Breaking News

ವಿಪತ್ತುಗಳ ನಡುವೆ ಸತ್ಯ ಎತ್ತಿಹಿಡಿಯುವಂತೆ ಪ್ರೇರೇಪಿಸುವ ಇಮಾಮ್ ಹುಸೇನ್ –

Spread the love

ಹೈದರಾಬಾದ್: ದೇಶಾದ್ಯಂತ ಮುಸ್ಲಿಮರು ಇಂದು ಇಸ್ಲಾಮಿಕ್ ಕ್ಯಾಲೆಂಡರ್‌ನ ಮೊದಲ ತಿಂಗಳಾದ, ಮೊಹರಂನ 10ನೇ ದಿನವಾದ ಅಶುರಾವನ್ನು ಆಚರಿಸಿದರು. ಅಶುರಾ ಎಂಬುದು ಅರೇಬಿಕ್ ಪದ ‘ಆಶ್ರಾ’ದಿಂದ ಬಂದಿದೆ. ಇದರರ್ಥ ಹತ್ತು. ಈ ದಿನ ಶಿಯಾ ಮತ್ತು ಸುನ್ನಿ ಎರಡೂ ಸಮುದಾಯಗಳಿಗೂ ಅತ್ಯಂತ ಮಹತ್ವದ್ದಾಗಿದೆ.

ಪ್ರವಾದಿ ಮುಹಮ್ಮದ್ ಅವರ ಮೊಮ್ಮಗ ಮತ್ತು ಇಸ್ಲಾಂ ಧರ್ಮದ ಕೇಂದ್ರ ವ್ಯಕ್ತಿಯಾಗಿದ್ದ ಇಮಾಮ್ ಹುಸೇನ್ ಅವರು ಕರ್ಬಲಾ ಯುದ್ಧದಲ್ಲಿ ಕೊಲ್ಲಲ್ಪಟ್ಟ ದಿನದ ಸ್ಮರಣಾರ್ಥವಾಗಿ ಅಶುರಾ ಆಚರಿಸಲಾಗುತ್ತದೆ.

ಈ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರು ಎಕ್ಸ್​ನಲ್ಲಿ ಪೋಸ್ಟ್​ ಮಾಡಿದ್ದು, “ಹಜರತ್ ಇಮಾಮ್ ಹುಸೇನ್ (ಎಎಸ್) ಮಾಡಿದ ತ್ಯಾಗಗಳು ಅವರ ಸದಾಚಾರದ ಬದ್ಧತೆಯನ್ನು ಒತ್ತಿ ಹೇಳುತ್ತವೆ. ಪ್ರತಿಕೂಲ ಪರಿಸ್ಥಿತಿಯಲ್ಲಿ ಸತ್ಯವನ್ನು ಎತ್ತಿಹಿಡಿಯಲು ಅವರು ಜನರನ್ನು ಪ್ರೇರೇಪಿಸುತ್ತಾರೆ” ಎಂದು ಬರೆದುಕೊಂಡಿದ್ದಾರೆ.ಪ್ರವಾದಿ ಮೊಹಮ್ಮದ್ ಅವರ ಆಜ್ಞೆಯಂತೆ ಸುನ್ನಿ ಮುಸ್ಲಿಮರು ಸ್ವಯಂಪ್ರೇರಿತ ಉಪವಾಸದ ಮೂಲಕ ಅಶುರಾ ಆಚರಿಸುತ್ತಾರೆ. ಈ ದಿನವು ಪ್ರವಾದಿ ಮೋಶೆ ಕೆಂಪು ಸಮುದ್ರವನ್ನು ವಿಭಜಿಸಿದ್ದನ್ನೂ ಸೂಚಿಸುತ್ತದೆ.


Spread the love

About Laxminews 24x7

Check Also

ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ

Spread the love ಸಂಬಂಧಿಕರ‌ ಹುಡಗನ ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ ತುಮಕೂರು : ಪ್ರೀತಿ ಬಲೆಗೆ ಬಿದ್ದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ