Breaking News

ಹಾಸನ ಪೊಲೀಸ್​ ಠಾಣೆ ಕೂಗಳತೆಯಲ್ಲೇ ಪುಡಿರೌಡಿಗಳ ಪುಂಡಾಟ.. ಯುವಕನಿಗೆ ಥಳಿತ

Spread the love

ಹಾಸನ: ಪೊಲೀಸ್ ಠಾಣೆ ಕೂಗಳತೆ ದೂರದಲ್ಲಿ ಪುಡಿರೌಡಿಗಳು ರಸ್ತೆಯಲ್ಲಿ ಮಚ್ಚು ಹಿಡಿದು ಗಲಾಟೆ ಎಬ್ಬಿಸಿದ ಘಟನೆ ನಗರದ ಕುವೆಂಪು ನಗರ ಬಡಾವಣೆಯಲ್ಲಿ ನಡೆದಿದೆ.

ಹಾಸನ ನಗರದ ಕುವೆಂಪುನಗರ ಬಡಾವಣೆಯ ಜೆಕೆ ಬಾರ್ ಌಂಡ್ ರೆಸ್ಟೋರೆಂಟ್ ಬಳಿ ನಿಂತಿದ್ದ ಯುವಕರ ಬಳಿ ಆಗಮಿಸಿದ ರೌಡಿಗಳ ಗುಂಪು, ಸುಖಾಸುಮ್ಮನೆ ಯುವಕರೊಂದಿಗೆ ಜಗಳ ತೆಗೆದು ಓರ್ವ ಯುವಕನಿಗೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಈ ಪುಡಿ ರೌಡಿಗಳ ಪುಂಡಾಟ ಸಿಸಿಟಿವಿಯಲ್ಲಿ ಸೆರೆಯಾಗಿದೆ.

 

ಸುದ್ದಿ ತಿಳಿಯುತ್ತಿದ್ದಂತೆ ತಕ್ಷಣವೇ ಸ್ಥಳಕ್ಕೆ ಬಂದ ಬಡಾವಣೆ ಠಾಣೆ ಇನ್ಸ್​ಪೆಕ್ಟರ್ ಕೃಷ್ಣರಾಜ್, ಆಡುವಳ್ಳಿಯ ನಿತಿನ್‌ ಹಾಗೂ ಚೇತನ್ ಎಂಬುವವರನ್ನು ಬಂಧಿಸಿದ್ದು, ಉಳಿದವರಿಗಾಗಿ ಶೋಧ ನಡೆಸಿದ್ದಾಗಿ  ಮಾಹಿತಿ ಲಭ್ಯವಾಗಿದೆ.


Spread the love

About Laxminews 24x7

Check Also

ಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್!

Spread the loveಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್! • ಬೃಹತ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ