Daily Archives: ಸೆಪ್ಟೆಂಬರ್ 1, 2021

ಯುವ ಜನತೆ ಕ್ರೀಡೆಯಲ್ಲಿ ಹೆಚ್ಚಿಗೆ ಭಾಗವಹಿಸಬೇಕು, ಶಿಕ್ಷಣ ಹಾಗೂ ಕ್ರೀಡೆಗೆ ಒತ್ತು ನೀಡಿ ನಮ್ಮ ನಾಡಿಗೆ ಕೀರ್ತಿ ತರಬೇಕು ಎಂದು ರಾಹುಲ್ ಜಾರಕಿಹೊಳಿ.ಹೇಳಿದರು

ಗೋಕಾಕ: ಅಗಸ್ಟ್ 28 ರಿಂದ 30 ರವರೆಗೆ ನವದೆಹಲಿಯಲ್ಲಿ ನಡೆದಂತಯ ಯೂತ್ ಗೇಮ್ಸ್ ಫಡೇರೆಷಣ ಆಫ್ ಇಂಡಿಯಾ ದ ಯುತ್ ಗೇಮ್ಸ್ ಆಲ್ ಇಂಡಿಯಾ ರಾಷ್ಟ್ರೀಯ ಕರಾಟೆ ಸ್ಪರ್ಧೆಯಲ್ಲಿ ಗೋಕಾಕದ ಯುವಕರು ವಿಜೇತರಾಗಿ ಯುವ ನಾಯಕ ರಾಹುಲ್ ಜಾರಕಿಹೊಳಿ ಅವರನ್ನು ಭೇಟಿಯಾದರು. ಇಲ್ಲಿನ ಹಿಲ್ ಗಾರ್ಡನ್ ಕಛೇರಿಯಲ್ಲಿ ಬುಡೊಬಾಸ್ ಇಂಟರ್ ನ್ಯಾಶನಲ್ ಕರಾಟೆ ಡು ಅಕಾಡೆಮಿ ಗೋಕಾಕದ ತರಬೇತಿಗಾರರಾದ ದುರ್ಯೋಧನ ಕಡಕೋಳ ಹಾಗೂ ರಾಷ್ಟ್ರೀಯ ಕರಾಟೆ ಸ್ಪರ್ಧೆಯಲ್ಲಿ ವಿಜೇತರಾದ ಮಹೇಶ್ …

Read More »

ಗೋಕಾಕ ಮತ್ತೆ ಸರಣಿ ಕಳ್ಳತನ….

    ಗೋಕಾಕ: ನಗರದ ಕಿಲ್ಲಾ ಆಚಾರ ಗಲ್ಲಿಯಲ್ಲಿ ಸೋಮವಾರ ರಾತ್ರಿ ಸರಣಿ ಕಳ್ಳತನ ನಡೆದಿದೆ. ಬೀಗ ಹಾಕಿರುವ ಮನೆಗಳಲ್ಲಿ ಕಳ್ಳತನ ನಡೆದಿವೆ. ಪೋಲಿಸರು ಮಾಹಿತಿ ಕಲೆ ಹಾಕುತ್ತಿದ್ದಾರೆ. ಪದೇ ಪದೆ ಕಳ್ಳತನಗಳು ನಡೆಯುತ್ತಿದ್ದುದರಿಂದ ನಗರದ ಜನರಲ್ಲಿ ಆತಂಕ ಮೂಡಿದೆ. ಕಳ್ಳರು 12 ಸಾವಿರ ರೂ. ದೋಚಿರುವುದಾಗಿ ಮಾಹಿತಿ ಲಭ್ಯವಾಗಿದೆ. ಈ ಮೊದಲು ವಿವೇಕಾನಂದ ನಗರದಲ್ಲಿ ಸರಣಿ ಕಳ್ಳತನ ನಡೆದಿತ್ತು. ಕಳ್ಳರನ್ನು ಹಿಡಿಯುವಲ್ಲಿ ಪೊಲೀಸ್ ಇಲಾಖೆ ವಿಫಲವಾಗಿದೆ. ಕಳ್ಳರು ಈಗಾಗಲೇ …

Read More »

ಸರ್ಕಾರಿ ಕಚೇರಿಗಳ ನೌಕರರಿಗೆ ಸಾರ್ವತ್ರಿಕ ರಜೆಯನ್ನು ಮತ್ತು ಖಾಸಗಿ ಹಾಗೂ ಇತರ ನೌಕರರಿಗೆ ವೇತನ ಸಹಿತ ರಜೆ

ಧಾರವಾಡ: ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಸಾರ್ವತ್ರಿಕ ಚುನಾವಣೆಯು ಸೆಪ್ಟೆಂಬರ್ 3 ರಂದು ನಡೆಯಲಿದೆ. ಅಂದು ಬೆಳಿಗ್ಗೆ 7 ಗಂಟೆಯಿಂದ ಸಾಯಂಕಾಲ 6 ಗಂಟೆವರೆಗೆ ಮತದಾನ ನಡೆಯಲಿದೆ.   ಮತದಾನ ದಿನದಂದು ಮಹಾನಗರ ಪಾಲಿಕೆಯ ವ್ಯಾಪ್ತಿಯ ಸರ್ಕಾರಿ ಕಚೇರಿಗಳ ನೌಕರರಿಗೆ ಸಾರ್ವತ್ರಿಕ ರಜೆಯನ್ನು ಮತ್ತು ಖಾಸಗಿ ಹಾಗೂ ಇತರ ನೌಕರರಿಗೆ ವೇತನ ಸಹಿತ ರಜೆ ಮಂಜೂರು ಮಾಡಿ, ರಾಜ್ಯ ಚುನಾವಣಾ ಆಯೋಗವು ಅಧಿಸೂಚನೆ ಹೊರಡಿಸಿದ್ದು, ಮಹಾನಗರ ವ್ಯಾಪ್ತಿಯ ಎಲ್ಲ ಸರ್ಕಾರಿ, ಅರೆ …

Read More »

ಪದಾಧಿಕಾರಿಗಳ ಸಭೆಯಲ್ಲಿ ಡಿಕೆ ಶಿವಕುಮಾರ್ ಗರಂ

ಬೆಂಗಳೂರು (ಸೆ.01): ರಾಜ್ಯ ಕಾಂಗ್ರೆಸ್‌ಗೆ ಪ್ರತ್ಯೇಕ ಸಂವಿಧಾನ ರಚಿಸಲು ಮುಂದಾಗಿದ್ದು, ಇದರ ಹೊಣೆಯನ್ನು ಹಿರಿಯ ಮುಖಂಡ ವಿ.ಎಸ್‌. ಉಗ್ರಪ್ಪ ಅವರಿಗೆ ನೀಡಲಾಗಿದೆ. ಅದು ಸಿದ್ಧವಾದ ನಂತರ ಕಾಂಗ್ರೆಸ್‌ ಕಾರ್ಯಕರ್ತರು ಅದರಂತೆ ನಡೆದುಕೊಳ್ಳಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಹೇಳಿದ್ದಾರೆ. ಮಂಗಳವಾರ ರೇಸ್‌ಕೋರ್ಸ್‌ ರಸ್ತೆಯಲ್ಲಿರುವ ಕಾಂಗ್ರೆಸ್‌ ಭವನದಲ್ಲಿ ಆಯೋಜಿಸಲಾಗಿದ್ದ ಎನ್‌ಎಸ್‌ಯುಐ ರಾಜ್ಯಾಧ್ಯಕ್ಷ ಕೀರ್ತಿ ಗಣೇಶ್‌ ಅವರ ಪದಗ್ರಹಣ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.   ರಾಜ್ಯ ಕಾಂಗ್ರೆಸ್‌ ಸಂವಿಧಾನ ಯಾವ ರೀತಿ ಇರಬೇಕೆಂದು …

Read More »

ಸರ್ಕಾರಿ ಸ್ವಾಮ್ಯದ ತೈಲ ಸಂಸ್ಥೆಗಳು ಏಳು ದಿನಗಳ ಬಳಿಕ ಅಂತೂ ಪೆಟ್ರೋಲ್, ಡೀಸೆಲ್ ದರ ಇಳಿಕೆ ಮಾಡಿವೆ.

ಈಗಾಗಲೇ ಗರಿಷ್ಟ ಪ್ರಮಾಣದಲ್ಲಿರುವ ಪೆಟ್ರೋಲ್ ದರವು ಈ ಹಿಂದೆ ಎರಡು ಬಾರಿ ಕಡಿತಗೊಂಡ ಬಳಿಕ ಬುಧವಾರ (ಸೆ. 01) ಇಳಿಕೆಯಾಗಿದೆ.   ದೆಹಲಿಯಲ್ಲಿ ಪೆಟ್ರೋಲ್ ದರ ಲೀಟರ್‌ಗೆ 15 ಪೈಸೆ ಇಳಿಕೆಗೊಂಡು 101.34 ರೂಪಾಯಿಗೆ ತಲುಪಿದೆ. ಡೀಸೆಲ್ ದರ ಲೀಟರ್‌ಗೆ 15 ಪೈಸೆ ಕುಸಿದು 88.77 ರೂಪಾಯಿಗೆ ಮುಟ್ಟಿದೆ.   ಪ್ರಪಂಚದಾದ್ಯಂತದ ಡೆಲ್ಟಾ ರೂಪಾಂತರ ಪ್ರಕರಣಗಳ ತೀವ್ರತೆಯ ಕಾರಣದಿಂದಾಗಿ ಬೇಡಿಕೆಯ ಕಾಳಜಿ ಹೆಚ್ಚಾಗಿದ್ದು, ತೈಲ ಉತ್ಪಾದನಾ ಸಂಸ್ಥೆಗಳು ಕಚ್ಚಾ ತೈಲ …

Read More »

ಸೆಪ್ಟೆಂಬರ್‌ 1 ರಿಂದ ಲಸಿಕೆ ಪಡೆಯದಿದ್ದರೆ ಪಡಿತರ, ಪಿಂಚಣಿ ತಡೆ ಹಿಡಿಯುವ ಮಹತ್ವದ ತೀರ್ಮಾನ ಕೈಗೊಂಡಿದ್ದಾರೆ.

ಚಾಮರಾಜನಗರ : ಜಿಲ್ಲೆಯಲ್ಲಿ ಕೊರೊನಾ ಲಸಿಕೆ ವೇಗ ಹೆಚ್ಚಿಸಲು ಚಾಮರಾಜನಗರ ಜಿಲ್ಲಾಡಳಿತ ವಿಭಿನ್ನ ಅಭಿಯಾನ ಆರಂಭಿಸಿದ್ದು, ವ್ಯಾಕ್ಸಿನೇಷನ್ ಪ್ರಮಾಣಪತ್ರ ತಂದ್ರೆ ಮಾತ್ರ ಪಡಿತರ ವಿತರಣೆ ಮಾಡುವಂತೆ ನ್ಯಾಯಬೆಲೆ ಅಂಗಡಿಗಳಿಗೆ ಜಿಲ್ಲಾಧಿಕಾರಿ ಎಂ.ಆರ್. ರವಿ ಸೂಚನೆ ನೀಡಿದ್ದಾರೆ. ಜಿಲ್ಲಾಧಿಕಾರಿ ಡಾ ಎಂಆರ್ ರವಿ ಹೊಸ ಮಾರ್ಗವೊಂದನ್ನು ಕಂಡುಕೊಂಡಿದ್ದು, ಸೆಪ್ಟೆಂಬರ್‌ 1 ರಿಂದ ಲಸಿಕೆ ಪಡೆಯದಿದ್ದರೆ ಪಡಿತರ, ಪಿಂಚಣಿ ತಡೆ ಹಿಡಿಯುವ ಮಹತ್ವದ ತೀರ್ಮಾನ ಕೈಗೊಂಡಿದ್ದಾರೆ. ಚಾಮರಾಜನಗರ ಜಿಲ್ಲೆಯ ಜನರ ಆರೋಗ್ಯದ ಹಿತದೃಷ್ಟಿಯಿಂದ …

Read More »

ಮಂದಿ ಶಂಕಿತ ಡೆಂಗ್ಯೂಗೆ ಬಲಿಯಾಗಿರುವ ಕಾರಣ ಸರ್ಕಾರದ ವಿರುದ್ದ ವಿರೋಧ ಪಕ್ಷಗಳು ವಾಗ್ದಾಳಿ ನಡೆಸಲು ಕಾರಣವಾಗಿ ಹೊರಹೊಮ್ಮಿದೆ

ಲಕ್ನೋ, ಸೆಪ್ಟೆಂಬರ್‌ 01: ಉತ್ತರ ಪ್ರದೇಶದ ಫಿರೋಜಾಬಾದ್‌ನಲ್ಲಿ ಶಂಕಿತ ಡೆಂಗ್ಯೂನಿಂದ ಕಳೆದ ಹತ್ತು ದಿನದಲ್ಲೇ 53 ಮಂದಿ ಸಾವನ್ನಪ್ಪಿದ್ದು ಈ ಪೈಕಿ 45 ಮಂದಿ ಮಕ್ಕಳಾಗಿದ್ದಾರೆ. ನಗರ ಒಂದರಲ್ಲೇ 53 ಮಂದಿ ಶಂಕಿತ ಡೆಂಗ್ಯೂಗೆ ಬಲಿಯಾಗಿರುವ ಕಾರಣ ಸರ್ಕಾರದ ವಿರುದ್ದ ವಿರೋಧ ಪಕ್ಷಗಳು ವಾಗ್ದಾಳಿ ನಡೆಸಲು ಕಾರಣವಾಗಿ ಹೊರಹೊಮ್ಮಿದೆ.   ಫಿರೋಜಾಬಾದ್‌ನ ಮೆಡಿಕಲ್‌ ಕಾಲೇಜಿನಲ್ಲಿ ಪರಿಸ್ಥಿತಿ ತೀರಾ ಶೋಚನೀಯವಾಗಿದೆ. ಫಿರೋಜಾಬಾದ್‌ನ ಮೆಡಿಕಲ್‌ ಕಾಲೇಜಿನಲ್ಲಿ ಹಲವಾರು ಮಕ್ಕಳು ಜ್ವರದಿಂದ ಬಳಲುತ್ತಿದ್ದು ಪೋಷಕರು …

Read More »

ಮುಂದಿನ ಚುನಾವಣೆಯಲ್ಲಿ ಮದ್ದೂರು ಕ್ಷೇತ್ರದಿಂದ ಅಭಿಷೇಕ್‌ ಅವರನ್ನು ಕಣಕ್ಕಿಸಲು ಸುಮಲತಾ ಪ್ಲ್ಯಾನ್‌

ಮಂಡ್ಯ: ಚುನಾವಣೆಯಲ್ಲಿ ಕೊಟ್ಟ ಮಾತನ್ನು ಸಂಸದೆ ಸುಮಲತಾ ಅಂಬರೀಶ್‌ ಉಳಿಸಿಕೊಂಡಿದ್ದು, ಮಂಡ್ಯ ಜಿಲ್ಲೆಯ ಹನಕೆರೆ ಗ್ರಾಮದಲ್ಲಿ ಸ್ವಂತ ಮನೆ ನಿರ್ಮಾಣಕ್ಕೆ ಮುಂದಾಗಿದ್ದಾರೆ. ಲೋಕಸಭಾ ಚುನಾವಣೆ ಗೆದ್ದ ವೇಳೆ ಸುಮಲತಾ ಅವರು ಮಂಡ್ಯ ಜಿಲ್ಲೆಯಲ್ಲಿಯೇ ಮನೆ ನಿರ್ಮಾಣ ಮಾಡಿ, ಇಲ್ಲೇ ಇರುತ್ತೇನೆ ಎಂದು ಹೇಳಿದ್ದರು. ಅದರಂತೆ ಇದೀಗ ಇಲ್ಲಿಯೇ ಮನೆ ನಿರ್ಮಾಣ ಶುರು ಮಾಡಿದ್ದಾರೆ.   ಮಂಡ್ಯ-ಮದ್ದೂರು ನಡುವಿನ ಹನಕೆರೆ ಗ್ರಾಮದಲ್ಲಿ ಸುಮಲತಾ ಸ್ವಂತ ಮನೆ ನಿರ್ಮಿಸಲಿದ್ದು, ತಮ್ಮ ತನ್ನ ಆಪ್ತ …

Read More »

ಮುಂದಿನ ಆವೃತ್ತಿಯಲ್ಲಿ 74 ಪಂದ್ಯಗಳು ಇರಲಿವೆ ಎಂದು ತಿಳಿದುಬಂದಿದೆ.

ಮುಂಬೈ(ಸೆ.01) ಮುಂಬರುವ 2022ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (ಐಪಿಎಲ್‌)ಗೆ 2 ಹೊಸ ಫ್ರಾಂಚೈಸಿಗಳು ಸೇರ್ಪಡೆಗೊಳ್ಳುವ ಸಾಧ್ಯತೆಯಿದ್ದು, ಇದರಿಂದ ಬಿಸಿಸಿಐ 5,000 ಕೋಟಿ ರುಪಾಯಿ ಆದಾಯ ಗಳಿಸುವ ನಿರೀಕ್ಷೆಯಲ್ಲಿದೆ. ಒಂದೊಮ್ಮೆ ಹೊಸ ಫ್ರಾಂಚೈಸಿಗಳು ಅಸ್ತಿತ್ವಕ್ಕೆ ಬಂದಲ್ಲಿ, ಮುಂದಿನ ಆವೃತ್ತಿಯಲ್ಲಿ 10 ತಂಡಗಳು ಪಂದ್ಯಾವಳಿ ಸ್ಪರ್ಧೆಗಿಳಿಯಲಿವೆ. 15ನೇ ಆವೃತ್ತಿಯ ಐಪಿಎಲ್‌ಗೆ ಪಾಲ್ಗೊಳ್ಳಲು ಇಚ್ಚಿಸುವವರು 10 ಲಕ್ಷ ಪಾವತಿ ಮಾಡಿ ಯಾವುದೇ ಕಂಪನಿ ಬಿಡ್‌ನ ದಾಖಲೆಗಳನ್ನು ಖರೀದಿಸಬಹುದಾಗಿದೆ. ಈ ಮೊದಲು ಹೊಸ ತಂಡಗಳಿಗೆ 1,700 …

Read More »

ಅಫ್ಘಾನಿಸ್ತಾನದ ರಕ್ಷಣೆಗೆ ನೀಡಿದ್ದ ಉಪಕರಣಗಳು ಉಗ್ರರ ಕೈವಶವಾಗದಂತೆ ನೋಡಿಕೊಂಡಿದೆ.

ವಾಷಿಂಗ್ಟನ್‌(ಸೆ.01): ತಾಲಿಬಾನ್‌ ಉಗ್ರರ ಜತೆ ಮಾಡಿಕೊಂಡಿದ್ದ ಒಪ್ಪಂದಕ್ಕೆ ಅನುಗುಣವಾಗಿ ನಿಗದಿತ ಗಡುವಿನೊಳಗೆ ಅಫ್ಘಾನಿಸ್ತಾನವನ್ನು ತೊರೆದಿರುವ ಅಮೆರಿಕ, ಅದಕ್ಕೂ ಮುನ್ನ ಹಲವು ಮಿಲಿಟರಿ ಉಪಕರಣಗಳನ್ನು ನಾಶ ಮಾಡಿ ಜಾಗ ಖಾಲಿ ಮಾಡಿರುವ ಸಂಗತಿ ಬೆಳಕಿಗೆ ಬಂದಿದೆ. ತನ್ಮೂಲಕ ತಾನು ಅಫ್ಘಾನಿಸ್ತಾನದ ರಕ್ಷಣೆಗೆ ನೀಡಿದ್ದ ಉಪಕರಣಗಳು ಉಗ್ರರ ಕೈವಶವಾಗದಂತೆ ನೋಡಿಕೊಂಡಿದೆ. ಇದರಿಂದ ತಾಲಿಬಾನ್‌ಗೆ ಭಾರಿ ಹಿನ್ನಡೆಯಾಗಿದೆ.   ಕಾಬೂಲ್‌ನ ಹಮೀದ್‌ ಕರ್ಜೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 73 ವಿಮಾನಗಳನ್ನು ಅಮೆರಿಕ ಸಿಬ್ಬಂದಿ ನಿಷ್ಕಿರಯಗೊಳಿಸಿದ್ದಾರೆ. …

Read More »