರಿಗಳಿಂದ ಹಿಡಿದು ಅಧಿಕಾರ ನಡೆಸುತ್ತಿರುವ ಜನಪ್ರತಿನಿಧಿಗಳಿಗೂ ಮನವಿ ಮಾಡಿಕೊಂಡರೂ ಯಾವುದೇ ಪರಿಹಾರ ಸಿಕ್ಕಿಲ್ಲ. ಆದ್ದರಿಂದ ನೋಂದಿರುವ ದಾನಪ್ಪ ಹಡಪದ ಬದುಕು ಕಳೆದುಕೊಂಡಿರುವ ನಮ್ಮಗೆ ಪರಿಹಾರ ನೀಡಿ ಇಲ್ಲವೋ ಸಶ್ಮಾನಕ್ಕೆ ಕಳುಹಿಸಿ ಬೀಡಿ ಎನ್ನುತ್ತಿದ್ದಾನೆ.
ಇನ್ನಾದರೂ ದಾನಪ್ಪನ ಕಣ್ಣೀರು ಓರಿಸುವ ಮೂಲಕ ಅವರ ಕುಟುಂಬಕ್ಕೆ ಸರ್ಕಾರ ಆಸರೆಯಾಗುತ್ತದೇಯಾ ಕಾದು ನೋಡಬೇಕು.
Laxmi News 24×7