Breaking News

ಬೆಳಗ್ಗೆ ಎದ್ದು ಹಿಂದೂ ಹಿಂದೂ ಎನ್ನುವ ಬಿಜೆಪಿಯವರು ದೇವಸ್ಥಾನ ಒಡೆಯುತ್ತಿದ್ದಾರೆ: ರೇವಣ್ಣ

Spread the love

ಬೆಂಗಳೂರು: ಬೆಳಗ್ಗೆ ಎದ್ದರೆ ನಾವು ಹಿಂದೂ ಹಿಂದೂ ಎನ್ನುವ ಬಿಜೆಪಿಯವರು ಇದೀಗ ಹಿಂದೂ ದೇವಸ್ಥಾನ ಒಡೆಯುತ್ತಿದ್ದಾರೆ ಎಂದು ಜೆಡಿಎಸ್ ನಾಯಕ ಮಾಜಿ ಸಚಿವ ಹೆಚ್.ಡಿ.ರೇವಣ್ಣ ಹೇಳಿದರು.

ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಂಜನಗೂಡಿನ ದೇವಸ್ಥಾನಕ್ಕೆ‌ ತನ್ನದೇ ‌ಇತಿಹಾಸ‌ವಿದೆ. ಪುರಾತನ ಕಾಲದಲ್ಲಿ‌ ದೇವಸ್ಥಾನ ನಿರ್ಮಿಸಲಾಗಿದೆ. ಸುಪ್ರೀಂ ಕೋರ್ಟ್ ಆದೇಶ ಪಾಲನೆ ಬೇಡವೆಂದು ಹೇಳುತ್ತಿಲ್ಲ. ಆದರೆ ದೇವಸ್ಥಾನ ಸಮಿತಿ ಜೊತೆ ಚರ್ಚಿಸಬೇಕು. ಪರ್ಯಾಯ ದೇವಸ್ಥಾನ ನಿರ್ಮಿಸಿ ನಂತರ ತೆರವು ಮಾಡಲಿ ಎಂದರು.

ಜೆಡಿಎಸ್ ಇಲ್ಲದೆ ಅಧಿಕಾರವಿಲ್ಲ: ಜೆಡಿಎಸ್ ಮುಳಗುವ ದೋಣಿ ಎನ್ನುತ್ತಿದ್ದರು. ಮುಳಗುವಾಗ ಹೇಗೆ ಮೇಲೆತ್ತುವುದು‌ ಗೊತ್ತಿದೆ. ಸಮುದ್ರದ ಸಬ್‌ಮೆರಿನ್ ಮಷಿನ್ ನಮ್ಮ‌ ಬಳಿ ಇದೆ. ಯಾವಾಗ ಮೇಲೆತ್ತಬೇಕು, ಯಾವಾಗ ಮುಳುಗಿಸಬೇಕು ಗೊತ್ತಿದೆ. ಸಬ್‌ಮೆರಿನ್ ಯಂತ್ರ ರಿಪೇರಿ ಮಾಡಿದ್ದೇವೆ. ದೇವೇಗೌಡರು, ಕುಮಾರಸ್ವಾಮಿ ಅದನ್ನು ನೋಡಿಕೊಳ್ಳುತ್ತಾರೆ. 2023ಕ್ಕೆ‌ ಜೆಡಿಎಸ್ ಇಲ್ಲದೆ ಅಧಿಕಾರ ಮಾಡಲು ಸಾಧ್ಯವಿಲ್ಲ ಎಂದು ರೇವಣ್ಣ ಹೇಳಿದರು.


Spread the love

About Laxminews 24x7

Check Also

ಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್!

Spread the loveಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್! • ಬೃಹತ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ